2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

ಲೋಕಸಭಾ ಚುನಾವಣೆಗೆ ಇನ್ನೂ 4 ವರ್ಷಗಳು ಇರುವಾಗ ಇಂತಹ ಪ್ರಶ್ನೆ ಸೂಕ್ತವೇ ? ಎಂದು ಎಲ್ಲರಿಗೂ ಅನಿಸಬಹುದು. ಆದರೆ ಪ್ರಸ್ತುತ ದೇಶದ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವನ್ನು ಗಮನಿಸಿದರೆ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಇನ್ನೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ? ಅಥವಾ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆಯೇ? ಎಂಬುದರ ಬಗ್ಗೆ ಅನೇಕ ಜಿಜ್ಞಾಸೆಗಳು ಮೂಡುತ್ತಿರುವುದು ಸುಳ್ಳಲ್ಲ. ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ಅವಲೋಕನ ಮಾಡಿದಲ್ಲಿ , ಕಾಂಗ್ರೆಸ್ ಸಹಿತ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಸಂಘಟಿತವಾಗಿ, ನಿಸ್ವಾರ್ಥವಾಗಿ ಮತ್ತು ದೇಶದ ಹಿತ ದೃಷ್ಟಿಯಿಂದ… Read More 2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ

1964 ರಲ್ಲಿ ಕೆ.ಬಾಲಚಂದರ್ ಆವರ ನಿರ್ದೇಶನದಲ್ಲಿ ಕನ್ನಡಿಗ ತಾಯ್ ನಾಗೇಶ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಸರ್ವರ್ ಸುಂದರಂ ಎಂಬ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ರೆಕಾರ್ಡ್ ಆಗಿದ್ದಲ್ಲದೇ ಅನೇಕ ಭಾಷೆಗಳಲ್ಲಿಯೂ ಡಬ್ ಮತ್ತು ರೀಮೇಕ್ ಆಯಿತು. ತೊಂಭತ್ತರ ದಶಕದಲ್ಲಿ ಜಗ್ಗೇಶ್ ಅವರು ಅದೇ ಸಿನಿಮಾವನ್ನು ಸರ್ವರ್ ಸೋಮಣ್ಣ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರೀಮೇಕ್ ಮಾಡಿದ್ದರು. ಚಿತ್ರನಟನಾಗಬೇಕೆಂಬ ಆಸೆ ಹೊತಿದ್ದ ಯುವಕನೊಬ್ಠ ಹೊಟ್ಟೆ ಪಾಡಿಗೆ ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಸೇರಿಕೊಂಡು ಅಲ್ಲಿಗೆ… Read More ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ

ರಾಗಿ ಹಾಲ್ಬಾಯಿ

ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ ಮತ್ತು ಅಷ್ಟೇ ರುಚಿಕರವಾದ ಸಿಹಿ ಪದಾರ್ಧವಾದ ರಾಗಿ ಹಾಲ್ಬಾಯಿಯನ್ನು ಬಾಯಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಈ ವೀಡಿಯೋ ಮೂಲಕ ತಿಳಿಸುಕೊಳ್ಳೋಣ. ಸುಮಾರು 8-10 ಜನರಿಗೆ ಸಾಕಾಗುವಷ್ಟು ರಾಗಿ ಹಾಲ್ಬಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು • ಕೆಂಪು ರಾಗಿ- 1 ಪಾವು • ಉಂಡೇ ಬೆಲ್ಲ – 1 ಪಾವು • ತುಪ್ಪ – 1 ಬಟ್ಟಲು • ಏಲಕ್ಕಿ ಪುಡಿ – 1 ಚಮಚ • ಹುರಿದು ಪುಡಿ… Read More ರಾಗಿ ಹಾಲ್ಬಾಯಿ

ವಿಶ್ವ ಕುಟುಂಬ ದಿನ

ಜಾತಿ, ಧರ್ಮದ ಹೆಸರಿನಲ್ಲಿ ದೇಶ ದೇಶಗಳು ಶರಂಪರ ಕಿತ್ತಾಡುತ್ತಿರುವ ಈ ಸಂಧರ್ಭದಲ್ಲಿ, ವಸುಧೈವ ಕುಟುಂಬಕಂ ಅರ್ಥಾತ್ ಇಡೀ ವಿಶ್ವವೇ ಒಂದು ಕುಟುಂಬವಾಗಿ ಭಾವಿಸುವ ಅತ್ಯಂತ ಸುಂದರವಾದ ಪರಿಕಲ್ಪನೆ ನಮ್ಮ ಸನಾತನ ಧರ್ಮದಲ್ಲಿದ್ದು, ನಮ್ಮೆಲ್ಲರಿಗೂ ಕೇವಲ ಮೇ 15 ಮಾತ್ರವೇ ವಿಶ್ವ ಕುಟುಂಬ ದಿನವಾಗಿರದೇ,ಪ್ರತಿ ದಿನವೂ ಕುಟುಂಬದೊಂದಿಗೆ ನೆಮ್ಮದಿ ಮತ್ತು ಪ್ರೀತಿಯಿಂದ ಇರಬಹುದು ಅಲ್ವೇ?… Read More ವಿಶ್ವ ಕುಟುಂಬ ದಿನ

ಸ್ವದೇಶೀ ಜಾಗೃತಿ

ಮೊನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ಇಪ್ಪತ್ತು ಲಕ್ಷ ಕೋಟಿಗಳ (ಅಂಕೆಯಲ್ಲಿ ಬರೆದರೆ ಎಷ್ಟು ಸೊನ್ನೆ ಹಾಕಬೇಕು ಅನ್ನುವುದೇ ಗೊತ್ತಾಗದ ಕಾರಣ ಅಕ್ಷರದಲ್ಲೇ ಬರೆಯುತ್ತಿದ್ದೇನೆ 😃😃 ) ಆತ್ಮನಿರ್ಭರ್ (ಸ್ವಾಲಂಭನೆ) ಪರಿಹಾರ ನಿಧಿಯ ಜೊತೆಗೆ ಜೊತೆಗೆ ದೇಶವಾಸಿಗಳು ಸ್ವದೇಶಿ ಉತ್ಪನ್ನಗಳನ್ನು ಬಳೆಸುವತ್ತ ಹರಿಸಬೇಕು ತಮ್ಮ ಚಿತ್ತ ಎಂದು ಕರೆ ನೀಡುತ್ತಿದ್ದಂತೆಯೇ ಇಡೀ ಭಾರತೀಯರು ಜಾಗೃತವಾಗಿಬಿಟ್ಟಿದ್ದಾರೆ. ಈ ಕೂಡಲೇ ಬಹುರಾಷ್ಟ್ರೀಯ ಕಂಪನಿ ಉತ್ಪಾದಿತ ಸೋಪು, ಶಾಂಪು, ಟೂಟ್ ಪೇಸ್ಟ್ ಗಳನ್ನು ಬದಲಿಸಿ ಎಂದು ಸಾಮಾಜಿಕ ಅಂತರ್ಜಾಲದಲ್ಲಿ ತಾವೇ ಸ್ವದೇಶೀ… Read More ಸ್ವದೇಶೀ ಜಾಗೃತಿ

ದ್ವೇಷ

ಹಾವಿನ ದ್ವೇಷ ಹನ್ನೆರಡು ವರುಷ ನನ್ನ ರೋಷ ನೂರು ವರುಷ ಎನ್ನುವುದು ಪುಟ್ಟಣ್ಣ ಕಣಗಾಲರ ಜನಪ್ರಿಯ ನಾಗರ ಹಾವು ಚಿತ್ರದ ಹಾಡು. ಹಾವಿಗೆ ಹನ್ನೆರಡು ವರ್ಷ ದ್ವೇಷ ಇರುತ್ತದೆಯೋ ಗೊತ್ತಿಲ್ಲ. ಆದರೆ ಮನುಷ್ಯರ ಸಣ್ಣ ಪುಟ್ಟ ದ್ವೇಷಗಳಿಂದಾಗಿ ಲಕ್ಷಾಂತರ ಸಂಸಾರಗಳು ಹಾಳಾಗಿರುವುದಂತೂ ಸತ್ಯ. ಅಂತಹ ಕೆಲವೊಂದು ನೈಜ ಘಟನೆಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ. ಅದೊಂದು ಮುದ್ದಾದ ಕುಟುಂಬ ಗಂಡ ಹೆಂಡತಿಯಿಬ್ಬರೂ ಉದ್ಯೋಸ್ಥರಾದರೂ ಬಹಳ ಜತನದಿಂದ ತಮ್ಮ ಮಗ ಮತ್ತು ಮಗಳನ್ನು ಮುದ್ದಿನಿಂದ ಸಾಕಿ ಬೆಳೆಸಿ… Read More ದ್ವೇಷ

ಸಾವಿರದ ಶರಣು

ಪ್ರತೀ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಬಂದಿತೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆಯವ್ಯಯವನ್ನು ಪ್ರಕಟಿಸುವಂತೆ, ಪ್ರತೀ ವರ್ಷ ಶಿವರಾತ್ರಿ ಬಂದಿತೆಂದರೆ ನಮ್ಮ ಏನಂತೀರೀ? ಬ್ಲಾಗಿನ ವಾರ್ಷಿಕೋತ್ಸವದಲ್ಲಿ ನಮ್ಮ ಇದುವರೆಗಿನ ಸಾಹಸ ಮತ್ತು ಅದಕ್ಕೆ ನಿಮ್ಮ ಸಹಕಾರವನ್ನು ನೆನೆಯುವ ಸುಸಂದರ್ಭವಾಗಿದೆ. … Read More ಸಾವಿರದ ಶರಣು

ಅರ್ನಾಬ್ ಗೋಸ್ವಾಮಿ V/S ಸೋನಿಯಾ ಗಾಂಧಿ

ಕಳೆದ ತಿಂಗಳು ಏಪ್ರಿಲ್ 16 2020 ರಂದು, ಸೂರತ್‌ನಲ್ಲಿ ತಮ್ಮ ಗುರು ಶ್ರೀ ಮಹಂತ್ ರಾಮ್‌ಗಿರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಜುನಾ ಅಖಾರ ಸಾಧುಗಳಾದ ಚಿಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ (70 ವರ್ಷ) ಮತ್ತು ಸುಶೀಲ್ ಗಿರಿ ಮಹಾರಾಜ್ (35 ವರ್ಷ) ಈ ಇಬ್ಬರು ಸ್ವಾಮಿಗಳು ಕಾರಿನಲ್ಲಿ ನಿಲೇಶ್ ತೆಲ್ಗಡೆ (30 ವರ್ಷದ) ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದಾಗ, ಉದ್ರಿಕ್ತ ಗುಂಪೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಮೂವರನ್ನೂ ಪೋಲೀಸರ ಸಮ್ಮುಖದಲ್ಲೇ ಬರ್ಬರವಾಗಿ ಹತ್ಯೆಮಾಡಿತು. ದೇಶಾದ್ಯಂತದ ಕರೋನ ವೈರಸ್… Read More ಅರ್ನಾಬ್ ಗೋಸ್ವಾಮಿ V/S ಸೋನಿಯಾ ಗಾಂಧಿ

ಬೇಬಿ ಕಾರ್ನ್ ಸ್ಯಾಟೇ

ಬೇಬಿಕಾರ್ನ್ ಅಂದ ಕೂಡಲೇ ನಮಗೆ ಥಟ್ ಅಂತಾ ನೆನಪಾಗೋದೇ ಬೇಬೇ ಕಾರ್ನ್ ಮಂಚೂರಿಯನ್. ಅದರ ಹೊರತಾಗಿ ಕೆಲವರು ಪಲ್ಯ ಮತ್ತು ಗೊಜ್ಜು ಮಾಡಲೂ ಸಹಾ ಬಳೆಸುತ್ತಾರೆ. ಇದರ ಹೊರತಾಗಿಯೂ ಬೇಬೀಕಾರ್ನ್ ಬಳಸಿಕೊಂಡು ರುಚಿಕರವಾದ ಸ್ಯಾಟೇ ತಯಾರಿಸುವ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಬೇಬಿ ಕಾರ್ನ್ ಸ್ಯಾಟೇ ತಯಾರಿಸಲು ಬೇಕಾಗುವ  ಪದಾರ್ಥಗಳು ಗೋಡಂಬಿ 1/2 ಕಪ್ ಕಡಲೇಕಾಯಿ ಬೀಜ 1/2 ಕಪ್ ಮೈದಾ 1 ಕಪ್ ಜೋಳದ ಹಿಟ್ಟು 1/2 ಕಪ್ ಚಿಟುಕೆ ಅಡುಗೆ ಸೋಡಾ ಸಕ್ಕರೆ 1/2 ಚಮಚ… Read More ಬೇಬಿ ಕಾರ್ನ್ ಸ್ಯಾಟೇ