ಶಿಕ್ಷಣ

ಇವತ್ತು ಬೆಳೆಗ್ಗೆ ಜಿಟಿ ಜಿಟಿ ಮಳೆ ಬೀಳ್ತಾ ಇದ್ದದ್ದರಿಂದ ಮುಂಜಾನೆಯ ವೃತ್ತ ಪತ್ರಿಕೆ ಎಲ್ಲಾ ಒದ್ದೆ ಮುದ್ದೆಯಾಗಿತ್ತು. ನನಗೆ ಒಂದು ಪಕ್ಷ ತಿಂಡಿ ತಿನ್ನೋದನ್ನ ಬಿಟ್ರೂ ಬೇಜಾರಿಲ್ಲ. ಆದರೆ ಬೆಳಗಿನ ಪೇಪರ್ ಓದದೇ ಹೋದ್ರೆ ಏನೋ ಕಳೆದು ಕೊಂಡ ಅನುಭವ. ಆಷ್ಟೆಲ್ಲ ಟಿವಿಯಲ್ಲಿ ವಾರ್ತೆಗಳನ್ನು ನೋಡಿದ್ರೂ, ಇಂಟರ್ನೆಟ್ಟಲ್ಲಿ ಸುದ್ದಿಗಳನ್ನು ಓದಿದ್ರೂ, ಪೇಪರ್ ಓದೋ ಮಜಾನೇ ಬೇರೆ. ಹಾಗೆ ಒದ್ದೆ ಆದ ಪೇಪರನ್ನು ಇಸ್ತ್ರಿಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿಕೊಂಡು ಓದಲು ಪುಟ ತಿರುವು ಹಾಕುತ್ತಿದ್ದಂತೆಯೇ ಗಕ್ಕನೆ ಕಾಲೇಜಿನ ಏಳನೇ ಮಹಡಿಯಿಂದ… Read More ಶಿಕ್ಷಣ

ಆಜಾದ್ ಹಿಂದ್ ಸರ್ಕಾರ್

ಇದ್ಯಾವುದಪ್ಪ ಹೊಸ ಕಥೆ, ಆಗಸ್ಟ್ 15 ಅಲ್ವಾ ನಮ್ಮ ಸ್ವಾತಂತ್ರೋತ್ಸವ?  ಅಂತ ಅನಿಸುತ್ತಿದ್ದರೆ ಅದು ಆಶ್ಚರ್ಯ ಅಲ್ಲ, ಅವಮಾನ ನಿಮಗೆ ಎಂದು ತಿಳಿಯಿರಿ. 21-10-1943ರಂದೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೆಚ್ಚೆದೆಯ ಹೋರಾಟದ ಫಲವಾಗಿಯೇ ಭಾರತದ ಪ್ರಥಮ ಸರ್ಕಾರ ಆಜಾದ್ ಹಿಂದ್ ಸರ್ಕಾರ್ ಸ್ಥಾಪಿತವಾದ ದಿನ. ಹೌದು ನಮ್ಮ ದೇಶದ ಇತಹಾಸ ತಿಳಿಯದೆ ಇದ್ದರೆ ಅದು ಅವಮಾನವೇ ಸರಿ. ಆಗಂತ ನಾನೆನು ಸಾಚಾ ಅಲ್ಲ ನಾನು ಸಾಕಷ್ಟು ವಿಚಾರ ಈಗಷ್ಟೇ ತಿಳಿದುಕೊಳ್ಳುತ್ತಿರುವೆ. ಅವಮಾನ ನನ್ನ ಮನಸ್ಸಿಗೂ ಇದೆ.… Read More ಆಜಾದ್ ಹಿಂದ್ ಸರ್ಕಾರ್

ಅಂಬಿ ಮಜ್ಜಿಗೆ

ಇತ್ತೀಚೆಗೆ ನಮ್ಮ ಮನೆಯಿಂದ ಅಣ್ಣನ ಮನೆಉ ಕಡೆ ಹೋಗುವಾಗ ರಾಜಕುಮಾರ್ ಸ್ಮಾರಕ ದಾಟಿ ಸ್ವಲ್ಪ ‌ಮುಂದೆ ಹೋಗುತ್ತಿರುವಾಗ ವರ್ತುಲ ರಸ್ತೆಯ ಬದಿಯ ತಳ್ಳು ಗಾಡಿಯ ಮೇಲೆ ಅಂಬಿ ಮಜ್ಜಿಗೆ ಅನ್ನೋ ಬೋರ್ಡ್ ನೋಡಿ ಅರೇ ಇದೇನಪ್ಪಾ‌ ಒಂದು ತರಹದ ವಿಶೇಷವಾದ ಶೀರ್ಷಿಕೆ‌ ಇದೆಯಲ್ಲಾ? ಅಂಬಿ‌ (ಅಂಬರೀಷ್) ಅಭಿಮಾನಿಗಳ ‌ಅಭಿಮಾನಕ್ಕೆ ಕೊನೆಯೇ ಇಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಇದನ್ನೇ ಗಮನಿಸಿದ ನನ್ನ ಮಡದಿಯೂ ಕೂಡಾ ಅಂಬಿ‌ ಯಾವಾಗ ಇಲ್ಲಿಗೆ ಬಂದು ಮಜ್ಜಿಗೆ ಕುಡಿದಿದ್ರೋ? ಅವರು ಕುಡಿತಿದ್ದ ‌ಮಜ್ಜಿಗೆಯೇ ಬೇರೆ ಅಲ್ವೇ?… Read More ಅಂಬಿ ಮಜ್ಜಿಗೆ

ಹಾಸನಾಂಬಾ

ಹಾಸನ ಎಂಬ ಹೆಸರು ಬರಲು ಕಾರಣವಾದ ಗ್ರಾಮದೇವತೆ ಹಾಸನಾಂಬೆಯ ಐತಿಹ್ಯದ ಜೊತೆಗೆ, ವರ್ಷಕ್ಕೊಮ್ಮೆ ಕೇವಲ 10-12 ದಿನಗಳು ಮಾತ್ರವೇ ಭಕ್ತಾದಿಗಳ ದರ್ಶನಕ್ಕೆ ತೆರೆಯುವ ಆ ದೇವಾಲಯದ ವೈಶಿಷ್ಟ್ಯತೆಗಳು, ವರ್ಷವಿಡೀ ಉರಿಯುವ ದೀಪ, ಬಾಡದ ಹೂವುಗಳು ಮತ್ತು ಹಳಸದ ಪ್ರಸಾದದ ಕುರಿತಾದ ರೋಚಕ ವಿಷಯಗಳು ಇದೋ ನಿಮಗಾಗಿ … Read More ಹಾಸನಾಂಬಾ

ಮಂಗಳೂರು ದಸರಾ

ದಸರಾ ಎಂದ ಕೂಡಲೇ ಥಟ್ ಅಂತಾ ನಮಗೆಲ್ಲಾ ನೆನಪಾಗೋದೇ ಮೈಸೂರು ದಸರಾ. ದಸರಾ ನಮ್ಮ ನಾಡ ಹಬ್ಬ. ಕನ್ನಡಿಗರ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭವಾಗಿ ದಶಮಿಯವರೆಗೂ ನಡೆಯುವ ವೈಭವದ ಹಬ್ಬ. 1610ರಲ್ಲಿ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದರು. ಅಂದು ವಿಜಯನಗರದ ಸಾಮ್ರಾಜ್ಯದಲ್ಲಿ ಕೇವಲ ದಶಮಿಯಂದು ಸೀಮೋಲ್ಲಂಘನ ಮಾಡಿ ಬನ್ನಿ ಮಂಟಪಕ್ಕೆ ಮಾತ್ರವೇ ಸೀಮಿತವಾಗಿದ್ದ… Read More ಮಂಗಳೂರು ದಸರಾ

ಅವಕಾಶ

ಆಗ ಎಂಭತ್ತರ ದಶಕ. ಆಗಿನ್ನೂ ನಾಲ್ಕನೇ ತರಗತಿಯಲ್ಲಿದ್ದೆ. ಇಂದಿನಂತೆ ಡೈರೀ ಹಾಲಿನ ಪ್ರಭಾವ ಅಷ್ಟಾಗಿರಲಿಲ್ಲ . ನಮ್ಮದೇ ಬಡಾವಣೆಯಲ್ಲಿಯೇ ಸಾಕಷ್ಟು ಮನೆಗಳಲ್ಲಿ ಇನ್ನೂ ಹಸು ಮತ್ತು ಎಮ್ಮೆಗಳನ್ನು ಸಾಕಿದ್ದರು. ನಾವೆಲ್ಲಾ ಅವರ ಬಳಿಯೇ ವರ್ತನೆಗೆ (ಪ್ರತಿ ನಿತ್ಯ ಕಡ್ಡಾಯವಾಗಿ ನಿರ್ಧಿಷ್ಟವಾದ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ ಹಣ ನೀಡುವ ಪದ್ದತಿ) ಹಾಲು ತೆಗೆದುಕೊಳ್ಳುತ್ತಿದ್ದವು. ಅದೇ ರೀತಿ ನಾವಿದ್ದ ವಠಾರದ ಮನೆಯ ಮಾಲೀಕರ ಮನೆಯಲ್ಲಿಯೂ ಹಸು ಮತ್ತು ಎಮ್ಮೆ ಸಾಕಿದ್ದರು ನಾವು ಅವರ ಬಳಿಯೇ ಪ್ರತಿನಿತ್ಯ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ… Read More ಅವಕಾಶ

ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

ಸುಮಾರು ಹನ್ನೆರಡು ಹದಿಮೂರು ವರ್ಷಗಳ ಹಿಂದಿನ ಮಾತು. ಅವತ್ತು ಶನಿವಾರವಾದ್ದರಿಂದ ಕೆಲಸಕ್ಕೆ ರಜೆ ಇದ್ದ ಕಾರಣ ಯಾವುದೋ ಕೆಲಸಕ್ಕೆಂದು ಹೊರಗೆ ಹೋಗಿ ಮನೆಗೆ ಹಿಂದಿರುಗುವಾಗ ಮಟ ಮಟ ಮಧ್ಯಾಹ್ನವಾಗಿ ಹೊಟ್ಟೆ ಕೂಡಾ ತುಂಬಾನೇ ಹಸಿದಿತ್ತು. ಮನೆ ಒಳಗೆ ಕಾಲಿಟ್ಟೊಡನೆಯೇ ನಮ್ಮ ತಾಯಿಯವರು ಯಾರೊಂದಿಗೂ ಮಾತನಾಡುತ್ತಿರುವ ಶಬ್ಧ ಕೇಳಿಸಿ, ಯಾರು ಬಂದಿರಬಹುದು ಎಂದು ಯೋಚಿಸುತ್ತಾ ಸೀದಾ ಬಚ್ಚಲು ಮನೆಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ನೋಡಿದರೆ, ಯಾರೋ ಅಪರಿಚಿತ ಹೆಂಗಸು ನೋಡಲು ಬಹಳ ಕೃಶಕಾಯಳು, ಉಡಲು ಒಂದು… Read More ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಮೊಬೈಲ್ ಹೆಸರೇ ಹೇಳುವಂತೆ ಜಂಗಮವಾಣಿ. ಎಲ್ಲೆಂದರೆಲ್ಲಿ , ಎಷ್ಟು ಹೊತ್ತಿನಲ್ಲಿಯೂ, ಯಾರನ್ನು ಬೇಕಾದರೂ ಸಂಪರ್ಕಿಸ ಬಹುದಾದ ಸುಲಭವಾದ ಸಾಧನ. ಭಾರತದಲ್ಲಿ ಎಂಭತ್ತರ ದಶಕದಲ್ಲಿ ದೂರವಾಣಿಯ ಸಂಪರ್ಕ ಕ್ರಾಂತಿಯಾಗಿ ಮನೆ ಮನೆಗಳಲ್ಲಿ ಟೆಲಿಫೋನ್ ರಿಂಗಣಿಸತೊಡಗಿದರೆ, ತೊಂಭತ್ತರ ದಶಕದಲ್ಲಿ ಸಿರಿವಂತರ ಕೈಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸಿಕೊಳ್ಳುವ ಸಾಧನವಾಗಿ ದೊಡ್ಡ ದೊಡ್ಡ ಮೊಬೈಲ್ ಫೋನ್ಗಳು ಬಂದರು. ಆದರೆ, ಯಾವಾಗ 2001-2002ರಲ್ಲಿ ರಿಲೆಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಮಾರುಕಟ್ಟೆಯಲ್ಲಿ ಕಾಸಿಗೊಂದು ಕೊಸರಿಗೊಂದು ಎನ್ನುವಂತೆ 500-2000 ರೂಪಾಯಿಗಳ ಮೊಬೈಲ್ ಬಿಡುಗಡೆ ಮಾಡಿತೋ ಅಂದಿನಿಂದ ಭಾರತದಲ್ಲಿ… Read More ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಅನುಭವದ ಪಾಠ

ನೀರು ಎಲ್ಲರ ಜೀವಾಮೃತ. ಕಡೇ ಪಕ್ಷ ಊಟ ಇಲ್ಲದಿದ್ದರೂ ಸುಮಾರು ದಿನಗಳು ಜೀವಿಸಬಹುದು. ಆದರೆ ನೀರು ಇಲ್ಲದೇ ಜೀವಿಸಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಆಹಾರ ಇಲ್ಲದಿದ್ದಾಗ ಹೊಟ್ಟೆ ತುಂಬಾ ನೀರನ್ನು ಕುಡಿದೇ ಹೊಟ್ಟೆ ತುಂಬಿಸುಕೊಂಡ ಎಷ್ಟೋ ಉದಾಹರಣೆಗಳಿವೆ. ಅಂತಹ ನೀರನ್ನು ಕುಡಿಯುವಾಗ ಆದ ಅನುಭವದ ಸಂಗತಿಯೇ ಇಂದಿನ ಕಥಾವಸ್ತು. ಶಂಕರ ಅದೊಂದು ಪ್ರತಿಷ್ಥಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾರತದಲ್ಲದೇ ದೇಶ ವಿದೇಶದ ನಾನಾ ಭಾಗಗಳಲ್ಲಿ ಅವನ ಕಂಪನಿಯ ಶಾಖೆ ಇತ್ತು. ಪ್ರಪ್ರಥಮ ಬಾರಿಗೆ ಅವನಿಗೆ ಕೆಲಸದ… Read More ಅನುಭವದ ಪಾಠ