ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು. ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ… Read More ರಾಮ ಹೆಚ್ಚೋ, ರಾವಣ ಹೆಚ್ಚೋ‌

ಒತ್ತು‌ ಶ್ಯಾವಿಗೆ

ತಿಂಡಿಗಳ ರಾಜ ಒತ್ತು ಶ್ಯಾವಿಗೆ ತಿನ್ನಲು ಸುಲಭವಾದರೂ ತಯಾರಿಸಲು ತುಸು ತ್ರಾಸದಾಯಕವೇ ಎನ್ನಬಹುದಾದರೂ, ಸಂಬಂಧಗಳನ್ನು ಬೆಸೆಯುವ ಈ ಒತ್ತು ಶ್ಯಾವಿಗೆಯ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಒತ್ತು‌ ಶ್ಯಾವಿಗೆ

ಹಂಸ ಕ್ಷೀರ ನ್ಯಾಯ

ಸರಿ ಸುಮಾರು 90ರ ದಶಕ, ನಾನಿನ್ನೂ ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಹುಡುಕುತ್ತಿದ್ದೆ. ಸರಿಯಾದ ಕೆಲಸ ಸಿಗುವವರೆಗೆ ಸಣ್ಣ ಪುಟ್ಟ ಕಂಪ್ಯೂಟರ್ ರಿಪೇರಿಗಳನ್ನು ಮಾಡುತ್ತಾ, ಅವಶ್ಯಕತೆ ಇದ್ದವರಿಗೆ ಅವರು ಕೇಳುತ್ತಿದ್ದ ಸಾಫ್ಟವೇರ್ ಇನ್ಸ್ಟಾಲ್ ಮಾಡುತ್ತಾ ಅಷ್ಟೋ ಇಷ್ಟು ಸಂಪಾದನೆ ಮಾಡುತ್ತಾ ತಂದೆಗೆ ಹೊರೆಯಾಗದೆ, ಕಂತಿನಲ್ಲಿ ಕೊಂಡಿದ್ದ ಹೀರೋ ಪುಕ್ ಸಾಲವನ್ನು ತೀರಿಸುತ್ತಾ ಜೀವನ ನಡೆಸುತ್ತಿದ್ದ ಕಾಲವದು. ಅಂದೆಲ್ಲಾ ಫ್ಲಾಫಿ ಡಿಸ್ಕ್ ಜಮಾನ, ಏನೇ ಸಾಫ್ಟ್ವೇರ್ ಬೇಕಿದ್ದರೂ ಫ್ಲಾಫಿ ಡಿಸ್ಕನಲ್ಲಿ ಕಾಪಿ ಮಾಡಿಕೊಂಡು ತಂದು ಇನ್ಸ್ಟಾಲ್… Read More ಹಂಸ ಕ್ಷೀರ ನ್ಯಾಯ

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್

ಸುಬ್ರಹ್ಮಣ್ಯ ಷಷ್ಠಿ ಅವಾಂತರ

ಬೆಟ್ಟದ ನೆಲ್ಲಿ ಕಾಯಿ ಸಮುದ್ರ ಉಪ್ಪು ಎತ್ತಲಿಂದೆತ್ತ ಸಂಬಂಧವಯ್ಯಾ? ಎನ್ನುವಂತೆ ಕ್ರಿಕೆಟ್ ಮ್ಯಾಚ್ ಮತ್ತು ಸುಬ್ರಹ್ಮಣ್ಯ ಷಷ್ಥಿಯ ನಡುವೆ ಬ್ರಹ್ಮಚಾರಿ ವಟುವಿನ ಪರದಾಟದ ಸ್ವಾರಸ್ಯಕರ ಪ್ರಸಂಗ ಇದೋ ನಿಮಗಾಗಿ. … Read More ಸುಬ್ರಹ್ಮಣ್ಯ ಷಷ್ಠಿ ಅವಾಂತರ

ನಾನು ಹೇಗೆ ಸಣ್ಣಗಾದೆ

ಈ ಹಿಂದೆ ನಾನೇ ಹಲವಾರು ನನ್ನ ಬರಹಗಳಲ್ಲಿ ತಿಳಿಸಿದ್ದಂತೆ ನಾನು ಕಾಲೇಜು ಓದುತ್ತಿರುವಾಗಲೂ ಸಣ್ಣಗೆ ಕುಳ್ಳಗಿದ್ದು , ನಮ್ಮ ತಾಯಿವರು ಕುಟುಂಬದ ವೈದ್ಯರ ಬಳಿ ಹಲವಾರು ಸಲ ತೋರಿಸಿ, ನಮ್ಮ ಮಗನಿಗೆ ಸ್ವಲ್ಪ ಉದ್ದ ಹಾಗು ದಷ್ಟ ಪುಷ್ಟವಾಗಿ  ಆಗುವಂತೆ ಏನಾದರೂ ಔಷಧಿ ಇದ್ದರೆ ಕೊಡಿ ಎಂದು ಕೇಳಿದ್ದದ್ದು ಇನ್ನೂ ಹಚ್ಚ ಹಸುರಾಗಿದೆ. ನಂತರ ವಯೋಗುಣವಾಗಿ ಬೆಳೆದನಾದರೂ ಸಣ್ಣಗೇ ಇದ್ದೆ.  ಮದುವೆ ಸಮಯದಲ್ಲೂ  ಮದುವೆಗೆ ಬಂದಿದ್ದ ನೆಂಟರಿಷ್ಟರೂ, ಸ್ನೇಹಿತರುಗಳು ನನ್ನನ್ನೂ  ಮತ್ತು ನನ್ನ ಅರ್ಧಾಂಗಿಯನ್ನು ನೋಡಿ, ಇದೇನು… Read More ನಾನು ಹೇಗೆ ಸಣ್ಣಗಾದೆ

ಅಜೇಯ

ಅಜೇಯ ಎಂದರೆ ಎಂದೂ ಸೋಲಿಲ್ಲದ ಸರದಾರ ಎಂದರ್ಥ. ಚಂದ್ರಶೇಖರ್ ಆಝಾದ್ ಅದಕ್ಕೆ ಅನ್ವರ್ಥ. ಚಿಕ್ಕಚಯಸ್ಸಿನಲ್ಲಿ ನನ್ನ ಮೇಲೇಯೂ ಮತ್ತು ಹಲವಾರು ಜನರ ಮೇಲೆ ಅತ್ಯಂತ ಪ್ರಭಾವ ಬೀರಿರುವ ಪುಸ್ತಕ ಒಂದಿದ್ದರೆ ಅದು ಬಾಬು ಕೃಷ್ಣಮೂರ್ತಿಯವರ ವಿರಚಿತ ಅಜೇಯ ಎಂದರೆ ತಪ್ಪಾಗಲಾರದು. ಒಮ್ಮೆ ಆ ಪುಸ್ತಕ ಹಿಡಿದರೆ ಇಡೀ ಪುಸ್ತಕವನ್ನು ಓದಿ ಮುಗಿಸದೆ ಪಕ್ಕಕ್ಕೆ ಎತ್ತಿಡಲಾಗದ ಪುಸ್ತಕವದು. ಯಾವುದೇ ಪುಸ್ತಕದ ಎರಡು ಪುಟಗಳನ್ನು ನಾವು ಓದಬೇಕು. ನಂತರ ಉಳಿದ ಪುಟಗಳನ್ನು ಲೇಖಕ ತನ್ನ ಭಾಷಾ ಪಾಂಡಿತ್ಯದಿಂದ, ಆಸಕ್ತಿಕರ ವಿಷಯಗಳಿಂದ… Read More ಅಜೇಯ

ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಇವತ್ತು ರಾತ್ರಿ ಮುಗಿದು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ 1 ನೇ ತಾರೀಖು. ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಸಂಭ್ರವೋ ಸಂಭ್ರಮ. ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು… Read More ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಸೆಪ್ಟೆಂಬರ್ ೫ ಭಾರತದ ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣರವರ ಜಯಂತಿ. ಇದನ್ನು ನಾವು ಪ್ರೀತಿಯಿಂದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇತ್ತೀಚೆಗಷ್ಟೇ ಶ್ರೀಯುತ ರಾಧಾಕೃಷ್ಣರವರು ನನ್ನ ಪ್ರಾಣ ಸ್ನೇಹಿತ ಹರಿಯವರ ಅಜ್ಜನ  ಸೋದರತ್ತೆಯ ಮಗ  ಎಂದು ತಿಳಿದುಬಂದಿದ್ದರಿಂದ ಶ್ರೀಯುತರು ನಮ್ಶ ಹತ್ತಿರದ ಸಂಬಂಧಿಯೇನೂ ಎನ್ನುವ ಭಾವನೆ ಮೂಡುತ್ತಲಿದೆ.   ನಮ್ಮ ಸಂಸ್ಕೃತಿಯಲ್ಲಿ  ತಂದೆ ತಾಯಿಯರ  ನಂತರದ ಸ್ಥಾನವನ್ನು ಗುರುಗಳಿಗೇ ಮೀಸಲಿಟ್ಟಿದ್ದೇವೆ.  ಮನೆಯೇ ಮೊದಲ ಪಾಠಶಾಲೆ  ತಂದೆ, ತಾಯಿಯರೇ ಮೊದಲ ಗುರುಗಳಾಗಿ, ಬಾಲ ಪಾಠಗಳನ್ನು ಕಲಿಸಿಕೊಟ್ಟರೂ ವ್ಯವಸ್ಥಿತವಾಗಿ ವಿದ್ಯೆಯನ್ನು ಕಲಿತು… Read More ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು