ವೈಟ್ ಟಾಪಿಂಗ್ ಕರಾಳ ಅನುಭವ

ಆಡು ಮುಟ್ಟದ ಸೊಪ್ಪಿಲ್ಲಾ  ವೈಟ್ ಟಾಪಿಂಗ್ ಹೆಸರನ್ನು ಕೇಳದ ಬೆಂಗಳೂರಿಗನಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಒಂದು ವರ್ಷದ ಹಿಂದೆ ವಿಧಾನ ಸಭೆಯ ಚುನಾವಣೆಗೆ ಮುಂಚೆ, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಪ್ರಸ್ತಾವನೆ ಮುರಿದುಬಿದ್ದ ನಂತರ ಇದ್ದಕ್ಕಿಂದ್ದಂತೆಯೇ ಬೆಂಗಳೂರಿನ ಜನರು  ಅದರಲ್ಲೂ ವಾಹನ ಸವಾರರನ್ನು ಬೆಚ್ಚಿ ಬೀಳಿಸುವ ಪದವೇ ವೈಟ್ ಟಾಪಿಂಗ್. ಅಷ್ಟೋ ಇಷ್ಟು ಚೆನ್ನಾಗಿಯೇ ಇದ್ದ ರಸ್ತೆಗಳಲ್ಲಿ ಏಕಾ ಏಕಿ ಭಾರಿ ಯಂತ್ರಗಳನ್ನು ತಂದಿರಿಸಿ ರಸ್ತೆಯನ್ನು ಅರ್ಧ ಭಾಗಗಳಾಗಿ ವಿಂಗಡಿಸಿ, ಇದ್ದ ಡಾಂಬರನ್ನೂ ಅಗೆದು ಹಾಕಿ ಮುದುಕಿಗೆ ಅಲಂಕಾರ ಮಾಡುವ… Read More ವೈಟ್ ಟಾಪಿಂಗ್ ಕರಾಳ ಅನುಭವ

ವಾರನ್ನ ಮತ್ತು ಧರ್ಮ ಕಾರ್ಯಗಳು

ಇತ್ತೀಚೆಗೆ  ವಾರನ್ನ ಕುರಿತಾದ ನನ್ನ  ಲೇಖನವೊಂದಕ್ಕೆ ಭಾರೀ ಪ್ರೋತ್ಸಾಹಕರ ಆಭಿಮಾನಗಳ ಸುರಿಮಳೆಯಾಗಿದ್ದು  ನಿಜಕ್ಕೂ ನನಗೆ ಸಂತೋಷ ಮತ್ತು ಆಶ್ವರ್ಯವನ್ನು ಉಂಟು ಮಾಡಿತು.  ಸಂತೋಷವೇಕೆಂದರೆ ಪ್ರತಿಕ್ರಿಯೆ ನೀಡಿದ್ದ ಬಹುಪಾಲು ಜನರು ಪ್ರತ್ಯಕ್ಷವಾಗಿಯೋ ಇಲ್ಲವೇ ಅವರ ಕುಟಂಬದವರೋ ವಾರನ್ನದಿಂದ ಉಪಕೃತರಾದವರೇ ಆಗಿದ್ದರು. ಇನ್ನೂ ಹಲವರು ತಮ್ಮ ಮನೆಯಲ್ಲಿಯೋ ಅಥವಾ ತಮ್ಮ ಸಂಬಂಧಿಕರುಗಳ ಮನೆಯಲ್ಲಿ ಮೂವತ್ತು ನಲವತ್ತು ವರ್ಷಗಳ ಹಿಂದೆ ಈ ಪದ್ದತಿ ರೂಡಿಯಲ್ಲಿದ್ದದನ್ನು ನೆನಪಿಸಿಕೊಂಡರೆ,  ಇನ್ನೂ ಅನೇಕರು ತಮ್ಮ ತಂದೆತಾಯರಿಂದ ವಾರನ್ನದ ಬಗ್ಗೆ ಕೇಳಿ ತಿಳಿದವರೇ ಆಗಿದ್ದರು. ಎಲ್ಲದ್ದಕ್ಕಿಂತ ಹೆಚ್ಚಾಗಿ… Read More ವಾರನ್ನ ಮತ್ತು ಧರ್ಮ ಕಾರ್ಯಗಳು

ಭಾರತ್ ಬಂದ್

ಸಾವಿರಾರು ವರ್ಷಗಳಿಂದ ಪ್ರಪಂಚಾದ್ಯಂತ ಪ್ರಜೆಗಳು ತಮ್ಮ ಪ್ರದೇಶದ ಹವಾಮಾನ ತಕ್ಕಂತೆ ಮತ್ತು ಅವರ ಅಹಾರ ಪದ್ದತಿಗೆ ಅನುಗುಣವಾಗಿ ತಮಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥಗಳನ್ನು ಕೃಷಿಯಾಧಾರಿತವಾಗಿ ಬೆಳೆಯುತ್ತಾ ತಮ್ಮಲ್ಲಿ ಹೆಚ್ಚಾಗಿದ್ದ ಆಹಾರಗಳನ್ನು ಇತರೊಂದಿಗೆ ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಹಂಚಿಕೊಳ್ಳುತ್ತಾ ನೆಮ್ಮದಿಯ ಜೀವನ ಮಾಡುತ್ತಿದ್ದರು. ಯಾವಾಗ ಜನರ ಆಸೆಗಳು ಹೆಚ್ಚಾಯಿತೂ ಅಂದಿನಿಂದ ಪ್ರಭಲವಾಗಿದ್ದವರು ದುರ್ಬಲ ಮೇಲೆ ಸವಾರಿ ಮಾಡುತ್ತಾ ಊಳಿಗಮಾನ್ಯ ಪದ್ದತಿ ಮತ್ತು ಜಮೀನ್ದಾರಿ ಪದ್ದತಿಗಳು ಆರಂಭವಾದವು. ನೈಸರ್ಗಿಕ ಕೃಷಿ ಪದ್ದತಿಯ ಬೇಸಾಯದಿಂದ ಹೆಚ್ಚಿನ ಇಳುವರಿ ದೊರಕದ ನೆಪವೊಡ್ಡಿ… Read More ಭಾರತ್ ಬಂದ್

ಆಮೀರನ ಅಹಂಗೆ ವೆಂಕಟೇಶನ ಪ್ರಸಾದ

ಮಾರ್ಚ್-9 ಅಂದರೆ ಕ್ರಿಕೆಟ್ ಪ್ರಿಯರಿಗೆಲ್ಲಾ ಥಟ್ ಅಂತಾ ನೆನಪಗೋದೇ ಭಾರತ ಮತ್ತು ಪಾಕಿಸ್ಥಾನದ ನಡುವಿನ ಈ ಹೈವೋಲ್ಟೇಜ್ ಪಂದ್ಯ. 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ವಾಟರ್ ಫೈನಲ್ ಪಂದ್ಯವನ್ನು ಮೈದಾನದಲ್ಲೇ ಕುಳಿತು ನೋಡಿದ ರಸಾನುಭವವನ್ನು ಒಮ್ಮೆ ಮೆಲುಕನ್ನು ಹಾಕೋಣ ಬನ್ನಿ. ಮಾರ್ಚ್ 9, 1996 ಸದಾ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕೀಸ್ಥಾನಗಳ ನಡುವೆ ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಎಲ್ಲದ್ದಕ್ಕಿಂತ ವಿಶೇಷವಾಗಿ… Read More ಆಮೀರನ ಅಹಂಗೆ ವೆಂಕಟೇಶನ ಪ್ರಸಾದ

ಗೃಹಿಣಿ ಗೃಹಮುಚ್ಯತೆ

ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಆ ಮನೆಯ ಮಗಳಿಗೆ ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಾಳೆ. ಮುಂದೆ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂ ಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದ ಹುಡುಗನೊಂದಿಗೆ ಆಕೆಯ ಮದುವೆಯಾಗಿ ತುಂಬು ಕುಟುಂಬದ… Read More ಗೃಹಿಣಿ ಗೃಹಮುಚ್ಯತೆ

ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನೀವೇನೂ ಮೋದಿ ಗೆಲ್ಬೇಕು ಅಂತಿರಾ ಆದ್ರೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡ್ತಾನೆ ಏನ್ ಮಾಡೋದು ? ಸದ್ಯಕ್ಕೆ ಬಹುತೇಕರು ಕೇಳೊ ಪ್ರಶ್ನೆ ಇದು, ಸಣ್ಣದಾಗಿ ಒಂದ್ ರೌಂಡ್ ಪುರಾಣ ಸುತ್ಕೊಂಡ್ ಬರೋಣ, ಕುಂತಿ ಮಾಡಿದ ತಪ್ಪಿಗೆ ಕರ್ಣನ ಜನನವಾಯ್ತು, ಆಮೇಲೆ ಕೀಳು ಜಾತಿಯಲ್ಲಿ ಬೆಳೆದವ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ವಿದ್ಯೆ ಕಲಿಸಲಿಲ್ಲ, ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಕ್ಷತ್ರಿಯರ ಕಟು ವಿರೋಧಿ ಪರಶುರಾಮರ ಬಳಿ ವಿದ್ಯೆ… Read More ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನಿಜಾಥ೯ದಲ್ಲಿ ಮಾನವರಾಗೋಣ

ಆತ್ಮೀಯರೇ, ಚಳಿ ಇಳಿಮುಖವಾಗಿ ನೀಧಾನವಾಫಿ ಬೇಸಿಗೆ ಕಾಲ ಆರಂಭವಾಗಿದೆ. ಪಕ್ಷಿಸಂಕುಲಕ್ಕೆ ಇದು ಕಷ್ಟದ ಕಾಲ. ಬಾಯಾರಿಕೆ ತಣಿಸಿಕೊಳ್ಳಲು ನೀರನ್ನರಸುವ ಹಕ್ಕಿಗಳ ಉಳಿವಿಗಾಗಿ ನಮ್ಮ ಕೈತೋಟದಲ್ಲಿ, ತಾರಸಿಯ ಮೇಲೆ ಅಗಲವಾದ ಅಂಚು ದಪ್ಪಗಿರುವ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಒಂದಿಷ್ಟು ನೀರನ್ನಿಡೋಣ. ಆ ಪಾತ್ರೆಯೊಳಗೆ ಪಕ್ಷಿಗಳು ಕುಳಿತು ನೀರು ಕುಡಿಯಲು ಅನುಕೂಲವಾಗುವ ಹಾಗೆ ಯಾವುದಾದರೂ ಒಂದೆರಡು ಕತ್ತರಿಸಿದ ಗಿಡಗಳ ಕಾಂಡಗಳನ್ನು ಹಾಕಿಡೋಣ. ಸಾಧ್ಯವಾದರೆ ಒಂದೆರಡು ಚಮಚೆ ಕಿರು ಧಾನ್ಯ ಗಳನ್ನೂ ಪಕ್ಕದಲ್ಲೇ ಇನ್ನೊಂದು ತಟ್ಟೆಯಲ್ಲಿಡೋಣ. ನಮ್ಮ ಪರಿಸರ ಸ್ವಚ್ಛ… Read More ನಿಜಾಥ೯ದಲ್ಲಿ ಮಾನವರಾಗೋಣ