ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ

ಇತ್ತೀಚೆಗೆ ನಮ್ಮಲ್ಲಿ ಹುಟ್ಟು ಹಬ್ಬ, ನಾಮಕರಣ, ನಿಶ್ಚಿತಾರ್ಥ, ಮದುವೆ, ಮುಂಜಿ, ಹೊಸಾವರ್ಷದ ಆಚರಣೆ, ಹೀಗೆ ಎಲ್ಲದ್ದಕ್ಕೂ ಕೇಕ್ ಕತ್ತರಿಸುವುದರ ಜೊತೆಗೆ ಮೊಂಬತ್ತಿ ಹತ್ತಿಸಿ ಆರಿಸುವ ಪದ್ದತಿ ರೂಡಿಗೆ ಬಂದಿದೆ. ಈ ಕೇಕ್ ಕತ್ತರಿಸುವ ಪದ್ದತಿ ಅರಂಭವಾಗಿದ್ದು ಎಲ್ಲಿ? ಹೇಗೇ? ಮತ್ತು ಏಕೆ?. ಮೊಂಬತ್ತಿ ಹಚ್ಚಿ ಅದನ್ನು ಆರಿಸುವುದರ ಹಿಂದಿರುವ ಗುಟ್ಟೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ

ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

ಮೈಸೂರು ಒಡೆಯರ್ ವಂಶದಲ್ಲೇ ಅತ್ಯಂತ ಸುದೀರ್ಘವಾಗಿ 30 ಜೂನ್ 1799 ರಿಂದ 27 ಮಾರ್ಚ್ 1868 ಸುಮಾರು 70 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ರಾಜ್ಯಭಾರ ಮಾಡಿದ ಕೀರ್ತಿ ಹೊಂದಿದ್ದ ಮೈಸೂರು ಸಂಸ್ಥಾನದ 22ನೆಯ ಮಹಾರಾಜರಾಗಿದ್ದ, ಸ್ವತಃ ಕಲೆಗಾರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಂದು ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಸಾಧನೆಗಳ ಪರಿಚಯ ಮಾಡಿಸುವ… Read More ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ… Read More ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ವಿಶ್ವ ಜನಸಂಖ್ಯಾ ದಿನ

ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲಗಳ ಅವಶ್ಯಕತೆ ಅತ್ಯಗತ್ಯ ಎನ್ನುವುದು ಸತ್ಯವಾದರೂ, ದೇಶಕ್ಕಿಂತಲೂ ನಮಗೆ ಧರ್ಮವೇ ಮುಖ್ಯ ಎಂದು ದೇಶದ ಕಾನೂನನ್ನೇ ಧಿಕ್ಕರಿಸಿ, ವಿಪರೀತವಾಗಿ ಮಕ್ಕಳನ್ನು ಹುಟ್ಟಿಸುವುದೂ ಸಹಾ ದೇಶದ ಅಭಿವೃದ್ಧಿಗೆ ಕಳಕವಳಕಾರಿಯಾಗಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣದತ್ತ ಗಮನ ಹರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ. … Read More ವಿಶ್ವ ಜನಸಂಖ್ಯಾ ದಿನ

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಶಿವಪುರದ ಸತ್ಯಾಗ್ರಹ ಸೌಧ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ  ಸುಮಾರು 80 ಕಿಮಿ ದೂರ ಪ್ರಯಾಣಿಸಿ ಇನ್ನೇನು ವಿಶ್ವವಿಖ್ಯಾತ ಮದ್ದೂರು ತಲುಪುವ ಕೆಲವೇ ಕೆಲವು ಕಿಮೀ ದೂರದಲ್ಲಿ ಹೆದ್ದಾರಿಯಿಂದ ಬಲಗಡೆ ಕೂಗಳತೇ ದೂರದಲ್ಲೇ,  ದೇಶದ ರಾಜಧಾನಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯಂತೆ (ಐಹೊಳೆಯ ದುರ್ಗಾ ದೇವಾಲಯದ ಪ್ರತಿರೂಪ)  ಕಾಣುವ ವಿಶಾಲವಾದ ಕಟ್ಟಡ ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ  ಹತ್ತಿರ ಹೋಗಿ ವಿಚಾರಿಸಿದಲ್ಲಿ ಸ್ವಾತಂತ್ರ್ಯ ಸಂಗ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯ ಈ ಶಿವಪುರ ಕರ್ನಾಟಕದಲ್ಲಿ  ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡ… Read More ಶಿವಪುರದ ಸತ್ಯಾಗ್ರಹ ಸೌಧ

ಚಿಂತಕರ ಚಾವಡಿಗೆ ಚಲುವಾದ ಆಯ್ಕೆ

ಗಣತಂತ್ರ ದೇಶವಾದ ನಮ್ಮ ಭಾರತದಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಎಂಬುದು ಮೂರು ಆಧಾರ ಸ್ಥಂಭಗಳಾಗಿದ್ದು. ಆ ಶಾಸಕಾಂಗದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾದ ಸಾಂದರು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಲೋಕಸಭೆಯ 543 ಸದಸ್ಯರನ್ನು ಭಾರತದ ಪ್ರಜೆಗಳು ನೇರವಾಗಿ ಆಯ್ಕೆ ಮಾಡಿದರೆ, ರಾಜ್ಯಸಭೆಯ 238 ಸದಸ್ಯರನ್ನು ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಆಯ್ಕೆಯಾದ ಶಾಸಕರುಗಳು ಆಯ್ಕೆ ಮಾಡಿದರೆ, ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ಕೇಂದ್ರಸರ್ಕಾರದ ಶಿಫಾರಸ್ಸಿನ ಮೇರೆಗೆ ನಾಮಕರಣ ಮೂಲಕ ಆಯ್ಕೆ ಮಾಡುತ್ತಾರೆ. ಈ ರೀತಿಯ ನಾಮಕರಣವಾದ… Read More ಚಿಂತಕರ ಚಾವಡಿಗೆ ಚಲುವಾದ ಆಯ್ಕೆ

ಮುತ್ತುಗದ ಎಲೆ (ಇಸ್ತ್ರೀ ಎಲೆ)

ಮದುವೆ ಮುಂಜಿ, ನಾಮಕರಣ ಮುಂತಾದ ಶುಭ ಸಮಾರಂಭವಿರಲೀ ಅಥವಾ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಾಧಾರಣವಾಗಿ ಉಟವನ್ನು ಬಡಿಸಲು ಬಾಳೆ ಎಲೆಯನ್ನು ಬಳಸುವುದು ದಕ್ಷಿಣ ಭಾರತದಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ನೀರು ಹೆಚ್ಚಾಗಿರುವ ಕಡೆಯಲ್ಲಿ ಬಾಳೇಗಿಡ ಬೆಳೆಯುವ ಕಾರಣ, ನೀರಿಲ್ಲದ ಪ್ರದೇಶಗಳಲ್ಲಿ ಬಾಳೆಯ ಎಲೆಯ ಬದಲಾಗಿ ಬಳಸುವ ಎಲೆಯೇ. ಮುತ್ತುಗದ ಎಲೆ. ಕೇವಲ ಊಟದ ಎಲೆಗಷ್ಟೇ ಅಲ್ಲದೇ, ಪೂಜೆ ಪುನಸ್ಕಾರ ಮತ್ತು ಆಯುರ್ವೇದದಲ್ಲಿ ಹಲವು ಔಷಧಿಗಳಿಗೆ ಬಳಸುವ ಈ ಮರಕ್ಕೆ ಕನ್ನಡದಲ್ಲಿ ಮುತ್ತುಗ, ಸಂಸ್ಕೃತದಲ್ಲಿ ಪಾಲಾಶ ಮತ್ತು… Read More ಮುತ್ತುಗದ ಎಲೆ (ಇಸ್ತ್ರೀ ಎಲೆ)

ಲುಟಿಯನ್ಸ್ ದೆಹಲಿ

ದೇಶದ ಖ್ಯಾತ ಪತ್ರಕರ್ತ ಮತ್ತು ಸದ್ಯಕ್ಕೆ ರಿಪಬ್ಲಿಕ್ ಟಿವಿಯ ಮಾಲಿಕ ಅರ್ಣಾಬ್ ಗೋಸ್ವಾಮಿ ಆರಂಭದಿಂದಲೂ ತಮ್ಮ ಟಿವಿ ಛಾನೆಲ್ಲನ್ನು ದೇಶದ ರಾಜಕೀಯ ಆಗುಹೋಗುಗಳ ಪ್ರಮುಖ ಕೇಂದ್ರವಾದ ರಾಜಧಾನಿ ದೆಹಲಿಯಲ್ಲಿ ಆರಂಭಿಸಿದೇ, ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾದ ಮುಂಬೈನಲ್ಲಿ ಪ್ರಾರಂಭಿಸಿ ತಮ್ಮ ಟಿವಿ ಷೋಗಳಲ್ಲಿ ಪದೇ ಪದೇ ಲೂಟಿಯನ್ಸ್ ಮಾಧ್ಯಮ, ಲೂಟಿಯನ್ಸ್ ಎಂಬ ಪದವನ್ನು ಬಹಳಷ್ಟು ಬಾರಿ ಬಳಸುತ್ತಲೇ ಇರುತ್ತಾರೆ. ಲೂಟಿಯನ್ಸ್ ಪದ ಕೇಳಿದ ತಕ್ಷಣ ಅದನ್ನು ಲೂಟಿ ಮಾಡುವವರು ಅರ್ಥಾತ್ ದೋಚುವವರು ಎಂಬ ಅರ್ಥವನ್ನು ಕಲ್ಪಿಸಿಕೊಂಡು ಅರೇ,… Read More ಲುಟಿಯನ್ಸ್ ದೆಹಲಿ