ದೇವರಾಯನ ದುರ್ಗ

ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು. ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ… Read More ದೇವರಾಯನ ದುರ್ಗ

ಅರ್ಥಪೂರ್ಣ ಮಹಿಳಾ ದಿನಾಚರಣೆ

ಮಾರ್ಚ್ 8 ರಂದು ವಿಶ್ವಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಿಕೊಂಡು ಬರಲಾಗುತ್ತದೆ. ಇದೇ ಅಂಗವಾಗಿ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಇರುವ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಸಹಾ ಕಳೆದ ಕೆಲವು ವರ್ಷಗಳಿಂದಲೂ ನಮ್ಮ ನಿಮ್ಮೆಲ್ಲರ ನಡುವೆಯೇ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರ ಸಾಧನೆಯನ್ನು ಗುರುತಿಸಿ ಅವರ ಸಾಧನೆಗಳು ಮತ್ತಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಅವರಿಗೆ ಗೌರವ ಸಲ್ಲಿಸಿಕೊಂಡು ಬರುತ್ತಿದೆ. ಈ ಬಾರಿ ಯಲಹಂಕ ವಿಭಾಗದ ಆರೋಗ್ಯಭಾರತಿ ಸಹಯೋಗದೊಂದಿಗೆ ದಿನಾಂಕ 13-3-2022 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ… Read More ಅರ್ಥಪೂರ್ಣ ಮಹಿಳಾ ದಿನಾಚರಣೆ

ಅಡುಗೆ ಎಣ್ಣೆ ಕಾಳದಂಧೆ

ಕಳೆದ ಒಂದು ತಿಂಗಳಿನಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯಾದವೀ ಕಲಹ ನಡೆಯುತ್ತಿದ್ದರೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಆ ಯುದ್ಧದ ದುಷ್ಪರಿಣಾಮ ಭಾರತದ ಮೇಲೆ ಆಗುತ್ತಿದೆ. ಯುದ್ಧದಿಂದಾಗಿ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಪೆಟ್ರೋಲ್ ಬೆಲೆ ಏರುತ್ತದೆ ಎಂದರೆ ಒಪ್ಪಿಕೊಳ್ಳಬಹುದು ಆದರೆ ಉಕ್ರೇನ್ ನಿಂದ ಸೂರ್ಯಕಾಂತಿಯ ಎಣ್ಣೆ ಭಾರತಕ್ಕೆ ಆಮದು ಆಗ್ತಾ ಇಲ್ಲಾ ಎಂಬ ನೆಪವೊಡ್ಡಿ ಇದ್ದಕ್ಕಿದಂತೆಯೇ ಭಾರತದಲ್ಲಿ ಅಡುಗೆ ಎಣ್ಣೆ ಯದ್ವಾ ತವ್ದಾ ಏರುತ್ತಿರುವುದು ಕಳವಳಕಾರಿಯಾಗಿದೆ. ಕೊರೋನಾ ಮುಂಚೆ 80-100 ರೂಪಾಯಿ ಆಸುಪಾಸಿನಲ್ಲಿ… Read More ಅಡುಗೆ ಎಣ್ಣೆ ಕಾಳದಂಧೆ

ನಡುಂಗಮುವ ರಾಜ ಇನ್ನಿಲ್ಲ

ನಡುಂಗಮುವ ರಾಜ ಎನ್ನುವುದು ಶ್ರೀಲಂಕಾದ ಕೊಲಂಬೊವಿನಲ್ಲಿ 07.03.22 ಸೋಮವಾರದಂದು ತನ್ನ 69 ನೇ ವಯಸ್ಸಿನಲ್ಲಿ ನಿಧನವಾದ ಸುಮಾರು 10.5 ಅಡಿ ಎತ್ತರವಿದ್ದ ಏಷ್ಯಾದ ಅತಿದೊಡ್ಡ ಪಳಗಿದ ಆನೆಯ ಹೆಸರಾಗಿದೆ. ಈ ಆನೆಯ ಸುಮಾರು ವರ್ಷಗಳ ಕಾಲ ಕ್ಯಾಂಡಿ ನಗರದಲ್ಲಿ ಪ್ರತೀ ವರ್ಷ ಜುಲೈ ತಿಂಗಳಿನ ಹುಣ್ಣಿಮೆಯ ಸಂದರ್ಭದಲ್ಲಿ ನಡೆಯುವ ಬೌದ್ಧರ ಪ್ರಮುಖ ಧಾರ್ಮಿಕ ಪ್ರದರ್ಶನವಾದ ಎಸಲದ ವಾರ್ಷಿಕ ಮೆರವಣಿಗೆಯಲ್ಲಿ ಭಗವಾನ್ ಬುದ್ಧನ ಪವಿತ್ರ ದಂತಕವಚವನ್ನು ಹೊಂದಿರುವ ಪೆಟ್ಟಿಗೆಯನ್ನು ಹೊತ್ತೊಯ್ಯುವ ಕಾಯಕ ವಹಿಸಿಕೊಂಡಿತ್ತು . 1985 ರಿಂದಲೂ ಕೊಲಂಬೊದಲ್ಲಿ… Read More ನಡುಂಗಮುವ ರಾಜ ಇನ್ನಿಲ್ಲ

ಸಂತ ಶಿಶುನಾಳ ಷರೀಫರು

19ನೇ ಶತಮಾನ ಪರ್ವಕಾಲದಲ್ಲಿ ಬ್ರಿಟೀಷರ ದಬ್ಬಾಳಿಯ ಕಾಲದಲ್ಲಿ ದೇಶಕ್ಕೆ ಸ್ವಾತ್ರಂತ್ರ್ಯ ತಂದು ಕೊಡಲು ನಡೆಸಿದ ಹೋರಾಟದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಒಗ್ಗಟ್ಟಾಗಿಯೇ ಬ್ರಿಟಿಷರ ವಿರುದ್ಧ ಹೊರಾಡುತ್ತಿದ್ದರು. ಅಲ್ಲಿಯವರೆಗೂ ಕೋಮು ಸೌಹಾರ್ಧತೆಯಿಂದ ಶಾಂತಿಯುತವಾಗಿ ಒಟ್ಟಾಗಿಯೇ ಜೀವಿಸುತ್ತಿದ್ದ ಹಿಂದೂ ಮತ್ತು ಮುಸಲ್ಮಾನರ ನಡುವೆ ಇಂದು ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡ ರೀತಿಯ ಭಿನ್ನಾಭಿಪ್ರಾಯಗಳನ್ನಾಗಿ ಮಾಡಿಕೊಂಡು ಪರಸ್ಪರ ಇರುಸು ಮುರುಸು ಮೂಡಿಸುತ್ತಾ ಕೊಲೆ, ಕೋಮು ದಳ್ಳುರಿ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವನ್ನು ಮಾಡುತ್ತಿರುವ ಇಂತಹ ಕಾಲಘಟದಲ್ಲಿಯೇ, ಧರ್ಮ, ಕುಲ-ಗೋತ್ರಗಳ ಬದಿಗೊತ್ತಿ, ಸಹೋದರತ್ವವನ್ನು… Read More ಸಂತ ಶಿಶುನಾಳ ಷರೀಫರು

ಉಕ್ರೇನ್  ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ

ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ರೀತಿಯ ಯುದ್ಧದ ಭೀತಿಯಿದ್ದ ವಿಷಯ  ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ.  ಕನ್ನಡದಲ್ಲಿರುವ ಪ್ರಸಿದ್ಧ ಗಾದೆ ಹುಟ್ತಾ ಹುಟ್ತಾ ಅಣ್ಣಾ ತಮ್ಮಂದಿರು ಬೆಳಿತಾ ಬೆಳಿತಾ ದಾಯಾದಿಗಳು ಎನ್ನುವಂತೆ 90ರ ದಶಕವರೆಗೂ ಈ  ಎರಡೂ ರಾಷ್ಟ್ರಗಳು ಸೋವಿಯತ್ ರಷ್ಯಾದ ಭಾಗವಾಗಿದ್ದವು.  ಆ ಸಮಯದಲ್ಲಿ ಮಿಖಾಯಿಲ್ ಗೊರ್ಬಚೋವ್ ನೇತೃತ್ವದಲ್ಲಿ ಬೀಸಿದ ಬದಲಾವಣೆಯ ಗಾಳಿಯಿಂದಾಗಿ ಪ್ರಪಂಚದ ಅತಿದೊಡ್ಡ ಕಮ್ಯೂನಿಷ್ಟ್ ರಾಷ್ಟ್ರ ಹತ್ತಾರು ರಾಷ್ಟ್ರಗಳಾಗಿ ಛಿದ್ರಗೊಂಡಿದ್ದು ಈಗ ಇತಿಹಾಸ. ಮೊದಲಿನಿಂದಲೂ  ಇಡೀ ವಿಶ್ವದ ಮೇಲೆ… Read More ಉಕ್ರೇನ್  ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ

ಧನ್ಯೋಸ್ಮಿ

ಜೀವನ ಎಂದರೆ ಕೇವಲ ಆಟ, ಪಾಠ, ಕೆಲಸ, ಊಟ, ನಿದ್ದೆಯಷ್ಟೇ ಅಲ್ಲದೇ ಅಭ್ಯಾಸ ಮತ್ತು ಹವ್ಯಾಸಗಳೂ ಸಹಾ ನಮ್ಮ ಜೀವನ ಅವಿಭಾಜ್ಯ ಅಂಗವಾಗಿರುತ್ತದೆ ಎಂದರೆ ತಪ್ಪಾಗದು. ಜೀವನದಲ್ಲಿ ಸುಖಃ ಮತ್ತು ದುಃಖಗಳು ಸಂಭವಿಸಿದಾಗ ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಹೋಗಲು ಹವ್ಯಾಸಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಹಾಗಾಗಿಯೇ ಖುಷಿ ಮತ್ತು ದುಃಖಗಳ ಸಮಯದಲೂ ಹಾಡುಗಳನ್ನು ಗುಣುಗುವ ಮೂಲಕವೋ ಇಲ್ಲವೇ ನೃತ್ಯ ಮಾಡುವ ಮೂಲಕವೋ ಇಲ್ಲವೇ ಒಳ್ಳೆಯ ವಿಷಯಗಳನ್ನು ಓದುವ ಇಲ್ಲವೇ ಬರೆಯುವ ಇಲ್ಲವೇ, ಯಾವುದಾದರೂ ಪುಣ್ಯಕ್ಷೇತ್ರಗಳೋ ಇಲ್ಲವೇ ಪ್ರಕೃತಿ ತಾಣಕ್ಕೆ… Read More ಧನ್ಯೋಸ್ಮಿ

ಕಾಶೀ ಶ್ರೀ ವಿಶ್ವನಾಥ

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಶ್ರೀಕ್ಷೇತ್ರ ಹಿಂದೂಗಳ ಆಧ್ಯಾತ್ಮ ಕೇಂದ್ರವಲ್ಲದೇ ಮೋಕ್ಷದ ಹಾದಿಯೂ ಆಗಿದೆ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದಲ್ಲದೇ ಕಾಶೀಯಲ್ಲಿ ದೇಹತ್ಯಾಗ ಮಾಡುವರಿಗೆ ಶಾಶ್ವತವಾದ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಂಗಾನದಿಯ ತಟದಲ್ಲಿ ೬೪ ಘಾಟ್ ಗಳಿರುವ ಈ ಶ್ರೀಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದ್ದು ಶಿವರಾತ್ರಿಯ ಈ ಪವಿತ್ರದಿನದಂದು ಶ್ರೀಕ್ಷೇತ್ರದ ದರ್ಶನವನ್ನು ಪಡೆಯೋಣ ಬನ್ನಿ. ಕಾಶಿಯ… Read More ಕಾಶೀ ಶ್ರೀ ವಿಶ್ವನಾಥ

ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ದ್ವಾಪರಯುಗಾಂತ್ಯದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದು ಕೌರವರನ್ನು ಸೆದೆಬಡೆದ ಪಾಂಡವರು ತಮ್ಮ ರಾಜ್ಯವನ್ನು ಮರಳಿ ಪಡೆಯುತ್ತಾರೆ ಎಂಬುದನ್ನು ನಮ್ಮ ಪುರಾಣ ಗ್ರಂಥವಾದ ಮಹಾಭಾರತದಲ್ಲಿ ಓದಿರುತ್ತೇವೆ. ಆದರೆ ಮಹಾಭಾರತ ಎಂಬುದು ನಡದೇ ಇಲ್ಲ. ಅದೊಂದು ಕಟ್ಟು ಕಥೆ ಎನ್ನುವವರಿಗೆ ಉತ್ತರ ನೀಡುವಂತೆಯೇ ವರಸೆಯಲ್ಲಿ ಧೃತರಾಷ್ಟ್ರನ ತಮ್ಮ ಮತ್ತು ಆತನಿಗೆ ಆಪ್ತಸಲಹೆಗಾರ ಮತ್ತು ಮಂತ್ರಿಯಾಗಿದ್ದ ವಿದುರನು ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಉತ್ತರ ಭಾರತದಿಂದ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಉತ್ತರ… Read More ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ