ರಾಹುಲ್ ಬಜಾಜ್

ಸಾಮಾನ್ಯವಾಗಿ ಸಣ್ಣ ವಯಸ್ಸಿನ ಮಕ್ಕಳಿಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಹಿರಿಯರು, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯ ಮಾತನ್ನು ಹೇಳುತ್ತಿರುತ್ತಾರೆ. ಅದರ ಸ್ವಲ್ಪ ಮುಂದುವರೆದ ಭಾಗವಾಗಿ ಪುಸ್ತಕ ಎಂದರೆ ಕೇವಲ ಕಥೆ ಕಾದಂಬರಿಗಳಲ್ಲದೇ ತಮ್ಮ ಕಠಿಣ ಪರಿಶ್ರಮದೈದ್ದ ವೃತ್ತಿಪರರಾಗಿ ಯಶಸ್ಸಿಗಳಾದವರ ಕಥೆಗಳನ್ನು ಓದುವುದರಿಂದ ಅವರಂತೆ ಯಶಸ್ಸನ್ನು ನಾವು ಸಹಾ ಕಾಣಬಹುದು ಎಂಬ ಕೆಚ್ಚನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಭಾರತದಲ್ಲಿ ಯಶಸ್ವೀ ಉದ್ದಿಮೆ ಸ್ಥಾನಮಾನದಲ್ಲಿ ನಿಲ್ಲಬಲ್ಲಂತಹ ಕೆಲವೇ ಕೆಲವು ಉದ್ಯಮಿಗಳಲ್ಲಿ ಶ್ರೀ ರಾಹುಲ್ ಬಜಾಜ್ ಅವರೂ… Read More ರಾಹುಲ್ ಬಜಾಜ್

ಶ್ರೀ ಮಧ್ವಾಚಾರ್ಯರು

ನಮಗೆಲ್ಲರಿಗೂ ತಿಳಿದಿರುವಂತೆ 7ನೇ ಶತಮಾನದ ಸಮಯದಲ್ಲಿ ಬೌದ್ಧ ಮತ್ತು ಜೈನಮತಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಹಿಂದೂ ಧರ್ಮದ ಬಹುತೇಕರು ನಾನಾ ಕಾರಣಗಳಿಂದಾಗಿ ಮತಾಂತರವಾಗಿ ಹಿಂದೂಧರ್ಮದ ಅವಸಾನದತ್ತ ಸಾಗುತ್ತಿದ್ದಾಗ, ಆಚಾರ್ಯ ತ್ರಯರಾದ ಶಂಕರಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ನಮ್ಮ ದೇಶದಲ್ಲಿ ಹಿಂದೂ ಧರ್ಮದ ಪುನರುತ್ಥಾನ ಮಾಡಿದ ಸಂತರು ಎಂದರೂ ತಪ್ಪಾಗದು. ಶ್ರೀ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದು ಎಲ್ಲರಲ್ಲೂ ಭಗವಂತನು ಇದ್ದಾನೆ ಎಂಬ ಅದ್ವೈತ ತತ್ವವನ್ನು ಪ್ರತಿಪಾದಿಸಿದರೆ, ಶ್ರೀ ರಾಮಾನುಜಾಚಾರ್ಯರು ಹರಿಯೇ ಸರ್ವೋತ್ತಮ ಎಂಬ ವಿಶಿಷ್ಠಾದ್ವೈತವನ್ನು ಪ್ರತಿಪಾದಿಸಿದರು. ಕ್ರಿ.ಶ.1238 ರಲ್ಲಿ… Read More ಶ್ರೀ ಮಧ್ವಾಚಾರ್ಯರು

ಭೀಷ್ಮಾಷ್ಟಮಿ

ಇಂದು ಮಾಘ ಮಾಸದ ಶುದ್ಧ ಅಷ್ಟಮಿ. ಆಜೀವ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ ಎಂದು ಶಪಥ ಮಾಡಿ,  ಮಹಾಭಾರತದಲ್ಲಿ  ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿ ಪಿತಾಮಹರೇ ಎನಿಸಿದ್ದ ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಇಚ್ಛಾಮರಣಿಗಳಾಗಿ ತಮ್ಮ ಜೀವನವನ್ನು ತ್ಯಜಿಸಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾಯುತ್ತಿದ್ದ   ಶ್ರೀ ಭೀಷ್ಮಾಚಾರ್ಯರು ತಮ್ಮ ದೇಹತ್ಯಾಗವನ್ನು ಮಾಡಿದ ದಿನ ಹಾಗಾಗಿ ಈ ದಿನವನ್ನು ಭೀಷ್ಮಾಷ್ಟಮಿ  ಎಂದೂ ಕರೆಯಲಾಗುತ್ತದೆ. ಮಹಾಭಾರತದಲ್ಲಿ ಶಂತನು ಮತ್ತು ಗಂಗಾದೇವಿಯ ಪುತ್ರನಾಗಿ ಜನಿಸಿದ್ದ ದೇವವ್ರತ ಸಹಜವಾಗಿಯೇ ಶಂತನುವಿನ ಉತ್ತರಾಧಿಕಾರಿಗಳಾಗಿರುತ್ತಾರೆ. ವಯಸ್ಸಿಗೆ ಬಂದ ಮಗನಿದ್ದರೂ… Read More ಭೀಷ್ಮಾಷ್ಟಮಿ

ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ

ವಿದ್ಯೆ, ವಿವೇಕಕಿಂತಲೂ, ಧರ್ಮವೇ ಹೆಚ್ಚು ಎಂದು ದೇಶ ಮತ್ತು ಧರ್ಮದ ನಡುವಿನ ಅಂತರ ತಿಳಿಯದ 6 ಹೆಣ್ಣು ಮಕ್ಕಳಿಂದಾಗಿ ಇಡೀ ರಾಜ್ಯಕ್ಕೇ ಕೆಟ್ಟ ಹೆಸರು ತರುತ್ತಿರುವ ಈ ಸಂಧರ್ಭದಲ್ಲಿ 9 ದಶಕಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿಯೂ ತನ್ನ ವಿವೇಕ ಕಳೆದುಕೊಳ್ಳದೇ ವಿದ್ಯೆ ಕಲಿತು ಇಡೀ ಸಮಾಜವನ್ನೇ ಬದಲಾಯಿಸಿದಂತಹ  ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಹೃದಯಸ್ಪರ್ಶಿ ಕಥೆಯೊಂದರ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದು 1943, ಹುಬ್ಬಳ್ಳಿಯ ಮೂಲದ 22 ವರ್ಷದ ಯುವ ವೈದ್ಯರಾಗಿದ್ದ ಡಾ. ಆರ್. ಎಚ್. ಕುಲಕರ್ಣಿಯವರು ಮಹಾರಾಷ್ಟ್ರ-ಕರ್ನಾಟಕ… Read More ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ

ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

ತಮ್ಮ 12ನೇ ವಯಸ್ಸಿನಿಂದ 90ನೇ ವಯಸ್ಸಿನ ವರೆಗೂ ಸುಮಾರು ಎಂಟು ದಶಕಗಳ ಕಾಲ ಸುದೀರ್ಘ ವೃತ್ತಿಜೀವನದಲ್ಲಿ 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಭಾರತದ ಗಾನ ಕೋಗಿಲೆ, ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀಮತಿ ಲತಾ ಮಂಗೇಶ್ಕರ್ ಅವರ ತಮ್ಮ 92ನೇ ವಯಸ್ಸಿನಲ್ಲಿ ಸುದೀರ್ಘವಾದ ಆರೋಗ್ಯದಿಂದ ನಿಧನರಾದದ್ದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟವೇ ಸರಿ. ನೆನ್ನೆ ಬೆಳಿಗ್ಗೆ ಅವರ ನಿಧನದ ಸುದ್ದಿ ಕೇಳಿದ ತಕ್ಷಣವೇ, ಆತ್ಮಕ್ಕೆ ಸದ್ಗತಿಯನ್ನು‌ ಕೊಡಲಿ ಎಂದು ಶ್ರದ್ಧಾಂಜಲಿಯನ್ನ ಅರ್ಪಿಸುವಾಗ ಶ್ರೀಮತಿ. ಲತಾ… Read More ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ

ಏಳನೇ ಶತಮಾನದಲ್ಲಿ ಬೌದ್ಧ ಮತ್ತು ಜೈನಮತಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದು ನಾನಾ ಕಾರಣಗಳಿಂದಾಗಿ ಹಿಂದೂಧರ್ಮದ ಅನೇಕರು ಮತಾಂತರಗೊಂಡು ಹಿಂದೂ ಧರ್ಮದ ಅವಸಾನವಾಗಲಿದೇ ಎಂದೇ ಕಳವಳಗೊಂಡಿದ್ದಾಗ,  ಹಿಂದೂ ಧರ್ಮದ ಪುನರುತ್ಥಾನಕ್ಕೆ ಆ ಭಗವಂತನೇ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಎಂಬ ಆಚಾರ್ಯತ್ರಯರ ಮೂಲಕ ಮನುಷ್ಯ ಸ್ವರೂಪವಾಗಿ ಭಾರತದಲ್ಲಿ ಹುಟ್ಟಿ ಬಂದು ಸನಾತನ ಧರ್ಮದ ಬಗ್ಗೆ ಇದ್ದ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಸನಾತನಧರ್ಮವನ್ನು ಸರಳೀಕರಿಸಿ ಮತ್ತೆ ನಮ್ಮ ದೇಶದಲ್ಲಿ ಹಿಂದೂ ಧರ್ಮ ತಲೆ ಎತ್ತುವಂತೆ ಮಾಡಿದ ಮಹಾನುಭಾವರು. ಕ್ರಿ.ಶ 788 ರಲ್ಲಿ… Read More ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ

ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಇತ್ತೀಚೆಗೆ ವಾಟ್ಸಾಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಈ ಭಾವಾನುವಾದವನ್ನು ಮೊದಲು ಓದಿದ ನಂತರ ವಿಚಾರಕ್ಕೆ ಬರೋಣ. ಒಂದೂರಿನಲ್ಲಿದ್ದ  ದೇವಸ್ಥಾನವೊಂದಕ್ಕೆ ಪ್ರತಿದಿನ ಮುಂಜಾನೆ ಒಂದು ಚಿಕ್ಕ ಹುಡುಗಿ ಬಂದು ದೇವರ ಮುಂದೆ ನಿಂತು, ಕಣ್ಗಳನ್ನು ಮುಚ್ಚಿ, ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಸಿಕೊಂಡು ಒಂದೆರಡು ನಿಮಿಷಗಳ ಕಾಲ ಏನನ್ನೋ ಗೊಣಗುತ್ತಾ, ನಂತರ ಕಣ್ಣು ತೆರೆದು, ನಮಸ್ಕರಿಸಿ, ನಗುತ್ತಾ ಓಡಿಹೋಗುತ್ತಿದ್ದಳು. ಇದು ಆಕೆಯ ದೈನಂದಿನ ಕಾರ್ಯವಾಗಿತ್ತು. ಅ ಪುಟ್ಟ ಹುಡುಗಿಯನ್ನು ಪ್ರತಿದಿನವೂ ಗಮನಿಸುತ್ತಿದ್ದ ದೇವಸ್ಥಾನದ ಅರ್ಚಕರಿಗೆ ಅಷ್ಟು ಸಣ್ಣ ಹುಡುಗಿಗೆ ಧರ್ಮ ಆಚಾರ… Read More ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಮೃಗವಧೆ

ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ… Read More ಮೃಗವಧೆ

ಗುಬ್ಬಚ್ಚಿ

ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನ. ನಾವು ನೀವು ಚಿಕ್ಕವರಿದ್ದಾಗ ನೋಡುತ್ತಿದ್ದ ಚಿಂವ್ ಚಿಂವ್ ಗುಬ್ಬಿಗಳು ಇಂದು ನಗರ ಪ್ರದೇಶಗಳಲ್ಲಿ ಕಾಣದೇ ಹೋಗುವಂತಾಗಿರುವುದರ ಹಿಂದಿರುವ ಮನಕಲಕುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಗುಬ್ಬಚ್ಚಿ