ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು,  ಅರೇ ಇದೇನಿದು? ಈ ಸಣಕಲ ದೇಹದ  ಮಾವುತನು  ಅಷ್ಟು  ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು  ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ  ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ.  ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ … Read More ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

ತಿರುಮಲ ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕರ ಭಾವನೆಯಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದಾದರೂ ಅದರ ಹೊರತಾಗಿಯೂ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು ರಮಣೀಯವಾದ ಸ್ಥಳಗಳು ಇದ್ದು ಅವುಗಳಲ್ಲಿ ಬಹುತೇಕರು ಗಮನಿಸದಿರದ ನೈಸರ್ಗಿಕ ವೆಂಕಟೇಶ್ವರ ಸ್ವಾಮಿ ಪ್ರತಿಮೆ ಇದೆ. ನಾವಿಂದು ಕುಳಿತಲ್ಲಿಂದಲೇ ಆ ಸ್ವಾಮಿಯ ದಿವ್ಯ ದರ್ಶನವನ್ನು ಪಡೆಯೋಣ ಬನ್ನಿ. ಧನುರ್ಮಾಸದಲ್ಲಿ ಕೇವಲ ಒಂದು ದಿನ ವಿಷ್ಣುವಿನನ್ನು ದರ್ಶನ ಮಾಡಿದಲ್ಲಿ ಅದು… Read More ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

ಮಹಾರಾಷ್ಟ್ರದಲ್ಲಿ ಸಿಂಧೂ ತಾಯಿ ಎಂದರೆ ಅನಾಥರ ಪಾಲಿನ ಆಯಿ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 50 ವರ್ಷಗಳಿಂದಲೂ  ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ದಿಕ್ಕು ದೆಸೆ ಇಲ್ಲದ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮಾಡಿರುವ ಕಾರಣ ಆಕೆ ತನಗೆ  207 ಅಳಿಯಂದಿರು ಮತ್ತು 36 ಸೊಸೆಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನವೆಂಬರ್ 14, 1948 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಸಿಂಧು… Read More ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

ಸಾವಿತ್ರಿಬಾಯಿ ಫುಲೆ

ಮಹಿಳಾ ಹಕ್ಕಿನ ಗಂಧಗಾಳಿಯೂ ಗೊತ್ತಿಲ್ಲದ ದಿನಗಳಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಹೋರಾಟ ನಡೆಸಿದ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಬಾಲಿಕಾ ದಿನ್ ಎಂದು ಆಚರಿಸಲಾಗುತ್ತಿದ್ದು, ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಾವಿತ್ರಿಬಾಯಿ ಫುಲೆ

ಮಾಸ ಶಿವರಾತ್ರಿ

ನಮಗೆಲ್ಲಾ ತಿಳಿದಿರುವಂತೆ  ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ  ಮಾಗಿಯ ಚಳಿಯ ಇನ್ನೂ ಹೋಗದೇ ಇದ್ದಾಗ,  ಶಿಶಿರ ಋತುವಿನ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಹಬ್ಬ ಕಳೆದ ಕೂಡಲೇ ಚಳಿ ಎಲ್ಲವೂ ಮಂಗಮಾಯ ಎಂದು ಮಾತನಾಡುವುದನ್ನುಕೇಳಿದ್ದೇವೆ. ಶಿವರಾತ್ರಿ ಹಬ್ಬದ  ದಿನವಿಡೀ ಉಪವಾಸ ಮಾಡಿ ರಾತ್ರಿ  ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಭಗವಾನ್ ಶಂಕರನನ್ನು  ಪ್ರಾರ್ಥಿಸಿ ಮಾರನೇಯ ದಿನ  ದಿನ ವಿವಿಧ ರೀತಿಯ ಭಕ್ಷ ಭೋಜನಗಗಳನ್ನು ತಯಾರಿಸಿ  ಭಗವಂತನಿಗೆ ನೈವೇದ್ಯ ಮಾದಿ ಹಂಚಿ ತಿನ್ನುವ… Read More ಮಾಸ ಶಿವರಾತ್ರಿ

ಅಪ್ಪಾ ಹಾಕಿದ ಆಲದ ಮರ

ಅದು 80ರ ದಶಕ SSLC ಆದ ನಂತರ Computer Science Diploma ಮಾಡಿದರೆ ಜೀವನದಲ್ಲಿ ಬೇಗ ನೆಲೆಗೊಳ್ಳಬಹುದು ಎನ್ನುವುದು ನನ್ನಾಸೆಯಾಗಿತ್ತು. ಆದರೆ ಅಮ್ಮನೇಕೋ ಮಗ ಇನ್ನೂ ಚಿಕ್ಕ ಹುಡುಗ. ಹೊರೆಗಿನ ಪ್ರಪಂಚದ ಜ್ಞಾನ ತಿಳಿಯೋದಿಲ್ಲ. ಹೇಗೂ ಇಲ್ಲೇ BEL college ಇದೆಯಲ್ಲಾ ಇಲ್ಲೇ ಪಿಯೂಸಿ ಮಾಡ್ಲಿ ಬಿಡಿ. ಆ ಮೇಲೆ ನೋಡಿದರಾಯ್ತು ಎಂಬ ತೀರ್ಮಾನ ತೆಗೆದುಕೊಂಡು ಬಿಇಎಲ್ ಕಾಲೇಜಿನಲ್ಲಿ ವಿಜ್ಞಾನದ ವಿಷಯಕ್ಕೆ ಅರ್ಜಿ ಹಾಕಿಸಿದರು. ಮೊದಲನೇ ಲಿಸ್ಟಿನಲ್ಲಿಯೇ ನನ್ನ ಹೆಸರಿದ್ದದ್ದು ನೋಡಿ ಸ್ವರ್ಗಕ್ಕೆ ಮೂರೇ ಗೇಣು. ಕೆಲವೇ… Read More ಅಪ್ಪಾ ಹಾಕಿದ ಆಲದ ಮರ

ಮೋಕ್ಷರಂಗ, ರಂಗಸ್ಥಳ

ಧನುರ್ಮಾಸದ ಸಮಯದಲ್ಲಿ ಒಂದೇ ದಿನ ಶ್ರೀರಂಗ ಪಟ್ಟಣದ ಆದಿರಂಗ, ಶಿಂಷಾದ ಮಧ್ಯರಂಗ ಮತ್ತು ತಮಿಳುನಾಡಿನ ಶ್ರೀರಂಗನ ಅಂತ್ಯರಂಗ ಈ ಮೂರು ರಂಗನಾಥನ ದರ್ಶನ ಮಾಡಿದಲ್ಲಿ ಬಹಳ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಅದರೆ ಈ ಮೂರು ರಂಗನಾಥನ ದರ್ಶನದ ಮಾಡಿದ ನಂತರ ಮೋಕ್ಷ ಪಡೆಯುವುದಕ್ಕಾಗಿ ನಾಲ್ಕನೇ ರಂಗನಾಥನ ದರ್ಶನ ಮಾಡಬೇಕು ಎನ್ನುವ ವಿಷಯ ಬಹುತೇಕರಿಗೆ ತಿಳಿದೇ ಇಲ್ಲ.  ಬನ್ನಿ ನಾವಿಂದು ಚಿಕ್ಕಬಳ್ಳಾಪುರದ ಸಮೀಪವೇ ಇರುವ ರಂಗಸ್ಥಳದ ಮೋಕ್ಷರಂಗನಾಥನ ದರ್ಶನವನ್ನು ಕುಳಿತಲ್ಲಿಂದಲೇ  ಮಾಡಿಕೊಳ್ಳುವ ಮೂಲಕ ರಂಗನಾಥ ಸ್ವಾಮಿಯ… Read More ಮೋಕ್ಷರಂಗ, ರಂಗಸ್ಥಳ

ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು

ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಈ ಮಾತನ್ನು ನಮ್ಮ ಹಿರಿಯರು ಬಹುಶಃ ಮುಂದೊಂದು ದಿನ ಸ್ವಘೋಷಿತ ನಾದಬ್ರಹ್ಮ, ಮಹಾಗುರು ಎಂಬ ಬಿರುದಾಂಕಿತ ಗಂಗರಾಜು ಎಂಬ ದುರಹಂಕಾರ ಅವಿವೇಕಿಗೆಂದೇ ಬರೆದಿರಬೇಕು ಎಂದರು ಅತಿಶಯವಲ್ಲ. ಒಮ್ಮೆ ಮಾಡಿದರೆ ತಪ್ಪು ಪುನಃ ಪುನಃ ಅದೇ ತಪ್ಪನ್ನು ಮಾಡಿದಲ್ಲಿ ಪ್ರಮಾದ ಎಂದಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಗಂಗರಾಜುವಿನ ಅರಿವಿಗೆ ಬರಲಿಲ್ಲವೇ? ಕೆಲ ದಿನಗಳ ಹಿಂದೆಯಷ್ಟೇ ತನ್ನ ಸುತ್ತಲೂ ಇರುವ ವಂದಿಮಾಗಧರನ್ನು ಮೆಚ್ಚಿಸಲು ಮತ್ತವರ ಚಪ್ಪಾಳೆಗಾಗಿ ಓತಪ್ರೋತವಾಗಿ ಪೇಜಾವರ ಶ್ರೀಗಳು, ಬಿಳಿಗಿರಿರಂಗ… Read More ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು

ಹನುಮದ್ ವ್ರತ

ಚೈತ್ರ ಮಾಸದ ಶುಕ್ಲ ಪೂರ್ಣಿಮೆಯನ್ನು ಹನುಮ ಜಯಂತಿ ಎಂದು ಆಚರಿಸಿದರೆ, ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಹನುಮದ್ ವ್ರತ ಎಂದು ಆಚರಿಸಲಾಗುತ್ತದೆ. ಹನುಮದ್ ವ್ರತದ ಹಿನ್ನಲೆಯೇನು? ಆದರ ಆಚರಣೆ ಹೇಗೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಹನುಮದ್ ವ್ರತ