ಮಾಡಾಳು ಸ್ವರ್ಣಗೌರಿ

ನಮ್ಮ ಭರತಖಂಡ ನಮ್ಮ ಸನಾತನ ಧರ್ಮದ ತವರೂರು. ದೇವಾಲಯಗಳ ಬೀಡು. ಬ್ರಹ್ಮ ವಿಷ್ಣು ಮಹೇಶ್ವರ, ಗಣೇಶ ಸುಬ್ರಹ್ಮಣ್ಯ, ಲಕ್ಷ್ಮೀ ಸರಸ್ವತಿ ಪಾರ್ವತಿಯರಲ್ಲದೇ, ನಮ್ಮ ದೇಶದ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿಯೂ ಗ್ರಾಮದೇವರ್ತೆಗಳಿದ್ದು ನಮ್ಮ ದೇಶದ ಜನಸಂಖ್ಯೆ ಸುಮಾರು 130-140 ಕೋಟಿಗಳಿದ್ದರೇ ನಾವು ನಂಬುವ ಮತ್ತು ಪರಮ ಭಕ್ತಿಯಿಂದ ಆರಾಧಿಸುವ ದೇವಾನು ದೇವತೆಗಳ ಸಂಖ್ಯೆಯೇ ಸುಮಾರು 33ಕೋಟಿ. ಪ್ರತಿಯೊಂದು ದೇವಾಲಯಕ್ಕೂ ಮತ್ತು ಅಲ್ಲಿಯ ದೇವತೆಗೂ ಒಂದು ಐತಿಹ್ಯವಿದ್ದು ಅಲ್ಲಿಯದೇ ಆದ ಸುಂದರವಾತ ಮತ್ತು ಅಷ್ಟೇ ರೋಚಕವಾದ ಕಥೆ ಇರುತ್ತದೆ. ನಾವಿಂದು… Read More ಮಾಡಾಳು ಸ್ವರ್ಣಗೌರಿ

ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ. ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ… Read More ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನೋಕು ಕೂಲಿ

ಕಳೆದ ಭಾನುವಾರ ಸೆಪ್ಟಂಬರ್ -5 ರಂದು ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಸಂಭ್ರದಿಂದ ಆಚರಿಸುತ್ತಿದ್ದರೆ, ದೂರದ ಕೇರಳದ ತಿರುವನಂತಪುರದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಇಲಾಖೆ (IRRO)ದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ನಲ್ಲಿ (VSSC) ಮಾತ್ರಾ ಅದೊಂದು ಘನಘೋರ ಘಟನೆಯೊಂದು ನಡೆಯುವ ಮೂಲಕ ವಿದ್ಯಾವಂತರ ನಾಡು ಎಂದು ಕರೆಸಿ ಕೊಳ್ಳುವ ಕೇರಳದ ಮರ್ಯಾದೆಯನ್ನು ಮೂರುಕಾಸಿಗೆ ಹಾರಾಜು ಹಾಕಿರುವುದು ನಿಜಕ್ಕೂ ಖಂಡನೀಯವಾಗಿದೆ. ಭಾನುವಾರದ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತಿರುವನಂತಪುರಂನ ತುಂಬಾದಲ್ಲಿರುವ ಭಾರತೀಯ… Read More ನೋಕು ಕೂಲಿ

ವಿಮಲ ಮಿಸ್

ಅದು ಎಂಭತ್ತರ ದಶಕ ಆರಂಭದ ಕಾಲ ನಾನು ಆಗ ತಾನೇ ನೆಲಮಂಗಲದ ಸರ್ಕಾರೀ ಪ್ರಾಥಮಿಕ ಶಾಲೆಯಿಂದ ಬೆಂಗಳೂರಿನ ಪ್ರತಿಷ್ಠಿತ ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಸ್ಲೇಟು ಬಳಪ ಹಿಡಿದುಕೊಂಡು ಯಾವುದೇ ರೀತಿಯ ಸಮವವಸ್ತ್ರ ಇಲ್ಲದೇ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡು ನೆಲದ ಮೇಲೆ ಹಾಕಿದ್ದ ಮಣೆಯ ಮೇಲೆ ಪಾಠ ಕಲಿಯುತ್ತಿದ್ದ ನನಗೆ, ಏಕಾ ಏಕಿ ಸ್ಲೇಟು ಬಳಪ ಜಾಗದಲ್ಲಿ ನೋಟ್ ಪುಸ್ತಕ, ಪೆನ್ಸಿಲ್, ಸಮವಸ್ತ್ರದ ಜೊತೆ ಟೈ ಮತ್ತು ಶೂ ಹಾಕಿಕೊಂಡು ಡೆಸ್ಕಿನ ಮೇಲೆ ಕುಳಿತು ಕೊಂಡು… Read More ವಿಮಲ ಮಿಸ್

ಪೇಪರ್.. ಪೇಪರ್…

ಪ್ರತಿ ದಿನವೂ ಬೆಳ್ಳಂ ಬೆಳಗ್ಗೆ ಛಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ತಪ್ಪದೇ ನಮ್ಮೆಲ್ಲರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಆ ಶ್ರಮ ಜೀವಿಗಳ ರೋಚಕ ಮತ್ತು ಅಷ್ಟೇ ಹೃದಯಸ್ಪರ್ಶಿ ಪ್ರಸಂಗಗಳನ್ನು ಸೆಪ್ಟಂಬರ್-4, ವಿಶ್ವ ಪತ್ರಿಕಾ ವಿತರಕರ ದಿನದಂದು ಮೆಲುಕು ಹಾಕುತ್ತಾ, ಆ ಪತ್ರಿಕಾ ಯೋಧರಿಗೆ ನಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸೋಣ ಅಲ್ವೇ?… Read More ಪೇಪರ್.. ಪೇಪರ್…

ಟೀ.. ಚಾಯ್… ಕಾಪೀ.. ಕಾಪೀ…

ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ. ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ… Read More ಟೀ.. ಚಾಯ್… ಕಾಪೀ.. ಕಾಪೀ…

ನೀಲಿಕುರುಂಜಿ, ಮಂದಲ ಪಟ್ಟಿ

ನಮ್ಮವರಿಗೆ ವಾರಾಂತ್ಯದ ಹಿಂದೆಯೋ ಮುಂದೆಯೋ ಒಂದು ರಜಾ ಸಿಕ್ಕರೇ ಸಾಕು ಅದರ ಜೊತೆಗೆ ಮತ್ತೆರಡು ರಜಗಳನ್ನು ಹಾಕಿಕೊಂಡು ಊರು ಸುತ್ತಲು ಹೊರಟೇ ಬಿಡುತ್ತಾರೆ. ದುರದೃಷ್ಟವಷಾತ್ ಕಳೆದ ಒಂದೂವರೆ ವರ್ಷದಿಂದ ಕೊರೋನಾ ವಕ್ಕರಿಸಿಕೊಂಡು ಪ್ರಪಂಚವೇ ಲಾಕ್ ಡೌನ್ ಆಗಿರುವಾಗ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಸರಗೊಂಡವರ ಮನವನ್ನು ಮುದಗೊಳಿಸುವ ಸಲುವಾಗಿ ಪಶ್ಚಿಮ ಘಟ್ಟದ ಭಾಗವಾದ ಕೊಡಗು ಜಿಲ್ಲೆಯ ​​ಮಂದಲಪಟ್ಟಿ ಬೆಟ್ಟಗಳಲ್ಲಿ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಪ್ರಕೃತಿಯೇ ತನ್ನ ಸೌಂದರ್ಯವನ್ನು ನೀಲಿಕುರಿಂಜಿ ಹೂವುಗಳನ್ನು ಅರಳಿಸಿಕೊಳ್ಳುವ ಮೂಲಕ ಕೇವಲ ಇಮ್ಮಡಿಯಲ್ಲಾ ನೂರ್ಮಡಿಯನ್ನಾಗಿಸಿಕೊಂಡು… Read More ನೀಲಿಕುರುಂಜಿ, ಮಂದಲ ಪಟ್ಟಿ

ಚಿತ್ರಸಾಲ್ ನವಗ್ರಹ ದೇವಸ್ಥಾನ

ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯಗಳಲ್ಲಿಯೂ ಗರ್ಭಗುಡಿಯಿದ್ದು ಅಲ್ಲಿ ಪ್ರಮುಖ ದೇವರುಗಳು ಇರುತ್ತದೆ. ಆಸ್ತಿಕ ಮಹಾಶಯರು ದೇವರ ದರ್ಶನವನ್ನು ಪಡೆದು ಅಲ್ಲಿಂದ ಹೊರಗೆ ಬರುವಾಗ ಸಣ್ಣದಾದ ನವಗ್ರಹ ಗುಡಿಯಿದ್ದು ಅಲ್ಲಿ ನವಗ್ರಹಗಳ ವಿಗ್ರಹಗಳು ಇರುತ್ತದೆ. ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಒಂದು, ಮೂರು, ಹನ್ನೊಂದು ಪ್ರದಕ್ಷಿಣೆಯನ್ನು ಹಾಕಿ ಭಕ್ತಿಯನ್ನು ಸಲ್ಲಿಸುತ್ತಾರೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಅಸ್ಸಾಮಿನ ಗೌಹಾಟಿಯಲ್ಲಿ ನವಗ್ರಹಗಳದ್ದೇ ಒಂದು ದೇವಸ್ಥಾನವಿದ್ದು ಅದು ಎಲ್ಲಾ ನವಗ್ರಹ ದೇವಸ್ಥಾನದಂತೆ ಇರದೇ ಬಹಳ ವಿಶೇಷವಾಗಿದೆ. ಹಾಗಾದರೆ ಆ ದೇವಸ್ಥಾನದ ವೈಶಿಷ್ಟ್ಯವೇನು… Read More ಚಿತ್ರಸಾಲ್ ನವಗ್ರಹ ದೇವಸ್ಥಾನ

ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ

ಪ್ರತೀ ಬಾರೀ ಓಲಂಪಿಕ್ಸ್ ಕ್ರೀಡಾಕೂಟಗಳು ನಡೆದಾಗ ಪದಕಗಳ ಪಟ್ಟಿಯಲ್ಲಿ ಅಮೇರಿಕಾ, ಚೀನಾ, ಜಪಾನ್ ದೇಶಗಳದ್ದೇ ಪ್ರಾಬಲ್ಯ ಮೆರೆದು, ನಮ್ಮ ಭಾರತವನ್ನು  ಕೆಳಗಿನ ಸ್ಥಾನದಲ್ಲಿ ನೋಡುತ್ತಿದ್ದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಥಟ್ ಅಂತಾ ಮೂಡಿ ಬರುವುದೇ ನಾವೂ ನಮ್ಮ ದೇಶದ ಪರಿಸ್ಥಿತಿ ಹೀಗೇಕೆ? ಎನ್ನುವ ನಿರಾಶೆ. ಅದೇ ಗುಂಗಿನಲ್ಲಿ ತÀಮ್ಮೆಲ್ಲಾ ಗೆಳೆಯರೊಡನೇ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಸಹನೆಯನ್ನು ವ್ಯಕ್ತಪಡಿಸುವ ಜನರೇನು ಕಡಿಮೆ ಇಲ್ಲ. ಆದರೆ ಈಗಷ್ಟೇ ಸಂಪನ್ನಗೊಂಡ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಪ್ರದರ್ಶನವನ್ನು ಗಮನಿಸಿದರೆ ದೇಶದ… Read More ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ