ದ್ವಾರಕೀಶ್

ದ್ವಾರಕೀಶ್ ಅವರು ಇನ್ನಿಲ್ಲಾ ಎಂಬ ಸುದ್ದಿ ಅದೆಷ್ಟೋ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾದಾಗ, ಅಯ್ಯೋ ನಾನು ಇನ್ನೂ ಗಟ್ಟಿ ಮುಟ್ಟಾಗಿಯೇ ಬದುಕಿದ್ದೇನೆ ಎಂದು ಎಲ್ಲರ ಮುಂದೇ ಹೇಳುತ್ತಿದ್ದಂತಹ ಕರ್ನಾಟಕದ ಕುಳ್ಳಾ ದ್ವಾರಕೀಶ್ ಅವರು ಇಂದು ಮಂಗಳವಾರ, ಏಪ್ರಿಲ್ 16, 2024 ರಂದು ತಮ್ಮ 81ನೇ ವಯಸ್ಸಿನಲ್ಲಿ ಈ ಲೋಕಕ್ಕೆ ಅಂತಿಮ ವಿದಾಯವನ್ನು ಹೇಳುವ ಮೂಲಕ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಬಡವಾಗಿಸಿದ್ದಾರೆ ಎಂದರೂ ತಪ್ಪಾಗದು ಅಲ್ವೇ?… Read More ದ್ವಾರಕೀಶ್

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)

https://enantheeri.com/2021/11/03/tiruka/

ವಯಸ್ಸು 10-12 ಆದರೂ ಅಸ್ವಸ್ಥತೆಯಿಂದ ನಡೆಯಲಾರದೇ, ನುಡಿಯಲಾಗದೇ ಇದ್ದ ಕೇರಳ ಮೂಲದ ಬಾಲಕ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಆಶೀರ್ವಾದದಿಂದ, ಮುಂದೆ ಶ್ರೇಷ್ಠ ಯೋಗಪಟು ಮತ್ತು ಆರ್ಯುವೇದ ಪಂಡಿತನಾಗಿ, ಮನೆ ಮನೆಗೆ ಜೋಳಿಗೆ ಹಿಡಿದು ಕರ್ನಾಟಕದ ಮಲ್ಲಾಡಿಹಳ್ಳಿಯಲ್ಲಿ ವಸತಿ ಶಾಲೆ ಕಟ್ಟಿದ ಶತಾಯುಷಿ ಶ್ರೀ ರಾಘವೇಂದ್ರಸ್ವಾಮಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ … Read More ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)

ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

ಎಂಭತ್ತರ ದಶಕದಲ್ಲಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಕಲಾಕ್ಷೇತ್ರದಲ್ಲಿ ಪ್ರತೀ ವರ್ಷ ಸಾಂಸ್ಕೃತಿಕ ಚಟುವಟಿಕೆಗಳ ಬೇಸಿಗೆ ಮೇಳವನ್ನು 10-12 ದಿನಗಳ ಕಾಲ ಆಯೋಜಿಸಿ ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದಗೀತೆಗಳ ಜೊತೆಗೆ ಚಲನಚಿತ್ರ ಆರ್ಕೇಷ್ಟ್ರಾಗಳನ್ನು ಏರ್ಪಡಿಸುತ್ತಿದ್ದರು. ಆ ರೀತಿಯ ಬೇಸಿಗೆ ಮೇಳದಲ್ಲಿ ಅದೊಮ್ಮೆ ವಯಸ್ಸಾದ ಅಜಾನುಬಾಹು ವ್ಯಕ್ತಿ ತಲೆಗೆ ರುಮಾಲು ಕಟ್ಟಿಕೊಂಡು ಅಕ್ಕ ಪಕ್ಕದಲ್ಲಿ ಹಾರ್ಮೋನಿಯಂ ಮತ್ತು ತಬಲಗಳ ಪಕ್ಕವಾದ್ಯದೊಂದಿಗೆ ತಮ್ಮ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಹಾಡಲು ಶುರು ಮಾಡುತ್ತಿದ್ದಂತೆಯೇ ಗಜಿಬಿಜಿ ಎನ್ನುತ್ತಿದ್ದ… Read More ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ಪ್ರತೀ ವರ್ಷ ಸೆಪ್ಟಂಬರ್ 15ರಂದು ಭಾರತದಲ್ಲಿ ಇಂಜಿನೀಯರ್ಸ್ ಡೇ ಎಂಬ ಆಚರಣೆಯ ಹಿಂದಿರುವ ಆ ಇಂಜಿನೀಯರ್ ಯಾರು? ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಎಂತಹದ್ದು ಮತ್ತು ಈ ನಾಡಿಗೆ ಅವರ ಸಾಧನೆಗಳು ಏನು? ಎಂಬೆಲ್ಲದರ ಕುರಿತಾದ ವಿವರಗಳು ಇದೋ ನಿಮಗಾಗಿ… Read More ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ರಾಯ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರ ಕೆರೆ

ಬೆಂಗಳೂರಿನಿಂದ ಕೋಲಾರದ ಕಡೆಗೆ ಹೋಗುವಾಗ ಕೃಷ್ಣರಾಜಪುರ ದಾಟಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ವಿಶಾಲವಾದ ಕೆರೆಯನ್ನು ಸೀಳಿಕೊಂಡೇ ನಮ್ಮ ವಾಹನಗಳು ಸಂಚರಿಸ ಬೇಕಾಗುತ್ತದೆ. ಎರಡೂ ಬದಿಯಲ್ಲೂ ಕಣ್ಣು ಹಾಯಿಸಿದಷ್ಟು ದೂರವೂ ಆಗಾಧವಾದ ನೀರು ನಮಗೆ ಕಾಣ ಸಿಗುತ್ತದೆ. ಈ ಕೆರೆಯ ಮಧ್ಯದಲ್ಲಿ ಅಲ್ಲಲ್ಲಿ ಪಕ್ಷಿಗಳ ದಂಡು ನಮ್ಮ ಹೃನ್ಮಗಳನ್ನು ತಣಿಸುತ್ತವೆ. ಆದರೆ ಸುಮಾರು ನೂರಾ ಮೂವತ್ತು ವರ್ಷಗಳಲ್ಲಿ ಈ ಪ್ರದೇಶ ಹೀಗಿರಲಿಲ್ಲ. ಬರಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಪರದಾಡಬೇಕಾಗಿತ್ತು ಎಂದರೆ ಆಶ್ಚರ್ಯ ಪಡಬೇಕು. ಇಂತಹ ಅದ್ಭುತವಾದ ಕೆರೆಯ ನಿರ್ಮಾಣದ… Read More ರಾಯ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರ ಕೆರೆ

ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್

ಪುನೀತ್ ರಾಜ್‍ಕುಮಾರ್ ನಮ್ಮೆಲ್ಲರನ್ನೂ ಅಗಲಿದ ಸಂಧರ್ಭದಲ್ಲಿ ಅವರೊಂದಿಗೆ ಆಟವಾಡಿದ್ದ ಸವಿ ನೆನಪನ್ನು‌ ವ್ಯಕ್ತ ಪಡಿಸಿದ್ದನ್ನು ಅವರ ಸಂಸ್ಮರಣಾ ದಿನದಂದು ಮತ್ತೊಮ್ಮೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.… Read More ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್

ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ… Read More ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ಸಾಯೋದಿಕ್ಕೆ ಬೇಕೊಂದು ನೆಪ

ಕನ್ನಡ ಚಲನಚಿತ್ರರಂಗದ ಪ್ರತಿಭಾವಂತ ಸರಳ ‍‍ಸಜ್ಜನ ಸದಾಕಾಲವೂ ವಿನೀತರಾಗಿರುತ್ತಿದ್ದ ಪುನೀತ್ ರಾಜಕುಮಾರ್ ಅಕ್ಟೋಬರ್ 29ರ ಬೆಳಿಗ್ಗೆ 11:30ರ ಹೊತ್ತಿಗೆ ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕವವೇ ಸರಿ. ಭಗವಂತ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ದುಃಖತಪ್ತ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಅವರ ಅಕಾಲಿಕ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ. ಪುನೀತ್ ಅವರ ಅಕಾಲಿಕ ಮರಣದ ನಂತರ ಬಹುತೇಕರರ ಬಾಯಿಯಿಂದ ಕೇಳಿ ಬರುತ್ತಿರುವ ಎರಡು ಸುದ್ದಿ ಎಂದರೆ, ಅಯ್ಯೋ ಪುನೀತ್ ರಾಜಕುಮಾರ್ ಅವರಿಗೆ ಕೇವಲ… Read More ಸಾಯೋದಿಕ್ಕೆ ಬೇಕೊಂದು ನೆಪ

ಸಮೀರ್ ವಾಂಖೆಡೆ

ವಾಂಖೆಡೆ ಎಂಬ ಹೆಸರು ಕೇಳಿದ ಕೂಡಲೇ ಕ್ರಿಕೆಟ್ ಪ್ರಿಯರಿಗೆಲ್ಲಾ ಥಟ್ ಅಂತಾ ನೆನಪಾಗೋದೇ, ಮುಂಬೈನಲ್ಲಿರುವ ಸುಪ್ರಸಿದ್ದ ವಾಂಖೆಡೆ ಕ್ರೀಡಾಂಗಣ. 1974 ರಲ್ಲಿ ಮುಂಬೈ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿದ್ದ ಬ್ಯಾರಿಸ್ಟರ್ ಶೇಷರಾವ್ ವಾಂಖೆಡೆ ನೆನಪಿನಾರ್ಥ ಆ ಕ್ರೀಡಾಂಗಣಕ್ಕೆ ವಾಂಖೆಡೆ ಕ್ರೀಡಾಂಗಣ ಎಂಬ ಹೆಸರನ್ನಿಡಲಾಗಿದೆ. ಆದರೆ ಕಳೆದ ಎರಡು ಮೂರು ವಾರಗಳಿಂದ ದೇಶಾದ್ಯಂತ ಪ್ರಚಲಿವಿರುವ ಮತ್ತೊಂದು ಹೆಸರೇ ಸಮೀರ್ ವಾಂಖೆಡೆ. ಯಾರೀ ಸಮೀರ್ ವಾಂಖೆಡೆ? ಅವರ ಸಾಧನೆಗಳೇನು? ಅವರ ಹೆಸರು ಈಗ ಏಕೆ ಪ್ರಚಲಿತದಲ್ಲಿದೆ? ಎಂಬುದನ್ನು ಸವಿವರವಾಗಿ ತಿಳಿಯೋಣ. 2004ರ… Read More ಸಮೀರ್ ವಾಂಖೆಡೆ