ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಕನ್ನಡ ಚಲನಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಪ್ರವೇಶಿಸಿ ಈಗ ಬಹುಭಾಷಾ ನಾಯಕ ನಟನಾಗಿರುವ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಮಗ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದೆ ಈ ಕುಟುಂಬ. ಈಗಾಗಲೇ ತುಮಕೂರಿನ ಬಳಿಯಿರುವ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದ ಅರ್ಜುನ್ ಸರ್ಜಾ ಸದ್ಯದಲ್ಲಿ ಚೆನ್ನೈನಲ್ಲಿ ವಾಸವಾಗಿದ್ದಾರೆ. ಚೆನ್ನೈನ ವಿಮಾನ… Read More ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಸಾಧಾರಣವಾಗಿ ನಮಗೆ ಬಿಸಿ ನೀರಿನ ಬುಗ್ಗೆ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಇರುವ ಕುಲುವಿನ ವಶಿಷ್ಠ ಬಿಸಿನೀರಿನ ಬುಗ್ಗೆ, ಮಣಿಕರಣ್ ನ ಬಿಸಿ ನೀರಿನ ಬುಗ್ಗೆ, ಮಂಡಿ ಜಿಲ್ಲೆಯ ತಟ್ಟಪಾಣಿ, ಖಿರ್ಗಂಗಾ ಮತ್ತು ಕಸೋಲ್ ಬಿಸಿನೀರಿನ ಬುಗ್ಗೆಗಳು ಆದರೆ ಕರ್ನಾಟಕದ ದಕ್ಷಿಣ ಕನ್ನಡದ ಪುತ್ತೂರಿನ ಬಳಿಯೂ ಅದೇ ರೀತಿಯ ಬಿಸಿ ನೀರಿನ ಬುಗ್ಗೆಯಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 60 ಕಿ.ಮೀ, ಪುತ್ತೂರಿಗೆ 15 ಕಿ. ಮಿ… Read More ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ

ಇಪ್ಪತ್ತೊಂದು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ನಿವೃತ್ತ ಶಿಕ್ಷಕರೊಬ್ಬರು 07/07/2000 ದಂದು ರಕ್ಷಣಾ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ, ರಾಷ್ಟ್ರೀಯ ಭದ್ರತೆಗೆ ಯಾವುದೇ ತೊಂದರೆ ಇಲ್ಲದಿದ್ದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಪಡೆದ ಸ್ಥಳವನ್ನು ನಾನು ಮತ್ತು ನನ್ನ ಧರ್ಮಪತ್ನಿ ಭೇಟಿ ನೀಡಿ ನಮ್ಮ ಮಗನ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಅನುಮತಿ ನೀಡಬಹುದೇ? ನಿಮಗೆ ತೊಂದರೆ ಎನಿಸಿದಲ್ಲಿ ನಮ್ಮ ಕೋರಿಕೆಯನ್ನು ಹಿಂಪಡೆಯುತ್ತೇವೆ ಎಂಬುದಾಗಿ ಬರೆದಿದ್ದರು. ಇಂತಹ ಭಾವಾನಾತ್ಮಕ ಪತ್ರವನ್ನು ಓದಿದ… Read More ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ

ಜಟೋಲಿ ಶಿವ ಮಂದಿರ

ನಮ್ಮ ಭಾರತ ದೇಶ ದೇವಾಲಯಗಳ ಬೀಡು. ಪೂರ್ವದ ಅಟಕ್ ನಿಂದ ಪಶ್ಚಿಮದ ಕಟಕ್ ವರೆಗೂ ಮತ್ತು ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೂ ಎಲ್ಲೇ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲೊಂದು ದೇವಾಲಯಗಳನ್ನು ಕಾಣಬಹುದಾಗಿದೆ. ಬಹುತೇಕ ದೇಲಯಗಳು ಸಹಸ್ರಾರು ವರ್ಷಗಳಿಂದಲೂ ಅಲ್ಲಿದ್ದು ಅನೇಕ ವೈಶಿಷ್ಟ್ಯತೆ ಮತ್ತು ನಿಗೂಢತೆಗಳಿಂದ ಕೂಡಿರುತ್ತದೆ ಇಂದೂ ಸಹಾ ಅಂತಹದೇ ಐತಿಹ್ಯವಿರುವ ನಿಗೂಢವೆಂದೇ ಪರಿಗಣಿಸಲಾದ ಶಿವನ ದೇವಾಲಯದ ದರ್ಶನ ಮಾಡುವುದರ ಜೊತೆಗೆ ಆ ದೇವಾಲಯದ ಐತಿಹ್ಯ, ಅಲ್ಲಿನ ಸ್ಥಳ ಪುರಾಣ ಮತ್ತು ವಿಶೇಷತೆಗಳನ್ನು… Read More ಜಟೋಲಿ ಶಿವ ಮಂದಿರ

ಶಹೀದ್ ಉಧಮ್ ಸಿಂಗ್

ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ಕೇಂದ್ರದ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ಅಮೂಲಾಗ್ರವಾದ ಬದಲಾವಣೆ ತರಲು ಮುಂದಾಗಿದ್ದು ಅದಕ್ಕೆ ಪೂರಕವಾಗಿ ದೇಶವಾಸಿಗಳಿಂದ ಸೂಚನೆ ಮತ್ತು ಸಲಹೆಗಳನ್ನು ಕೇಳಿರುವ ಸುದ್ದಿ ಓದಿ ಮೈ ರೋಮಾಂಚನವಾಯಿತು. ಸ್ವಾತ್ರಂತ್ಯ ಬಂದು ೭೦+ ವರ್ಷಗಳ ನಂತರವೂ ಅದೇ ಅಕ್ಬರ್ ದಿ ಗ್ರೇಟ್, ಅಲೆಕ್ಶಾಂಡರ್ ದಿ ಗ್ರೇಟ್, ಆರ್ಯರು ಭಾರತಕ್ಕೆ ಬಂದರು ಎನ್ನುವ ಆಂಗ್ಲರ ಸುಳ್ಳು ಸುಳ್ಳು ಇತಿಹಾಸವನ್ನೇ ಓದಿ ಬೆಳೆದಿದ್ದ ನಾವು ಇನ್ನು ಮುಂದೆಯಾದರೂ ನಮ್ಮ ನಿಜವಾದ ರಾಜ ಮಹಾರಾಜರು ಮತ್ತು ಸ್ವಾತ್ರಂತ್ರ್ಯ ಹೋರಾಟಗಾರರ ಚರಿತ್ರೆಯನ್ನು… Read More ಶಹೀದ್ ಉಧಮ್ ಸಿಂಗ್

ದೇವಸ್ಥಾನಗಳಿಗೆ ಏಕೆ ಹೋಗಬೇಕು?

ದೇವಾಲಯಗಳು ನಮ್ಮ ಸನಾತನ ಧರ್ಮದ ಶ್ರಧ್ಧಾ ಕೇಂದ್ರಗಳು. ನಮ್ಮ ಧರ್ಮದ ಬಹುತೇಕ ಧಾರ್ಮಿಕ ಚಟುವಟಿಕೆಗಳ ಮುಖ್ಯಕೇಂದ್ರವೇ ದೇವಸ್ಥಾನಗಳಾಗಿರುತ್ತವೆ. ಹಾಗಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ದೇವಾಲಯಗಳು ಇದ್ದೇ ಇರುತ್ತವೆ. ಅದು ಬ್ರಹ್ಮ, ವಿಷ್ಣು ಇಲ್ಲವೇ ಮಹೇಶ್ವರನ ದೇವಾಯಲಗಳು ಆಗಿರಬಹುದು ಇಲ್ಲವೇ ಎಲ್ಲರೂ ಇಷ್ಟ ಪಡುವ ಕಾಳೀ, ದುರ್ಗೇ,ಗಣೇಶ ಇಲ್ಲವೇ ಆಂಜನೇಯನ ದೇವಸ್ಥಾನವೇ ಆಗಿರಬಹುದು ಇಲ್ಲವೇ ಸ್ಥಳೀಯ ಗ್ರಾಮದೇವತೆಯೇ ಆಗಿರಬಹುದು. ಒಟ್ಟಿನಲ್ಲಿ ಹಿಂದೆಲ್ಲಾ ಊರಿಗೊಂದು ದೇವಸ್ಥಾನ, ಕೆರೆ, ಅರಳೀ ಕಟ್ಟೆಗಳು ಕಡ್ಡಾಯವಾಗಿದ್ದು, ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎನ್ನುವ… Read More ದೇವಸ್ಥಾನಗಳಿಗೆ ಏಕೆ ಹೋಗಬೇಕು?

ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು

ಅವನೊಬ್ಬ ಅಸಾಧಾರಣ ಹುಡುಗನಾಗಿದ್ದ. ಓದಿನಲ್ಲಂತೂ ಸದಾಕಾಲವೂ ಚುರುಕು. ಗಣಿತ ಮತ್ತು ವಿಜ್ಞಾನದಲ್ಲಂತೂ ಸದಾಕಾಲವೂ 100% ಅಂಕಗಳನ್ನು ಗಳಿಸುತ್ತಿದ್ದ ಕಾರಣ ಸಹಜವಾಗಿ ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿದ್ದಲ್ಲದೇ ಅಲ್ಲೂ ಸಹಾ ಅತ್ಯುತ್ತಮ ಅಂಕಗಳನ್ನು ಗಳಿಸಿ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ ಒಂದರಲ್ಲಿ ಎಂಬಿಎ ಪದವಿಯ ನಂತರ ಆರಂಕಿಯ ಸಂಬಳದ ಉದ್ಯೋಗವನ್ನು ಗಿಟ್ಟಿಸಿ ಅಲ್ಲಿಯೇ ನೆಲೆಸಿದ. ಕೆಲವು ವರ್ಷಗಳ ನಂತರ ಕರ್ನಾಟಕ್ಕೆ ಬಂದು, ಮನೆಯವರು ನೋಡಿದ ಕನ್ನಡತಿಯನ್ನೇ ವಿವಾಹವಾಗಿ ಅಮೇರಿಕಾದಲ್ಲಿ 5 ಕೊಠಡಿಗಳು ಇರುವಂತಹ ದೊಡ್ಡದಾದ ಮನೆ ಮತ್ತು ಐಷಾರಾಮಿ… Read More ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು

ಪ್ರಾರ್ಥನೆ

ಪ್ರಾರ್ಥನೆ ಎಂದರೆ ಏನು? ಎಂದು ಪ್ರಂಪಚದ ಯಾವುದೇ ಮೂಲೆಗೆ ಹೋಗಿ ಯಾವುದೇ ಧರ್ಮದ ಸಣ್ಣ ಮಗುವನ್ನೂ ಕೇಳಿದರೂ ಥಟ್ ಅಂತಾ ಹೇಳುವುದೇ, ಭಕ್ತಿಯಿಂದ ಎರಡೂ ಕಣ್ಗಳನ್ನು ಮುಚ್ಚಿಕೊಂಡು ಎರಡೂ ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಯೋ ಇಲ್ಲವೇ ಬೇಡುವ ಸ್ಥಿತಿಯಲ್ಲಿಯೋ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆ ಭಗವಂತನಲ್ಲಿ ಕೇಳಿಕೊಳ್ಳುವುದು ಎನ್ನುತ್ತಾರೆ. ಹೌದು ನಿಜ. ಆ ಮಕ್ಕಳು ಹೇಳಿದ್ದರಲ್ಲಿ ಸತ್ಯವಿದೆಯಾದರು ಅದೇ ಸಂಪೂರ್ಣ ಸತ್ಯವಲ್ಲ. ಪ್ರಾರ್ಥನೆ ಎನ್ನುವುದು ಕೇವಲ ಸ್ವಹಿತಾಸಕ್ತಿಗಾಗಿಯೋ ಇಲ್ಲವೇ ಮತ್ತೊಬ್ಬರ ಹಿತಾಸ್ತಕ್ತಿಗಾಗಿಯೋ ಭಗವಂತನಲ್ಲಿ ಬೇಡಿಕೊಳ್ಳುವುದರ ಹೊರತಾಗಿಯೂ ಇದೆ. ಹಾಗಾಗಿ… Read More ಪ್ರಾರ್ಥನೆ

ಸುಧರ್ಮ, ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ

ಸಂಸ್ಕೃತ ಪ್ರಪಂಚದ ಅತ್ಯಂತ ಪುರಾತನ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಬಹುತೇಕ ಭಾಷೆಗಳಿಗೆ ಮೂಲಭಾಷೆಯೇ ಸಂಸ್ಕೃತ ಎಂಬ ಅಗ್ಗಳಿಕೆಯೂ ಇದೆ. ಎಲ್ಲದ್ದಕ್ಕಿಂತಲೂ  ಸಂಸ್ಕೃತದ ಭಾಷೆಯ ಮೂಲ ನಮ್ಮ ಭಾರತ ಮತ್ತು ನಮ್ಮ ಸನಾತನ ಧರ್ಮದ ಅಷ್ಟೂ ವೇದಶಾಸ್ತ್ರಗಳು ಮತ್ತು ಪುರಾಣಗಳ ಮೂಲ ಕೃತಿಗಳು ಸಂಸ್ಕೃತದಲ್ಲಿಯೇ ಇದೆ ಎನ್ನುವುದು ಗಮನಾರ್ಹ.  ಹೀಗೆ ಪುರಾಣ ಗ್ರಂಥಗಳು ಸಂಸ್ಕೃತದಲ್ಲಿ ಇದೆ ಎಂದಾದಲ್ಲಿ ಅಂದಿನ ಕಾಲದಲ್ಲಿ ಎಲ್ಲಡೆಯೂ ಸಂಸ್ಕೃತ  ಆಡು ಭಾಷೆಯಾಗಿತ್ತು ಮತ್ತು ದೇವರು ಮತ್ತು ಮಾನವರ ನಡುವಿನ ವ್ಯಾವಹಾರಿಕ  ಸಂಭಾಷಣೆಯ… Read More ಸುಧರ್ಮ, ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ