ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ. ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ.… Read More ವಂಶವಾಹಿ ಸಂಸ್ಕಾರ (ಜೀನ್ಸ್)

ಅವರೇಕಾಳು ಉಪ್ಪಿಟ್ಟು

ಹೇಳೀ ಕೇಳಿ ಇದು ಮಾಗಿಯ ಕಾಲ. ಬೆಳ್ಳಂಬೆಳಿಗ್ಗೆ ಮಂಜಿನ ವಾತಾವರಣವಿದ್ದು ಚೆನ್ನಾಗಿ ಇಬ್ಬನಿ ಬೀಳುತ್ತಿರುತ್ತದೆ. ಅಂತಹ ಇಬ್ಬನಿಯನ್ನೇ ಹೀರಿಕೊಂಡು ಚೆನ್ನಾಗಿ ಬೆಳೆದ ಘಮ್ಮನೆಯ ಸೊಗಡಿನ ಮಣಿ ಮಣಿ ಅವರೇಕಾಳು ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಅಂತಹ ಅವರೇಕಾಳಿನ ಘಮ್ಮತ್ತಾದ ಉಪ್ಪಿಟ್ಟು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಅವರೇಕಾಳು ಉಪ್ಪಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು ಉಪ್ಪಿಟ್ಟು ರವೆ – 1/2 ಕಪ್ ಅವರೇಕಾಳು – 1/2 ಕಪ್ ಸಾಸಿವೆ – 1/2… Read More ಅವರೇಕಾಳು ಉಪ್ಪಿಟ್ಟು

ಗೌತಮ ಕ್ಷೇತ್ರ ಗವಿ ಗಂಗಾಧರೇಶ್ವರ ದೇವಾಲಯ

ಬೆಂಗಳೂರು ಉದ್ಯಾನ ನಗರಿ ಎಂದು ಹೇಗೆ ಪ್ರಖ್ಯಾತವಾಗಿದೆಯೇ, ಅದೇ ರೀತಿ ಧಾರ್ಮಿಕವಾಗಿ ದೇವಲಯಗಳ ನಗರೀ ಎಂದರೂ ಅತಿಶಯೋಕ್ತಿಯೇನಲ್ಲ. ಬೆಂಗಳೂರಿನ ಪ್ರತೀ ಬಡಾವಣೆಗಳ್ಲಿಯೂ ಕನಿಷ್ಠಪಕ್ಷ ಎರಡು ದೇವಾಲಯಗಳನ್ನು ಕಾಣ ಬಹುದಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ವಿಖ್ಯಾತವಾಗಿ ಎಷ್ಟೇ ಮುಂದುವರೆದಿದೆಯೋ, ಈ ದೇವಾಲಯಗಳಲ್ಲಿನ ಧಾರ್ಮಿಕ ಚಟುವಟಿಗೆಗಳ ಮೂಲಕ ಅಷ್ಟೇ ಲೋಕಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಬಸವನಗುಡಿಯ ಪಕ್ಕದ ಕೆಂಪೇಗೌಡನಗರ ಅರ್ಥಾಥ್ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಭಾರತದಲ್ಲಿರುವ ಅತ್ಯಂತ ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದಾಗಿದೆ. ಸಾವಿರಾರು ವರ್ಷಗಳ ಐತಿಹ್ಯವಿರುವ… Read More ಗೌತಮ ಕ್ಷೇತ್ರ ಗವಿ ಗಂಗಾಧರೇಶ್ವರ ದೇವಾಲಯ

ಸ್ವಾಮಿ ಹರ್ಷಾನಂದರು

ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ 3 ನೇ ರ‌್ಯಾಂಕ್ ಮತ್ತು ಹನ್ನೆರಡನೇ ತರಗತಿಯಲ್ಲಿ ರಾಜ್ಯಕ್ಕೆ 5 ನೇ ರ‌್ಯಾಂಕ್ ಪಡೆದ ನಂತರ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗಿನಲ್ಲಿ ಚಿನ್ನದ ಪದಕದೊಂದಿಗೆ ಮೊದಲನೇ ರ‌್ಯಾಂಕ್ ಗಳಿಸಿ ಕೈತುಂಬ ಸಂಬಳ ತರುವ ಹೆಚ್.ಎ.ಎಲ್ ಕಾರ್ಖಾನೆಯನ್ನು ಸೇರಿದ ಎರಡೇ ವಾರಗಳಲ್ಲಿ ಎಲ್ಲವನ್ನೂ ತ್ಯಜಿಸಿ, ಉಟ್ಟ ಬಟ್ಟೆಯಲ್ಲಿಯೇ ರಾಮಕೃಷ್ಣ ಆಶ್ರಮ ಸೇರಿ, ಕಾವಿ ನಿಲುವಂಗಿಯನ್ನು ಧರಿಸಿ ಧೀರ ಸನ್ಯಾಸಿಗಳಾಗಿ ನಂತರ ಸ್ವಾಮಿ ಹರ್ಷಾನಂದರಾಗಿ ದೇಶಾದ್ಯಂತ ರಾಮಕೃಷ್ಣ ಆಶ್ರಮದ ವಿವಿಧ ಶಾಖೆಗಳಲ್ಲಿ… Read More ಸ್ವಾಮಿ ಹರ್ಷಾನಂದರು

ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ

ಈ ದೇಶ ಕಂಡ ಅತ್ಯುತ್ತಮ ದೇಶಭಕ್ತ, ಅತ್ಯಂತ ಧೈರ್ಯಶಾಲಿ ಪ್ರಧಾನಿಗಳು, ಸರಳ ಮತ್ತು ಸಜ್ಜನ ರಾಜಕಾರಣಿ ಶ್ರೀ ಲಾಲ ಬಹದ್ದೂರ್ ಶಾಸ್ತ್ರಿಗಳು ಎಂದರೆ ಅತಿಶಯೋಕಿಯೇನಲ್ಲ. ಸ್ವಾತಂತ್ರ್ಯಾ ನಂತರ ದೇಶದ ಪ್ರಥಮ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಜವಹರಲಾಲ್ ನೆಹರೂ ಅವರ ಹಠಾತ್ ನಿಧನದಾದಾಗ ದೇಶವನ್ನು ಎರಡನೇ ಪ್ರಧಾನಮಂತ್ರಿಗಳಾಗಿ ಮುನ್ನಡೆಸಿದವರೇ ಶ್ರೀಯುತರಾದ ಲಾಲ್ ಬಹದ್ದೂರ್ ಶಾಸ್ತ್ರಿಗಳು. ಆಕಾರದಲ್ಲಿ ವಾಮನರೂಪಿಯಾಗಿ ಕೃಶಕಾಯದ ಶಾಸ್ತ್ರಿಗಳು ಇಷ್ಟು ದೊಡ್ಡ ದೇಶವನ್ನು ಹೇಗೆ ಮುನ್ನಡೆಸಬಲ್ಲರು ಎಂದು ಎಲ್ಲರೂ ಯೋಚಿಸುತ್ತಿದ್ದರೇ, ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಡುವಂತೆ… Read More ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ

ಭರವಸೆ

ಅದು ಮಾಗಿಯ ಕಾಲ. ವಾತಾವರಣವೆಲ್ಲಾ ಬಹಳ ತಣ್ಣಗಿದ್ದು, ಕೈ ಕಾಲು ಹೆಪ್ಪುಗಟ್ಟುವಷ್ಟರ ಮಟ್ಟಿಗಿನ ಚಳಿ ಇತ್ತು. ಆ ಊರಿನ ಸಾಹುಕಾರರೊಬ್ಬರು ಇನ್ನೇನೂ ತನ್ನ ಭವ್ಯವಾದ ಬಂಗಲೆಯನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಚಳಿಯಿಂದ ತಮ್ಮ ಮನೆಯ ಹೊರಗೆ ಅಂತಹ ಮೈಕೊರೆಯುವ ಛಳಿಯಲ್ಲೂ ಮೈಮೇಲೆ ಸರಿಯಾದ ಬಟ್ಟೆಗಳಿಲ್ಲದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಗಮನಿಸಿದರು. ಕೂಡಲೇ ತನ್ನ ಕಾರಿನಿಂದ ಇಳಿದ ಅವರು ಏನಪ್ಪಾ ನಿನಗೆ ಛಳಿಯಾಗುತ್ತಿಲ್ಲವೇ? ಇದೇಕೇ ಹೀಗೆ ಹೊದಿಕೆ ಇಲ್ಲದೇ ಇರುವೇ? ಎಂದು ಕೇಳಿದರು. ಸ್ವಾಮೀ ನಾನು ಬಡವ ಹಾಗಾಗಿ ನನ್ನ… Read More ಭರವಸೆ

ಬದಾಮಿಯ ಅನ್ನಪೂರ್ಣೆಯರು

ಅರೇ ಇದೆಂತಹಾ ಶೀರ್ಷಿಕೆ? ಬದಾಮಿಯಲ್ಲಿರುವುದು ಬನಶಂಕರಿ ದೇವಿ. ಅನ್ನಪೂರ್ಣೇ ಇರುವುದು ಹೊರನಾಡಿನಲ್ಲಿ ಎಂದು ಯೋಚಿಸುತ್ತಿದ್ದರೆ, ನಿಮ್ಮ ಉಹೆ ತಪ್ಪೆಂದು ಹೇಳುತ್ತಿಲ್ಲ. ಹಸಿದವರಿಗೆ ಹೊಟ್ಟೇ ತುಂಬ ಅಮ್ಮನ ಮಮತೆಯಿಂದ ಊಟ ಬಡಿಸುವ ಅನ್ನಪೂರ್ಣೆಯರು ಎಲ್ಲಾ ಮನೆಗಳಲ್ಲಿಯೂ ಒಬ್ಬೊಬ್ಬರು ಇದ್ದರೆ, ಶಾಕಾಂಬರಿ ಬದಾಮಿಯ ತಾಯಿ ಬನಶಂಕರಿಯ ಸನ್ನಿಧಿಯಲ್ಲಿ ಇಂತಹ ನೂರಾರು ಅನ್ನಪೂರ್ಣೆಯರನ್ನು ಕಾಣಬಹುದಾದಂತಹ ಸುಂದರ ರೋಚಕವಾದ ಅನುಭವ ಇದೋ ನಿಮಗಾಗಿ. ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ ತಾಯಿ ಬನಶಂಕರಿಯಾಗಿ ನೆಲೆಸಿರುವ ಶ್ರೀ ಕ್ಷೇತ್ರವೇ ಬದಾಮಿ. ಈ ಮಹಾತಾಯಿಯನ್ನು… Read More ಬದಾಮಿಯ ಅನ್ನಪೂರ್ಣೆಯರು

ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ವರ್ಷದದ ಆರಂಭದಲ್ಲಿ ಪ್ರಪಂಚಾದ್ಯಂತ ಧುತ್ತೆಂದು ಕಾಣಿಸಿಕೊಂಡ ಕರೋನ ಮಹಾಮಾರಿಯನ್ನು ತಡೆಗಟ್ಟಲು ಮೊದಲ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಾರದ್ದದರೂ, ಆರ್ಥಿಕವಾಗಿ ಎಲ್ಲರನ್ನೂ ಹೈರಾಣು ಮಾಡಿದ ಫಲವಾಗಿ ಸರ್ಕಾರವೂ ಕೆಲವೊಂದು ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಜನ ಸಾಮಾನ್ಯರು ಸಾಮಾನ್ಯ ಸ್ಥಿತಿಗೆ ಬರುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಹಾಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವುದು,‌ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಕಾಪಾಡುವುದು ಮತ್ತು ಸಾರ್ವಜನಿಕವಾಗಿ ಒಬ್ಬರು ಗೊಬ್ಬರು ಅಂತರವನ್ನು ಕಾಪಾಡಿಕೊಳ್ಳುವುದು ಎಂದಿತ್ತು. ಸರ್ಕಾರ… Read More ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ಸಾವಿಗೆ ಹೋಣೆಗಾರರು ಯಾರು?

ಇಂದು ಬೆಳ್ಳಂಬೆಳಿಗ್ಗೆ ವ್ಯಾಯಾಮವನ್ನು ಮುಗಿಸಿ, ಏನಪ್ಪಾ ಇವತ್ತಿನ ವಿಷಯ ಎಂದ ಮೊಬೈಲ್ನಲ್ಲಿ ವಾರ್ತೆಗಳನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು. ಕೆಲ ದಿನಗಳವರೆಗೂ ಚಿಕ್ಕಮಗಳೂರಿನ ಹೊರಗೀನಾಚೆ ಆಷ್ಟೇನೂ ಪರಿಚಯವಿರದಿದ್ದ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದ ಶ್ರೀ ಎಸ್.ಎಲ್. ಧರ್ಮೇಗೌಡ ಅವರು ನೆನ್ನೆ ರಾತ್ರಿ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಓದಿ ನಿಜಕ್ಕೂ ಬೇಸರವೆನಿಸಿತು. ಮೂಲತಃ ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾಗಿದ್ದ, ಬೀರೂರಿನ ಮಾಜೀ ಶಾಸಕ ಲಕ್ಷ್ಮಯ್ಯನವರ ಪುತ್ರರಾಗಿ ರಾಜಕೀಯ… Read More ಈ ಸಾವಿಗೆ ಹೋಣೆಗಾರರು ಯಾರು?