ವಿಜಯ ಸಂಕೇಶ್ವರ

ಮಾಡುವ ಕೆಲಸ ಯಾವುದಾದರೂ ಏನಂತೆ, ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೇ ಎನ್ನುವ ಅಣ್ಣವರ ಹಾಡಿನಂತೆ  ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ ಅಂತ 19 ವರ್ಷದ ಯುವಕನೊಬ್ಬ ತನ್ನ ಕುಟುಂಬದ ವ್ಯಾಪಾರದಿಂದ ಹೊರ ಬಂದು ಕೈ ಕೆಸರಾದರೆ ಬಾಯ್ ಮೊಸರು ಎನ್ನುವಂತೆ 1975ರಲ್ಲಿ ಒಂದು ಟ್ರಕ್ ಖರೀದಿಸಿ  ಸಾರಿಗೆ ಉದ್ಯಮವನ್ನು ಆರಂಭಿಸಿ ಇಂದು  4,300 ವಾಹನಗಳನ್ನು ಹೊಂದಿರುವ ಭಾರತದಲ್ಲಿ ಅತ್ಯಂದ  ದೊಡ್ಡದಾದ … Read More ವಿಜಯ ಸಂಕೇಶ್ವರ

ಮಕ್ಕಳ ಕವಿ ಜಿ. ಪಿ. ರಾಜರತ್ನಂ

ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ!, ನನ್ ಮನಸನ್ನ್ ನೀ ಕಾಣೆ!ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!, ಎಲ್ಲಾ ಕೊಚ್ಕೊಂಡ್ ಓಗ್ಲಿ!, ಪರ್ಪಂಚ್ ಇರೋ ತನಕ ಮುಂದೆ, ಕನ್ನಡ್ ಪದಗೊಳ್ ನುಗ್ಲಿ! ಹೀಗೆ ಕನ್ನಡಕ್ಕಾಗಿಯೇ ತಮ್ಮ ತನು ಮನ ಧನವನ್ನು ಮುಡುಪಾಗಿಟ್ಟ ಹಿರಿಯರಾದರೂ, ಕಿರಿಯರಿಗಾಗಿಯೇ ಶಿಶು ಸಾಹಿತ್ಯವನ್ನು ರಚಿಸಿ ಕನ್ನದ ಸಾಹಿತ್ಯವನ್ನು ಆಚಂದ್ರಾರ್ಕವಾಗಿ ಬೆಳಗುವಂತೆ ಮಾಡಿದ ಕನ್ನಡದ ಹಿರಿಯ ಬರಹಗಾರರಾದ ಶ್ರೀ ಜಿ. ಪಿ. ರಾಜರತ್ನಂ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು… Read More ಮಕ್ಕಳ ಕವಿ ಜಿ. ಪಿ. ರಾಜರತ್ನಂ

ಹೆಚ್. ಜಿ. ದತ್ತಾತ್ರೇಯ (ದತ್ತಣ್ಣ)

ಇವರು ಎಸ್.ಎ.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ರ್ಯಂಕ್ ಇನ್ನು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದು ಪ್ರತಿಷ್ಟಿತ ಚೆನೈನ ಐಐಟಿಯಲ್ಲಿ ಪ್ರವೇಶ ಸುಲಭವಾಗಿ ಸಿಕ್ಕಿದರೂ ಅಲ್ಲಿಗೆ ಹೋಗದೇ ಬೆಂಗಳೂರಿನಲ್ಲಿಯೇ ಇಂಜೀನಿಯರಿಂಗ್ ಮುಗಿಸಿ, ನೆಮ್ಮದಿಯಾಗಿ ಕೈ ತುಂಬಾ ಸಂಬಳ ತರುವ ಉದ್ಯೋಗವನ್ನು ಬಿಟ್ಟು ಭಾರತೀಯ ವಾಯುಸೇನೆಗೆ ಸೈನಾಧಿಕಾರಿಗಳಾಗಿ ಸೇರಿ, 21ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ರಂಗಭೂಮಿ ಮತ್ತು ರೇಡಿಯೋ ನಾಟಕಗಳ ಕಡೆ ಆಕರ್ಷಿತರಾಗಿ, ಯಶಸ್ವೀ ನಟ ಎಂದು ಪ್ರಖ್ಯಾತರಾದ ನಂತರ ನೂರಾರು ಹಿಂದಿ ಮತ್ತು ಕನ್ನಡ‍ವೂ… Read More ಹೆಚ್. ಜಿ. ದತ್ತಾತ್ರೇಯ (ದತ್ತಣ್ಣ)

ಇಂಗ್ಲಿಷ್ ಚಿತ್ರ ನಟ ಕನ್ನಡಿಗ ಸಾಬು ದಸ್ತಗೀರ್

ಇತ್ತೀಚೆಗೆ ಭಾರತೀಯ ನಟರುಗಳು ಹಾಲಿವುಡ್ಡಿನಲ್ಲಿ ನಟಿಸಿ ಪ್ರಖ್ಯಾತವಾಗಿರುವುದು ಸಹಜವಾಗಿದೆ. ಹಾಗೆ ನೋಡಿದರೆ, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ ಮೊದಲ ಭಾರತೀಯ ನಟ ಯಾರು ಎಂದು Googleನಲ್ಲಿ ಹುಡುಕಿದರೆ, ಇಸ್ಮಾಯಿಲ್ ಮರ್ಚೆಂಟ್ ಅವರ ಹೌಸ್ ಹೋಲ್ಡರ್ನಲ್ಲಿ ನಟಿಸಿದ ಶಶಿ ಕಪೂರ್ ಅವರ ಹೆಸರು ಕಂಡು ಬರುತ್ತದೆ. ಆದರೆ, ಸ್ವಾತಂತ್ರ್ಯ ಪೂರ್ವವೇ ನಮ್ಮ ಮೈಸೂರಿನ ಮಾವುತರೊಬ್ಬರ ಮಗ 1937ರಲ್ಲಿಯೇ ಎಲಿಫೆಂಟ್ ಬಾಯ್ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ನಂತರ ನಾಯಕನಾಗಿಯೂ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಕಂಪನ್ನು ದೇಶ ವಿದೇಶಗಳಲ್ಲಿ ಹರಡಿದ ಇಂಗ್ಲಿಷ್… Read More ಇಂಗ್ಲಿಷ್ ಚಿತ್ರ ನಟ ಕನ್ನಡಿಗ ಸಾಬು ದಸ್ತಗೀರ್

ಫೀಲ್ಡ್ ಮಾರ್ಷಲ್,  ಕೆ.ಎಂ.ಕಾರ್ಯಪ್ಪ

ಬ್ರಿಟಿಷರು ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆದು ಎರಡು ದೇಶಗಳಾಗಿ ಮಾಡಿ ಹೋದ ನಂತರ ಸ್ವಾತಂತ್ರ್ಯ ಭಾರತದ ಮೊತ್ತ ಮೊದಲ ಪ್ರಧಾನಿಯಾಗಿ ನೆಹರು ಅಧಿಕಾರ ವಹಿಸಿಕೊಂಡಿದ್ದರು. ನಮ್ಮ ದೇಶಕ್ಕಾಗಿ ಸೂಕ್ತವಾದ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ನಮ್ಮ ಸೈನ್ಯಕ್ಕೆ ಅತ್ಯುತ್ತಮ ಭಾರತೀಯ ಕಮಾಂಡರ್ ಮತ್ತು ಅತ್ಯಂತ ಅನುಭವಿ ವ್ಯಕ್ತಿಯನ್ನು ಸೇನಾ ಮುಖ್ಯಸ್ಥರಾಗಿ ಆಯ್ಕೆ ಮಾಡಲು ಬಯಸಿತ್ತು. ಆದರೆ ನೆಹರು ಅವರಿಗೆ ಇದ್ದಕ್ಕಿಂದ್ದಂತೆಯೇ ಜಗತ್ಪ್ರಸಿದ್ದ ನಾಯಕನಾಗುವ ಮತ್ತು ಭಾರತ ಅಹಿಂಸಾಪ್ರಿಯ ದೇಶ ಎಂದು ತೋರಿಸುವ ಉಮ್ಮೇದು. ಹಾಗಾಗಿ ನಮ್ಮ ದೇಶಕ್ಕೆ… Read More ಫೀಲ್ಡ್ ಮಾರ್ಷಲ್,  ಕೆ.ಎಂ.ಕಾರ್ಯಪ್ಪ

ಕನ್ನಡ ಚಲನಚಿತ್ರದ ಮಾಂತ್ರಿಕ ಬಿ. ವಿಠ್ಠಲಾಚಾರ್ಯ

ಇವತ್ತಿನ ನಮ್ಮ ಕನ್ನಡದ ಕಲಿಗಳು ಕಥಾನಾಯಕರನ್ನು ಹೇಗೆ ಪರಿಚರಿಸಿಕೊಡುವುದು ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ. ಇವರು ತಮ್ಮ ಜೀವನ ಆರಂಭಿಸಿದ್ದು, ಕೂಲೀ ಕಾರ್ಮಿಕನಾಗಿ ನಂತರ ಹೊಟೇಲ್ ಮಾಲಿಕ, ತದನಂತರ ಸ್ವಾತಂತ್ರ್ಯ ಹೋರಾಟಗಾರ, ಆನಂತರ ಚಲನಚಿತ್ರ ಪ್ರದರ್ಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ಹೀಗೆ ಹಿಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಜನರ ಮನವನ್ನು ಸೂರೆಗೊಂಡ ಅಪ್ರತಿಮ ಛಲಗಾರ ಬಿ. ವಿಠಲಾಚಾರ್ಯರು. ವಿಠಲಾಚಾರ್ಯರು ಎಂದರೆ ನಮಗೆ ಥಟ್ ಅಂತಾ ನೆನಪಾಗೋದೇ ಪೌರಾಣಿಕ ಇಲ್ಲವೇ ಕ್ರಾಂತಿಕಾರಿ ಸಿನಿಮಾಗಳೇ. ಇಂದಿನ… Read More ಕನ್ನಡ ಚಲನಚಿತ್ರದ ಮಾಂತ್ರಿಕ ಬಿ. ವಿಠ್ಠಲಾಚಾರ್ಯ

ಭಾರತೀಕಂಠ ಗಂಗೂಬಾಯಿ ಹಾನಗಲ್

ಅದೊಂದು ದೇವಾಲಯದಲ್ಲಿ ಸಂಗೀತ ಕಛೇರಿ ನಡೆಯುತ್ತಿತ್ತು. ದೇವಸ್ಥಾನದ ಆರ್ಚಕರು ಪೂಜೆ ಪುನಸ್ಕಾರಗಳಲ್ಲಿ ನಿರತರಾಗಿದ್ದ ಕಾರಣ ಖುದ್ದಾಗಿ ಸಂಗೀತ ಕಛೇರಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕಛೇರಿಯಿಂದ ಸುಶ್ರಾವ್ಯವಾಗಿ ಗಂಡು ಧ್ವನಿಯಲ್ಲಿ ಕೇಳಿಬರುತ್ತಿದ್ದ ಸಂಗೀತವನ್ನು ಆಲಿಸುತ್ತಲೇ, ದೇವಸ್ಥಾನದ ಮಹಾಮಂಗಳಾರತಿ ಮುಗಿಸಿ ಸಂಗೀತ ಕಛೇರಿಗೆ ಬಂದು ನೋಡಿದರೆ, ಅಲ್ಲಿ ಹಾಡುತ್ತಿದ್ದವರು ಗಂಡಸಾಗಿಲ್ಲದೇ, ಹೆಂಗಸಾಗಿದ್ದಿದ್ದನ್ನು ನೋಡಿ ಆಶ್ವರ್ಯಚಕಿತರಾಗಿದ್ದರು. ಅಂತಹ ವೈಶಿಷ್ಟ್ಯವಾದ ಧ್ವನಿಯಲ್ಲಿ ಐದಾರು ದಶಕಗಳ ಕಾಲ ಹಿಂದೂಸ್ಥಾನೀ ಸಂಗೀತ ಪ್ರಿಯರ ಮನವನ್ನು ಗೆದ್ದಂತಹ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರೇ ನಮ್ಮ ಕನ್ನಡದ ಕಲಿಗಳು ಮಾಲಿಕೆಯ… Read More ಭಾರತೀಕಂಠ ಗಂಗೂಬಾಯಿ ಹಾನಗಲ್

ಶ್ರೀ ವೀರೇಂದ್ರ ಹೆಗ್ಗಡೆ

ನಾವು ಚಿಕ್ಕವರಿದ್ದಾಗ ಪುರಾಣ ಪುಣ್ಯಕಥೆಗಳಲ್ಲಿ ರಾಜರ್ಷಿ ಎಂದರೆ ಸದಾಕಾಲವು ಧರ್ಮಾತ್ಮನಾಗಿದ್ದು, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಸಮಾಜಮುಖೀ ಸೇವೆಗಳಲ್ಲಿ ನಿರತರಾಗಿರುವುದಲ್ಲದೇ, ಜನರು ತಮ್ಮ ಸಂಕಷ್ಟಗಳನ್ನೋ ಇಲ್ಲವೇ ವ್ಯಾಜ್ಯಗಳೊಂದಿಗೆ ಬಂದಾಗ ಅವರಿಗೆ ಸೂಕ್ತ ಪರಿಹಾರವನ್ನು ನೀಡುವವರಾಗಿರುತ್ತಾರೆ ಎಂದು ಕೇಳಿಯೋ ಇಲ್ಲವೇ ಓದಿ ತಿಳಿದಿದ್ದೇವೆ. ಈ ಕಲಿಯುಗದಲ್ಲಿಯೂ ಅಂತಹ ರಾಜರ್ಷಿಯವರು ಇದ್ದಾರೆಯೇ ಎಂದು ಯೋಚಿಸುತ್ತಿದ್ದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರ ಯಶೋಗಾಥೆಯನ್ನು ನೋಡಿದಲ್ಲಿ ನಮ್ಮ ಆ ಎಲ್ಲಾ ಕುತೂಹಲವನ್ನು ತಣಿಸುತ್ತದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ತಟದಲ್ಲಿರುವ ಪುರಾಣ… Read More ಶ್ರೀ ವೀರೇಂದ್ರ ಹೆಗ್ಗಡೆ

ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್

ನಮಗೆಲ್ಲಾ ತಿಳಿದಿರುವಂತೆ ಐ.ಎ.ಎಸ್ ಅಧಿಕಾರಿಗಳೆಂದರೆ ಆಕಾಶದಿಂದ ನೇರವಾಗಿ ಈ ಧರೆಗೆ ಇಳಿದವರು ಎಂಬ ಹಮ್ಮು ಬಿಮ್ಮಿನಿಂದಲೇ ಸೂಟು ಬೂಟು ಧರಿಸಿಕೊಂಡು ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಅವರ ಕಾಲು ಸವೆದು ಹೋಗುತ್ತದೋ ಎಂದು ಸದಾಕಾಲವೂ ಐಶಾರಾಮಿ ಏಸಿ ಕಾರಿನಲ್ಲೇ ಓಡಾಡುತ್ತಾ ಏಸಿ ಕಛೇರಿಗಳಲ್ಲಿಯೇ ಕುಳಿತುಕೊಂಡು, ಆದಷ್ಟೂ ಜನರೊಂದಿಗೆ ಬೆರೆಯದೇ, ದೂರವೇ ಇದ್ದು ಅಧಿಕಾರವನ್ನು ಚಲಾಯಿಸುವರು ಎಂದೇ ಎಲ್ಲರ ಭಾವನೆ. ಆದರೆ ಇದಕ್ಕೆಲ್ಲವೂ ತದ್ವಿರುದ್ಧಂತೆ ಐ.ಎ.ಎಸ್ ಅಧಿಕಾರಿ ವರ್ಗದಲ್ಲಿಯೇ ಓರ್ವ ಸಂತ ಎಂದು ಬಣ್ಣಿಸಲ್ಪಟ್ಟ ಮತ್ತು ಧರಿಸುವ ವೇಷ… Read More ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್