ಮಗು ಕುಂ.. ಜಿಗುಟೋದು ಇವ್ರೇ.. ಕಡೆಗೆ ತೊಟ್ಟಿಲು ಆಡಿಸುವವರೂ ಇವರೇ!!

ಸಾರ್ವಜನಿಕವಾಗಿ ಹಿಂದೂ ಮುಸಲ್ಮಾನರು ಭಾಯ್ ಭಾಯ್, ಎಲ್ಲರೂ ಸೇರಿ ಗಣೇಶ ಹಬ್ಬವನ್ನು ಆಚರಿಸೋಣ ಅಂತ ಹೇಳ್ತಾನೇ, ಸದ್ದಿಲ್ಲದೇ ದೆಹಲಿಗೆ ಹೋಗಿ ಸುಪ್ರೀಂ ಕೋರ್ಟಿನಿಂದ ಬೆಂಗಳೂರಿನ ಚಾಮರಾಜ ಪೇಟೆಯ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸುವುದನ್ನು ತಡೆದ, ಸಿದ್ದರಾಮಯ್ಯ ಮತ್ತು ಝಮೀರ್ ಅವರ ಜಾತ್ಯಾತೀತತೆಯ ಅಸಲೀ ಮುಖ ಇದೋ ನಿಮಗಾಗಿ… Read More ಮಗು ಕುಂ.. ಜಿಗುಟೋದು ಇವ್ರೇ.. ಕಡೆಗೆ ತೊಟ್ಟಿಲು ಆಡಿಸುವವರೂ ಇವರೇ!!

ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ಇಂದು ಬೆಳಿಗ್ಗೆ ಎದ್ದು ವಿಜಯ ಕರ್ನಾಟಕ ಪತ್ರಿಕೆಯ ಮುಖ ಪುಟದ ಈ ವಿಷಯ ಓದುತ್ತಿದ್ದಂತೆಯೇ ಬಹಳ ದಿನಗಳಿಂದಲೂ ಬರೆಯಬೇಕೆಂದಿದ್ದ ವಿಚಾರಕ್ಕೆ ಪೂರಕವೆನಿಸಿ ಈ ಲೇಖನವನ್ನು ನಿಮ್ಮೊಂದಿಗೆ ಪ್ರಸ್ತುತ ಪದಿಸುತ್ತಿದ್ದೇನೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 2500 ಎಂಜಿನಿಯರಿಂಗ್ ಕಾಲೇಜುಗಳು, 1400 ಪಾಲಿಟೆಕ್ನಿಕ್‌ಗಳಿವೆ. ಈ ಕಾಲೇಜುಗಳಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸರಿಸುಮಾರು 15 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಇನ್ನು ಕರ್ನಾಟಕದಲ್ಲೇ ಸುಮರು 542 ಎಂಜಿನಿಯರಿಂಗ್ ಕಾಲೇಜುಗಳಿದ್ದು ಅವುಗಳಲ್ಲಿ 134 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳದರೆ, ಖಾಸಗೀ ಕಾಲೇಜುಗಳೇ 407… Read More ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ನಾಡಪ್ರಭು ಶ್ರೀ ಕೆಂಪೇಗೌಡರು

ಪ್ರಗತಿ ಪ್ರತಿಮೆ ಎಂಬ ಹೆಸರಿನಲ್ಲಿ 108 ಅಡಿ ಎತ್ತರದ 218 ಟನ್‌ ತೂಕವಿರುವ ವಿಶ್ವವಿಖ್ಯಾತ ಬೆಂಗಳೂರಿನ ನಿರ್ಮಾತರಾದ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಳ್ಳುತ್ತಿರುವ ಈ ಶುಭಸಂಧರ್ಭದಲ್ಲಿ, ಕೆಂಪೇಗೌಡರ ವ್ಯಕ್ತಿ, ವ್ಯಕ್ತಿತ್ವ, ಸಾಧನೆಯ ಜೊತೆಗೆ ಅಂತಹ ಪ್ರಾಥಃಸ್ಮರಣೀಯ ಯಶೋಗಾಧೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.… Read More ನಾಡಪ್ರಭು ಶ್ರೀ ಕೆಂಪೇಗೌಡರು

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು… Read More ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ನಾವೆಲ್ಲಾ ಚಿಕ್ಕವರಿದ್ದಾಗ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಸಂಭ್ರಮ. ಪ್ರಯಾಣಕ್ಕೆ ಒಂದೆರಡು ದಿನಗಳ ಮಂಚೆಯೇ, ನಮ್ಮೆಲ್ಲಾ ಸ್ನೇಹಿತರಿಗೂ ರೈಲಿನಲ್ಲಿ ಹೋಗುತ್ತಿರುವುದನ್ನು ಹೇಳೀ ಅವರ ಹೊಟ್ಟೆಯನ್ನು ಉರಿಸುತ್ತಿದ್ದಲ್ಲದೇ, ರೈಲಿನಿಂದ ಪುನಃ ಹಿಂದಿರುಗಿದ ನಂತರ ಗೆಳೆಯರ ಬಳೀ ಅದೇ ಕುರಿತಾಗಿಯೇ ಮಾತು ಕತೆ. ಇನ್ನು ಎರಡು ಮೂರು ದಿನಗಳ ಮಟ್ಟಿಗೆ ಪ್ರಯಾಣಿಸಿದರಂತೂ ರೈಲಿನ ಕುಲುಕಾಟದ ಭಾಸವೇ ನಮಗಾಗುತ್ತಿತ್ತು. ಇನ್ನು ರೈಲಿನಲ್ಲಿ ಕುಳಿತುಕೊಳ್ಳಬೇಕಾದರೇ ನಾನು ಕಿಟಕಿ ಪಕ್ಕ ನಾನು ಕಿಟಕಿ ಪಕ್ಕ ಎಂದು, ಅಣ್ಣಾ ತಮ್ಮಾ, ಅಕ್ಕತಂಗಿಯರೊಂದಿಗೆ ಶರಂಪರ ಕಿತ್ತಾಡಿದ್ದೂ ಉಂಟು. ರೈಲಿನಲ್ಲಿ… Read More ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಹಿಂದೆಲ್ಲಾ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವುದಕ್ಕೆ ನಡಿಗೆಯೇ ಮೂಲವಾಗಿದ್ದು ನಂತರದ ದಿನಗಳಲ್ಲಿ ಎತ್ತಿನ ಗಾಡಿಗಳು ಜನರನ್ನು ಮತ್ತು ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದರು. ಇನ್ನು ಕೆಲವರು ಸೈಕಲ್ ಮುಖಾಂತರ ಒಂದಿಬ್ಬರು ಪ್ರಯಾಣಿಸುತ್ತಿದ್ದಾಗ ಒಂದಕ್ಕಿಂತಲು ಹೆಚ್ಚಿನ ಜನರನ್ನು ಆರಾಮದಾಯಕವಾಗಿ ಪ್ರಯಾಣಿಸುವ ಸಲುವಾಗಿ ಕುದುರೇ ಗಾಡಿಗಳನ್ನು ಬಳಸಲು ಅರಂಭಿಸಿದರು ಇವು ಜಟಕಾಗಾಡಿಗಳು, ಟಾಂಗ, ಜಟ್ಕಾ (ಉರ್ದು ಭಾಷೆಯಿಂದ ಬಂದಿರುವ ಪದ) ಎಂದೇ ನಾಡಿನಾದ್ಯಂತ ಪ್ರಖ್ಯಾತವಾಯಿತು. ಎತ್ತಿನಗಾಡಿ ಮತ್ತು ಕುದುರೇ ಗಾಡಿಗಳನ್ನು ಸಂಭಾಳಿಸುವುದು ಬಹಳ ತ್ರಾಸದಾಯಕ ಮತ್ತು ಪ್ರಾಣಿಗಳಿಗೇಕೆ ತೊಂದರೆ ಕೊಡುವುದು… Read More ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳ ಜೊತೆಗೆ ರುಚಿಕರವಾದ ಊಟವನ್ನು ಜನಸಾಮಾನ್ಯರಿಗೂ ಕೈ ಗೆಟುಕುವ ಬೆಲೆಯಲ್ಲಿ ಉಣಬಡಿಸುತ್ತಿದ್ದಂತಹ ಗತ ವೈಭವದ ಬೃಂದಾವನ್ ಹೋಟೆಲ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಅವಕಾಶವಾದಿಗಳು

ಕರ್ನಾಟಕದ ರಾಜಾಧಾನಿಯಾದ ಬೆಂಗಳೂರು ಒಂದು ರೀತಿಯ ಮಾಯಾನಗರಿಯೇ ಹೌದು. ಭಾರತದ ವಾಣಿಜ್ಯ ನಗರಿ ಮುಂಬೈ ಮತ್ತು ರಾಜಧಾನಿ ದೆಹಲಿಯ ನಂತರದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಹಾಗಾಗೀಯೇ ಪ್ರತೀ ದಿನ ಈ ನಗರಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯಕ್ಕಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಬಂದು ಹೋಗುತ್ತಿದ್ದರೂ, ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಕೈಬೀಸಿ ಕರೆಯುವ ಏಕೈಕ ನಗರ ಎಂಬ ಹೆಗ್ಗಳಿಕೆಯೂ ನಮ್ಮ ಬೆಂಗಳೂರಿನದ್ದೇ. ಕ್ರಿ.ಶ. 1573ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿತವಾದ ಈ ಬೆಂಗಳೂರು ನಗರ… Read More ಅವಕಾಶವಾದಿಗಳು