ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ಅವಧೂತ ಜಗದ್ಗುರು ಎಂದೇ ಪ್ರಖ್ಯಾತರಾಗಿದ್ದಂತಹ, ಪ್ರಾತಃಸ್ಮರಣಿಯರಾದ ಶೃಂಗೇರಿ ಶ್ರೀ ಶಾರದಾ ಪೀಠದ 34ನೇ ಜಗದ್ಗುರುಗಳಾಗಿದ್ದಂತಹ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳ ಜಯಂತಿಯಂದು (ಆಂಗ್ಲ ದಿನಚರಿ ಪ್ರಕಾರ) ಸ್ಮರಣೆ ಮಾಡುವುದು ಪ್ರತಿಯೊಬ್ಬ ಸನಾತನಿಯ ಆದ್ಯ ಕರ್ತವೇ ಆಗಿದೆ ಅಲ್ವೇ?… Read More ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ಶಾರದಾ ದೇವಿ, ಕಾಶ್ಮೀರದಲ್ಲಿ ಪುನರ್ ಸ್ಥಾಪನೆ.

ಭಾರತೀಯರ ಶ್ರದ್ಧಾ ಕೇಂದ್ರವಾಗಿದ್ದ ಕಾಶ್ಮೀರದ ಶಾರದಾ ದೇವಿ ಪೀಠ, 1947ರ ದೇಶ ವಿಭಜನೆಯ ಸಮಯದಲ್ಲಿ ಪಾಕೀಸ್ಥಾನದ ಭಾಗವಾಗಿ, ಅಲ್ಲಿನ ಮತಾಂಧರ ಅಟ್ಟಹಾಸದಿಂದ ನುಚ್ಚುನೂರಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದಿಂದ ಕೂಗಳತೆ ದೂರದಲ್ಲೇ ತೀತ್ವಾಲ್ ಎಂಬ ಸ್ಥಳದಲ್ಲೇ ಹಿಂದಿದ್ದ ಶಾರದಾ ಮಂದಿರದ ತದ್ರೂಪಿನಂತಹ ಮಂದಿರ, ಶೋಭಕೃತ್ ನಾಮ ಸಂವತ್ಸರದ ಚೈತ್ರ ಶುದ್ಧ ಪ್ರತಿಪದೆಯಂದು ದೇಶದ ಗೃಹಮಂತ್ರಿಗಳಾದ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆಯಾದ ಸಂಭ್ರಮದ ರಸಕ್ಷಣಗಳು ಇದೋ ನಿಮಗಾಗಿ… Read More ಶಾರದಾ ದೇವಿ, ಕಾಶ್ಮೀರದಲ್ಲಿ ಪುನರ್ ಸ್ಥಾಪನೆ.

ಟಿಪ್ಪು ನಿಜ ಕನಸುಗಳು

ಟಿಪ್ಪು ಸುಲ್ತಾನ್ ಎಂದರೆ ವೀರಾಧಿ ವೀರ. ಈ ದೇಶದ ಸ್ವಾತ್ರಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಮೈಸೂರಿನ ಹುಲಿ ಎಂದೇ ತಿಳಿದಿದ್ದ ನಮಗೆ ಟಿಪ್ಪುವಿನ ನಿಜವಾದ ರೂಪವನ್ನು ರಂಗಾಯಣದ ನಿರ್ದೇಶಕರಾದ ಅಡ್ಡಂಡ್ಡ ಕಾರ್ಯಪ್ಪನವರು ಎಳೆ ಎಳೆಯಾಗಿ ಬಿಡಿಸಿಟ್ಟಿರುವ ನಾಟಕದ ಅದ್ಭುತ ರಸಕ್ಷಣಗಳು ಇದೋ ನಿಮಗಾಗಿ… Read More ಟಿಪ್ಪು ನಿಜ ಕನಸುಗಳು

ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಸರ್ವ ಸಂಗ ಪರಿತ್ಯಾಗಿಗಳಾಗಿ ಖಾವಿ ತೊಟ್ಟರೂ ಅನೇಕ ವಿವಾದಗಳಿಗೆ ಸಿಲುಕುತ್ತಿರುವ ಈ ಸಂಧರ್ಭದಲ್ಲಿ ಒಬ್ಬ ಧಾರ್ಮಿಕ ಗುರುಗಳಾಗಿದ್ದರೂ ದೇಶದ ಏಕತೆಗೆ ಧಕ್ಕೆ ಬಂದಾಗಲೆಲ್ಲಾ ದೇಶ ಮೊದಲು ಧರ್ಮ ಆನಂತರ ಎಂದು ದೇಶದ ಅಖಂಡತೆ ಮತ್ತು ಸಮಾನತೆಗೆ ಸದಾಕಾಲವು ತುಡಿಯುತ್ತಿದ್ದಂತಹ ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಪತ್ರಿಕಾ ಧರ್ಮ

ಯಾವುದೇ ಕಾರ್ಯ ಅಥವಾ ಕಾರ್ಯಕ್ರಮವನ್ನು ನಡೆಸಿದ ನಂತರ ಅದರ ಫಲವನ್ನು ಯಾರು ಯಾರು ಅನುಭವಿಸಬಹುದು? ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಸಂಸ್ಕೃತ ಸುಭಾಷಿತದಲ್ಲಿ ಉಲ್ಲೇಖಿಸಿಲಾಗಿದೆ. ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ | ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ || ಯಾವುದೇ ಒಳ್ಳೆಯ ಕೆಲಸವೇ ಇರಲಿ ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಈ ನಾಲ್ಕೂ ಜನರೂ… Read More ಪತ್ರಿಕಾ ಧರ್ಮ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು. ಕೇರಳದ ಪೂರ್ಣಾ ನದಿ… Read More ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಶೃಂಗೇರಿ ದಸರಾ

ನವರಾತ್ರಿ ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದೇ ಇಲ್ಲವಾಗಿರುವುದು ವಿಪರ್ಯಾಸವೇ ಸರಿ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ. 1336 ರಲ್ಲಿ ಉತ್ತರಭಾರತದವನ್ನು… Read More ಶೃಂಗೇರಿ ದಸರಾ

ಆದಿ ಗುರು‌ ಶ್ರೀ ಶಂಕರಾಚಾರ್ಯರು

ಅದು ಕ್ರಿ.ಶ, ಏಳನೇ ಶತಮಾನ. ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡಿದ್ದಲ್ಲದೇ ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾತೊಡಗಿದ್ದರೆ ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿ. ನಮ್ಮ ಸನಾತನ ಧರ್ಮಕ್ಕೆ ವೇದವೇ… Read More ಆದಿ ಗುರು‌ ಶ್ರೀ ಶಂಕರಾಚಾರ್ಯರು