ಸಮಸ್ಯೆ ಒಂದು ಪರಿಹಾರ ನೂರು

ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ‌ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ… Read More ಸಮಸ್ಯೆ ಒಂದು ಪರಿಹಾರ ನೂರು

ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ

ಅದೇ ಸಾರು ಹುಳೀ ಪಲ್ಯಗಳನ್ನು ತಿಂದು ಜಡ್ಡು ಹೋಗಿರುವ ನಾಲಿಗೆಗೆ ಸ್ವಲ್ಪ ಹುಳೀ ಮತ್ತು ಖಾರದ ಜೊತೆಗೆ ಒಗರು ಸೇರಿರುವ ಹುಳಿ ಮಾವಿನ ಕಾಯಿಯ ಜೊತೆಗೆ ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಅತೀ ಸುಲಭದ ದರದಲ್ಲಿ ಸಿಗುವ, ಬಹಳ  ಔಷಧೀಯ ಗುಣಗಳಿರುವ ಮೆಂತ್ಯದ ಸೊಪ್ಪು ಸೇರಿಸಿ ಅತ್ಯಂತ ರುಚಿಕರವಾದ ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ  ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ತಯಾರಿಸಲು ಬೇಕಾಗುವ ಪದಾರ್ಥಗಳು… Read More ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ

ಸಂಚಾರಿ ವಿಜಯ್

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು.| ಮದುವೆಗೋ ಮಸಣಕೋ ಹೋಗೆಂದ ಕಡೆ ಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ || ಡಿವಿಜಿಯವರು ಅಂದು ಯಾರನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಗ್ಗವನ್ನು ಬರೆದರೋ ಏನೋ? ಆದರೆ ಈ ಪದ್ಯ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ರಂಗಭೂಮಿ ಮತ್ತು ಚಲನಚಿತ್ರನಟ ಮತ್ತು ನಿರ್ದೇಶಕ ಸಂಚಾರಿ ವಿಜಯ್ ಅವರ ಪಾಲಿಗಂತೂ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಕೆಲ ವರ್ಷಗಳ ಹಿಂದೆ, ದಯಾಳ್ ಪದ್ಮನಾಭ್ ಅವರ ನಿರ್ದೇಶನದ ಸತ್ಯಹರಿಶ್ಚಂದ್ರ… Read More ಸಂಚಾರಿ ವಿಜಯ್

ಡಾ. ಸುನೀಲ್ ಕುಮಾರ್ ಹೆಬ್ಬಿ

ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ | ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋಹರಿಃ|| ಎಂಬ ಶ್ಲೋಕವನ್ನು ಸಾಧಾರಣವಾಗಿ ಎಲ್ಲಾ ದೇವಾಲಯಗಳಲ್ಲಿ ಪುರೋಹಿತರು ತೀರ್ಥ ಕೊಡುವಾಗ ಹೇಳುವುದನ್ನು ಕೇಳಿರುತ್ತೇವೆ. ಇದರ ಅರ್ಥ ಹೀಗಿದೆ. ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಕಳೇಬರದಂತಾಗಿ ಹೋದಾಗಾ, ಗಂಗಾ ಜಲವೇ ಔಷಧಿ, ಹರಿ ಅರ್ಥಾತ್ ಶ್ರೀ ಮನ್ನಾರಾಯಣನೇ ವೈದ್ಯನಾಗುತ್ತಾನೆ ಎಂದು ಭಗವಂತನನ್ನು ಹಾಡಿ ಹೊಗಳುವುದೇ ಆಗಿದೆ. ಸದ್ಯದ ಕಲಿಗಾಲದಲ್ಲಿ ಭಗವಂತನನ್ನು ಮರೆತು ಲೌಕಿಕದಲ್ಲೇ ಕಾಲ ಹರಣ ಮಾಡುತ್ತಿರುವವರು ಕಾಯಿಲೆಗೆ ತುತ್ತಾಗಿ ಅವರ ಶರೀರ… Read More ಡಾ. ಸುನೀಲ್ ಕುಮಾರ್ ಹೆಬ್ಬಿ

ವರ್ಕ್ ಫ್ರಂ ಹೋಮ್

ಶಂಕರ ದೂರದ  ಹಾಸನದ ಜಿಲ್ಲೆಯ ಸಣ್ಣದೊಂದು ಗ್ರಾಮದಲ್ಲಿ ಹುಟ್ಟಿ ಅಲ್ಲಿಯೇ ತನ್ನ ವಿದ್ಯಾಭ್ಯಾಸವನ್ನೆಲ್ಲವನ್ನೂ ಮುಗಿಸಿದವ. ಇದ್ದ ಸಣ್ಣ ಸಾಗುವಳಿ ಅವರ ಜೀವನಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು  ಅರಂಭದಲ್ಲಿ  ಅವರಿವರ ಕೈಕಾಲು ಹಿಡಿದು ಸಣ್ಣ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ನಂತರ ತನ್ನ ಸ್ವಸಾಮರ್ಥ್ಯದಿಂದ ಬೇಗನೇ ಮೇಲೆ ಬಂದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಐದಂಕಿಯ ಸಂಬಳ ಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಾನೆ. ಬದುಕಿನಲ್ಲಿ ಎಷ್ಟೇ ಮೇಲಕ್ಕೆ ಏರಿದ್ದರೂ  ತನ್ನ ಹುಟ್ಟೂರು ತಂದೆ ತಾಯಿ, ತಾತಾ ಅಜ್ಜಿಯರನ್ನು ಮರೆಯದ ಶಂಕರ… Read More ವರ್ಕ್ ಫ್ರಂ ಹೋಮ್

ಲಕ್ಷದ್ವೀಪ

ಕಳೆದ ವಾರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಲಕ್ಷದ್ವೀಪ ಪ್ರವಾಸದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಪ್ರಪಂಚಾದ್ಯಂತ ಪ್ರವಾಸೀತಾಣಗಳು ಅಲ್ಲೋಲಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಲಕ್ಷದ್ವೀಪದ ಕುರಿತಾದ ಪ್ರಧಾನಿಗಳ ಪ್ರೇಮ ಕೇವಲ ನೆನ್ನೆಯ ಮೊನ್ನೆಯದ್ದಾಗಿರದೇ, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ಕುರಿತಾಗಿ ತಮ್ಮ ದೂರದೃಷ್ಟಿತನದಿಂದ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ, ಲಕ್ಷದ್ವೀಪದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಲಕ್ಷದ್ವೀಪ

ನುಗ್ಗೇ ಸೊಪ್ಪಿನ ಚಟ್ನಿ ಪುಡಿ

ನುಗ್ಗೇ ಸೊಪ್ಪು ಎಲ್ಲರಿಗೂ ಚಿರಪರಿಚಿತವಾಗಿರುವ ಮತ್ತು ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಸುಲಭದ ದರದಲ್ಲಿ ಸಿಗಬಹುದಾದ ಸೊಪ್ಪಾಗಿದೆ. ಬಹಳ ಔಷಧೀಯ ಗುಣಗಳಿರುವ ಈ ಸೂಪ್ಪಿನಿಂದ ಪಲ್ಯವನ್ನು ಮಾಡುವುದು ಸರ್ವೇ  ಸಾಧಾರಣವಾದರೂ, ನಾವಿಂದು ನಮ್ಮ ನಳಪಾಕದಲ್ಲಿ ಇದೇ ನುಗ್ಗೇಸೊಪ್ಪಿನ ರುಚಿಕರವಾದ ಚಟ್ನಿಪುಡಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಒಂದು ವಾರಕ್ಕೆ ಸವಿಯಬಹುದಾದಷ್ಟು ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ನುಗ್ಗೆ ಸೊಪ್ಪು – 1 ಬಟ್ಟಲು ಕರಿಬೇವಿನ ಸೊಪ್ಪು – 1 ಬಟ್ಟಲು ಕಡಲೇ… Read More ನುಗ್ಗೇ ಸೊಪ್ಪಿನ ಚಟ್ನಿ ಪುಡಿ

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಸಾಮ್ಯಾನ್ಯವಾಗಿ ನಮ್ಮ ಹಿಂದಿನ ಕಾಲದವರು ಈಗಿನಷ್ಟು ಆರ್ಥಿಕವಾಗಿ ಸಧೃಡರಿಲ್ಲದಿದ್ದರೂ, ಸರಿಯಾಗಿ ಎರಡು ಹೊತ್ತು ಊಟ ಮಾಡಲು ಇರುತ್ತಿರದಿದ್ದರೂ, ಯಾವುದೇ ರೋಗ ರುಜಿನಗಳಿಲ್ಲದೇ ಆರಾಮವಾಗಿ 80-90 ವರ್ಷಗಳು ಜೀವಿಸುತ್ತಿದ್ದರು. ಅದೆಷ್ಟೋ ಜನ ಶತಾಯುಷಿಗಳಾಗಿಯೂ ಜೀವಿಸಿದ್ದರು. ಅವರ ನೆನಪಿನ ಶಕ್ತಿಯಂತೂ ಕೇಳುವುದೇ ಬೇಡ. ಹಾಗಾಗಿಯೇ ಸುಲಭವಾಗಿ ಐದಾರು ತಲೆಮಾರುಗಳನ್ನು ಸುಲಭವಾಗಿ ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಮಾಯವಾಗಿದೆ. 20-30 ವರ್ಷಕ್ಕೇ ಕೂದಲೆಲ್ಲಾ ಬೆಳ್ಳಾಗಾಗಿ ಅದೆಷ್ಟೋ ಮಂದಿಗಳಿಗೆ ಕೂದಲೆಲ್ಲ ಉದುರಿ ಹೋಗಿ, ಹತ್ತಾರು ರೀತಿಯ ಖಾಯಿಲೆಗಳಿಗೆ ತುತ್ತಾಗಿ ಊಟಕ್ಕಿಂತಲೂ ಹೆಚ್ಚಾಗಿ… Read More ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಜಾಂಬವಂತನ ಗುಹೆ, ಪೋರ್ ಬಂದರ್

ತ್ರೇತಾಯುಗದಲ್ಲಿ ನಡೆದ ರಾಮಾಯಣ ಮತ್ತು ದ್ವಾಪರಯುಗದಲ್ಲಿ ನಡೆದ ಮಹಾಭಾರತ ಈ ಕಲಿಯುಗದಲ್ಲಿಯೂ ನಮ್ಮ ಶ್ರದ್ಧೇಯ ಮಹಾಕಾವ್ಯಗಳು . ಭಗವಾನ್ ವಿಷ್ಣುವಿನ ದಶಾವತಾರದ ಅಂಗವಾಗಿ ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಈ ಭೂಮಿಯ ಮೇಲೆ ಅವತಾರವೆತ್ತಿದ್ದ ಪ್ರಭು ಶ್ರೀ ರಾಮ ಮತ್ತು ಶ್ರೀ ಕೃಷ್ಣನನ್ನು ಇಂದಿಗೂ ನಾವು ದೇವರಂತೆ ಪೂಜಿಸುತ್ತೇವೆ. ಆದರೆ ಕೆಲವು ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದು ನಡೆದೇ ಇಲ್ಲ. ಅದೊಂದು ಕಾಲ್ಪನಿಕ… Read More ಜಾಂಬವಂತನ ಗುಹೆ, ಪೋರ್ ಬಂದರ್