ಜ್ಞಾನಚೂರ್ಣ ನಶ್ಯ

ಬಹುಶಃ ಇಂದಿನ ಕಾಲದಲ್ಲಿ ಯಾವುದೇ ಚಟವಿಲ್ಲದವರು ಸಿಗುವುದೇ ಅಪರೂಪ ಎಂದರೂ ತಪ್ಪಾಗಲಾರದೇನೋ?. ಇಂದಿನ ಬಹುತೇಕ ಹುಡುಗರು ಕಾಲೇಜು ಮೆಟ್ಟಿಲು ಹತ್ತುವುದರೊಳಗೇ ಬೀಡಿ ಇಲ್ಲವೇ ಸಿಗರೇಟ್ ಈ ರೀತಿ ಯಾವುದಾದರೂಂದು ತಂಬಾಕಿನ ಉತ್ಪನ್ನಕ್ಕೆ ದಾಸರಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಆದರೆ ಇವೆರೆಡರ ಹೊರತಾಗಿಯೂ ತಂಬಾಕಿನಿಂದ ತಯಾರಾದ ಹೊಗೆರಹಿತ ಸಣ್ಣದಾಗಿ ನಶೆ ಏರಿಸುವ ವಸ್ತುವೇ ನಶ್ಯ ಇಲ್ಲವೇ ನಸ್ಯ ಎಂದೂ ಕರೆಯುತ್ತಾರೆ.. ಇಂತಹ ನಶ್ಯದ ಕುರಿತಾದ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ತಿಳಿದಂತೆ, ನಶ್ಯಕ್ಕೂ ನಮ್ಮ… Read More ಜ್ಞಾನಚೂರ್ಣ ನಶ್ಯ

ಶ್ರೀ ಸುಬ್ರಹ್ಮಣ್ಯ ಭಾರತಿ

ಶ್ರೀ ಸುಬ್ರಹ್ಮಣ್ಯ ಭಾರತಿಯವರು ಖಡ್ಗಕ್ಕಿಂತ ಲೇಖನಿಯೇ ಹರಿತ ಎಂದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಮ್ಮ ಉಗ್ರ ಲೇಖನಗಳು ಮತ್ತು ಕವಿತೆಗಳ ಮೂಲಕ ಇಡೀ ತಮಿಳು ನಾಡಿನ ಜನರನ್ನು ಜಾಗೃತಗೊಳಿಸಿದ ನಮ್ಮ ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ ಕವಿ ಎಂದರೆ ಅತಿಶಯೋಕ್ತಿಯಾಗಲಾರದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಾದ್ಯಂತ ತಾಂಡವವಾಡುತ್ತಿದ್ದ ಜಾತಿ ಪದ್ದತಿಯ ವಿರುದ್ಧ ಆಮೂಲಾಗ್ರ ಬದಲಾವಣೆಯಾಗುವಂತೆ ತಮ್ಮ ಕವನಗಳ ಮೂಲಕ ಜನರನ್ನು ಬಡಿದೆಬ್ಬಿಸಿದ್ದಲ್ಲದೇ, ಸ್ವತಃ ಮೇಲ್ವಾತಿಯಲ್ಲಿ ಹುಟ್ಟಿದ್ದರೂ ಅದರ ಹಮ್ಮು ಬಿಮ್ಮು ಇಲ್ಲದ್ದೇ ತಮಿಳುನಾಡಿನಲ್ಲಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ… Read More ಶ್ರೀ ಸುಬ್ರಹ್ಮಣ್ಯ ಭಾರತಿ

ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ದಿನಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯರಿಗೆ ಭೂಮಿಯ ಮೇಲಿನ ಆಸೆ ಹೆಚ್ಚಾದಂತೆಲ್ಲಾ ನಮ್ಮ ಪೂರ್ವಜರು ನೆಟ್ಟು ಹೋಗಿದ್ದ ಅಥವಾ ಸ್ವಾಭಾವಿಕವಾಗಿಯೇ ನೆಟ್ಟಿದ್ದ ಗಿಡ, ಮರ ಮತ್ತು ಕಾಡುಗಳನ್ನೆಲ್ಲಾ ಕಡಿದು ನಾಡು ಮಾಡುತ್ತಿದ್ದಂತೆಯೇ ಪ್ರಾಕೃತಿಕ ವ್ಯವಸ್ಥೆಗಳು ವೆತ್ಯಾಸವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಸರಿಯಾಗಿ ಆಗದೇ ಇದ್ದಾಗ ಗಿಡಿ ನೆಡಿ, ಮರ ಬೆಳೆಸಿ ವನ್ಯ ಸಂಪತ್ತನ್ನು ಉಳಿಸಿ ಎನ್ನುತ್ತಾ ಆಗ್ಗಾಗ್ಗೇ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ವನ ಮಹೋತ್ಸವ ಮಾಡಿ ಕಾಟಾಚಾಕಕ್ಕೆ ಕೆಲವೊಂದು ಗಿಡಗಳನ್ನು ನೆಟ್ಟು ಫೋಟೋಗಳನ್ನು ತೆಗೆಸಿಕೊಂಡು… Read More ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ಮಂಗರವಳ್ಳಿ ಚೆಟ್ನಿ

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಕಾಯಿ ಚೆಟ್ನಿ, ಶೇಂಗಾ ಚೆಟ್ನಿ ಇಲ್ಲವೇ ಹುರಿಗಡಲೇ ಚೆಟ್ನಿ ಮಾಡುವುದು ಸಹಜ. ಇಂದು ಅದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಮಂಗರವಳ್ಳಿ ಚೆಟ್ನಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮಂಗರವಳ್ಳಿ ಚೆಟ್ನಿತಯಾರಿಸಲು ಬೇಕಾಗುವ ಸಾಮಗ್ರಿಗಳು ಸಿಪ್ಪೆ ತೆಗೆದ ಮಂಗರವಳ್ಳಿ ಕಾಂಡಗಳು- 1 ಬಟ್ಟಲು ಹೆಚ್ಚಿದ ಈರುಳ್ಳಿ – 1 ಬಟ್ಟಲು ಒಣ ಮೆಣಸಿನಕಾಯಿ – 3-4 ಖಾರಕ್ಕೆ… Read More ಮಂಗರವಳ್ಳಿ ಚೆಟ್ನಿ

ತಂಗರಸು ನಟರಾಜನ್

ಇತ್ತೀಚೆಗೆಷ್ಟೇ ಮುಗಿದ ಐಪಿಲ್ ಪಂದ್ಯಾವಳಿಯಲ್ಲಿ ಹೈದರಾಬಾದ್ ತಂಡದ ಪರ ತಮ್ಮ ಏಡಗೈ ವೇಗ ಮತ್ತು ಯಾರ್ಕರ್ ಬೋಲಿಂಗ್ ಮುಖಾಂತರ ಎಲ್ಲರ ಗಮನದ ಸೆಳೆದ ತಮಿಳುನಾಡು ಮೂಲದ ತಂಗರಸು ನಟರಾಜನ್ ಅರ್ಹತೆಯ  ತಮ್ಮ ಅರ್ಹತೆಯ ಮೇರೆಗೆ ಭಾರತಪರ ಟಿ20 ಪಂದ್ಯವನ್ನಾಡಲು ಆಯ್ಕೆಯಾಗುತ್ತಾರೆ. ಆದರೆ ಅದೃಷ್ಟದ ಮೇರೆಗೆ ಕಡೆಯ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.  ಅವರು ಆಡಿದ್ದು ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಬದಲಾಗಿ. ಇದರಲ್ಲೇನು ವಿಶೇಷ ಅಂತೀರಾ?… Read More ತಂಗರಸು ನಟರಾಜನ್

ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ

ಈ ಚಿತ್ರವನ್ನು ನೋಡಿದ ತಕ್ಷಣ ಅರೇ ಈ ಗಿಡವನ್ನು ಎಲ್ಲೋ ನೋಡಿದ್ದೇವಲ್ಲಾ ಎಂದೆನಿಸಿ ಸ್ವಲ್ಪ ಕಾಲ ಯೋಚಿಸುತ್ತಿದ್ದಂತೆಯೇ, ಹಾಂ! ಅವರ ಮನೆಯಲ್ಲಿ ಕಾಂಪೌಂಡ್ ಮೇಲೆ ಸುಂದರವಾಗಿ ಹಬ್ಬಿಸಿದ್ದಾರಲ್ವಾ ಎಂದು ನೆನಪಿಸಿಕೊಂಡರೇ ಮತ್ತೊಬ್ಬರ ಮನೆಯ ಹೂಕುಂಡದಲ್ಲಿಯೂ ಬೆಳೆಸಿರುತ್ತಾರೆ ಬಹುತೇಕ ಉದ್ಯಾನವನಗಳ ಬೇಲಿಗಳ ಮೇಲೆ ಈ ಮಂಗರವಳ್ಳಿಯ ಬಳ್ಳಿಯನ್ನು ಕಾಣಬಹುದಾಗಿದೆ. ಪುನುಗು ಬೆಕ್ಕಿಗೆ ತನ್ನ ದೇಹದಿಂದಲೇ ಒಸರುವ ಸುಂಗಂಧ ತನಗೇ ಗೊತ್ತಿಲ್ಲದಿರುವ ಹಾಗೇ ಆಲಂಕಾರಿಕವಾಗಿ ತಮ್ಮ ಮನೆಗಳಲ್ಲಿ ಬೆಳೆಸುವ ಬಹುತೇಕರಿಗೆ ಔಷಧೀಯ ಗುಣಗಳುಳ್ಳ ಬಹುಪಯೋಗಿ ಈ ಮಂಗರವಳ್ಳಿಯ ಮಹತ್ವವೇ ತಿಳಿದಾಗಿರುವುದು… Read More ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ

ಮದುವೆ ಮತ್ತು ಸಾಮಾಜಿಕ ಜಾಲತಾಣ

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ತುಂಬಾನೇ ವೈರಲ್ ಆಗಿತ್ತು. ಈ ವಯಸ್ಸಿನಲ್ಲಿ ಈ ಮುದುಕನಿಗೆ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಬೇಕಿತ್ತಾ? ಅರವತ್ತಕ್ಕೆ ಮೂವತ್ತರ ಆಸೆಯೇ?, ಚಪಲ ಚೆನ್ನಿಗರಾಯ, ದುಡ್ಡಿದ್ದವರು ಅಮಾಯಕ ಹೆಣ್ಣು ಮಕ್ಕಳ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ? ಹೀಗೇ ಹಾಗೇ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಆದರೆ ಈ ಮದುವೆಯ ಹಿಂದೆ ಇದ್ದ ಅಸಲೀ ಕಾರಣ ತಿಳಿದ ಮೇಲೆ ಬಹುತೇಕರು ಆ ವಯಸ್ಸಾದವರನ್ನು ಹಾಡಿ ಹೊಗಳಿದ ಕಥೆ… Read More ಮದುವೆ ಮತ್ತು ಸಾಮಾಜಿಕ ಜಾಲತಾಣ

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ

ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಇತ್ತೀಚೆಗೆ ಕರ್ನಾಟಕ ಸರ್ಕಾರ ಮರಾಠಿ ಪ್ರಾಧಿಕಾರವನ್ನು ಸ್ಥಾಪಿಸಿದ್ದರ ವಿರುದ್ಧವಾಗಿ ಕೆಲವು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿ ಕನ್ನಡಿಗರಲ್ಲಿ ಭಾಷಾ ಕಿಚ್ಚನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಸೊಲ್ಲಾಪುರದ ಮರಾಠಿ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಎಂಬ ಶಿಕ್ಷಕನ ಕನ್ನಡ ಭಾಷಾ ಕಲಿಸುವಿಕೆಗಾಗಿ ಜಾಗತಿಕ ಶಿಕ್ಷಕರ ಪ್ರಶಸ್ತಿಯ ಜೊತೆಗೆ 1 ಮಿಲಿಯನ್ ಅಮೇರಿಕನ್ ಡಾಲರ್ (7ಕೋಟಿ 38 ಲಕ್ಷಗಳು)ಗಳನ್ನು ಗಳಿಸಿದ ಅಧ್ಭುತವಾದ ಮತ್ತು ಆಷ್ಟೇ ಪ್ರೇರಣಾದಾಯಕವಾದ ರೋಚಕ ಕಥೆ ಇದೋ ನಿಮಗಾಗಿ 1947ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ… Read More ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ