ಹಲಾಲ್

ಹಿಂದೂಗಳ ಹೊಸಾ ವರ್ಷ ಯುಗಾದಿ ಹಬ್ಬ ಎಂದ ತಕ್ಷಣ ಯುಗಾದಿ ಹಬ್ಬಕ್ಕೆ ಶುಭಹಾರೈಸುತ್ತಾ ಹಾಸ್ಯಕ್ಕಾಗಿ ಕೆಲವರು ಇವತ್ತು ಬೇಳೆ🥘 ನಾಳೆ ಮೂಳೆ 🐐🐓 ಇವತ್ತು ಎಣ್ಣಿ ನೀರು ನಾಳೆ ಎಣ್ಣೆಗೆ ನೀರು🍸🥃 ಎನ್ನುವ ಸಂದೇಶ ಕಳುಹಿಸುವುದನ್ನು ಗಮನಿಸಿರಬಹುದು. . ಹೌದು ನಿಜ. ಯುಗಾದಿ ಹಬ್ಬದ ದಿನ ಒಬ್ಬಟ್ಟಿನ ಊಟ ಮಾಡಿದರೆ, ಯುಗಾದಿಯ ಮಾರನೆಯ ದಿನ ಮಾಂಸಾಹಾರವನ್ನು ಸೇವಿಸುವ ಬಹುತೇಕ ಹಿಂದೂಗಳು ಬಾಡೂಟವನ್ನು ಸೇವಿಸುವುದು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವಂತಹ ರೂಢಿ. ಯುಗಾದಿಯ ಮಾರನೆಯ ದಿನ ವರ್ಷತೊಡಕಿನಿಂದ ಮಾಡುವ… Read More ಹಲಾಲ್

ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಭಾರತೀಯ ಸೇನೆಗೂ ನಮ್ಮ ಕರ್ನಾಟಕದ ಕೊಡಗಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಇಂದಿಗೂ ಸಹಾ ಕೊಡಗಿನ ಬಹುತೇಕ ಕುಟುಂಬದ ಒಬ್ಬ ಸದಸ್ಯನಾದರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಸ್ವಾತಂತ್ರ್ಯ ಭಾರತದ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರೂ ಕೊಡಗಿನವರೇ. ಅವರಂತೆಯೇ ಭಾರತದ ಭೂಸೇನೆಯ ದಂಡನಾಯಕರಾಗಿದ್ದ, ಅಪ್ಪಟ ಕನ್ನಡಿಗ ಜನರಲ್  ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಅರ್ಥಾತ್ ಕೆ. ಎಸ್ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದ ತಿಮ್ಮಯ್ಯ ಮತ್ತು  ಸೀತವ್ವ ದಂಪತಿಗಳ… Read More ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಕೊರೋನ ಲಸಿಕೆ ಅಭಿಯಾನ

ಕಳೆದ ವರ್ಷದ ಆರಂಭದಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿ ಕೊಂಡ ಸಾಂಕ್ರಾಮಿಕ ಕೊರಾನಾ ವೈರಾಣು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚಾದ್ಯಂತ ಆವರಿಸಿ ಅಕ್ಷರಶಃ ಜಗತ್ತನ್ನು ನಿಸ್ತೇಜವನ್ನಾಗಿಸಿದ್ದು ಈಗ ಇತಿಹಾಸ. ಕಡೆಗೂ ಈ ಮಹಾಮಾರಿಗೆ ಲಸಿಕೆಯನ್ನು ನಮ್ಮ ದೇಶದ ವಿಜ್ಞಾನಿಗಳು ಕಂಡು ಹಿಡಿಯಲು ಸಫಲರಾಗಿ ಅದು ವಿಶ್ವದ ಇತರೇ ರಾಷ್ಘ್ರಗಳ ಲಸಿಕೆಗಿಂತಲೂ ಉತ್ತಮ ಫಲಿತಾಂಶ ತೋರಿದ ಕಾರಣ ಇಂದು ನಮ್ಮ ದೇಶದಿಂದ ಅನೇಕ ರಾಷ್ಟ್ರಗಳಿಗೆ Made in India ಲಸಿಕೆಗಳು ರಫ್ತಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಕಳೆದ ಜನವರಿ… Read More ಕೊರೋನ ಲಸಿಕೆ ಅಭಿಯಾನ

ತೋಳ ಬಂತು ತೋಳ

ಸಾರಿಗೆ ಸಂಪರ್ಕ ಜನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರನ್ನು ಕರೆದೊಯ್ಯಲು ಮತ್ತು ವಸ್ತುಗಳನ್ನು ಸಾಗಿಸಲು ಸಾರಿಗೆ ವಾಹನಗಳ ಅವಶ್ಯಕತೆ ಅತ್ಯಗತ್ಯವಾಗಿ ಇದನ್ನು ಮನಗಂಡ ಸ್ವಾತ್ರಂತ್ರ್ಯಾ ನಂತರ  ಸರ್ಕಾರವೇ ನೇರವಾಗಿ ಸಾರಿಗೆ  ಸಂಸ್ಜೆಗಳನ್ನು ಅರಂಭಿಸಿ ಸುಮಾರು ವರ್ಷಗಳ ವರೆಗೂ ಅದನ್ನು ನಡೆಸಿಕೊಂಡು ಹೋಗಿತ್ತು. ಈ  ಸಾರಿಗೆ ಸಂಸ್ಥೆಯ ನೌಕರಿಗಲ್ಲರಿಗೂ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನೇ ನೀಡುತ್ತಿದ್ದರೂ. ಈ ನೌಕರ  ದುರಾಡಳಿತ ಮತ್ತು ಕದ್ದು ತಿನ್ನುವಿಕೆಯಿಂದಾಗಿ ಪ್ರತೀವರ್ಷವೂ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವಾಗಿ… Read More ತೋಳ ಬಂತು ತೋಳ

ನಕ್ಸಲರು

1960ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ದೇಶಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ಹರಡ ಬೇಕೆಂಬ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ವಿವಿಧ ರೀತಿಯ ಯೋಜನೆ ಮಾಡುತ್ತಿರುವಾಗಲೇ ಅವರವರಲ್ಲಿಯೇ ಭಿನ್ನಾಭಿಪ್ರಾಯ ಮೂಡಿದ ಕಾರಣ ಕಮ್ಯೂನಿಷ್ಟ್ ಪಕ್ಷದವು ಎರಡು ಬಣಗಳಾಗಿ ಒಡೆದುಹೋಯಿತು. ಮೊದನೆಯ ಬಣ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ಶಕ್ತಿಯ ಮೂಲಕ ಅಧಿಕಾರಕ್ಕೆ ಬರಲು ಯೋಚಿಸಿದರೆ ಮತ್ತೊಂದು ಬಣಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿರದೇ ಗೆರಿಲ್ಲಾ ಮಾದರಿಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ದಂಗೆಯನ್ನು ಎಬ್ಬಿಸುವ ಮೂಲಕ ಶಕ್ತಿಯನ್ನು… Read More ನಕ್ಸಲರು

ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ

ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಆತ ದೇಶ ಕಾಯುವ ವೀರ ಯೋಧ. ತನ್ನ ಸಂಸಾರವನ್ನು ಇಲ್ಲಿ ಬಿಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿಯೇ ದೂರದ ಗಡಿಯಲ್ಲಿ ಚಳಿ ಮಳೆಯನ್ನು ಲೆಕ್ಕಿಸದೇ ತನ್ನ ಸೇವೆಯನ್ನು ಸಲ್ಲಿಸುತ್ತಾ ಕಾಲ ಕಾಲಕ್ಕೆ ತಾನು ದುಡಿಡಿದ್ದ ಹಣವನ್ನು ಕಳುಹಿಸುತ್ತಾ ಸಮಯ ಸಿಕ್ಕಾಗಲೆಲ್ಲಾ ಊರಿಗೆ ಬಂದು ಹೋಗುತ್ತಿರುತ್ತಾನೆ. ಇನ್ನು ಆತನ ಪತ್ನಿಯೂ ತಮ್ಮ ಮಕ್ಕಳಿಗೆ ಮನೆಯ ಯಜಮಾನರು ತಮ್ಮ ಜೊತೆ ಇಲ್ಲದಿರುವುದು ಗೊತ್ತೇ ಆಗದಂತೆ ಯಜಮಾನರು ಕಳುಹಿಸಿದ ಹಣದಲ್ಲಿಯೇ ಹಾಗೂ ಹೀಗೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸಾಕಿ ಸಲಹಿ… Read More ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಕೊರಗಜ್ಜ

ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಹೇಗೆ ನಾನಾ ದೇವರುಗಳ ತೀರ್ಥಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆಯೋ ಹಾಗೆಯೇ ಅಲ್ಲಿನ ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಅದನ್ನೇ ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಇಲ್ಲಿನ ಜನರು ಈ ಕೊರಗಜ್ಜನನ್ನು ಭಾರೀ ಶ್ರದ್ದಾ, ಭಕ್ತಿಗಳಿಂದ ಪೂಜಿಸುವುದಲ್ಲದೇ,… Read More ಕೊರಗಜ್ಜ

ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದ್ದು ಈಜಿಪ್ಟ್ ದೇಶದಲ್ಲಿದೆ. ಇದು ಸುಮಾರು 162 ಕಿಮೀ ಉದ್ದವಿದ್ದು ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ 300 ಮೀ ಇದೆ. ಈ ಕಾಲುವೆ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳಿಗೆ ಪ್ರಮುಖ ಜಲಮಾರ್ಗವಾಗಿದೆ. ಇದು ಇಲ್ಲದಿದ್ದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರ ಸುತ್ತಿ… Read More ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್