ಡಾ. ಸುನೀಲ್ ಕುಮಾರ್ ಹೆಬ್ಬಿ

ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ | ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋಹರಿಃ|| ಎಂಬ ಶ್ಲೋಕವನ್ನು ಸಾಧಾರಣವಾಗಿ ಎಲ್ಲಾ ದೇವಾಲಯಗಳಲ್ಲಿ ಪುರೋಹಿತರು ತೀರ್ಥ ಕೊಡುವಾಗ ಹೇಳುವುದನ್ನು ಕೇಳಿರುತ್ತೇವೆ. ಇದರ ಅರ್ಥ ಹೀಗಿದೆ. ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಕಳೇಬರದಂತಾಗಿ ಹೋದಾಗಾ, ಗಂಗಾ ಜಲವೇ ಔಷಧಿ, ಹರಿ ಅರ್ಥಾತ್ ಶ್ರೀ ಮನ್ನಾರಾಯಣನೇ ವೈದ್ಯನಾಗುತ್ತಾನೆ ಎಂದು ಭಗವಂತನನ್ನು ಹಾಡಿ ಹೊಗಳುವುದೇ ಆಗಿದೆ. ಸದ್ಯದ ಕಲಿಗಾಲದಲ್ಲಿ ಭಗವಂತನನ್ನು ಮರೆತು ಲೌಕಿಕದಲ್ಲೇ ಕಾಲ ಹರಣ ಮಾಡುತ್ತಿರುವವರು ಕಾಯಿಲೆಗೆ ತುತ್ತಾಗಿ ಅವರ ಶರೀರ… Read More ಡಾ. ಸುನೀಲ್ ಕುಮಾರ್ ಹೆಬ್ಬಿ

ನುಗ್ಗೇ ಸೊಪ್ಪಿನ ಚಟ್ನಿ ಪುಡಿ

ನುಗ್ಗೇ ಸೊಪ್ಪು ಎಲ್ಲರಿಗೂ ಚಿರಪರಿಚಿತವಾಗಿರುವ ಮತ್ತು ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಸುಲಭದ ದರದಲ್ಲಿ ಸಿಗಬಹುದಾದ ಸೊಪ್ಪಾಗಿದೆ. ಬಹಳ ಔಷಧೀಯ ಗುಣಗಳಿರುವ ಈ ಸೂಪ್ಪಿನಿಂದ ಪಲ್ಯವನ್ನು ಮಾಡುವುದು ಸರ್ವೇ  ಸಾಧಾರಣವಾದರೂ, ನಾವಿಂದು ನಮ್ಮ ನಳಪಾಕದಲ್ಲಿ ಇದೇ ನುಗ್ಗೇಸೊಪ್ಪಿನ ರುಚಿಕರವಾದ ಚಟ್ನಿಪುಡಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಒಂದು ವಾರಕ್ಕೆ ಸವಿಯಬಹುದಾದಷ್ಟು ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ನುಗ್ಗೆ ಸೊಪ್ಪು – 1 ಬಟ್ಟಲು ಕರಿಬೇವಿನ ಸೊಪ್ಪು – 1 ಬಟ್ಟಲು ಕಡಲೇ… Read More ನುಗ್ಗೇ ಸೊಪ್ಪಿನ ಚಟ್ನಿ ಪುಡಿ

ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ ಬೀದರ ಜಿಲ್ಲೆಯ ಸೀಬೆಯ, ಹಣ್ಣು ಬೆಂಗಳೂರಿನ ಸೇಬಿನ ಹಣ್ಣು || ಕೊಳ್ಳಿರಿ ಹಿಗ್ಗನು ಹರಿಸುವವು,ಕಲ್ಲುಸಕ್ಕರೆಯ ಮರೆಸುವವು ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ || ಬೆಳಗಾವಿಯ ಸವಿ ಸಪೋಟ. ದೇವನಹಳ್ಳಿಯ ಚಕ್ಕೋತ ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು || ಗಂಜಾಮ್ ಅಂಜೀರ್, ತುಮಕೂರ್ ಹಲಸು, ಧಾರವಾಡದ ಆಪೂಸು, ಮಲೆನಾಡಿನ ಅನಾನಸು ಸವಿಯಿರಿ ಬಗೆಬಗೆ ಹಣ್ಣುಗಳ ಕನ್ನಡ ನಾಡಿನ ಹಣ್ಣುಗಳ || ಸದ್ಯಕ್ಕೆ ಆಡಳಿತಾತ್ಮಕವಾಗಿ ಕೇರಳದ ಭಾಗವಾಗಿದ್ದರೂ… Read More ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

ವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು… Read More ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಭಾರತೀಯ ಸೇನೆಗೂ ನಮ್ಮ ಕರ್ನಾಟಕದ ಕೊಡಗಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಇಂದಿಗೂ ಸಹಾ ಕೊಡಗಿನ ಬಹುತೇಕ ಕುಟುಂಬದ ಒಬ್ಬ ಸದಸ್ಯನಾದರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಸ್ವಾತಂತ್ರ್ಯ ಭಾರತದ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರೂ ಕೊಡಗಿನವರೇ. ಅವರಂತೆಯೇ ಭಾರತದ ಭೂಸೇನೆಯ ದಂಡನಾಯಕರಾಗಿದ್ದ, ಅಪ್ಪಟ ಕನ್ನಡಿಗ ಜನರಲ್  ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಅರ್ಥಾತ್ ಕೆ. ಎಸ್ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದ ತಿಮ್ಮಯ್ಯ ಮತ್ತು  ಸೀತವ್ವ ದಂಪತಿಗಳ… Read More ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಕೊರೋನ ಲಸಿಕೆ ಅಭಿಯಾನ

ಕಳೆದ ವರ್ಷದ ಆರಂಭದಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿ ಕೊಂಡ ಸಾಂಕ್ರಾಮಿಕ ಕೊರಾನಾ ವೈರಾಣು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚಾದ್ಯಂತ ಆವರಿಸಿ ಅಕ್ಷರಶಃ ಜಗತ್ತನ್ನು ನಿಸ್ತೇಜವನ್ನಾಗಿಸಿದ್ದು ಈಗ ಇತಿಹಾಸ. ಕಡೆಗೂ ಈ ಮಹಾಮಾರಿಗೆ ಲಸಿಕೆಯನ್ನು ನಮ್ಮ ದೇಶದ ವಿಜ್ಞಾನಿಗಳು ಕಂಡು ಹಿಡಿಯಲು ಸಫಲರಾಗಿ ಅದು ವಿಶ್ವದ ಇತರೇ ರಾಷ್ಘ್ರಗಳ ಲಸಿಕೆಗಿಂತಲೂ ಉತ್ತಮ ಫಲಿತಾಂಶ ತೋರಿದ ಕಾರಣ ಇಂದು ನಮ್ಮ ದೇಶದಿಂದ ಅನೇಕ ರಾಷ್ಟ್ರಗಳಿಗೆ Made in India ಲಸಿಕೆಗಳು ರಫ್ತಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಕಳೆದ ಜನವರಿ… Read More ಕೊರೋನ ಲಸಿಕೆ ಅಭಿಯಾನ

ನಂಜನಗೂಡಿನ ಹಲ್ಲುಪುಡಿ

ನಗು ಮನುಷ್ಯರ ಜೀವನದ ಅತ್ಯಂತ ಶ್ರೇಷ್ಠವಾದ ಔಷಧ ಎಂದೇ ಪರಿಗಣಿಸಲಾಗುತ್ತದೆ. ಸದಾಕಾಲವೂ ಹಸನ್ಮುಖಿಯಾಗಿರುವರು ದೀರ್ಘಕಾಲ ಆರೋಗ್ಯವಂತರಾಗಿರುತ್ತಾರಲ್ಲದೇ ಸಮಾಜದಲ್ಲಿ ಆರೋಗ್ಯಕರವಾದ ಪರಿಸರವನ್ನು ಬೆಳಸುತ್ತಾರೆ. ಇಂತಹ ನಗುವಿನ ಹಿಂದೆ ಶುದ್ಧವಾದ ಮನಸ್ಸು ಇರುತ್ತದಾದರೂ ಅಂತಹ ನಗುವನ್ನು ವ್ಯಕ್ತಪಡಿಸುವುದು ಮಾತ್ರ ಮುಖದ ಮೇಲೆ. ಹಾಗೆ ಮುಖದ ಮೇಲೆ ನಗು ವ್ಯಕ್ತವಾದಾಗ ಎಲ್ಲರಿಗೂ ಎದ್ದು ಕಾಣುವುದೇ ಹಲ್ಲುಗಳು. ಹಲ್ಲುಗಳೇ ಮನುಷ್ಯರ ಮುಖಕ್ಕೆ ಹೆಚ್ಚಿನ ಅಂದವನ್ನು ನೀಡುತ್ತದೆ ಎಂದರೂ ಆತಿಶಯೋಕ್ತಿಯೇನಲ್ಲ. ಹಾಗಾಗಿ ಸಮಾನ್ಯವಾಗಿ ಎಲ್ಲರೂ ಸಹಾ ತಮ್ಮ ಹಲ್ಲುಗಳನ್ನು ಆದಷ್ಟೂ ಶುದ್ಧವಾಗಿ ಫಳ ಫಳನ… Read More ನಂಜನಗೂಡಿನ ಹಲ್ಲುಪುಡಿ

ಎಳ್ಳಿನ ಹಾಲು

ಹೇಳಿ ಕೇಳಿ ಇದು ಬೇಸಿಗೆ ಸಮಯ. ಹತ್ತಾರು ಸಲ ಬಾಯಾರಿಕೆಯಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ಅನಾರೋಗ್ಯಕರವಾದ ಪೇಯಗಳನ್ನು ಕುಡಿಯುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರಿಬಹುದಾದ ಆರೋಗ್ಯಕರವಾದ ಸಸ್ಯಜನಿತ ಎಳ್ಳಿನ ಹಾಲನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 2-3 ಜನರು ಸವಿಯಬಹುದಾದಷ್ಟು ಎಳ್ಳಿನ ಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ಬಿಳಿ ನೈಲಾನ್ ಎಳ್ಳು – 100 ಗ್ರಾಂಬೆಲ್ಲ- 100 ಗ್ರಾಂಹಾಲು – 1/2 ಲೀಟರ್ಏಲಕ್ಕಿ – 3 ರಿಂದ 4… Read More ಎಳ್ಳಿನ ಹಾಲು

ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಮನೆಯಲ್ಲಿ ಮೊಸರು ಹೆಚ್ಚಿಗೆ ಉಳಿದು ಬಿಟ್ಟಲ್ಲಿ ಅಥವಾ ಮನೆಗೆ ಇದ್ದಕ್ಕಿದ್ದಂತೆಯೇ ಯಾರಾದ್ರೂ ಸಂಬಂಧೀಕರು ಬಂದು ಬಿಟ್ಟಲ್ಲಿ ಅಷ್ಟು ಹೊತ್ತಿನಲ್ಲಿ ಹುಳಿ, ಸಾರು ಮುಂತಾದವುಗಳನ್ನು ಮಾಡಲು ಪುರುಸೊತ್ತು ಇಲ್ಲದಿದ್ದಲ್ಲಿ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ – 1… Read More ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ