ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಅಹಲ್ಯಬಾಯಿ ಹೋಳ್ಕರ್

18ನೇ ಶತಮಾನದಲ್ಲಿಯೇ ಸತಿ ಸಹಗಮನ ಪದ್ದತಿಯನ್ನು ವಿರೋಧಿಸಿ ತನ್ನ ಪತಿಯ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮೊಘಲರ ಹೆಡೆಮುರಿ ಕಟ್ಟಿದ್ದಲ್ಲದೇ, ಕಾಶೀ ವಿಶ್ವನಾಥ ಮತ್ತು ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳೂ ಸೇರಿದಂತೆ ಸುಮಾರು 3500ಕ್ಕೂ ಅಧಿಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿದ ಪ್ರಾರ್ಥಸ್ಮರಣೀಯರಾದ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಸ ಯಶೋಗಾಥೆಯನ್ನು ಆಕೆಯ ವರ್ಧಂತಿಯಂದು ಇದೋ ನಿಮಗಾಗಿ… Read More ಅಹಲ್ಯಬಾಯಿ ಹೋಳ್ಕರ್

ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಈ ದೇಶಕ್ಕಾಗಿ ಅಪಾರವಾಗಿ ಕೊಡುಗೆಯನ್ನು ನೀಡಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಯ ಸುಳ್ಳು ಆರೋಪಗಳಿಂದ ಅವರಿಗೆ ನಿಜವಾಗಿಯೂ ಸಲ್ಲಬೇಕಾಗದ ಗೌರವಗಳಿಂದ ವಂಚಿತರಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಮುಂತಾದವರ ಅನೇಕರ ಪಟ್ಟಿಯಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರೂ ಸೇರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ದೇಶದ ಬಗ್ಗೆ ಅವರಿಗಿದ್ದ ದೂರದೃಷ್ಟಿಯಿಂದಾಗಿ ಅವರು ಕಟ್ಟಿದ ಸಂಸ್ಥೆ ಅವರ ನಿಧನವಾಗಿ 8 ದಶಕಗಳ ನಂತರವೂ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು 2025 ರಲ್ಲಿ… Read More ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ

ಪ್ರಪಂಚದಲ್ಲಿ ಹೆಣ್ಣನ್ನು ಪರಮಪೂಜ್ಯಳೆಂದು ಗೌರವಿಸುವ  ಯಾವುದಾದರೂ ದೇಶದಲ್ಲಿ ಅದು ಖಂಡಿತವಾಗಿಯೂ ನಮ್ಮ ಭಾರತದೇಶ ಎಂದು ಹೆಮ್ಮೆಯಾಗಿ ಹೇಳಬಹುದು. ಅದಕ್ಕಾಗಿಯೇ ನಮ್ಮ ಪೂರ್ವಜರು ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ |  ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ || ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಅದೇ ರೀತಿ ಎಲ್ಲಿ  ಸ್ತ್ರೀಯರನ್ನು ದೂಷಣೆ ಮಾಡುತ್ತರೋ ಅಲ್ಲಿ ಸಮಾಜವು ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಿಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿ… Read More ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ

ವಿಜಯನಗರದ ಶ್ರೀ ಕೃಷ್ಣದೇವರಾಯ

ವಿಜಯನರದ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಪಚ್ಚೆ, ಹವಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುವಂತಹ ಸುವರ್ಣಯುಗವನ್ನು ಸೃಷ್ಟಿಸಿದ್ದಂತಹ, ಯುರೋಪ್ ಮತ್ತು ಏಷ್ಯಾದ ಶ್ರೇಷ್ಠ ಚಕ್ರವರ್ತಿಗಳೊಂದಿಗೆ  ಸರಿ ಸಾಟಿಯಾಗಿ ಸ್ಥಾನ ಪಡೆದ ಭಾರತದ ಹಿಂದೂ ಹೃದಯ ಸಾಮ್ರಾಟ ಶ್ರೀ ಕೃಷ್ಣದೇವರಾಯರ ಜಯಂತಿಯಂದು ಅವರ ಯಶೋಗಾಥೆ ಇದೋ ನಿಮಗಾಗಿ.… Read More ವಿಜಯನಗರದ ಶ್ರೀ ಕೃಷ್ಣದೇವರಾಯ

ಸಾವಿತ್ರಿಬಾಯಿ ಫುಲೆ

ಅದು 19ನೇ ಶತಮಾನ. ನಮ್ಮ ದೇಶದಲ್ಲಿ ಅಸ್ಪೃಷ್ಯತೆ, ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿಯ ಜೊತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣವೆಂಬುದೇ ಗಗನ ಕುಸುಮವೆನಿಸಿದ್ದ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ತಮ್ಮ ಸತ್ಯಶೋಧಕ ಚಳವಳಿಯ ಮೂಲಕ ಮಹಿಳಾ ಸಾಮಾಜಿಕ ಪಿಡುಗುಗಳ ವಿರುದ್ಧ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಆರಂಭಿಸಿ ಮಹಿಳಾ ಶಿಕ್ಷಣದ ಜೊತೆಗೆ ಮಹಿಳಾ ಸಬಲಿಕರಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ, ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದೇ ಹೆಸರುವಾಸಿಯಾಗಿದ್ದ, ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ… Read More ಸಾವಿತ್ರಿಬಾಯಿ ಫುಲೆ

ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಗಳಿಗೆ ಹೋಗುವ  ಆಬಾವೃದ್ದರಾದಿಯಾದ ಸ್ವಯಂಸೇವಕರಿಗೆ  ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..  ಹಾಡು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಈ ಹಾಡಿನ ಪಲ್ಲವಿ ಮತ್ತು ಚರಣಗಳಲ್ಲಿ ಬರುವ ಪ್ರತಿಯೊಂದು ಪದವೂ ಸ್ವಯಂಸೇವಕನ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿರುವುದಕ್ಕೆ ನನ್ನಂತಹ ಕೋಟ್ಯಾಂತರ ಸ್ವಯಂಸೇವಕರೇ ಸಾಕ್ಷಿಯಾಗಿದೆ. ಹಾಗಾಗಿ, ವಯಕ್ತಿಕವಾಗಿ ನನಗಂತೂ ಪ್ರತೀ ಬಾರಿ ಈ ಹಾಡು ಹಾಡುವಾಗಲಾಗಲೀ ಇಲ್ಲವೇ ಕೇಳುವಾಗಲೀ ಮೈ ರೋಮಾಂಚನ ಗೊಳ್ಳುತ್ತದೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ? ಎಂದು ನೀವೆಲ್ಲ ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ… Read More ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ಅವಿತಿಟ್ಟ ಇತಿಹಾಸ  

ಕಳೆದ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಲೇಖಕರಾದ ಶ್ರೀ ಪ್ರವೀಣ್ ಮಾವಿನಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿ ಈ ಇಬ್ಬರು ಲೇಖಕರು ಬರೆದಿರುವ ಅವಿತಿಟ್ಟ ಅಂಬೇಡ್ಕರ್ ಎಂಬ ಕೃತಿ ಖ್ಯಾತ ರಂಗಕರ್ಮಿಗಳಾದ ಶ್ರೀ ಪ್ರಕಾಶ್ ಬೆಳವಾಡಿ ಶ್ರೀ ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳದ ಶ್ರೀ ರಘುನಂದನ್ ಭಟ್ ಮತ್ತು ರಾಜ್ಯ ವಕೀಲರ ಪರಿಷತ್ತಿನ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಕುಮಾರ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಆಯಿತು. ಈ ಪುಸ್ತಕ ಬಿಡುಗಡೆಯ ಕುರಿತಂತೆ ನಾಡಿನ ಬಹುತೇಕ ದೃಶ್ಯ ಮತ್ತು… Read More ಅವಿತಿಟ್ಟ ಇತಿಹಾಸ  

ಸ್ವದೇಶಿ ದಿನ

ವಿಜ್ಞಾನಿಯಾಗಿ ಕೈ ತುಂಬಾ ಸಂಪಾದಿಸುತ್ತಿದ್ದ, ಸ್ವಾಮೀ ವಿವೇಕಾನಂದ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಮುಂತಾದವರಿಂದ ಪ್ರೇರಿತರಾಗಿ ದೇಶ, ಧರ್ಮ, ಸಂಸ್ಕಾರ ಮತ್ತು ಸನಾತನ ಸಂಸ್ಕೃತಿ ಅನುಗುಣವಾಗಿ ದೇಸೀ ಚಿಂತನೆ, ಸ್ವದೇಶೀ ವಸ್ತುಗಳ ಜಾಗೃತಿ ಮೂಡಿಸುವ ಸಲುವಾಗಿ ಸ್ವದೇಶೀ ಜಾಗರಣ ಮಂಚ್ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಿಂಹಸ್ವಪ್ನವಾಗಿದ್ದ ಶ್ರೀ ರಾಜೀವ್ ದೀಕ್ಷಿತ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ಸ್ವದೇಶಿ ದಿನ