ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ಸಿವಿಲ್ ಇಂಜೀನಿಯರಿಂಗ್ ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಅಧೂತ್ ಮೋಹಿತ್ ಎಂಬುವರ ಲೇಖನದ ಭಾವಾರ್ಥವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಬ್ರಾಹ್ಮಣನಲ್ಲ, ನಾನು ಮರಾಠಿಗ. ಆದರೂ ಕಳೆದ ಕೆಲವು ವರ್ಷಗಳಿಂದ ನನ್ನ ಅವಲೋಕನಗಳನ್ನು ಆಧರಿಸಿ ಇದಕ್ಕೆ ಸೂಕ್ತವಾದ ಉತ್ತರವನ್ನು ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಇಂದಿನ ಭಾರತದಲ್ಲಿ ಬ್ರಾಹ್ಮಣನಾಗಿರುವುದು ಎಂದರೆ 1930ರ ಜರ್ಮನಿಯಲ್ಲಿ ಯಹೂದಿಗಳಿದ್ದಂತೆ. ಜರ್ಮನಿಯ ಜನಸಂಖ್ಯೆಗೆ ಹೋಲಿಸಿದರೆ, ಯಹೂದಿಗಳ ಶೇಕಡಾವಾರು ಸಂಖ್ಯೆ ಬಹಳಷ್ಟು ಕಡಿಮೆ ಇದ್ದರೂ, ಜರ್ಮನ್ನರಿಗೆ ತಮ್ಮೆಲ್ಲಾ ಸಮಸ್ಯೆಗಳಿರೂ ಯಹೂದಿಗಳೇ ಕಾರಣರು ಎಂಬ ಭಾವನೆಯಾಗಿತ್ತು.… Read More ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಹಿಂದೆಲ್ಲಾ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವುದಕ್ಕೆ ನಡಿಗೆಯೇ ಮೂಲವಾಗಿದ್ದು ನಂತರದ ದಿನಗಳಲ್ಲಿ ಎತ್ತಿನ ಗಾಡಿಗಳು ಜನರನ್ನು ಮತ್ತು ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದರು. ಇನ್ನು ಕೆಲವರು ಸೈಕಲ್ ಮುಖಾಂತರ ಒಂದಿಬ್ಬರು ಪ್ರಯಾಣಿಸುತ್ತಿದ್ದಾಗ ಒಂದಕ್ಕಿಂತಲು ಹೆಚ್ಚಿನ ಜನರನ್ನು ಆರಾಮದಾಯಕವಾಗಿ ಪ್ರಯಾಣಿಸುವ ಸಲುವಾಗಿ ಕುದುರೇ ಗಾಡಿಗಳನ್ನು ಬಳಸಲು ಅರಂಭಿಸಿದರು ಇವು ಜಟಕಾಗಾಡಿಗಳು, ಟಾಂಗ, ಜಟ್ಕಾ (ಉರ್ದು ಭಾಷೆಯಿಂದ ಬಂದಿರುವ ಪದ) ಎಂದೇ ನಾಡಿನಾದ್ಯಂತ ಪ್ರಖ್ಯಾತವಾಯಿತು. ಎತ್ತಿನಗಾಡಿ ಮತ್ತು ಕುದುರೇ ಗಾಡಿಗಳನ್ನು ಸಂಭಾಳಿಸುವುದು ಬಹಳ ತ್ರಾಸದಾಯಕ ಮತ್ತು ಪ್ರಾಣಿಗಳಿಗೇಕೆ ತೊಂದರೆ ಕೊಡುವುದು… Read More ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಕವಲೇ ದುರ್ಗ

ಶಿವಮೊಗ್ಗ ಹೇಳಿ ಕೇಳಿ ಮಲೆನಾಡಿನ ಪ್ರದೇಶ ವರ್ಷದ 365 ದಿನಗಳು ಹಚ್ಚ ಹಸಿರಾಗಿರುವಂತಹ ಸುಂದರ ಪ್ರಕೃತಿಯ ತಾಣ. ಶಿವಮೊಗ್ಗದಿಂದ ಸುಮಾರು 80 ಕಿಮೀ ಮತ್ತು ತೀರ್ಥಹಳ್ಳಿಯಿ೦ದ ಸುಮಾರು 18 ಕಿ.ಮಿ ದೂರದಲ್ಲಿರುವ ಸುಂದರ ಪ್ರಕೃತಿ ತಾಣ ಮತ್ತು ಐತಿಹಾಸಿಕ ಪ್ರದೇಶವೇ ಕವಲೇ ದುರ್ಗ. ತೀರ್ಥಹಳ್ಳಿಯಿಂದ ಆಗುಂಬೆಯತ್ತ ಹೋಗುವ ಹಾದಿಯಲ್ಲಿ ಸುಮಾರು ಆರು ಕಿ.ಮೀ ದಲ್ಲಿ ಸಿಗುವ ಬಿಳ್ ಕೊಪ್ಪ ಎನ್ನುವ ಸ್ಥಳದಿಂದ ಬಲಕ್ಕೆ ತಿರುಗಿ ಸುಮಾರು 10 ಕಿ.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿದರೆ ಕವಲೇ ದುರ್ಗದ ಬುಡವನ್ನು… Read More ಕವಲೇ ದುರ್ಗ

ಕುಂಭಲ್ ಘಡ್ ಭಾರತದ ಮಹಾ ಗೋಡೆ

ವಿಶ್ವದ ಅತಿ ಉದ್ದದ ಗೋಡೆ ಎಂದ ತಕ್ಷಣ ಥಟ್ ಅಂತಾ ನೆನಪಾಗೋದೇ, ಚೀನಾ ದೇಶದ ಮಹಾಗೋಡೆ. ಆದರೇ, ಅದೇ ರೀತಿಯಲ್ಲಿರುವ ಮತ್ತೊಂದು ಮಹಾನ್ ಗೋಡೆ ಚೀನಾ ಗೋಡೆಗಿಂತಲೂ ಕಡಿಮೆ ಸಮಯದಲ್ಲಿ ನಿರ್ಮಾಣವಾದ, ಇಂದಿಗೂ ಅತ್ಯಂತ ಗಟ್ಟಿ ಮುಟ್ಟಾಗಿ, ವೈಭವೋಪೇತವಾಗಿ ಮತ್ತು ವಾಸ್ತು ಶಿಲ್ಪದಲ್ಲಿ ಚೀನಾ ಗೋಡೆಗೂ ಸಡ್ಡು ಹೊಡೆಯಬಲ್ಲಂತಹ ಮತ್ತೊಂದು ಉದ್ದನೆಯ ಗೋಡೆ ನಮ್ಮ ದೇಶದಲ್ಲಿ ಎನ್ನುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಹೇಳೀ ಕೇಳಿ ರಾಜಸ್ಥಾನ ಮರುಭೂಮಿ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿರುವ, ಹೆಚ್ಚು ಜನಸಂದಣಿ ಇಲ್ಲದ… Read More ಕುಂಭಲ್ ಘಡ್ ಭಾರತದ ಮಹಾ ಗೋಡೆ

ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದ್ದು ಈಜಿಪ್ಟ್ ದೇಶದಲ್ಲಿದೆ. ಇದು ಸುಮಾರು 162 ಕಿಮೀ ಉದ್ದವಿದ್ದು ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ 300 ಮೀ ಇದೆ. ಈ ಕಾಲುವೆ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳಿಗೆ ಪ್ರಮುಖ ಜಲಮಾರ್ಗವಾಗಿದೆ. ಇದು ಇಲ್ಲದಿದ್ದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರ ಸುತ್ತಿ… Read More ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಇಕ್ಕೇರಿಯ ಅಘೋರೇಶ್ವರ ರಥೋತ್ಸವ

ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 6 ಕಿಮೀ ದೂರದಲ್ಲಿರುವ ಪಟ್ಟಣವಾಗಿದೆ. 1499-1763ರ ನಡುವೆ ಈ ಪ್ರದೇಶವನ್ನು ಆಳಿದ ಕೆಳದಿಯ ನಾಯಕರ ರಾಜಧಾನಿಯಾಗಿತ್ತು. ಇಲ್ಲಿರುವ ಅಘೋರೇಶ್ವರ ದೇವಸ್ಥಾನ ಬಹಳ ಪ್ರಖ್ಯಾತವಾಗಿದ್ದು, ಇದರ ಕುರಿತಾಗಿ ಅನೇಕ ದಂತ ದಂತಕಥೆಗಳಿವೆ. ಚೌಡೇಗೌಡ ಮತ್ತು ಭಧ್ರೇ ಗೌಡ ಎಂಬ ಇಬ್ಬರು ಸಹೋದರರು ಅದೊಮ್ಮೆ ತಮ್ಮ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ, ಅವರ ಹಸುವೊಂದು ಅಲ್ಲಿದ್ದ ಹುತ್ತದ ಮೇಲೆ ತಂತಾನೇ ಹಾಲನ್ನು ಸುರಿಸುತ್ತಿದ್ದದ್ದನು ಗಮನಿಸಿ ಆ ಹುತ್ತವನ್ನು ಅಗೆದಾಗ ಅಲ್ಲೊಂದು ಲಿಂಗವನ್ನು ಕಂಡು ಭಕ್ತಿಪೂರ್ವಕವಾಗಿ… Read More ಇಕ್ಕೇರಿಯ ಅಘೋರೇಶ್ವರ ರಥೋತ್ಸವ

ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಗುರು ವಿದ್ಯಾರಣ್ಯರು ತಮ್ಮ ಪಾಂಡಿತ್ಯವನ್ನೆಲ್ಲಾ ಧಾರೆ ಎರೆದು ಮತ್ತು ಅಷ್ಟೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು 3600 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ವೈಭವದಿಂದ ಮೆರೆಯಬೇಕು ಎಂದು ಬಯಸಿದ್ದರೂ, ವಿಧಿಯಾಟದ ಮುಂದೆ ಅವರ ಯೋಜನೆಗಳೆಲ್ಲವೂ ತಲೆಕೆಳಗಾದ ಘನ ಘೋರ ಇತಿಹಾಸ ಇದೋ ನಿಮಗಾಗಿ… Read More ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ದುರ್ಗಾವಸತಿಯ ಬಡಾವಣೆಗಳನ್ನು ನಿಶ್ಚಯಿಸಿದಾಗ ಅದರ ವಿಸ್ತೀರ್ಣವನ್ನು ನೋಡಿಯೇ ತಲೆ ತಿರುರುಗುವ ಹಾಗಿತ್ತು. ನಂಜಪ್ಪ ವೃತ್ತದಿಂದ ಹಿಡಿದು ವಿದ್ಯಾರಣ್ಯಪುರದ ಮುಖ್ಯರಸ್ತೆಯ ಸಂಪೂರ್ಣ ಬಲಭಾಗ ಬಿಇಎಲ್, ಹೆಚ್.ಎಂ.ಟಿ, ಐಇಸಿಹೆಚ್ ಬಡಾವಣೆ, ಜ್ನಾನೇಶ್ವರಿ ಬಡಾವಣೆ, ವೆಂಕಟಸ್ವಾಮಪ್ಪ ಬಡಾವಣೆ, ಬಸವಸಮಿತಿ, ನರಸೀಪುರ, ದುರ್ಗಾ ಬಡಾವಣೆ, ಆಂಜನೇಯಸ್ವಾಮಿ ಬಡಾವಣೆ ಉಫ್ ಹೇಳುವುದಿರಲಿ ನೆನೆಸಿಕೊಂಡರೇ ಸಾಕು ಮೈ ಜುಮ್ಮೆನೆಸುವಷ್ಟು ವಿಸ್ತೀರ್ಣ ಹೊಂದಿದ ಪ್ರದೇಶಗಳಿಂದ ಕೂಡಿತ್ತು. ಬೈಠಕ್ಕಿಗೆ ಬಂದ ಕಾರ್ಯಕರ್ತರ ಸಂಖ್ಯೆ ನೋಡಿದಾಗ, ಇದೇನು ಸಮಸ್ಯೆಯಾಗದು ಒಂದೆರಡು… Read More ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳ ಜೊತೆಗೆ ರುಚಿಕರವಾದ ಊಟವನ್ನು ಜನಸಾಮಾನ್ಯರಿಗೂ ಕೈ ಗೆಟುಕುವ ಬೆಲೆಯಲ್ಲಿ ಉಣಬಡಿಸುತ್ತಿದ್ದಂತಹ ಗತ ವೈಭವದ ಬೃಂದಾವನ್ ಹೋಟೆಲ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್