ಪಂಡಿತ ಸುಧಾಕರ ಚತುರ್ವೇದಿ

ಸಾಧಾರಣವಾಗಿ ನಾವೆಲ್ಲರೂ ಪಂಡಿತ್, ದ್ವಿವೇದಿ, ತ್ರಿವೇದಿ ಮತ್ತು ಚತುರ್ವೇದಿ ಎನ್ನುವ ಉಪನಾಮಗಳನ್ನು ಕೇಳಿರುತ್ತೇವೆ.  ಅದೆಲ್ಲವೂ ಅವರ ಕುಟುಂಬದ  ಎಷ್ಟೋ ತಲೆಮಾರಿನವರೊಬ್ಬರು ಪಂಡಿತರಾಗಿದ್ದರಂತೆ  ಅಥವಾ ಅವರು ಎರಡು, ಮೂರು ಅಥವಾ ನಾಲ್ಕುವೇದಗಳನ್ನೂ ಕರಗತ ಮಾಡಿಕೊಂಡಿದ್ದರಿಂದ ಅವರಿಗೆ ಆ ರೀತಿಯ ಹೆಸರು ಬಂದಿರುತ್ತದೆ. ಸದ್ಯಕ್ಕೆ  ಆ ವೇದದ ಗಂಧಗಾಳಿಯೂ ಗೊತ್ತಿಲ್ಲದೇ ಇದ್ದರೂ ಅವರ ಹೆಸರಿನೊಂದಿಗೆ ಸೇರಿಕೊಂಡಿರುತ್ತರೆ. ಆದರೆ ಇಲ್ಲೊಬ್ಬರು ಈ ಎಲ್ಲವನ್ನೂ ಅಧಿಕಾರಯುತವಾಗಿ ಕರಗತ ಮಾಡಿಕೊಂಡು ಚತುರ್ವೇದಿ ಎಂಬ ಬಿರುದನ್ನು ಗಳಿಸಿದ್ದ ಶತಾಯುಷಿಗಳಾಗಿದ್ದರೂ ಕನ್ನಡಿಗರಿಗೆ ಎಲೆಮರೆಕಾಯಿಯಾಗಿಯೇ ಉಳಿದು ಹೋದ ಪಂಡಿತ… Read More ಪಂಡಿತ ಸುಧಾಕರ ಚತುರ್ವೇದಿ

ಸ್ಯಾಕ್ಸೊಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಶುಭಕಾರ್ಯಗಳಲ್ಲಿ ಮಂಗಳವಾದ್ಯದ್ದೇ ಮುಂದಾಳತ್ವ. ಮಂಗಳ ವಾದ್ಯಗಳಿಲ್ಲದೇ ದೇವರ ಉತ್ಸವಗಳೇ ಹೊರೊಡೋದಿಲ್ಲ. ಹಾಗಾಗಿ ನಾದಸ್ವರ ಮತ್ತು ಭಾಜಾಭಜಂತ್ರಿಗಳನ್ನು ಕರ್ನಾಟಕದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಕಾಣಬಹುದಾಗಿದೆ. ಇತ್ತೀಚೆಗೆ ದೇಸೀ ನಾದಸ್ವರಗಳ ಜಾಗದಲ್ಲಿ ನಿಧಾನವಾಗಿ ಪಾಶ್ಚಾತ್ಯ ವಾದನವಾದ ಸ್ಯಾಕ್ಸಾಫೋನ್ ಆವರಿಸಿಕೊಳ್ಳುತ್ತಿದೆ. ಹಾಗೆ ದೇಸೀ ಕರ್ನಾಟಕ ಸಂಗೀತ ಪದ್ಧತಿಗೆ ಪಾಶ್ಚ್ಯತ್ಯ ವಾದನವನ್ನು ಸುಲಲಿತವಾಗಿ ಅಳವಡಿಸಿಕೊಂಡು ಅತ್ಯಂತ ಸುಶ್ರಾವ್ಯವಾಗಿ ಸ್ಯಾಕ್ಸೋಫೋನ್ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಕರಾವಳಿ ಮೂಲದ ಕದ್ರಿ ಗೋಪಾಲನಾಥ್ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು… Read More ಸ್ಯಾಕ್ಸೊಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್

ದ್ವಾರಕೀಶ್

ದ್ವಾರಕೀಶ್ ಅವರು ಇನ್ನಿಲ್ಲಾ ಎಂಬ ಸುದ್ದಿ ಅದೆಷ್ಟೋ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾದಾಗ, ಅಯ್ಯೋ ನಾನು ಇನ್ನೂ ಗಟ್ಟಿ ಮುಟ್ಟಾಗಿಯೇ ಬದುಕಿದ್ದೇನೆ ಎಂದು ಎಲ್ಲರ ಮುಂದೇ ಹೇಳುತ್ತಿದ್ದಂತಹ ಕರ್ನಾಟಕದ ಕುಳ್ಳಾ ದ್ವಾರಕೀಶ್ ಅವರು ಇಂದು ಮಂಗಳವಾರ, ಏಪ್ರಿಲ್ 16, 2024 ರಂದು ತಮ್ಮ 81ನೇ ವಯಸ್ಸಿನಲ್ಲಿ ಈ ಲೋಕಕ್ಕೆ ಅಂತಿಮ ವಿದಾಯವನ್ನು ಹೇಳುವ ಮೂಲಕ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಬಡವಾಗಿಸಿದ್ದಾರೆ ಎಂದರೂ ತಪ್ಪಾಗದು ಅಲ್ವೇ?… Read More ದ್ವಾರಕೀಶ್

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)

ಮೂಲತಃ ಕೇರಳದ ಶ್ರೋತ್ರೀಯರು, ಜ್ಯೋತಿಷಿಗಳು ಹಾಗೂ ವೇದಪಾರಂಗತರಾಗಿದ್ದ ಶ್ರೀ ಅನಂತ ಪದ್ಮನಾಭ ನಂಬೂದರಿ ಮತ್ತು ಪದ್ಮಾಂಬಳ್ ಎಂಬ ದಂಪತಿಗಳಿಗೆ ಬಹಳ ದಿನಗಳ ಕಾಲ ಮಕ್ಕಳಾಗದೇ ನಂತರದಲ್ಲಿ ಭಗವಂತನ ಅನುಗ್ರಹದಿಂದ ಬಾಲಕನೊಬ್ಬನ ಜನನವಾಗಿ ಆತನಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡುತ್ತಾರೆ. ದುರಾದೃಷ್ಟವಷಾತ್ ಆ ಬಾಲಕ ಸುಮಾರು 10-12 ವರ್ಷಗಳ ಕಾಲ ಅಸ್ವಸ್ಥತೆಯಿಂದಲೇ ನರಳುತ್ತಾ ಮಾತನಾಡಲಾಗದೇ ನಡೆಯಲೂ ಅಗದೇ ಎಲ್ಲಾ ಕಡೆಯಲ್ಲೂ ಆತನನ್ನು ತಾಯಿಯೇ ಎತ್ತು ಕೊಂಡು ತಿರುಗಾಡ ಬೇಕಾದಂತಹ ಪರಿಸ್ಥಿತಿ ಇರುತ್ತದೆ. ಆಗ ಆ ವೃದ್ಧ ದಂಪತಿಗಳಿಬ್ಬರೂ ಕೊಲ್ಲೂರಿನ… Read More ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)

ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

ಎಂಭತ್ತರ ದಶಕದಲ್ಲಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಕಲಾಕ್ಷೇತ್ರದಲ್ಲಿ ಪ್ರತೀ ವರ್ಷ ಸಾಂಸ್ಕೃತಿಕ ಚಟುವಟಿಕೆಗಳ ಬೇಸಿಗೆ ಮೇಳವನ್ನು 10-12 ದಿನಗಳ ಕಾಲ ಆಯೋಜಿಸಿ ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದಗೀತೆಗಳ ಜೊತೆಗೆ ಚಲನಚಿತ್ರ ಆರ್ಕೇಷ್ಟ್ರಾಗಳನ್ನು ಏರ್ಪಡಿಸುತ್ತಿದ್ದರು. ಆ ರೀತಿಯ ಬೇಸಿಗೆ ಮೇಳದಲ್ಲಿ ಅದೊಮ್ಮೆ ವಯಸ್ಸಾದ ಅಜಾನುಬಾಹು ವ್ಯಕ್ತಿ ತಲೆಗೆ ರುಮಾಲು ಕಟ್ಟಿಕೊಂಡು ಅಕ್ಕ ಪಕ್ಕದಲ್ಲಿ ಹಾರ್ಮೋನಿಯಂ ಮತ್ತು ತಬಲಗಳ ಪಕ್ಕವಾದ್ಯದೊಂದಿಗೆ ತಮ್ಮ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಹಾಡಲು ಶುರು ಮಾಡುತ್ತಿದ್ದಂತೆಯೇ ಗಜಿಬಿಜಿ ಎನ್ನುತ್ತಿದ್ದ… Read More ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ಪ್ರತೀ ವರ್ಷ ಸೆಪ್ಟಂಬರ್ 15ರಂದು ಭಾರತದಲ್ಲಿ ಇಂಜಿನೀಯರ್ಸ್ ಡೇ ಎಂಬ ಆಚರಣೆಯ ಹಿಂದಿರುವ ಆ ಇಂಜಿನೀಯರ್ ಯಾರು? ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಎಂತಹದ್ದು ಮತ್ತು ಈ ನಾಡಿಗೆ ಅವರ ಸಾಧನೆಗಳು ಏನು? ಎಂಬೆಲ್ಲದರ ಕುರಿತಾದ ವಿವರಗಳು ಇದೋ ನಿಮಗಾಗಿ… Read More ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ರಾಯ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರ ಕೆರೆ

ಬೆಂಗಳೂರಿನಿಂದ ಕೋಲಾರದ ಕಡೆಗೆ ಹೋಗುವಾಗ ಕೃಷ್ಣರಾಜಪುರ ದಾಟಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ವಿಶಾಲವಾದ ಕೆರೆಯನ್ನು ಸೀಳಿಕೊಂಡೇ ನಮ್ಮ ವಾಹನಗಳು ಸಂಚರಿಸ ಬೇಕಾಗುತ್ತದೆ. ಎರಡೂ ಬದಿಯಲ್ಲೂ ಕಣ್ಣು ಹಾಯಿಸಿದಷ್ಟು ದೂರವೂ ಆಗಾಧವಾದ ನೀರು ನಮಗೆ ಕಾಣ ಸಿಗುತ್ತದೆ. ಈ ಕೆರೆಯ ಮಧ್ಯದಲ್ಲಿ ಅಲ್ಲಲ್ಲಿ ಪಕ್ಷಿಗಳ ದಂಡು ನಮ್ಮ ಹೃನ್ಮಗಳನ್ನು ತಣಿಸುತ್ತವೆ. ಆದರೆ ಸುಮಾರು ನೂರಾ ಮೂವತ್ತು ವರ್ಷಗಳಲ್ಲಿ ಈ ಪ್ರದೇಶ ಹೀಗಿರಲಿಲ್ಲ. ಬರಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಪರದಾಡಬೇಕಾಗಿತ್ತು ಎಂದರೆ ಆಶ್ಚರ್ಯ ಪಡಬೇಕು. ಇಂತಹ ಅದ್ಭುತವಾದ ಕೆರೆಯ ನಿರ್ಮಾಣದ… Read More ರಾಯ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರ ಕೆರೆ

ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್

ಪುನೀತ್ ರಾಜ್‍ಕುಮಾರ್ ನಮ್ಮೆಲ್ಲರನ್ನೂ ಅಗಲಿದ ಸಂಧರ್ಭದಲ್ಲಿ ಅವರೊಂದಿಗೆ ಆಟವಾಡಿದ್ದ ಸವಿ ನೆನಪನ್ನು‌ ವ್ಯಕ್ತ ಪಡಿಸಿದ್ದನ್ನು ಅವರ ಸಂಸ್ಮರಣಾ ದಿನದಂದು ಮತ್ತೊಮ್ಮೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.… Read More ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್

ರಂಗಕರ್ಮಿ ಆರ್. ಎಸ್. ರಾಜಾರಾಂ

ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ,‌ ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ‌ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ರಂಗಕರ್ಮಿ ಆರ್. ಎಸ್. ರಾಜಾರಾಂ