ಎಂ. ಚಿದಾನಂದಮೂರ್ತಿ

ಅದು ಎಂಭತ್ತರ ದಶಕ. ಬೆಂಗಳೂರಿನ ದಂಡು ಪ್ರದೇಶದ ಒಂದು ಸಿನಿಮಾ ಮಂದಿರದಲ್ಲಿ ಟಿಕೆಟ್ಟಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ನಡು ವಯಸ್ಸಿನ ಕುಳ್ಳಗಿನ ಕನ್ನಡದ ಪ್ರಾಧ್ಯಾಪಕರೊಬ್ಬರು ನಾಲ್ಕು ಟಿಕೆಟ್ ಕೊಡಿ ಎಂದು ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಕೇಳಿದಾಗ, ಇದನ್ನು ಕೇಳಿದ ಕೌಂಟರಿನಲ್ಲಿದ್ದ ವ್ಯಕ್ತಿ ಹಾವು ಕಡಿದಂತಾಗಿ ನಿಮಗೆ ಇಂಗ್ಲಿಷ್ ಬರುವುದಿಲ್ಲವೇ? ಇಂಗ್ಲೀಷಿನಲ್ಲಿ ಮಾತನಾಡಿ ಎಂದು ಒತ್ತಾಯ ಮಾಡಿದ. ಆದರೆ ಆ ಕನ್ನಡದ ಪ್ರಾಧ್ಯಾಪಕರು ನನಗೆ ಇಂಗ್ಲೀಷ್ ಬರುತ್ತದೆ ಯಾದರೂ ಕರ್ನಾಟಕದಲ್ಲಿ ಕನ್ನಡಿಗನೇ ಸ್ವಾರ್ವಭೌಮ ಇಲ್ಲಿ ಕನ್ನಡಕ್ಕೇ ಪ್ರಥಮ ಪ್ರಾಶಸ್ತ್ಯ… Read More ಎಂ. ಚಿದಾನಂದಮೂರ್ತಿ

ಹೆಚ್ ನರಸಿಂಹಯ್ಯ, ಶಿಕ್ಷಣ ತಜ್ಞರು

ಅಂದಿನ ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ  ಮತ್ತು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವ ಗೌರಿಬಿದನೂರು ತಾಲ್ಲೂಕಿನ ಹೊಸೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವ್ಯಕ್ತಿ, ತಮ್ಮೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಸ ಮುಗಿಸಿ, ನಂತರ ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಂದುವರೆಸಿ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೇರ್ಣರಾಗಿ, ಅಂದಿನ ಕಾಲದಲ್ಲಿಯೇ ದೂರದ ಅಮೇರಿಕಾದ  ಓಹಿಯೂ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದು  ಕೈತುಂಬ ಸಂಪಾದನೆ ಮಾಡಿಕೊಂದು ಸುಃಖ ಸಂಸಾರವನ್ನು ನಡೆಸಬಹುದಾಗಿದ್ದರೂ,… Read More ಹೆಚ್ ನರಸಿಂಹಯ್ಯ, ಶಿಕ್ಷಣ ತಜ್ಞರು

ಕೆ.ಎಸ್. ನಾರಾಯಣಾಚಾರ್ಯ

ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಲೋಕದಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಮತ್ತು ಮಾತನಾಡಬಲ್ಲಂತಹ ವ್ಯಕ್ತಿಗಳು ಇನ್ನೂ ನಮ್ಮೊಂದಿಗೆ ಇದ್ದವರು ಎಂದರೆ  ಆವರು ಕೆ. ಎಸ್. ನಾರಾಯಣಾಚಾರ್ಯರು ಎಂದರೆ ಅತಿಶಯೋಕ್ತಿಯೇನಲ್ಲ. ನಾರಾಯಣಚಾರ್ಯರು ಕೇವಲ ಕನ್ನಡಕ್ಕೇ ಸೀಮಿತವಾಗದೇ ಭಾರತೀಯ ಸಂಸ್ಕೃತಿಯ ಹಿರಿಯ ವಿದ್ವಾಂಸರು, ಲೇಖಕರು, ಧರ್ಮ ಪ್ರಚಾರಕರು ಮತ್ತು ಹೆಮ್ಮೆಯ ಪ್ರವಚನಕಾರರೂ ಹೌದು. ಬೆಂಗಳೂರು ಜಿಲ್ಲೆಯ ಕಾನಕನಹಳ್ಳಿ ಅಂದರೆ ಈಗಿನ ಕನಕಪುರದ ಶ್ರೀ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್ ಮತ್ತು ರಂಗನಾಯಕಮ್ಮ ದಂಪತಿಗಳಿಗೆ 1933ರ… Read More ಕೆ.ಎಸ್. ನಾರಾಯಣಾಚಾರ್ಯ

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹೇಮಾವತಿ ನದಿಯ ತಟದಲ್ಲಿರುವ ಗೊರೂರು ಎಂಬ ಗ್ರಾಮದಲ್ಲಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಲಕ್ಷಮ್ಮ ದಂಪತಿಗಳಿಗೆ 1904ರ ಜುಲೈ 4ರಂದು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸುತ್ತಾರೆ. ಓದಿನಲ್ಲಿ ಬಹಳ ಚುರುಕಾಗಿದ್ದ ರಾಮಸ್ವಾಮಿಗಳು ತಮ್ಮ ಹಳ್ಳಿಯಲ್ಲಿಯೇ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಉನ್ನತ ವ್ಯಾಸಂಗಕ್ಕಾಗಿ ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರಿಕೊಂಡು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗಾಂಧೀಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದ್ದಲ್ಲದೇ, ಗಾಂಧಿಯವರ ಪರಮ ಅನುಯಾಯಿಯಾಗಿ ಅವರ… Read More ಗೊರೂರು ರಾಮಸ್ವಾಮಿ ಅಯ್ಯಂಗಾರ್

ಶ್ರೀ ಕುದ್ಮುಲ್ ರಂಗರಾಯರು

ಬ್ರಿಟೀಷರು ಭಾರತೀಯರನ್ನು ಒಡೆದು ಆಳುವ ನಿಟ್ಟಿನಲ್ಲಿ ಬಿತ್ತಿಹೋದ ಜಾತಿ ಮತ್ತು ಸಾಮಾಜಿಕ ಅಸಮಾನತೆ ಎಂಬ ಕಳೆ ಈಗ ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಡೆದು ಹಾಕುವುದರಲ್ಲಿ ತಮ್ಮದೇನೂ ಕಿಂಚಿತ್ ಪಾತ್ರವಿರದಿದ್ದರೂ ತಮ್ಮ ಬಾಯಿ ಚಪಲ ಮತ್ತು ಸುತ್ತಮುತ್ತಲಿನ ವಂದಿಮಾಗಧರ ಚೆಪ್ಪಾಳೆಗಾಗಿ ದಲಿತರು, ಬಲಿತರು ಎಂಬ ವಿತಂಡವಾದವನ್ನು ಮಂಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿರುವವರೇ ಹೆಚ್ಚಾಗಿರುವಾಗ ಈ ಸಂದರ್ಭದಲ್ಲಿ ಸುಮಾರು ಸುಮಾರು 150 ವರ್ಷಗಳ ಹಿಂದೆಯೇ ದೀನ ದಲಿತರ ಸೇವೆಗಾಗಿಯೇ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದ… Read More ಶ್ರೀ ಕುದ್ಮುಲ್ ರಂಗರಾಯರು

ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಅನಕ್ಷರಸ್ಥ ಕುರಿ ಕಾಯುವ ವೃತ್ತಿಯನ್ನು ಮಾಡುವ 84 ವರ್ಷ ಕುರುಬ ಕಲ್ಮನೆ ಕಾಮೇಗೌಡ ಎಂಬ ಹೆಸರು ಬಹುಶಃ ಅವರ ಊರು ಅಥವಾ ಅವರ ತಾಲ್ಲೂಕಿನ ಹೊರತಾಗಿ ಹೊರಗಿನವರಿಗೆ ಹೆಚ್ಚಾಗಿ ಪರಿಚಯವೇ ಇರಲಿಲ್ಲ. ಆದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್  ನಲ್ಲಿ ಈ ವ್ಯಕ್ತಿಯ ಬಗ್ಗೆ  ಯಾವಾಗ ಮಾತನಾಡಿದರೋ ಆ ಕೂಡಲೇ ಅವರ ಹೆಸರು ದೇಶಾದ್ಯಂತ ಪರಿಚಿತವಾಗಿ ಗೂಗಲ್ಲಿನಲ್ಲಿ… Read More ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ಎಲ್.ಎಸ್.ಶೇಷಗಿರಿರಾವ್

ಆಗ ಎಪ್ಪತ್ತರ ದಶಕ. ಆಗ ತಾನೆ ಓದಲು ಬರೆಯಲು ಕಲಿತ ಸಮಯ. ಅಮ್ಮಾ ಮೊದಲು ಪ್ರಜಾವಾಣಿ ಪತ್ರಿಕೆಯ ದಪ್ಪಕ್ಷರದ ಹೆಡ್ ಲೈನ್ ಓದುವ ಅಭ್ಯಾಸ ಮಾಡಿಸಿದರು. ಸ್ವಲ್ಪ ಅಕ್ಷರಗಳನ್ನು ಜೋಡಿಸಿ ಓದುವುದನ್ನು ಕರಗತ ಮಾಡಿಕೊಳ್ಳುತ್ತಿದ್ದಂತೆಯೇ, ತಂದೆಯವರು ಕೈಗಿತ್ತ ಪುಸ್ತಕ ಭಂಡಾರವೇ ಭಾರತ ಭಾರತಿ ಪುಸ್ತಕ ಸಂಪದ. ಚಿಕ್ಕ ಚಿಕ್ಕದಾದ ಬಹಳ ಸರಳ ಭಾಷೆಯಲ್ಲಿದ್ದರೂ ಅಷ್ತೇ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ದೇಶಭಕ್ತರ ಕಥಾ ಪುಸ್ತಕಗಳು. ಆರಂಭದಲ್ಲಿ ವಾರಕ್ಕೊಂದು ಪುಸ್ತಕವನ್ನು ಓದಿ ಅದನ್ನು ತಂದೆಯವರ ಸಮ್ಮುಖದಲ್ಲಿ ಓದಿದ ಪುಸ್ತಕದ ಬಗ್ಗೆ ವಿಚಾರ… Read More ಎಲ್.ಎಸ್.ಶೇಷಗಿರಿರಾವ್

ಕಾದಂಬರಿಗಾರ್ತಿ ತ್ರಿವೇಣಿ

ಕನ್ನಡ ಚಿತ್ರರಂಗದವರು ಒಳ್ಳೆಯ ಚಿತ್ರ ತೆಗೆಯಲು ಕಥೆಗಳೇ ಇಲ್ಲಾ ಅಂತಾ ಹೇಳುವ ಸಮಯದಲ್ಲಿ ಮಲೆಯಾಳಂ ಚಿತ್ರವೂ ಸೇರಿದಂತೆ ಸುಮಾರು ಎಂಟರಿಂದ ಹತ್ತು ಜನಪ್ರಿಯ ಕನ್ನಡ ಚಿತ್ರಗಳು ಆಕೆಯ ಕಾದಂಬರಿಗಳನ್ನು ಆಧರಿಸಿದ್ದವು ಎಂದರೆ ಆಕೆಯ ಸಾಮರ್ಥ್ಯದ ಅರಿವಾಗುತ್ತದೆ. ಬದುಕಿದ್ದು ಕೇವಲ ಮೂವತ್ತೈದು ವರ್ಷಗಳಾದರೂ ಅದಕ್ಕಿಂತಲೂ ಹೆಚ್ಚಿನ ಸಾಹಿತ್ಯಗಳನ್ನು ರಚಿಸಿದ್ದಾಕೆ. ನಿಧನರಾಗಿ 58 ವರ್ಷಗಳೇ ಆಗಿದ್ದರೂ ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿರುವ ಶ್ರೀಮತಿ ಅನುಸೂಯ ಶಂಕರ್ ಅವರ ಬಗ್ಗೆ ನಾವಿಂದು ತಿಳಿದು ಕೊಳ್ಳೋಣ. ಬಹುಶಃ ಅನುಸೂಯ… Read More ಕಾದಂಬರಿಗಾರ್ತಿ ತ್ರಿವೇಣಿ

ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

1956ರಲ್ಲಿ ಹತ್ತಾರು ಕಡೆ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು  ಭಾಷಾವಾರು ಅಧಾರದ ಮೇಲೆ  ರಾಜ್ಯಗಳನ್ನು ವಿಂಗಡಿಸಿ ಮೈಸೂರು ರಾಜ್ಯವಾದರೂ ಕನ್ನಡಿಗರಿಗೆ ಸಿಗಬೇಕಾದ ಗೌರವಗಳು ಸಿಗದೇ ಇನ್ನೂ  ಪರಕೀಯನಾಗಿಯೇ ಇದ್ದ.  ಅದೂ ರಾಜಧಾನಿಯಾದ ಬೆಂಗಳುರಿನಲ್ಲಿಯೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ದೊರಕದಿದ್ದ ಸಂದರ್ಭದಲ್ಲಿ ಅನಕೃ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾದಾಗ ಅದರ ಮುಂದಾಳತ್ವವನ್ನು ವಹಿಸಿದ, ಕನ್ನಡ ಹೋರಾಟಕ್ಕೆ ಹೊಸ ಆಯಾಮ ನೀಡಿ, ಕನ್ನಡಿಗರ ಅಸ್ದಿತ್ವ ಮತ್ತು ಅಸ್ಮಿತಿಯನ್ನು ಎತ್ತಿ ಹಿಡಿಯಲು ಅವರನ್ನು ಒಗ್ಗೂಡಿಸಲು, ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು… Read More ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ