ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ… Read More ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ನ್ಯಾಯ ದೇವತೆಯೂ ಏಕಪಕ್ಷೀಯಳೇ?

ಕೆಲವು ಕ್ಷಣಗಳ ಹಿಂದೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಓದುತ್ತಿದ್ದಾಗ, ಇಂದು ಬೆಳಿಗ್ಗೆ, ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur Sharma) ಅವರನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೇ, ಪ್ರವಾದಿಗಳ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಅದೇಶಿಸಿರುವ ವಿಷಯ ನಿಜಕ್ಕೂ ಆಘಾತಕರಿ ಎನಿಸಿದೆ. ಭಾರತ ದೇಶದ ಪ್ರಜ್ಞಾವಂತನಾಗಿ ದೇಶದ ಸಂವಿಧಾನ, ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ… Read More ನ್ಯಾಯ ದೇವತೆಯೂ ಏಕಪಕ್ಷೀಯಳೇ?

ವಟ ಸಾವಿತ್ರಿ ವ್ರತ

ಪತಿವ್ರತೆ ಸಾವಿತ್ರಿಯು ಯಮಧರ್ಮರಾಯನಿಂದ ತನ್ನ ಪತಿ ಸತ್ಯವಾನನ ಆಯುಷ್ಯವನ್ನು ವೃದ್ಧಿ ಮಾಡಿದ ದಿನವಾದ ಜೇಷ್ಠ ಮಾಸದ ಹುಣ್ಣಿಮೆಯಂದು ವಟಸಾವಿತ್ರಿ ವ್ರತ ಎಂದು ಆಚರಿಸುವ ಸಂಪ್ರದಾಯವಿದ್ದು, ಆ ವ್ರತಾಚರಣೆ ಮತ್ತು ಅದರ ಫಲಾಫಲಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ವಟ ಸಾವಿತ್ರಿ ವ್ರತ

ಪತ್ರಿಕಾ ಧರ್ಮ

ಯಾವುದೇ ಕಾರ್ಯ ಅಥವಾ ಕಾರ್ಯಕ್ರಮವನ್ನು ನಡೆಸಿದ ನಂತರ ಅದರ ಫಲವನ್ನು ಯಾರು ಯಾರು ಅನುಭವಿಸಬಹುದು? ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಸಂಸ್ಕೃತ ಸುಭಾಷಿತದಲ್ಲಿ ಉಲ್ಲೇಖಿಸಿಲಾಗಿದೆ. ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ | ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ || ಯಾವುದೇ ಒಳ್ಳೆಯ ಕೆಲಸವೇ ಇರಲಿ ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಈ ನಾಲ್ಕೂ ಜನರೂ… Read More ಪತ್ರಿಕಾ ಧರ್ಮ

ಭಗವಾನ್ ಗೌತಮ ಬುದ್ಧ

ಗೌತಮ ಸಿದ್ಧಾರ್ಥ ಕೇವಲ ಸರ್ವ ಸಂಗ ಪರಿತ್ಯಾಗದಿಂದ ಬುದ್ಧನಾಗಲಿಲ್ಲ. ಬದಲಾಗಿ ಆತ ತಾನು ಕಂಡ ಕೊಂಡ ಬದುಕಿನ ಸತ್ಯ ದರ್ಶನದಿಂದ ಹೇಗೆ ಬುದ್ಧನಾಗಿ ಜಗದ್ವಿಖ್ಯಾತನಾದ ಎಂಬ ರೋಚಕತೆ ಇದೋ ನಿಮಗಾಗಿ … Read More ಭಗವಾನ್ ಗೌತಮ ಬುದ್ಧ

ಶ್ರೀ ಉಗ್ರ ನರಸಿಂಹ ಸ್ವಾಮಿಯ ಕೋಪ ಶಮನ ಮಾಡಿದ ಶ್ರೀ ಶರಭೇಶ್ವರ

ಅಸುರರ ರಾಜ ಹಿರಣ್ಯಾಕ್ಷ ಭೂಲೋಕ, ಅತಳ, ವಿತಳ, ಸುತಳ, ಮಾಹಾತಳ, ಸಚಾತಳ, ತಳಾತಳ, ಪಾತಾಳ ಲೋಕದಲ್ಲೆಲ್ಲಾ, ತನ್ನ ರಾಕ್ಷಸೀ ಕೃತ್ಯಗಳಿಂದ ಕಂಟಕ ಪ್ರಾಯನಾಗಿ ನಾನಾ ರೀತಿಯ ಉಪಟಳಗಳನ್ನು ಕೊಡುತ್ತಿದ್ದಾಗ ದೇವಾನು ದೇವತೆಗಳ ಕೋರಿಕೆಯಂತೆ ಭಗವಾನ್ ವಿಷ್ಣು ತನ್ನ ದಶಾವತರದ ಮೂರನೇ ರೂಪವಾದ ವರಾಹ ರೂಪದಲ್ಲಿ ಸಂಹರಿಸಿದಾಗ, ಅವನ ತಮ್ಮ ಹಿರಣ್ಯಕಶಿಪುವು, ಕೋಪೋದ್ರಕ್ತನಾಗಿ ವಿಷ್ಣುವಿನ ಪರಮ ವೈರಿಯಾಗಿ, ಋಷಿ ಮುನಿಗಳ ಯಜ್ಞಯಾಗಾದಿಗಳಿಗೆ ಮತ್ತು ಭೂಲೋಕ ವಾಸಿಗಳಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡಲು ಆರಂಭಿಸಿದ್ದಲ್ಲದೇ, ತನಗೆ ಸಾವೇ ಬಾರದಂತೆ ಅಮರನಾಗಬೇಕೆಂಬ… Read More ಶ್ರೀ ಉಗ್ರ ನರಸಿಂಹ ಸ್ವಾಮಿಯ ಕೋಪ ಶಮನ ಮಾಡಿದ ಶ್ರೀ ಶರಭೇಶ್ವರ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು. ಕೇರಳದ ಪೂರ್ಣಾ ನದಿ… Read More ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ… Read More ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು