ನಕ್ಸಲರು

1960ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ದೇಶಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ಹರಡ ಬೇಕೆಂಬ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ವಿವಿಧ ರೀತಿಯ ಯೋಜನೆ ಮಾಡುತ್ತಿರುವಾಗಲೇ ಅವರವರಲ್ಲಿಯೇ ಭಿನ್ನಾಭಿಪ್ರಾಯ ಮೂಡಿದ ಕಾರಣ ಕಮ್ಯೂನಿಷ್ಟ್ ಪಕ್ಷದವು ಎರಡು ಬಣಗಳಾಗಿ ಒಡೆದುಹೋಯಿತು. ಮೊದನೆಯ ಬಣ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ಶಕ್ತಿಯ ಮೂಲಕ ಅಧಿಕಾರಕ್ಕೆ ಬರಲು ಯೋಚಿಸಿದರೆ ಮತ್ತೊಂದು ಬಣಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿರದೇ ಗೆರಿಲ್ಲಾ ಮಾದರಿಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ದಂಗೆಯನ್ನು ಎಬ್ಬಿಸುವ ಮೂಲಕ ಶಕ್ತಿಯನ್ನು… Read More ನಕ್ಸಲರು

ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ

ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಆತ ದೇಶ ಕಾಯುವ ವೀರ ಯೋಧ. ತನ್ನ ಸಂಸಾರವನ್ನು ಇಲ್ಲಿ ಬಿಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿಯೇ ದೂರದ ಗಡಿಯಲ್ಲಿ ಚಳಿ ಮಳೆಯನ್ನು ಲೆಕ್ಕಿಸದೇ ತನ್ನ ಸೇವೆಯನ್ನು ಸಲ್ಲಿಸುತ್ತಾ ಕಾಲ ಕಾಲಕ್ಕೆ ತಾನು ದುಡಿಡಿದ್ದ ಹಣವನ್ನು ಕಳುಹಿಸುತ್ತಾ ಸಮಯ ಸಿಕ್ಕಾಗಲೆಲ್ಲಾ ಊರಿಗೆ ಬಂದು ಹೋಗುತ್ತಿರುತ್ತಾನೆ. ಇನ್ನು ಆತನ ಪತ್ನಿಯೂ ತಮ್ಮ ಮಕ್ಕಳಿಗೆ ಮನೆಯ ಯಜಮಾನರು ತಮ್ಮ ಜೊತೆ ಇಲ್ಲದಿರುವುದು ಗೊತ್ತೇ ಆಗದಂತೆ ಯಜಮಾನರು ಕಳುಹಿಸಿದ ಹಣದಲ್ಲಿಯೇ ಹಾಗೂ ಹೀಗೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸಾಕಿ ಸಲಹಿ… Read More ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಕೊರಗಜ್ಜ

ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಹೇಗೆ ನಾನಾ ದೇವರುಗಳ ತೀರ್ಥಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆಯೋ ಹಾಗೆಯೇ ಅಲ್ಲಿನ ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಅದನ್ನೇ ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಇಲ್ಲಿನ ಜನರು ಈ ಕೊರಗಜ್ಜನನ್ನು ಭಾರೀ ಶ್ರದ್ದಾ, ಭಕ್ತಿಗಳಿಂದ ಪೂಜಿಸುವುದಲ್ಲದೇ,… Read More ಕೊರಗಜ್ಜ

ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದ್ದು ಈಜಿಪ್ಟ್ ದೇಶದಲ್ಲಿದೆ. ಇದು ಸುಮಾರು 162 ಕಿಮೀ ಉದ್ದವಿದ್ದು ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ 300 ಮೀ ಇದೆ. ಈ ಕಾಲುವೆ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳಿಗೆ ಪ್ರಮುಖ ಜಲಮಾರ್ಗವಾಗಿದೆ. ಇದು ಇಲ್ಲದಿದ್ದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರ ಸುತ್ತಿ… Read More ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಲೈಫ್ ಇಷ್ಟೇ ಗುರು

ಕುಟುಂಬದ ಮುಖ್ಯಸ್ಥರ ಮರಣದ ನಂತರ ಆಸ್ತಿ ಮತ್ತು ಹಣಕಾಸಿನೊಂದಿಗೆ ವ್ಯವಹರಿಸಿದ್ದವರ ಕಷ್ಟ ನಷ್ಟಗಳ ಕುರಿತಾದ ಈ ಸುದೀರ್ಘವಾದ ಲೇಖನವನ್ನು ಸ್ವಲ್ಪ ಸಮಯ ಕೊಟ್ಟು ಸಮಚಿತ್ತದಿಂದ ಓದ ಬೇಕೆಂದು ಕಳಕಳಿಯ ಮನವಿ. ಗಂಡ ಸಾಫ್ಟ್ ವೇರ್ ಇಂಜೀನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಮಡದಿ ಚಾರ್ಟಡ್ ಅಕೌಂಟೆಂಟ್ ಆಗಿದ್ದರು. ಇಬ್ಬರಿಗೂ ಕೈ ತುಂಬಾ ಕೆಲಸ ಜೋಬು ತುಂಬಿ ತುಳುಕುವಷ್ಟು ಹಣ ಇದ್ದ ಕಾರಣ ಮನೆ ಮಠ ಸಂಸಾರದ ಮಕ್ಕಳು ಮಾಡಿಕ್ಕೊಳ್ಳುವುದಕ್ಕೂ ಪುರುಸೊತ್ತು ಇಲ್ಲದಷ್ಟು ಇಬ್ಬರೂ ತಮ್ಮ… Read More ಲೈಫ್ ಇಷ್ಟೇ ಗುರು

ಮಹಿಳಾ ಸಭ್ಯತೆ ಮತ್ತು ಸಬಲೀಕರಣ

ಈ ವಾರದ ಅನೇಕ ಸುದ್ದಿಗಳಲ್ಲಿ ಎರಡು ಸುದ್ದಿಗಳು ರಾಜ್ಯ ಮತ್ತು ರಾಷ್ಟ್ರಾದ್ಯಂತ ಒಂದು ರೀತಿಯ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತಿವೆ. ಮೊದಲನೆಯದು ತನ್ನ ವಯಕ್ತಿಕ ತೆವಲಿಗೋ ಇಲ್ಲವೇ ಮತ್ತಾರದ್ದೋ ರಾಜಕೀಯ ತೆವಲಿಗೆ ದಾಳವಾಗಿ ಪ್ರಪಂಚಾದ್ಯಂತ ಬಟ್ಟ ಬಯಲಾದ ಮಹ್ಲಿಳೆಯೊಬ್ಬಳದ್ದಾದರೇ, ಮತ್ತೊಂದು ಮಹಿಳೆಯರ ಉಡುಪಿನ ಬಗ್ಗೆ ಕಾಳಜಿಯುಕ್ತ ಮಾತನಾಡಿದ ಉತ್ತರಾಖಂಡ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರನ್ನು ಪ್ರಿಯಾಂಕ ವಾದ್ರಾಳೂ ಸೇರಿದಂತೆ ತಮ್ಮನ್ನು ತಾವು ಪ್ರಗತಿಪರ ಎಂದು ತೋರಿಸಿಕೊಳ್ಳುಲು ಹಪಾಹಪಿ ಪಡುವ ಕೆಲ ಮಹಿಳೆಯರು ಹಿಗ್ಗಾ ಮುಗ್ಗಾ… Read More ಮಹಿಳಾ ಸಭ್ಯತೆ ಮತ್ತು ಸಬಲೀಕರಣ

ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ವೇ.ಬ್ರ.ಶ್ರೀ. ಹರೀಶ್ ಶರ್ಮಾರವರ ನೇತೃತ್ವದಲ್ಲಿ ಶ್ರೀ ಸನಾತನ ವೇದಪಾಠ ಶಾಲೆ ಕಳೆದ ನಾಲ್ಕು ವರ್ಷಗಳಿಂದಲೂ ಬೆಂಗಳೂರಿನ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಆಸ್ತಿಕ ಬಂಧುಗಳಿಗೆ ಹೆಂಗಸರು ಮತ್ತು ಗಂಡಸರು ಎಂಬ ಬೇಧ ಭಾವವಿಲ್ಲದೇ, ವೇದ ಮಂತ್ರಗಳು, ದೇವಾತಾರ್ಚನೆ, ನಿತ್ಯಪೂಜೆ ಮತ್ತು ವೇದ ಮಂತ್ರಗಳನ್ನು ವಿದ್ಯಾರಣ್ಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲಿಸುಕೊಡುತ್ತಿದ್ದಾರೆ. ತನ್ಮೂಲಕ ಆಬಾಲಾವೃದ್ಧರಾದಿಗಾಗಿ ನೂರಾರು ವಿದ್ಯಾರ್ಥಿಗಳು ಸಂಧ್ಯಾವಂದನೆ ಮಂತ್ರಗಳು, ರುದ್ರ, ಚಮಕ, ಎಲ್ಲಾ ದೇವಾನು ದೇವತೆಗಳ ಸೂಕ್ತವನ್ನು ಕಲಿತುಕೊಂಡು ಸನಾತನ ಧರ್ಮಾಧಾರಿತವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 2020-21ರಲ್ಲಿ… Read More ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ಅಮಾಯಕರು

ಉತ್ತರ ಪ್ರದೇಶದ ಅದೊಂದು ಹಳ್ಳಿ. ಹಳ್ಳಿ ಎಂದ ಮೇಲೆ ಅಲ್ಲಿ ಸವರ್ಣೀಯರು ಮತ್ತು ದಲಿತರು ಎಲ್ಲರೂ ವಾಸಿಸುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅದೇ ರೀತಿ ಹಳ್ಳಿ ಎಂದ ಮೇಲೆ ನೆರೆ ಹೊರೆಯವರ ಜೊತೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದೊಂದು ದಿನ ಒಬ್ಬರು ತಮ್ಮ ಸೊಸೆಯೊಂದಿಗೆ ಸೀದಾ ಪೋಲೀಸ್ ಠಾಣೆಗೆ ಹೋಗಿ ವಿಷ್ಣು ಎಂಬ 25ರ ತರುಣ ತಮ್ಮ ಮನೆಯ ಗರ್ಭಿಣಿ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹೊಡೆದ ಆರೋಪವನ್ನು ಮಾಡಿದ್ದಲ್ಲದೇ,… Read More ಅಮಾಯಕರು