ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ

ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಇತ್ತೀಚೆಗೆ ಕರ್ನಾಟಕ ಸರ್ಕಾರ ಮರಾಠಿ ಪ್ರಾಧಿಕಾರವನ್ನು ಸ್ಥಾಪಿಸಿದ್ದರ ವಿರುದ್ಧವಾಗಿ ಕೆಲವು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿ ಕನ್ನಡಿಗರಲ್ಲಿ ಭಾಷಾ ಕಿಚ್ಚನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಸೊಲ್ಲಾಪುರದ ಮರಾಠಿ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಎಂಬ ಶಿಕ್ಷಕನ ಕನ್ನಡ ಭಾಷಾ ಕಲಿಸುವಿಕೆಗಾಗಿ ಜಾಗತಿಕ ಶಿಕ್ಷಕರ ಪ್ರಶಸ್ತಿಯ ಜೊತೆಗೆ 1 ಮಿಲಿಯನ್ ಅಮೇರಿಕನ್ ಡಾಲರ್ (7ಕೋಟಿ 38 ಲಕ್ಷಗಳು)ಗಳನ್ನು ಗಳಿಸಿದ ಅಧ್ಭುತವಾದ ಮತ್ತು ಆಷ್ಟೇ ಪ್ರೇರಣಾದಾಯಕವಾದ ರೋಚಕ ಕಥೆ ಇದೋ ನಿಮಗಾಗಿ 1947ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ… Read More ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ಪ್ರಪಂಚಾದ್ಯಂತ ನಾನಾ ಕಾರಣಗಳಿಂದಾಗಿ ಹರಡಿರುವ ಭಾರತೀಯರು ಉಳಿದೆಲ್ಲಾ ವಿಷಯಗಳಲ್ಲೂ ಅಲ್ಲಿಯ ಸ್ಥಳೀಯತನಕ್ಕೆ ಒಗ್ಗಿಕೊಂಡರೂ, ಊಟದ ವಿಷಯದಲ್ಲಿ ಮಾತ್ರಾ, ಇನ್ನೂ ಭಾರತೀಯತೆಯನ್ನು ಬಿಟ್ಟಿಲ್ಲ ಎಂದರೆ ತಪ್ಪಾಗಲಾರದು. ಪಿಜ್ಜಾ, ಪಾಸ್ತ ಬರ್ಗರ್ ಎಷ್ಟೇ ತಿಂದರೂ ಉತ್ತರ ಭಾರತೀಯರಾದರೆ ರೊಟ್ಟಿ ದಾಲ್ ಇನ್ನು ದಕ್ಷಿಣ ಭಾರತೀಯರಾದರೇ ಅನ್ನಾ ಸಾರು ಮೊಸರನ್ನ ತಿಂದರೇನೇ ಅವರಿಗೆ ಒಂದು ರೀತಿಯ ಸಂತೃಪ್ತಿ. ಹಾಗಾಗಿಯೇ ಭಾರತದಿಂದ ವಿದೇಶಕ್ಕೆ ಹೋಗುವ ಬಹುತೇಕರು ತಮ್ಮ ಚೀಲದಲ್ಲಿ ಭಾರತೀಯ ಸಾಂಬಾರು ಪುಡಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಆ ಮೂಲಕ ಅಮ್ಮನ ಕೈರುಚಿಯನ್ನು ವಿದೇಶದಲ್ಲೂ… Read More ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ಅನ್ನದಾತ ಸುಖೀ ಭವ

ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ… Read More ಅನ್ನದಾತ ಸುಖೀ ಭವ

1 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಅರೇ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ತರಕಾರಿಗಳ ಬೆಲೆ ಎಲ್ಲವೂ ಗಗನಕ್ಕೇರಿರುವಾಗ ಇದೇನಿದು 1 ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ? ಅದೂ ಈಗಿನ ಕಾಲದಲ್ಲಿ? ಸರ್ಕಾರವೇ ನಡೆಸುವ ಇಂದಿರಾ ಕ್ಯಾಂಟೀನ್ ನಲ್ಲಿಯೇ ಪ್ಲೇಟ್ ಊಟ ಒಂದಕ್ಕೆ 10 ರೂಪಾಯಿಗಳು ಇರುವಾಗ, ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೇ ಅಂತಾ ನಂಬುವುದು ಸ್ವಲ್ಪ ಕಷ್ಟವೇ ಅದರೂ ಇದು ದೂರದ ದೆಹಲಿಯಲ್ಲಿ ನಿತ್ಯ ಸತ್ಯವಾದ ಸಂಗತಿಯಾಗಿದೆ. ದೆಹಲಿಯ ಭೂಟೊ ವಾಲಿ ಗಲ್ಲಿಯಲ್ಲಿರುವ ನಂಗ್ಲೋಯಿ ಅವರ… Read More 1 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಅರೇ ಇದೇನಿದು? ಇಂತಹ ತರೆಬರಹ ಎಂದು ಯೋಚನೆ ಮಾಡುತ್ತಿದ್ದೀರಾ? ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೂ.. ಎನ್ನುವಂತೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರಗಳನ್ನು ಒಮ್ಮೆ ನೋಡಿ, ಮೈ ನಖಶಿಖಾಂತ ಉರಿಯದೇ ಹೋದ್ರೇ, ಆತ ನಿಜವಾದ ಕನ್ನಡಿಗನೇ ಅಲ್ಲ.. ನಮಗೆಲ್ಲಾ ಕನ್ನಡ ಅಂದ ತಕ್ಷಣ ನೆನಪಾಗೋದೇ ನಮ್ಮ ಹಳದಿ ಮತ್ತು ಕೆಂಪು ಬಾವುಟದ ಜೊತೆ ತಾಯಿ ಭುವನೇಶ್ವರಿ. ಅದರೆ ದುರಾದೃಷ್ಟವಷಾತ್ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಆ ಫಲಕದಲ್ಲಿ ಕನ್ನಡಾಂಬೆಯ ಸ್ಥಾನದಲ್ಲಿ… Read More ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

ಪ್ರಪಂಚದಾದ್ಯಂತ ನೂರಾರು ಧರ್ಮಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳು ಅಸ್ತಿತ್ವದಲ್ಲಿದ್ದು ಕಾಲಕಾಲಕ್ಕೆ ನಾನಾರೀತಿಯ ಆಕ್ರಮಣಕ್ಕೆ ಸಿಕ್ಕು ತಮ್ಮ ತನವನ್ನು ಕಳೆದುಕೊಂಡಿದೆ. ಆದರೆ ಸತತವಾಗಿ ಸಾವಿರಾರು ವರ್ಷಗಳ ಕಾಲ ಹಲವಾರು ಆಕ್ರಮಣಕಾರರ ಹೊಡತಕ್ಕೆ ಸಿಕ್ಕು ರಾಜಕೀಯವಾಗಿ ಸ್ವಾತಂತ್ಯ್ರವನ್ನೇ ಕಳಿದುಕೊಂಡರೂ, ತನ್ನ ಸಹಿಷ್ಣುತೆ, ಶ್ರೇಷ್ಠತೆ ಮತ್ತು ವಿಶಾಲತೆಯ ಕಾರಣದಿಂದಾಗಿ ಇಂದಿಗೂ ಜಗತ್ತಿನಲ್ಲಿ ತಲೆ ಎತ್ತಿ ವಿಶ್ವಗುರುವಾಗಲು ಹೊರಟಿರುವ ಧರ್ಮವೆಂದರೆ ನಮ್ಮ ಸನಾತನ ಧರ್ಮ. ಇಂತಹ ಸನಾತನ ಧರ್ಮದಲ್ಲಿ ಮತ್ತು ಇಂತಹ ಧರ್ಮದಲ್ಲಿ ಹುಟ್ಟಲು ಅದು ಎಷ್ಟು ಜನ್ಮ ಪುಣ್ಯ ಮಾಡಿರಬೇಕು. ನಮ್ಮ… Read More ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

ಜೀವನ ಮತ್ತು ರೈಲು ಗಾಡಿ

ನಮ್ಮ ಜೀವನದ ಪಯಣ ಎನ್ನುವುದು ಒಂದು ರೀತಿಯಲ್ಲಿ ರೈಲು ಗಾಡಿ ಇದ್ದಂತೆ. ಬಾಲ್ಯ, ಪ್ರೌಢ, ಯೌವನ ಮತ್ತು‌ ವೃದ್ದಾಪ್ಯಗಳು ನಮ್ಮ ಪಯಣದಲ್ಲಿ ಬರುವ ನಿಲ್ದಾಣಗಳು. ಈ ಸುದೀರ್ಘ ಪಯಣದಲಿ, ನಮ್ಮೊಂದಿಗೆ ಬಂದು ಹೋಗುವ ಬಂಧು-ಮಿತ್ರರೆಲ್ಲರೂ, ಸಹ ಪ್ರಯಾಣಿಕ ರಾಗಿ, ಅವರವರ ನಿಲ್ದಾಣಗಳು ಬಂದಾಗ ನಮ್ಮೀ ಬೋಗಿಯಿಂದ ಇಳಿದು‌ ಹೋಗುವರು. ಆದರೆ, ನಮ್ಮೀ ಭೋಗಿಯನ್ನು ಸರಾಗವಾಗಿ ಎಳೆದುಕೊಂಡು ಹೋಗುವ ಇಂಜಿನ್ಗಳು, ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ತಂದೆ-ತಾಯಿಯರಾದರೇ, ಯೌವ್ವನದಲ್ಲಿ, ಬಾಳಸಂಗಾತಿ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳುಗಳು. ಈ ಎಂಜೀನ್‌ಗಳು ಸ್ವಲ್ಪ ಆಚೀಚೆಯಾದರೂ… Read More ಜೀವನ ಮತ್ತು ರೈಲು ಗಾಡಿ

ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ

ಈಗಾಗಾಲೇ ಎಲ್ಲರಿಗೂ ತಿಳಿದಿರುವಂತೆ ಎರಡು ದಿನಗಳ ಹಿಂದೆ ಖ್ಯಾತ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈ ಪೋಲಿಸರು ರಾತ್ರೋ ರಾತ್ರಿ ಅವರ ಮನೆಯಿಂದ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಕುರಿತಂತೆ ದೇಶದಲ್ಲಿ ಭೂಕಂಪವೇ ಆಗಿಹೋದಂತೇ ಪತ್ರಿಕಾ ವೃತ್ತಿ ಧರ್ಮಕ್ಕೇ ಕೊಳ್ಳಿ ಬಿದ್ದಂತಾಗಿದೆ ಎಂದು ಕೆಲವು ಮಾಧ್ಯಮಗಳು ಬಿಂಬಿಸಿದರೇ, ಅರ್ನಾಬ್ ಅವರ ವಿರೋಧಿ ಮಾಧ್ಯಮಗಳು ಪೋಲೀಸರ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ. ಇಬ್ಬರ ಪರವಾಗಿಯೂ ಎಗ್ಗಿಲ್ಲದೇ, ದಿನದ 24 ಗಂಟೆಗಳೂ ಜೋರು ಗಂಟಲಿನ ಚರ್ಚೆ ಎಂಬ… Read More ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ