ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ನಾವೆಲ್ಲಾ ಚಿಕ್ಕವರಿದ್ದಾಗ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಸಂಭ್ರಮ. ಪ್ರಯಾಣಕ್ಕೆ ಒಂದೆರಡು ದಿನಗಳ ಮಂಚೆಯೇ, ನಮ್ಮೆಲ್ಲಾ ಸ್ನೇಹಿತರಿಗೂ ರೈಲಿನಲ್ಲಿ ಹೋಗುತ್ತಿರುವುದನ್ನು ಹೇಳೀ ಅವರ ಹೊಟ್ಟೆಯನ್ನು ಉರಿಸುತ್ತಿದ್ದಲ್ಲದೇ, ರೈಲಿನಿಂದ ಪುನಃ ಹಿಂದಿರುಗಿದ ನಂತರ ಗೆಳೆಯರ ಬಳೀ ಅದೇ ಕುರಿತಾಗಿಯೇ ಮಾತು ಕತೆ. ಇನ್ನು ಎರಡು ಮೂರು ದಿನಗಳ ಮಟ್ಟಿಗೆ ಪ್ರಯಾಣಿಸಿದರಂತೂ ರೈಲಿನ ಕುಲುಕಾಟದ ಭಾಸವೇ ನಮಗಾಗುತ್ತಿತ್ತು. ಇನ್ನು ರೈಲಿನಲ್ಲಿ ಕುಳಿತುಕೊಳ್ಳಬೇಕಾದರೇ ನಾನು ಕಿಟಕಿ ಪಕ್ಕ ನಾನು ಕಿಟಕಿ ಪಕ್ಕ ಎಂದು, ಅಣ್ಣಾ ತಮ್ಮಾ, ಅಕ್ಕತಂಗಿಯರೊಂದಿಗೆ ಶರಂಪರ ಕಿತ್ತಾಡಿದ್ದೂ ಉಂಟು. ರೈಲಿನಲ್ಲಿ… Read More ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಕನ್ನಡ ಚಲನಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಪ್ರವೇಶಿಸಿ ಈಗ ಬಹುಭಾಷಾ ನಾಯಕ ನಟನಾಗಿರುವ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಮಗ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದೆ ಈ ಕುಟುಂಬ. ಈಗಾಗಲೇ ತುಮಕೂರಿನ ಬಳಿಯಿರುವ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದ ಅರ್ಜುನ್ ಸರ್ಜಾ ಸದ್ಯದಲ್ಲಿ ಚೆನ್ನೈನಲ್ಲಿ ವಾಸವಾಗಿದ್ದಾರೆ. ಚೆನ್ನೈನ ವಿಮಾನ… Read More ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಸಾಧಾರಣವಾಗಿ ನಮಗೆ ಬಿಸಿ ನೀರಿನ ಬುಗ್ಗೆ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಇರುವ ಕುಲುವಿನ ವಶಿಷ್ಠ ಬಿಸಿನೀರಿನ ಬುಗ್ಗೆ, ಮಣಿಕರಣ್ ನ ಬಿಸಿ ನೀರಿನ ಬುಗ್ಗೆ, ಮಂಡಿ ಜಿಲ್ಲೆಯ ತಟ್ಟಪಾಣಿ, ಖಿರ್ಗಂಗಾ ಮತ್ತು ಕಸೋಲ್ ಬಿಸಿನೀರಿನ ಬುಗ್ಗೆಗಳು ಆದರೆ ಕರ್ನಾಟಕದ ದಕ್ಷಿಣ ಕನ್ನಡದ ಪುತ್ತೂರಿನ ಬಳಿಯೂ ಅದೇ ರೀತಿಯ ಬಿಸಿ ನೀರಿನ ಬುಗ್ಗೆಯಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 60 ಕಿ.ಮೀ, ಪುತ್ತೂರಿಗೆ 15 ಕಿ. ಮಿ… Read More ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಜಟೋಲಿ ಶಿವ ಮಂದಿರ

ನಮ್ಮ ಭಾರತ ದೇಶ ದೇವಾಲಯಗಳ ಬೀಡು. ಪೂರ್ವದ ಅಟಕ್ ನಿಂದ ಪಶ್ಚಿಮದ ಕಟಕ್ ವರೆಗೂ ಮತ್ತು ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೂ ಎಲ್ಲೇ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲೊಂದು ದೇವಾಲಯಗಳನ್ನು ಕಾಣಬಹುದಾಗಿದೆ. ಬಹುತೇಕ ದೇಲಯಗಳು ಸಹಸ್ರಾರು ವರ್ಷಗಳಿಂದಲೂ ಅಲ್ಲಿದ್ದು ಅನೇಕ ವೈಶಿಷ್ಟ್ಯತೆ ಮತ್ತು ನಿಗೂಢತೆಗಳಿಂದ ಕೂಡಿರುತ್ತದೆ ಇಂದೂ ಸಹಾ ಅಂತಹದೇ ಐತಿಹ್ಯವಿರುವ ನಿಗೂಢವೆಂದೇ ಪರಿಗಣಿಸಲಾದ ಶಿವನ ದೇವಾಲಯದ ದರ್ಶನ ಮಾಡುವುದರ ಜೊತೆಗೆ ಆ ದೇವಾಲಯದ ಐತಿಹ್ಯ, ಅಲ್ಲಿನ ಸ್ಥಳ ಪುರಾಣ ಮತ್ತು ವಿಶೇಷತೆಗಳನ್ನು… Read More ಜಟೋಲಿ ಶಿವ ಮಂದಿರ

ಲಕ್ಷದ್ವೀಪ

ಕಳೆದ ವಾರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಲಕ್ಷದ್ವೀಪ ಪ್ರವಾಸದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಪ್ರಪಂಚಾದ್ಯಂತ ಪ್ರವಾಸೀತಾಣಗಳು ಅಲ್ಲೋಲಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಲಕ್ಷದ್ವೀಪದ ಕುರಿತಾದ ಪ್ರಧಾನಿಗಳ ಪ್ರೇಮ ಕೇವಲ ನೆನ್ನೆಯ ಮೊನ್ನೆಯದ್ದಾಗಿರದೇ, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ಕುರಿತಾಗಿ ತಮ್ಮ ದೂರದೃಷ್ಟಿತನದಿಂದ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ, ಲಕ್ಷದ್ವೀಪದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಲಕ್ಷದ್ವೀಪ

ಕವಲೇ ದುರ್ಗ

ಶಿವಮೊಗ್ಗ ಹೇಳಿ ಕೇಳಿ ಮಲೆನಾಡಿನ ಪ್ರದೇಶ ವರ್ಷದ 365 ದಿನಗಳು ಹಚ್ಚ ಹಸಿರಾಗಿರುವಂತಹ ಸುಂದರ ಪ್ರಕೃತಿಯ ತಾಣ. ಶಿವಮೊಗ್ಗದಿಂದ ಸುಮಾರು 80 ಕಿಮೀ ಮತ್ತು ತೀರ್ಥಹಳ್ಳಿಯಿ೦ದ ಸುಮಾರು 18 ಕಿ.ಮಿ ದೂರದಲ್ಲಿರುವ ಸುಂದರ ಪ್ರಕೃತಿ ತಾಣ ಮತ್ತು ಐತಿಹಾಸಿಕ ಪ್ರದೇಶವೇ ಕವಲೇ ದುರ್ಗ. ತೀರ್ಥಹಳ್ಳಿಯಿಂದ ಆಗುಂಬೆಯತ್ತ ಹೋಗುವ ಹಾದಿಯಲ್ಲಿ ಸುಮಾರು ಆರು ಕಿ.ಮೀ ದಲ್ಲಿ ಸಿಗುವ ಬಿಳ್ ಕೊಪ್ಪ ಎನ್ನುವ ಸ್ಥಳದಿಂದ ಬಲಕ್ಕೆ ತಿರುಗಿ ಸುಮಾರು 10 ಕಿ.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿದರೆ ಕವಲೇ ದುರ್ಗದ ಬುಡವನ್ನು… Read More ಕವಲೇ ದುರ್ಗ

ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ಪರೀಕ್ಷೆ ಮುಗಿದು, ಫಲಿತಾಂಶ ಬಂದು ಬೇಸಿಗೆ ರಜೆ ಬಂದಿತೆಂದರೆ ನಮಗೆ ಖುಷಿಯೋ ಖುಷಿ. ಪರೀಕ್ಷೆ ಮುಗಿದ ತಕ್ಷಣ ಒಂದೋ ಅಮ್ಮನ ಅಮ್ಮ ಅಜ್ಜಿ ಮನೆಗೆ ಹೋಗಬೇಕು ಇಲ್ಲವೇ ತಂದೆಯ ತಂದೆ ತಾತನ ಮನೆಗೆ ಹೋಗಬೇಕು. ಸಾಧಾರಣವಾಗಿ ನಮ್ಮ ಯುಗಾದಿ ಆದ ಹದಿನೈದು ದಿನಕ್ಕೇ ನಮ್ಮ ಊರಿನಲ್ಲಿ ನಮ್ಮೂರ ಜಾತ್ರೆ ಬಹಳ ಅದ್ದೂರಿಯಿಂದ ಜರುಗುತ್ತಿದ್ದ ಕಾರಣ, ಆ ಜಾತ್ರೆಯನ್ನು ಮುಗಿಸಿಕೊಂಡು ಬಂದ ಕೂಡಲೇ ಅಜ್ಜಿ ಮನೆಗೆ ಹೋಗಲು ಸಿದ್ದವಾಗುತ್ತಿದ್ದೆವು. ತಾತನ ಊರಿಗೆ ಹೋಗಲು ದೇವಸ್ಥಾನದ ಮುಂದಿನ ಕಲ್ಯಾಣಿಯಲ್ಲಿ ಈಜಾಡುವುದು,… Read More ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ಕಳೆದು ಹೋದ ಉಂಗುರ

ಅದು ಎಂಭತ್ತರ ದಶಕ. ಗಮಕ ಕಲೆ ನಮ್ಮ ತಂದೆಯವರಿಗೆ ನಮ್ಮ ತಾತ ಗಮಕಿ ನಂಜುಂಡಯ್ಯನವರಿಂದಲೇ ಬಂದಿತ್ತಾದರೂ, ಶೈಕ್ಷಣಿಕವಾಗಿ ಅಧಿಕೃತವಾದ ಪದವಿಯೊಂದು ಇರಲಿ ಎಂದು ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಗುರುಗಳಾದ ಶ್ರೀ ನಾರಾಯಣ್ ಅವರು ನಡೆಯುತ್ತಿದ್ದ ಗಮಕ ಪಾಠ ಶಾಲೆ ಮೂಲಕ ಗಮಕ ವಿದ್ವತ್ ಪರೀಕ್ಷೆಯನ್ನು ಕಟ್ಟಿದ್ದರು. ಪರೀಕ್ಷೆ ಎಲ್ಲವೂ ಸುಲಲಿತವಾಗಿ ಮುಗಿದು ಎಲ್ಲರೂ ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದ ಕಾರಣ ಅದರ ಸಂಭ್ರಮಾಚರಣೆಗೆಂದು ಕುಟುಂಬ ಸಮೇತವಾಗಿ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ, ಅದೊಂದು ಭಾನುವಾರ ಬೆಳಿಗ್ಗೆ 9.00ಘಂಟೆಯ… Read More ಕಳೆದು ಹೋದ ಉಂಗುರ

ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ

ಮನೆಯಲ್ಲಿ ಕುಳಿತು ತುಂಬಾನೇ ಬೋರ್ ಆಗ್ತಾ ಇದ್ಯಾ? ಎಲ್ಲಾದ್ರೂ ಹತ್ತಿರದಲ್ಲೇ ಸುತ್ತಾಡಿಕೊಂಡು ಬರೋಣಾ ಅನ್ನಿಸ್ತಾ ಇದ್ಯಾ? ಹಾಗಾರೇ ಇನ್ನೇಕೆ ತಡಾ, ಬನ್ನಿ ನನ್ನ ಸಂಗಡ, ಬೆಂಗಳೂರಿನಿಂದ ದೇವನಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ದಾರಿಯಲ್ಲಿ ಎಡಗಡೆ ದೊಡ್ಡದಾಗಿ MV Solar ಕಂಪನಿ ಕಾಣಿಸುತ್ತದೆ ಅಲ್ಲಿಂದ ಸರ್ವಿಸ್ ರೋಡ್ ತೆಗೆದುಕೊಂಡರೆ ಸಿಗೋದೇ ವಿದ್ಯಾನಗರ. ಬಲಕ್ಕೆ ತಿರುಗಿ ವೆಂಕಟೇಶ್ವರ ಇಂಜೀನಿಯರಿಂಗ್ ಕಾಲೇಜ್ ದಾಟಿಕೊಂಡು ಸುಮಾರು ಎರಡು ಕಿ.ಮೀ, ದೂರ ಕ್ರಮಿಸಿದರೆ ಎಡಗಡೆಗೆ ಸಿಗುವ ಶ್ರೀಕ್ಷೇತ್ರವೇ, ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ. ಇದು… Read More ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ