ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ. ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು… Read More ಶ್ರೀರಾಮ ನವಮಿ ಸ್ಟ್ರೈಕ್

ತದಿಗೆ/ಸೌಭಾಗ್ಯ ಗೌರಿ ವ್ರತ

ಸ್ವರ್ಣಗೌರಿ ಗೌರಿ ವ್ರತ ಗೊತ್ತು, ಮಂಗಳ ಗೌರಿ ವ್ರತ ಪೂಜೆ ಗೊತ್ತು. ಅದ್ರೇ ಇದೇನಿದು ತದಿಗೆ ಗೌರಿ ವ್ರತ ಅಥವಾ ಸೌಭಾಗ್ಯ ಗೌರಿವ್ರತ ಅಂತ ಯೋಚನೆ ಮಾಡುತ್ತಿದ್ದೀರಾ? ಚೈತ್ರ ಮಾಸದ ಮೊದಲ ದಿನ ಅಂದರೆ ಪಾಡ್ಯದಂದು ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುತ್ತೆವೆ. ಇನ್ನು ಎರಡನೇ ದಿನ ಬಿದಿಗೆ ವರ್ಷತೊಡಕನ್ನು ಆಚರಿಸುತ್ತೇವೆ ಮತ್ತು ಈ ದಿನ ಚಂದ್ರನ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಯುಗಾದಿಯಾದ ಮೂರನೇ ದಿನ ತೃತೀಯ ಅಥವಾ ತದಿಗೆಯಂದು ಕೆಲವೆಡೆ ಗೌರಿಯ ವ್ರತವನ್ನು ಮಾಡುವ ಪದ್ದತಿ… Read More ತದಿಗೆ/ಸೌಭಾಗ್ಯ ಗೌರಿ ವ್ರತ

ಮಹಾ ಶಿವರಾತ್ರಿ

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಹಬ್ಬವೂ ಒಂದಾಗಿದ್ದು ಇದು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನ ಬಹುತೇಕ ಶಿವಭಕ್ತರು ಇಡೀ ದಿನ ಉಪವಾಸವಿದ್ದು ಶ್ರದ್ಧಾಭಕ್ತಿಯಿಂದ ಶಿವಪೂಜೆಯನ್ನು ಮನೆಗಳಲ್ಲಿ ಮಾಡಿ ನಂತರದ ಹತ್ತಿರದ ಶಿವನ ದೇವಸ್ಥಾನಕ್ಕೆ ಹೋಗಿ ಪರಶಿವನ ದರ್ಶನ ಪಡೆದ ನಂತರ ಇಡೀ ರಾತ್ರಿ ನಿದ್ದೆ ಮಾಡದೇ ಶಿವಧ್ಯಾನ ಮಾಡುತ್ತಾ ಜಾಗರಣೆ ಮಾಡಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಆಸ್ತಿಕ ಭಕ್ತ ಮಹಾಶಯರ ನಂಬಿಕೆಯಾಗಿದೆ. ಶಿವರಾತ್ರಿಯ ಕುರಿತಾಗಿ ಅನೇಕ… Read More ಮಹಾ ಶಿವರಾತ್ರಿ

ಗೊರೆ ಹಬ್ಬ (ಸಗಣಿ ಹಬ್ಬ)

ಗೋವಿನ ಸಗಣಿ ಎಂದರೆ ಅಸಹ್ಯ ಪಡುವಂತಹ ಇಂದಿನ ಕಾಲದಲ್ಲೂ, ದೀಪಾವಳಿಯ ಮಾರನೆಯ ದಿನ ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯದ, ಗುಮ್ಮಟಾಪುರದ ಆಬಾಲವೃದ್ಧರಾದಿಯಾಗಿ ಗಂಡಸರು ಸಾಂಪ್ರದಾಯಿಕ ರೂಪದಲ್ಲಿ ಪರಸ್ಪರ ಸಗಣಿಯನ್ನು ಎರೆಚಾರಿಕೊಂಡು ಪರಸ್ಪರ ಮನಸೋ ಇಚ್ಚೆ ಬಯ್ದಾಡಿಕೊಂಡು ವಿಲಕ್ಷಣ ಎನಿಸಿದರೂ ವಿಶಿಷ್ಟವಾಗಿ ಆಚರಿಸುವ ಗೊರೆ ಹಬ್ಬದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಗೊರೆ ಹಬ್ಬ (ಸಗಣಿ ಹಬ್ಬ)

ಅಂಟಿಗೆ – ಪಂಟಿಗೆ ಹಬ್ಬ

ನಾಡಿನಾದ್ಯಂತ ಸಡಗರ ಸಂಭ್ರಮಗಳಿಂದ ದೀಪಾವಳಿಯನ್ನು ಆಚರಿಸುತ್ತಿದ್ದರೆ, ಕರ್ನಾಟಕದ ಕರಾವಳಿಯ ಕೆಲವು ಮತ್ತು ಮಲೆನಾಡಿನ ಹಲವು ಪ್ರದೇಶದಲ್ಲಿ ಜಾತಿ ಜಾತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವಂತಹ, ದೀಪದಿಂದ ದೀಪ ಹಚ್ಚೇ ಎನ್ನುವಂತೆ ದೀಪದ ಮೂಲಕ ಎಲ್ಲರನ್ನೂ ಒಗ್ಗೂಡಿಸುವಂತಹ ಸಂಪ್ರದಾಯವೇ ಅಂಟಿಗೆ ಪಿಂಟಿಗೆ. ಈ ಸುಂದರ ಜನಪದ ಕಲೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ. … Read More ಅಂಟಿಗೆ – ಪಂಟಿಗೆ ಹಬ್ಬ

ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿಂದಿರುವ ಅನೇಕ ಪೌರಾಣಿಕ ಹಿನ್ನಲೆಗಳು, ಪಟಾಕಿ ಮತ್ತು ಅದರ ಬಳಕೆಯ ಉಲ್ಲೇಖಗಳು ಹೇರಿದಂತೆ ಅಂದು ಮತ್ತು ಇಂದಿನ ಪಟಾಕಿ ತಯಾರಿಕೆಯ ಹಿಂದಿರುವ ವೆತ್ಯಾಸಗಳ ಕುರಿತಾದ ವೈಚಾರಿಕಪೂರ್ಣ ಲೇಖನ ಇದೋ ನಿಮಗಾಗಿ… Read More ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಬೆಳಕಿನ ಹಬ್ಬ ದೀಪಾವಳಿ

ಆಶ್ವಯುಜದ ಮಾಸದ ಕಡೇ ಮೂರು ದಿನಗಳು ಮತ್ತು ಕಾರ್ತೀಕ ಮಾಸದ ಆರಂಭದ ಎರಡು ದಿನಗಳ ಸಡಗರ ಸಂಭ್ರಮ ಮತ್ತು ಅದ್ಧೂರಿಯಿಂದ ಆಚರಿಸಲ್ಪಡುವ ದೀಪಾವಳಿ ಹಬ್ಬದ ಹಿನ್ನಲೆ ಮತು ಆಚರಣೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಬೆಳಕಿನ ಹಬ್ಬ ದೀಪಾವಳಿ

ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ನಮ್ಮೂರು ಬಾಳಗಂಚಿಯ ಸಮಸ್ತ ಗ್ರಾಮಸ್ಥರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ದೊಡ್ಡ ಹಬ್ಬಕ್ಕೆ ಊರಿಗೆ ಬಂದು ಸಂಭ್ರಮಿಸಿ ಹೋದ ನಂತರ, ಊರಿಗೆ ಬರುವ ಅವಕಾಶವೇ ದೊರೆತಿರಲಿಲ್ಲ. ಈ ವರ್ಷ ಯುಗಾದಿಯ ಸಮಯದಲ್ಲಿ ಕೋರೋನಾ ಮಾಹಾಮಾರಿಯ ಸಂಬಂಧಿತವಾಗಿ ಪ್ರಪಂಚಾದ್ಯಂತವೇ ಲಾಕ್ ಡೌನ್ ಇದ್ದ ಕಾರಣ ಊರ ಹಬ್ಬ ಮುಂದೂಡಿದ್ದು ಸ್ವಲ್ಪ ಬೇಸರವೆನಿದರೂ, ಈ ವರ್ಷ ಹಬ್ಬ ನಿಲ್ಲಿಸದೇ ಮುಂದೂಡಿರುವ ವಿಷಯ ತುಸು ನೆಮ್ಮದಿ ತಂದಿದ್ದು, ಕಾಲ ಎಲ್ಲವೂ ಸರಿ ಹೋದ ನಂತರ ಪ್ರತೀ ವರ್ಷದಷ್ಟು ವಿಜೃಂಭಣೆಯಲ್ಲದಿದ್ದರೂ ಸರಳ ಸಂಭ್ರಮವಾಗಿ,… Read More ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ಅಪೂಪ ದಾನ

ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸದಲ್ಲಿ ಮಾತ್ರವೇ ಕೊಡುವಂತಹ ಅನುರೂಪದ ಮತ್ತು ಅಪರೂಪದ ದಾನವೇ ಅಪೂಪ ದಾನ. ಹಾಗಾದ್ರೇ ಅಪೂಪ ದಾನ ಅಂದ್ರೆ ಏನು? ಅಧಿಕ ಮಾಸ ಅಂದ್ರೇ ಏನು? ಅದು ಹೇಗೆ ಬರುತ್ತದೆ? ಮತ್ತು ಅದರ ಮಹತ್ವ ಮತ್ತು ಆ ಮಾಸಾಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ
Read More ಅಪೂಪ ದಾನ