ಮನೆಯಲ್ಲಿರುವ ಹಿರಿಯರು

ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ… Read More ಮನೆಯಲ್ಲಿರುವ ಹಿರಿಯರು

ನೀರು ಓಕೆ. ಕೃತಕ‌ ಪಾನೀಯ ಏಕೆ?

ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಯೂರೋ 2020 ಟೂರ್ನಿಯಲ್ಲಿ ಪೋರ್ಚುಗಲ್ ತನ್ನ ಮೊದಲ ಪಂದ್ಯವನ್ನು ಆಡುತ್ತಲಿತ್ತು. ಸಹಜವಾಗಿ ಪಂದ್ಯ ಆಡುವ ಮುನ್ನ ತಂಡದ ಮ್ಯಾನೇಜರ್ ಮತ್ತು ತಂಡದ ನಾಯಕರ ಪ್ರೆಸ್ ಕಾನ್ಫರೆನ್ಸ್ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ಸಂವಾದ ಪ್ರಪಂಚಾದ್ಯಂತ ಪ್ರಸಾರವಾಗುವ ಕಾರಣ, ಟೂರ್ನಿಯ ಪ್ರಾಯೋಜಕರಾದ ಕೋಕೋಕೋಲ ಇದರ ಪ್ರಯೋಜನವನ್ನು ಪಡೆಯುವ ಸಲುವಾಗಿ ಸಂವಾದ ನಡೆಸುವವರ ಟೇಬಲ್ ಮುಂದೆ ಸಣ್ಣದಾದ ಎರಡು ಕೋಕ್ ಬಾಟಲ್ ಗಳನ್ನು ಇಟ್ಟಿದ್ದರು. ಮೊದಲು ಈ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಪೋರ್ಚುಗಲ್ ತಂಡದ ಮ್ಯಾನೇಜರ್… Read More ನೀರು ಓಕೆ. ಕೃತಕ‌ ಪಾನೀಯ ಏಕೆ?

ಉಷ್ಟ್ರಾರೂಢಾ ಹನುಮಂತ

ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂಧರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಡಾ ಎಂದೂ ಕರೆಯಲಾಗುತ್ತದೆ. ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ… Read More ಉಷ್ಟ್ರಾರೂಢಾ ಹನುಮಂತ

ಆಪರೇಷನ್ ಬ್ಲೂ ಸ್ಟಾರ್

ಅದು ಎಂಭತ್ತರ ದಶಕ. ಈಗಿನಂತೆ ದೃಶ್ಯ ಮಾಧ್ಯಮಗಳ ಹಾವಳಿಯೇ ಇರಲಿಲ್ಲ. ಸುದ್ಧಿಯ ಮೂಲವೆಂದರೆ, ಸರ್ಕಾರಿ ಸುಪರ್ಧಿಯಲ್ಲಿದ್ದ ರೇಡಿಯೋ ಇಲ್ಲವೇ ವೃತ್ತ ಪತ್ರಿಕೆಗಳು ಮಾತ್ರ. ರೇಡಿಯೋದಲ್ಲಿನ ವಾರ್ತೆಗಳಲ್ಲಿ ಮತ್ತು ಪ್ರತಿ ದಿನ ಪತ್ರಿಕೆಗಳಲ್ಲಿ ಕಂಡು ಬರುತ್ತಿದ್ದ   ಒಂದೇ ಒಂದು ಅಂಶವೆಂದರೆ, ಪಂಜಾಬಿನಲ್ಲಿ ಇವತ್ತು ಉಗ್ರಗಾಮಿಗಳ ಧಾಳಿಯಿಂದಾಗಿ ಇಷ್ಟು ಜನ ಮೃತಪಟ್ಟರು ಅಷ್ಟು ಜನ ಮೃತಪಟ್ಟರು ಎಂಬುದೇ ಆಗಿತ್ತು. ಆರಂಭದಲ್ಲಿ  ಎಲ್ಲರೂ ಇದರ ಬಗ್ಗೆ ಆತಂಕ ಪಟ್ಟು ಕೊಳ್ಳುತ್ತಿದ್ದರಾದರೂ ನಂತರದ ದಿನಗಳಲ್ಲಿ ದಿನ ಸಾಯುವವರಿಗೆ ಅಳುವವರು ಯಾರು? ಎನ್ನುವಂತಾಗಿತ್ತು.  ಇನ್ನು… Read More ಆಪರೇಷನ್ ಬ್ಲೂ ಸ್ಟಾರ್

ಸೌರಶಕ್ತಿಯ ಮಿಲಿಟರಿ ಡೇರೆಗಳು

ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ… Read More ಸೌರಶಕ್ತಿಯ ಮಿಲಿಟರಿ ಡೇರೆಗಳು

ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ

ದಕ್ಷಿಣ ಭಾರತೀಯ ಪಾಕಶಾಸ್ತ್ರದಲ್ಲಿ ಟೋಮ್ಯಾಟೋ ಹಣ್ಣುಗಳಿಗೆ ಬಹಳ ಪ್ರಾಶಸ್ತ್ಯ. ಯಾವುದೇ ತರಕಾರಿಗಳೊಂದಿಗೆ ಟೋಮ್ಯಾಟೋ ಹಣ್ಣುಗಳು ಸುಲಭವಾಗಿ ಒಗ್ಗಿಕೊಂಡು ಹೋಗುತ್ತದೆ ಇಲ್ಲವೇ ಕೇವಲ ಟೋಮ್ಯಾಟೋ ಹಣ್ಣುಗಳಿಂದಲೇ, ಬಗೆ ಬಗೆಯ ಸಾರುಗಳು, ಗೊಜ್ಜುಗಳನ್ನು ತಯಾರಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಮ್ಯಾಟೋ ಬಹಳ ಸುಲಭದಲ್ಲಿ ಎಲ್ಲೆಡೆಯೂ ಸಿಗುತ್ತಿರುವ ಕಾರಣ, ಬಿಸಿ ಬಿಸಿ ಅನ್ನ, ದೋಸೆ, ಚಪಾತಿಗಳ ಜೊತೆ ನೆಂಚಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ, ರುಚಿಕರವಾದ ಮತ್ತು ಥಟ್ ಅಂತ ಮಾಡಬಹುದಾದ ಟೋಮ್ಯಾಟೋ ಹಣ್ಣಿನ ದಿಢೀರ್ ಬಿಸಿ ಉಪ್ಪಿನಕಾಯಿ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ… Read More ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ

ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ಹೇಳಿ ಕೇಳಿ ಥೈಲ್ಯಾಂಡ್ ದೈವದತ್ತವಾದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ದೇಶ ಎಂದರೂ ತಪ್ಪಾಗಲಾರದು. ಭಗವಂತ ಬಹಳ ಸಮಯ ಮಾಡಿಕೊಂಡು ಒಂದೊಂದು ದ್ವೀಪಗಳನ್ನು ಸೃಷ್ಟಿ ಮಾಡಿದಂತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ ಸುಮಾರು ರಸ್ತೆಯ ಮೂಲಕ ಕ್ರಮಿಸಿದರೆ 783 ಕಿ.ಮೀ ದೂರದಲ್ಲಿರುವ ವಿಮಾನದಲ್ಲಿ ಸುಮಾರು ಒಂದು ಘಂಟೆಯಲ್ಲಿ ತಲುಪಬಹುದಾದ ಅತ್ಯಂತ ರಮಣೀಯ ದ್ವೀಪವಾದ ಕ್ರಾಬಿ ನದಿಯ ಮತ್ತು ಸಮುದ್ರದ ತಟದಲ್ಲಿರುವ ಕ್ರಾಬಿ (ಥೆಸಾಬನ್ ಮುವಾಂಗ್) ದ್ಚೀಪವನ್ನು ಸ್ವಲ್ಪ ಸುತ್ತಿ ಹಾಕಿ ಬರೋಣ. ಸುಮಾರು 60-70 ಸಾವಿರ ಜನಸಂಖ್ಯೆ ಇರುವ… Read More ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಟ್ಯಾಗೋರ್ ಅವರು ದೇಶದ ಸ್ತುತಿಗಾಗಿ ಬರೆದಿದ್ದದ್ದಲ್ಲ ಬದಲಾಗಿ ಐದನೆಯ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿ ಬರೆದ್ದದ್ದು ಎಂಬ ವಿವಾದ ಮೊದಲಿನಿಂದಲೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇಿ ಇರುತ್ತದೆ. ಕನ್ನಡಿಗರಿಗೆ ಮೂಲ ಗೀತೆಯನ್ನು ಕೇಳಿದಾಗ ಅಷ್ಟೊಂದು ಸರಿಯಾಗಿ ಅರ್ಥವಾಗದಿದ್ದದ್ದು ಈಗ ಕನ್ನಡದಲ್ಲಿಯೇ ಅದರ ಭಾವಾನುವಾದವನ್ನು ಕೇಳಿದಾಗ ಅಂದಿನ ವಿವಾದದಲ್ಲಿ ಬಹಳಷ್ಟು ತಿರುಳಿದೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತಿದೆ.   ಸಾಮಾನ್ಯವಾಗಿ ನಾವು ಭೂಮಿಯನ್ನು… Read More ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ

ನಾವೆಲ್ಲರೂ ಕೇಳಿ, ಓದಿ, ನೋಡಿ ತಿಳಿದಿರುವಂತೆ ಅಯೊಧ್ಯೆ ಪ್ರಭು ಶ್ರೀರಾಮ ಚಂದ್ರನ ಜನ್ಮಸ್ಥಳ. ಆತ ತನ್ನ ಆದರ್ಶಗಳಿಂದಾಗ ಮರ್ಯಾದಾ ಪುರುಶೋತ್ತಮ ಎನಿಸಿಕೊಂಡಿದ್ದಲ್ಲದೇ, ಸಕಲ ಹಿಂದೂಗಳ ಆರಾಧ್ಯ ದೈವವಾಗಿ ಪ್ರತಿನಿತ್ಯವೂ ಪ್ರಪಂಚಾದ್ಯಂತ ಕೋಟ್ಯಾಂತರ ಮನ ಮತ್ತು ಮನೆಗಳಲ್ಲಿ ಪೂಜೆಗೆ ಪಾತ್ರರಾಗುತ್ತಿದ್ದಾನೆ. ವಾಲ್ಮೀಕಿ ವಿರಚಿತ ರಾಮಯಣ ಪ್ರಪಂಚದ ಅತ್ಯಂತ ಪುರಾತನ ಗ್ರಂಥವಾಗಿದ್ದು ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಪ್ರಪಂಚಾದ್ಯಂತ ಹಲವಾರು ದೇಶಗಳಲ್ಲಿ ಪ್ರಭು ಶ್ರೀರಾಮ ಆಡಳಿತಾತ್ಮಕವಾಗಿ ಆದರ್ಶ ಪುರುಷನಾಗಿ ಆರಾಧಿಸುತ್ತಾರೆ. ಇಂತಹ ಪ್ರಭು ಶ್ರೀರಾಮನ ಮಂದಿರ ಕೆಲವು ಮತಾಂಧರ… Read More ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ