ಕೀರ್ತಿ ಶೇಷ ಶ್ರೀ ಬಾ ನಂ ಶಿವಮೂರ್ತಿಯವರ ಜೀವನದ ಕಿರು ಪರಿಚಯ

 

ಶಿಲ್ಪ ಕಲೆಗಳ ತವರೂರಾದ ಹಾಸನ‌ಜಿಲ್ಲೆಯ ಆರಂಭದ ಊರಾದ,  ಗುರು ವಿದ್ಯಾರಣ್ಯರ ಹುಟ್ಟೂರು ‌ಎಂಬ ಪ್ರತೀತಿಯನ್ನು ಪಡೆದಿರುವಂತಹ ಪುಟ್ಟ ಗ್ರಾಮ ಬಾಳಗಂಚಿಯ ಖ್ಯಾತ ವಾಗ್ಗೇಯಕಾರರೂ, ಹರಿಕಥಾ‌ ವಿದ್ವಾನ್ ಮತ್ತು‌ ಗಮಕ ವಿದ್ವಾನ್ ಶ್ರೀ ನಂಜುಡಯ್ಯ ಹಾಗೂ ಶ್ರೀಮತಿ ಚೆನ್ನಮ್ಮ‌ನವರ ಗರ್ಭದಲ್ಲಿ‌ 1937ರ ‌ಜೂನ್‌‌ 6‌‌ ರಂದು‌ ಹಲವು‌ ವರ್ಷಗಳಿಂದ ದೇವರ  ಪೂಜೆ ಮಾಡಿದ ಫಲವಾಗಿ ಹೋಳೇನರಸೀಪುರ‌ದಲ್ಲಿ‌ ಜನನವಾದ ಪುತ್ರ‌ ರತ್ನನಿಗೆ ಗುರು‌ಹಿರಿಯರ‌ ಸಮ್ಮುಖದಲ್ಲಿ‌ ಶಿವಮೂರ್ತಿಎಂದು ನಾಮಕರಣ ‌ಮಾಡಿದರು.

ಸತ್ಯಹರಿಶ್ಚಂದ್ರರ ಅಪರಾವತಾರ ಶಾನುಭೋಗ ತಂದೆ, ಹೆಸರಿಗೆ‌ ತಕ್ಕಂತೆ ವೀರ ವನಿತೆ ಚೆನ್ನಮ್ಮನವರ  ಮುದ್ದು ಜೇಷ್ಠ ಕುವರನಾದರೂ ಬೆಳೆದದ್ದು ದೊಡ್ಡಮ್ಮ‌ನವರ‌ ಆರೈಕೆಯಲ್ಲೇ. ಬಹುಷಃ ಪ್ರಪಂಚದಲ್ಲೇ  ತಂದೆ ತಾಯಿಯರನ್ನು ಚಿಕ್ಕಪ್ಪ, ಚಿಕ್ಕಮ್ಮ ಎಂದು ಕರೆದ ಪ್ರಪ್ರಥಮ ಪುತ್ರ ಇವರೇ ಇರಬೇಕು. ಹೆಸರಿಗೆ‌ ಶ್ಯಾನುಭೋಗ‌ ಕುಟುಂಬವಾದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ.  ದುಡಿಯುವ ಕೈ ಒಂದಾದರೆ, ತಿನ್ನುವ ಕೈ ಹದಿನಾಲ್ಕು. ರಾಮೋತ್ಸವ, ಗಣೇಶೋತ್ಸವ,‌ ರಾಮ ಸಾಮ್ರಾಜ್ಯ‌ ಪಟ್ಟಾಭಿಷೇಕದಲ್ಲಿ  ಯಾರಾದರೂ ಕರೆಸಿ‌ ಹರಿಕಥೆ ಮಾಡಿಸಿದಲ್ಲಿ‌ ಮನೆಯಲ್ಲಿ ‌ನಾಲ್ಕು ಕಾಸು ಓಡಾಟ, ಹೊಟ್ಟೆ ‌ತುಂಬಾ ಊಟ. ಇಲ್ಲದಿದ್ದಲ್ಲಿ  ಸೊಪ್ಪು,‌ ಸೆದೆ, ಬೇಯಿಸಿದ‌ ಅಳಿದುಳಿದ ಕಾಳುಗಳೇ‌ ಆಹಾರ.

ಪ್ರಾಥಮಿಕ ಶಾಲಾಭ್ಯಾಸ ಹುಟ್ಟೂರಿನಲ್ಲಿ ಪ್ರಾರಂಭವಾಗಿ, ದೊಡ್ಡಪ್ಪನ  ಊರಾದ‌ ತುರುವೇಕೆರೆ, ಅಜ್ಜಿ‌ಯ ಮನೆ ಹೋಳೆನರಸೀಪುರ, ತಂದೆ‌ ಮತ್ತು ಖ್ಯಾತ ಬರಹಗಾರ ರಾಮಸ್ವಾಮಿ ‌ಅಯ್ಯಂಗಾರರ ಗೆಳೆತನದ  ಪ್ರತೀಕವಾಗಿ ‌ಗೋರೂರಿನಲ್ಲಿ  ನಡೆಯಿತಾದರೂ ಜೀವನೋಪಾಯಕ್ಕಾಗಿ ಅಕ್ಕ ಪಕ್ಕದ ಮನೆಯ ವಾರಾನ್ನವೇ ಆಶ್ರಯವಾಯಿತು. ಮುಂದೆ ಹಿರಿಸಾವೆಯಲ್ಲಿ  ಹೈಸ್ಕೂಲ್ ವಿದ್ಯಾಭ್ಯಾಸ‌ ಮುಂದುವರೆಸಿ‌ SSLCಯನ್ನು ಉತ್ತಮ‌ ಶ್ರೇಣಿಯಲ್ಲಿ ಮುಗಿಸಿದರಾದರೂ ಮನೆಯ ಪರಿಸ್ಥಿತಿಯ ಫಲವಾಗಿ ‌ಕಾಯಕಕ್ಕೆ‌ ಇಳಿಯಬೇಕಾಯಿತು.

ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ಬೇಸಾಯ ಆರಂಭಿಸಿ ಕುಟುಂಬದ ನಿರ್ವಹಣೆಗಾಗಿ ಅಕ್ಕ ಪಕ್ಕದವರ ಜಮೀನಿನಲ್ಲಿಯೂ ಕೆಲಸ ಮಾಡುತ್ತಾರೆ. ಮಳೆ ಇಲ್ಲದೆ ನೀರಿಗಾಗಿ ಹಾಹಾಕಾರವಾದಾಗ ಅಧಿಕ ದೈಹಿಕ ಪರಿಶ್ರಮದ ಭಾವಿ ತೋಡುವ ಕೆಲಸವನ್ನೂ ಮಾಡುತ್ತಾರೆ. ಇದೇ ಸಮಯದಲ್ಲಿ ಸಂಭಂಧಿಕರ ಸಲಹೆ ಮೇರೆಗೆ ತುಮಕೂರಿಗೆ ವಾಸ್ಥವ್ಯ ಬದಲಿಸಿ ಸರ್ಕಾರೀ ಹೊಲಿಗೆ ತರಬೇತಿಯಲ್ಲಿ  ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಣಾಮವಾಗಿ ಹೊಲಿಗೆ ಯಂತ್ರವನ್ನೂ ಬಹುಮಾನವಾಗಿ ಪಡೆದು ಹೊಲಿಗೆ ವೃತ್ತಿಯನ್ನು ಆರಂಭಿಸಲು ಯೋಚಿಸಿದರಾದರೂ ತಂಗಿಯ ಮದುವೆಗೆ ದುಡ್ಡಿನ ಆಭಾವದ ಕಾರಣಕ್ಕಾಗಿ ಹೊಲಿಗೆ ಯಂತ್ರವನ್ನು ಮಾರಿ ಬಿಡುತ್ತಾರೆ. ನಂತರ ಸಹಕಾರ ಸಂಘದ ತರಬೇತಿಗೆ ಸೇರಿ‌ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ  ಕೆಲಸ ಪಡೆದರಾದರೂ ಅಂದಿನ ಸರ್ಕಾರದ ಬದಲಾದ ನಿಯಮದ ಅನುಗುಣವಾಗಿ ಇದ್ದ ಕೆಲಸವನ್ನು ಕಳೆದುಕೊಂಡು ಕೆಲವು ದಿನ ಅಕ್ಕನ ಊರಾದ ಕಗ್ಗರೆಯಲ್ಲೂ ಮತ್ತು ತಮ್ಮ ಊರಿನಲ್ಲೂ  ಬೇಸಾಯವನ್ನು ಮುಂದುವರೆಸುತ್ತಾ ತಮ್ಮ ಆರಾಧ್ಯದೈವ  ಲಕ್ಷ್ಮೀ ನರಸಿಂಹ ದೇವರ ಅರ್ಚಕರಾಗಿಯೂ ಜೀವನ ನಡೆಸುತ್ತಿದ್ದಾಗಲೇ‌ ತಮ್ಮ ಬಾಳಿನ ಮಹತ್ತರ ತಿರುವು ಅವರ ಮೈಸೂರು ದೊಡ್ಡಪ್ಪನವರ ಮೂಲಕ ಪಡೆಯುತ್ತಾರೆ. ಬುದ್ದಿವಂತನಾದರೂ ಪರಿಸ್ಥಿತಿಯ ಅನುಗುಣವಾಗಿ ಊರಿನಲ್ಲೇ ಕೊಳೆಯುತ್ತಿದ್ದ ಪ್ರತಿಭೆಗೆ ಆತ್ಮ ಸ್ಥೈರ್ಯ ತುಂಬಿದ ಅವರ ದೊಡ್ಡಪ್ಪ ಅವರನ್ನು ಮೈಸೂರಿಗೆ ಕರೆದೊಯ್ದು ತಮ್ಮ ಮನೆಯಲ್ಲಿ ಕೆಲವು ದಿನಗಳವರೆವಿಗೂ ಆಶ್ರಯ ಕೊಡುತ್ತಾರೆ.

ಮೈಸೂರಿಲ್ಲಿ‌ ದೊಡ್ಡಪ್ಪ-ದೊಡ್ಡಮ್ಮನ ಮನೆಯ ಪರಿಸ್ಥಿತಿಯನ್ನು ಕೊಡಲೇ ಅರಿತು ಅವರಿಗೆ ಹೆಚ್ಚು‌ ಹೊರೆಯಾಗಬಾರದೆಂದು ನಿರ್ಧರಿಸಿ, ಬೆಳ್ಳಂ ಬೆಳಗ್ಗೆಯೇ ಚುಮು ಚುಮು ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೆ ಮನೆ ಮನೆಗೆ ವೃತ್ತಪತ್ರಿಕೆ ಮಾರುವ ಕೆಲಸ ಆರಂಭಿಸಿ, ಹಗಲಿನಲ್ಲಿ ಅಂಗಡಿಗಳಲ್ಲಿ ಲೆಕ್ಕ ಬರೆಯುವ ಕೆಲಸವನ್ನು ಮಾಡಿದರಾದರೂ ಅದರಲ್ಲಿ ಹೆಚ್ಚಿನ ಆಸಕ್ತಿ ಇರದ ಕಾರಣ ಮೈಸೂರಿನ ಸರ್ಕಾರಿ ಐಟಿಐ ಫಿಟ್ಟರ್ ತರಬೇತಿಗೆ ಸೇರಿಕೊಳ್ಳತ್ತಾರೆ. ಅಲ್ಲಿ ಶ್ರೀ ಸುಬ್ರಹ್ಮಣ್ಯಂರಂತ ಗುರುಗಳ ನೆಚ್ಚಿನ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಂದಿನ‌ ದಿನದಲ್ಲೇ ಪ್ರಖ್ಯಾತ ಕಾರ್ಖಾನೆಯಾದ ಭಾರತ್‌ ಎಲೆಕ್ಟ್ರಾನಿಕ್ಸ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಅವರ ಜೀವನದ ಎರಡನೇ ಮಗ್ಗಲು‌ ಬೆಂಗಳೂರಿನಲ್ಲಿ ಆರಂಭವಾಗುತ್ತದೆ.

ಕೆಲಸ‌‌ ಸಿಕ್ಕ‌ ಎರಡು‌ ವರ್ಷಗಳ‌ ನಂತರ ಕೆಜಿಎಫ್ ನ ರಾಜಾರಾವ್ ಮತ್ತು ವಿಶಾಲಾಕ್ಷಿಯವರ ಹಿರಿಯ ಪುತ್ರಿ ಉಮಾರವರನ್ನು ವರಿಸಿ‌ ಸುಖಃ ಸಂಸಾರದ ಫಲವಾಗಿ  ಶ್ರೀಕಂಠ, ಸುಧಾ ಮತ್ತು ‌ಲಕ್ಷ್ಮಿ ಎಂಬ ಮಕ್ಕಳ ತಂದೆಯೂ ಆಗುತ್ತಾರೆ. ಈ ನಡುವೆ‌ ಮಾವನವರ ಅಕಾಲಿಕ ಮರಣದಿಂದಾಗಿ ಸಂಪೂರ್ಣ ಕುಟುಂಬದ ಹೊಣೆ ಹೊತ್ತು ಅವರ ಉಳಿದ‌ ನಾಲ್ಕೂ ನಾದಿನಿಯರ ಹಾಗೂ ಭಾವ ಮೈದುನನ ಮತ್ತು‌ ತಮ್ಮ, ತಂಗಿಯಂದಿರ‌ ಮದುವೆಯನ್ನು ಅವರ ಸಾರಥ್ಯದಲ್ಲಿಯೇ ಉತ್ತಮ ಸಂಬಂಧಗಳೊಂದಿಗೆ ಮಾಡಿ ಮುಗಿಸಿ, ತಮ್ಮ ಮಕ್ಕಳ‌ ವಿದ್ಯಾಭ್ಯಾಸತ್ತ ಗಮನ ಹರಿಸುತ್ತಿರುವಾಗಲೇ ತಮ್ಮಲ್ಲಿ ಸುಪ್ತವಾಗಿ‌ ಅಡಗಿದ್ದ ಹಾಗೂ ಬಾಲ್ಯದಿಂದಲೂ ಹಂಬಲಿಸುತ್ತಿದ್ದ ಮತ್ತು ತಂದೆಯವರ ಪ್ರಭಾವದಿಂದಾಗಿ ಕರ್ನಾಟಕದ ಸಂಗೀತವನ್ನು ‌ವಿದ್ವಾನ್ ಶ್ರೀ ಚಿಂತಲಪಲ್ಲಿ‌‌ ರಂಗರಾಯರಲ್ಲೂ

ಗಮಕ‌ವನ್ನು ಗುರುಗಳದ ಶ್ರೀ ‌ನಾರಾಯಣರಲ್ಲೂ ಮುಂದುವರೆಸಿ‌ ವಿದ್ವತ್‌ ಪರೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ.‌

ಇವೆರಡರ ಜೊತೆ ಜೊತೆಯಲ್ಲಿ ಬಾಲ್ಯದಲ್ಲಿ ತಂದೆಯವರ ಒಡಗೂಡಿ ಮೈಸೂರಿನ ದಸರಾ ಸಂಗೀತೋತ್ಸವಕ್ಕೆ ಹೋಗಿದ್ದ ಸಂದರ್ಭದಲ್ಲಿ‌ ಮೋರ್ಚಿಂಗ್ ವಾದನವನ್ನು ‌ಕೇಳಿ ಅದರ ನಾದಕ್ಕೆ ಮನಸೋತು‌‌ ಏಕಲವ್ಯನಂತೆ ಸ್ವಸಾಮಾರ್ಥ್ಯದಿಂದ ಮೋರ್ಚಿಂಗ್ ವಾದನವನ್ನು ಕರಗರತ ಮಾಡಿಕೊಂಡು ಹಲವಾರು ಪ್ರಖ್ಯಾತ ‌ವಿದ್ಚಾಂಸರ ಕಛೇರಿಗಳಲ್ಲೂ ಹೆಸರಾಂತ ‌ನೃತ್ಯ‌ಕಾರ್ಯಕ್ರಮಗಳಲ್ಲಿ ಅಮೋಘವಾಗಿ‌ ನುಡಿಸಿ ವಿದ್ವತ್ ಜನರ ಮೆಚ್ಚುಗೆ ‌ಗಳಿಸುತ್ತಾರೆ. ತಮ್ಮ‌ ಗಾಯನ‌ ಸಿರಿಯಿಂದ ಅನೇಕ ಅಂತರ್ ಕಾರ್ಖಾನೆಗಳ‌ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ತಮ್ಮ ಕಾರ್ಖಾನೆಯ ಹಿರಿಮೆಯನ್ನು ಎತ್ತಿ ಹಿಡಿದಿರುತ್ತಾರೆ. ಬೆಂಗಳೂರಿನ‌‌ ಹಲವಾರು ದೇವಸ್ಥಾನಗಳು ಮತ್ತು ‌ಭಜನಾ‌ ಮಂಡಳಿಗಳಲ್ಲಿ‌ ಸಕ್ರೀಯರಾಗಿ ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಭಗವಂತನ ನಾಮ‌ಸ್ಮರಣೆ ಮಾಡುತ್ತಾ ಹಲವಾರು ಪ್ರಶಸ್ತಿ‌ ಪುರಸ್ಕಾರಗಳಿಗೆ ಭಾಜನರಾಗುತ್ತಾರೆ.

 ಅವುಗಳಲ್ಲಿ‌

ಶಂಕರ‌ ಸೇವಾ‌‌ ಸಮಿತಿಯ ಭಜನ‌‌ ಸಾಮ್ರಾಟ

ತ್ಯಾಗರಾಜ ಗಾನ ಸಭೆಯಲ್ಲಿ ಪಡೆದ ಗಮಕ-ಮುಖಶಂಖು ಕಲಾಭೂಷಣ 

ಗಮಕ ಕಲಾ‌ ಪರಿಷತ್ತಿನಲ್ಲಿ‌ ಪಡೆದ ಗಮಕ ಕಲಾ‌ರತ್ನ ಪ್ರಶಸ್ತಿಗಳು ಪ್ರಮುಖವಾದವುಗಳು.

ತಮ್ಮ ಎಲ್ಲ‌ ಮಕ್ಕಳ ಮುಂಜಿ ಮದುವೆಗಳನ್ನು‌ ಸಕಾಲದಲ್ಲಿ ಮಾಡಿ ಆರು ಮೊಮಕ್ಕಳ ಮುದ್ದಿನ ತಾತನಾಗಿ ಅವರಿಗೆಲ್ಲಾ, ಶ್ಲೋಕ, ಭಗವದ್ಗೀತೆ, ಬಾಲಪಾಠ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ ಸಂತೋಷದಿಂದ  ಭಗವಂತನ ನಾಮಸ್ಮರಣೆ ಮಾಡುತ್ತಾ ನಿವೃತ್ತ ಜೀವನ ನಡೆಸುತ್ತಿರುವಾಗಲೇ ತಮ್ಮ ಮುದ್ದಿನ ಮಡದಿಯನ್ನು  ಕಳೆದು ಕೊಳ್ಳುತ್ತಾರೆ.  ಪತ್ನಿಯ ಅಕಾಲಿಕ ಮರಣದ ದುಖಃದಿಂದ ಕೆಲಕಾಲ ಮಂಕಾದರೂ ಬಹಳ ಬೇಗ ಚೇತರಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಟಿಟಿಡಿ ಧರ್ಮ ಪ್ರಚಾರ ಸಮಿತಿಯ ಕಾರ್ಯಗಳಲ್ಲಿ, ಗುರು ನಾರಾಯಣರೊಂದಿಗೆ ಹಲವಾರು ಗಮಕ ಕಾರ್ಯಕ್ರಮಗಳಲ್ಲಿ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಕಾರರಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಸನಾತನ ಸಂಸ್ಕೃತಿಯ ಪರಿಚಯವನ್ನು ನಾಡಿನಾದ್ಯಂತ ಪಸರಿಸುವ ಹೆಮ್ಮೆಯ ಸಂಗತಿಯ ಭಾಗವಾಗುತ್ತಾರೆ.

ಇಷ್ಟಲ್ಲಾ ಬಹುಮುಖ ಪ್ರತಿಭೆಯ ಜೊತೆಗೆ ಕಾರ್ಮಿಕ ಕವಿ ಗಮಕಿ ಶಿವಮೂರ್ತಿ ಎಂಬ ಕಾವ್ಯ ನಾಮದೊಂದಿಗೆ ಹಲವಾರು ಹಾಡುಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಷಟ್ಪದಿಯಲ್ಲಿ ರಚಿಸುತ್ತಿದ್ದ  ಆಶೀರ್ವಚನಗಳನ್ನು  ಕೇಳುವುದೇ ಮಹದಾನಂದ

ಶ್ರೀ ವನಿತೆಯರಸನೆ…

ಶರಣ ಸಂಗವ್ಯಸನ..

ಭೂ ವ್ಯೋಮ ಪಾತಾಳ..

ಗೀತೆ ಶ್ರೀ ಹರಿ ಮುಖ ಜಾತೆ….

ಶೈಲ ಬಾಲೆ ಸ್ವರ್ಣಾಂಬೆ ..

 ಮುಂತಾದವುಗಳನ್ನು ಅವರ ಕಂಚಿನ ಕಂಠದಲ್ಲಿ ಕೇಳಿದುದರ ನಿನಾದ ಇನ್ನೂ ನಮ್ಮ ಕಿವಿಗಳಗಲ್ಲಿ ಗುನುಗುಡುತ್ತಿದೆ.

ಆರೋಗ್ಯವೇ ಭಾಗ್ಯ ಎಂಬುದನ್ನು ಬಹಳವಾಗಿ ನಂಬಿದ್ದ ಶಿವಮೂರ್ತಿಗಳು ದೀರ್ಘ ನಡಿಗೆ, ಪ್ರಾಣಾಯಾಮ, ಯೋಗಸನಗಳನ್ನು ಚಾಚೂ ತಪ್ಪದೆ ಅಭ್ಯಾಸ ಮಾಡುತ್ತಾ ಉತ್ತಮವಾದ ಜೀವನ ನಡೆಸುತ್ತಿರುವಾಗಲೇ ಜಾತಸ್ಯ ಮರಣಂ  ದೃವಂ ಅಂದರೆ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮದಂತೆ ದಿ. 2.10.2017 ರಂದು ತೀವ್ರ ಹೃದಯ ಸ್ಥಂಭನದಿಂದಾಗಿ ಅಕಾಲಿಕವಾಗಿ ಅಗಲಿ ನಮ್ಮನ್ನೆಲ್ಲಾ ತಬ್ಬಲಿಗಳನ್ನಾಗಿಸುತ್ತಾರೆ.

ಒಟ್ಟಿನಲ್ಲಿ ಹೇಳ ಬೇಕೆಂದರೆ ಆಡು‌ ಮುಟ್ಟದ ಸೊಪ್ಪಿಲ್ಲ, ಶಿವಮೂರ್ತಿಗಳಿಗೆ ಗೊತ್ತಿಲ್ಲದಿದ್ದ ಕಲೆಯೇ ಇಲ್ಲ

ಎಂದು ಹೇಳಿದರೂ‌‌ ಅತಿಶಯೋಕ್ತಿ ಆಗಲಾರದು.  ಇಂತಹ ಹಿರಿಯ ಚೇತನದ ಅಗಲಿಕೆ ನಮ್ಮ ಕುಟುಂಬಕ್ಕೂ ಹಾಗೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.

ಪ್ರತಿದಿನ ಪೂಜಿಸುವಾಗ ಕೇಳಿಕೊಳ್ಳುವ ಹಾಗೆ, ಅನಾಯಾಸೇನ  ಮರಣಂ  ವಿನಾ ದೈನ್ಯೇನ ಜೀವನಂ ದೇಹಿಮೇ ಕೃಪಯಾ ಶಂಭೋ ತ್ವಹಿ ಭಕ್ತಿ ಅಚಂಚಲಾಂ

ನಿರಾಯಾಸವಾಗಿ ಯಾವುದೇ ರೀತಿಯಲ್ಲಿ ನರಳದೆ, ಯಾರನ್ನೂ ನರಳಿಸದೆ, ಯಾರನ್ನೂ ನೋಯಿಸದೇ, ಯಾರಲ್ಲೂ ಬೇಡದೆ, ಸಾಧ್ಯವಾದಷ್ಟು  ಕೊಡುಗೈ ದಾನಿಯಾಗಿಯೇ ಆ ಭಗವಂತನ ಸನ್ನಿಧಿಯನ್ನು ಸೇರಿದ ನಮ್ಮ ತಂದೆಯವರಿಗೆ ನಮ್ಮ ಭಕ್ತಿ ಪೂರ್ವಕ ಶ್ರಧ್ದಾಂಜಲಿಯನ್ನು ಅರ್ಪಿಸುತ್ತೇವೆ.

ಜಾರ್ಜ್ ಫರ್ನಾಂಡೀಸ್

ಕಾರ್ಮಿಕ ನಾಯಕ, ಜನ ಪರ ಹೋರಾಟಗಾರ,  ಪ್ರಭುಧ್ಧ ವಾಗ್ಮಿ, ಅಪ್ಪಟ ದೇಶ ಪ್ರೇಮಿ, ಸರಳ ವ್ಯಕ್ತಿತ್ವ,  ನಡೆ ಮತ್ತು ನುಡಿಗಳಲ್ಲಿಯೂ ಅಕ್ಷರಶಃ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಧೀಮಂತ ನಾಯಕ, ಮಾಜೀ ರಕ್ಷ್ಣಣಾ ಮಂತ್ರಿ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ಇಂದು ಮುಂಜಾನೆ  ವಯೋಸಹಜ ಮತ್ತು  ದೀರ್ಘಕಾಲೀನ ಅನಾರೋಗ್ಯದ ಪರಿಣಾಮವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕರ.   ಇಂದಿನ ಅಧಿಕಾರಶಾಹಿ ರಾಜಕಾರಣಿಗಳ ಮಧ್ಯೆಯೂ ಅಪರೂಪವಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ.

1930 ಜೂನ್ 3 ರಂದು  ಮಂಗಳೂರಿನ ಕೊಂಕಣಿ ಕ್ಯಾಥೋಲಿಕ್ ಸಾಂಪ್ರದಾಯಕ ಮನೆಯಲ್ಲಿ ಜನಿಸಿದ ಜಾರ್ಜ್ ಅವರು ವಿಧ್ಯಾರ್ಥಿ ದಸೆಯಿಂದಲೂ ಬಹಳ ಚುರುಕು, ಧೈರ್ಯಶಾಲಿ ಮತ್ತು ಗುರು- ಹಿರಿಯರಿಗೆ ವಿಧೇಯಕನಾದವರಾಗಿದ್ದ ಕಾರಣ ಅವರ ತಂದೆ ಅವರನ್ನು ಕ್ರೈಸ್ತ ಪಾದ್ರಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿ ಹದಿನಾರನೇ ವಯಸ್ಸಿನಲ್ಲಿಯೇ ಮುಂಬೈಯಿಗೆ ಕಳುಹಿಸಿರುತ್ತಾರೆ. ತಂದೆಗೆ ತಕ್ಕ ಮಗನಂತೆ ಸುಮಾರು ಎರಡು ವರ್ಷಗಳ ಕಾಲ ಕ್ರೈಸ್ತ ಗುರುವಾಗಲು ಅಧ್ಯಯನ ನಡೆಸಿದ ನಂತರ ಅಲ್ಲಿನ  ತಾರತಮ್ಯ, ಒಳ ಜಗಳ ಮತ್ತು ಒಳ ರಾಜಕೀಯಗಳಿಂದ ಬೇಸತ್ತು, ಮಂಗಳೂರಿಗೆ ಹಿಂದಿರುಗಿ ಕೆಲ ಕಾಲ ಅಲ್ಲಿನ ಖಾಸಗೀ ರಸ್ತೆ ಸಾರಿಗೆ ಮತ್ತು ಹೊಟೇಲ್ಗಳ ಮಾಲೀಕರಿಂದ   ದೌರ್ಜನ್ಯಕ್ಕೊಳಗಾದ ಕೆಲಸಗಾರರನ್ನು ಸಂಘಟಿಸುತ್ತಾ  ಸಕ್ರೀಯ ರಾಜಕೀಯ ನಾಯಕನಾಗಿ  ಹೊರಹೊಮ್ಮುತ್ತಾರೆ. ಅಲ್ಲಿಂದ ತಮ್ಮ ವಾಸ್ತ್ಯವ್ಯವನ್ನು ಪುನಃ ಮುಂಬೈಗೆ ಬದಲಾಯಿಸಿ  ಮುಂಬೈ ಬಂದರಿನ ಅಸಂಘಟಿತ  ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟಕ್ಕೆ ಇಳಿದು  ಜೊತೆ ಹೊತೆಗೆ ಜೀವನದ ನಿರ್ವಹಣೆಗೆ  ಪತ್ರಿಕಾರಂಗದಲ್ಲೂ ಕೊಂಚ ಕೈಯನ್ನಾಡಿಸಿ ತಮ್ಮ ನಿರರ್ಗಳ  ಕೊಂಕಣಿ, ಕನ್ನಡ, ತುಳು, ಇಂಗ್ಲೀಷ್, ಹಿಂದಿ, ಮಲೆಯಾಳಂ, ತಮಿಳು ಮತ್ತು ಮರಾಠಿ ಭಾಷೆಗಳ ಪಾಂಡಿತ್ಯದಿಂದ  ಮುಂಬೈ ಜನರ ಮನಗೆದ್ದು ಸಮಾಜವಾದಿ ರಾಮಮನೋಹರ್ ಲೋಹಿಯಾ ಅವರ ಪ್ರಭಾವಕ್ಕೊಳಗಾಗಿ  ಸಮಾಜವಾದಿ ಕಾರ್ಮಿಕರ ಸಂಘಟನೆಗೆ ಸೇರಿ ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿದ್ದ ಹೆಗ್ಗಳಿಕೆ ಅವರದ್ದು.

ಕಾಂಗ್ರೇಸ್ ಎಂದರೆ ಇಂದಿರಾ, ಇಂದಿರ ಎಂದರೆ ಕಾಂಗ್ರೇಸ್ ಎನ್ನುವಂತಹ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಂಗ್ರೇಸ್ ಪಕ್ಷದ ಪ್ರಭಲ ವಿರೋಧಿಗಳಾಗಿದ್ದ ಶ್ರೀಯುತರು  1977ರಲ್ಲಿ  ಪ್ರಜಪ್ರಭುತ್ವವನ್ನೇ ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆಯಿಂದ  ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಘೋಷಿಸಿ ತಮ್ಮ ವಿರೋಧಿಗಳನ್ನೆಲ್ಲಾ ಜೈಲಿನಲ್ಲಿ ಬಂಧಿಸಿದಾಗ ಸಹಜವಾಗಿಯೇ ಜಾರ್ಜ್ ಅವರೂ ಜೈಲಿನಲ್ಲಿ ಬಂಧಿಯಾಗಿ ಜಯಪ್ರಕಾಶ್ ನಾರಾಯಣ್, ಅಟಲ್ ಜೀ, ಅಡ್ವಾನಿಯವರ ಒಡನಾಟಕ್ಕೆ ಒಳಗಾಗಿ ಎಲ್ಲಾ ವಿರೋಧ ಪಕ್ಷಗಳೂ ಒಂದಾಗಿ ಕಟ್ಟಿದ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿ  ನಂತರ ನಡೆದ ಚುನಾಚಣೆಯಲ್ಲಿ  ಜೈಲಿನಿಂದಲೇ ಸ್ಪರ್ಧಿಸಿ ವಿಜಯಶಾಲಿಯಾಗಿ

ಮೊರಾರ್ಜಿದೇಸಾಯಿಯವರ  ಪ್ರಪ್ರಥಮ ಕಾಂಗ್ರೇಸ್ಸೇತರ ಸರ್ಕಾರದಲ್ಲಿ  ಕೈಗಾರಿಕೆ ಮತ್ತು ಸಂಪರ್ಕ ಮಂತ್ರಿಯಾಗಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿ.ಪಿ.ಸಿಂಗ್ ಅವರ ಸರ್ಕಾರದಲ್ಲಿ ರೈಲ್ವೇ ಇಲಾಖೆಯ ಮಂತ್ರಿಯಾಗಿ ರೈಲ್ವೇ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಯ ಹರಿಕಾರರಾದರು. ಅವರ ಕಾಲದಲ್ಲೇ ನಮ್ಮ ಕೊಂಕಣ ರೈಲು ಚುರುಕುಗೊಂಡ್ಡದ್ದು.

ಕಾಲ ಕ್ರಮೇಣದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಶಾಶ್ವತವಾಗಿ ಬಿಹಾರದಲ್ಲಿಯೇ ಕಂಡುಕೊಂಡ ಫರ್ನಾಂಡೀಸರು ನಂತರ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ  ಎನ್.ಡಿ.ಏ ಸರ್ಕಾರದಲ್ಲಿ ರಕ್ಷಣಾ ಮಂತ್ರಿಯಾಗುವುದರ ಮೂಲಕ ರಾಜಕೀಯದ ಉಚ್ರಾಯ ಸ್ಥಿತಿಯನ್ನು ತಲುಪಿದರು ಎಂದರೆ ಅತಿಶಯೋಕ್ತಿ ಏನಲ್ಲ. ಪಾಕೀಸ್ಥಾನದ ಜನರಲ್ ಮುಷಾರಫ್ನ ಕುತಂತ್ರದಿಂದಾಗಿ 1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ಸಂಧರ್ಭದಲ್ಲಿ ಅಟಲ್ ಜೀ ಮತ್ತು ಅಡ್ವಾಣಿಯವರ  ಜೊತೆಯಲ್ಲಿ  ಕೈಜೋಡಿಸಿ ರಕ್ಷಣಾ ಮಂತ್ರಿಯಾಗಿ ತೆಗೆದುಕಂಡ ದಿಟ್ಟ ನಿರ್ಧಾರಗಳಿಂದಾಗಿಯೇ  ಪಾಪಿ(ಕಿ)ಸ್ಥಾನವನ್ನು ಬಗ್ಗು ಬಡಿಯಲು ಸಾಧ್ಯವಾಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಅದುವರಿವಿಗೂ ರಕ್ಷಣ ಸಚಿವರೆಂದರೆ ಸೂಟು ಬೂಟ್ ಹಾಕಿಕೊಂಡು ದೆಹಲಿಯಲ್ಲಿಯೇ ವಾಸ್ಥವ್ಯ ಹೂಡಿ, ಹವಾನಿಯಂತ್ರಿತ ಕೊಠಡಿಗಳಿಂದಲೇ ಮೂರೂ ಸೈನ್ಯಗಳನ್ನು ನಿಯಂತ್ರಿಸುತ್ತಿದ್ದವರಿಗೆ ಸಡ್ಡು ಹೊಡೆದು,ಯುಧ್ಧದಲ್ಲಿ ಸೈನಿಕರ ಬೆಂಬಲಕ್ಕೆ ನಿಂತು ವಿಶ್ವದಲ್ಲೇ ಅತೀ ಎತ್ತರದ ಯುದ್ಧ ಭೂಮಿ ಎಂದು ಖ್ಯಾತಿಯಾಗಿರುವ  ಸಿಯಾಚಿನ್(6000 ಮೀ.)ಗೆ 18ಕ್ಕೂ ಹೆಚ್ಚು ಬಾರಿ ಕೇವಲ ಜುಬ್ಬಾಪೈಜಾಮಧಾರಿಯಾಗಿ ಭೇಟಿ ನೀಡಿ ಸೈನಿಕರ  ಸ್ಥೈರ್ಯವನ್ನು ಹೆಚ್ಚಿದ್ದರು. ಮಿಗ್ ನೌಕೆಯನ್ನು ಏರಿದ ಪ್ರಪಥಮ ಮಂತ್ರಿ ಎನ್ನುವ ಹೆಗ್ಗಳಿಕೆಯೂ ಅವರದ್ದೇ.

ಜಾರ್ಜ್ ಫರ್ನಾಂಡೀಸ್ ಎಷ್ಟೇ ಸರಳ, ಸ್ವಾಭಿಮಾನಿ ಮತ್ತು ನಿಸ್ವಾರ್ಥ ಮನುಷ್ಯರಾದರೂ ಆರೋಪಗಳು ಅವರನ್ನು ಬೆಂಬಿಡದೆ ಬೆನ್ನು ಹತ್ತಿದವು. ಆದುವರೆವಿಗೂ ಆಡಳಿತ ನಡೆಸಿದ್ದ ಎಲ್ಲಾ ಸರ್ಕಾರಗಳಿಗಿಂತಲೂ ಅತೀ  ಹೆಚ್ಚಿನ ಅನುದಾನವನ್ನು ರಕ್ಷಣ ಇಲಾಖೆಗೆ  ಬಿಡುಗಡೆ ಮಾಡಿದ್ದರೂ ಕೆಲ ಹಿತಶತ್ರುಗಳ ಕುತಂತ್ರದಿಂದಾಗಿ ಸೈನಿಕರ ಶವ ಪೆಟ್ಟಿಗೆಯ ಖರೀಧಿಯ ವಿಷಯದಲ್ಲಿ ಲಂಚ ಪಡೆದ ಆರೋಪವನ್ನು ಹೊತ್ತು ಕೆಲಕಾಲ ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟಿದ್ದರು ನಂತರ ವಾಜಪೇಯಿಯವರ ಒತ್ತಾಯಕ್ಕೆ ಮಣಿದು ಪುನಃ ರಕ್ಷಣಾ ಖಾತೆಗೆ ಮಂತ್ರಿಯಾಗಿ ಮರಳಿದರೂ ಹಿಂದಿನ ಮೋಡಿಗೆ ಮರಳಲಾಗದಿದ್ದದ್ದು ನಮ್ಮೆಲ್ಲರ  ದೌರ್ಭಾಗ್ಯವೇ ಸರಿ.  ಈ ಗುರುತರ ಆರೋಪಗಳಿಂದ ನೊಂದು ಬೆಂದ ಹೃದಯ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ನಂತರ ದಿನಗಳಲ್ಲಿ ತಮ್ಮ ಪಕ್ಷದ ನಾಯಕರುಗಳಿಂದಲೇ ಅವಕೃಪೆಗೆ ಒಳಗಾಗಿ ಹಾಗೂ ಹೀಗೂ ರಾಜ್ಯಸಭಾ ಸದಸ್ಯರಾದರೂ  ಅಲ್ಜಮೈರ್ ಎಂಬ ಮರೆಗುಳಿ  ಖಾಯಿಲೆಗೆ ತುತ್ತಾಗಿ ಯಾರನ್ನೂ ಗುರುತಿಸಲಾಗದ ಸ್ಥಿತಿಗೆ ತಲುಪಿ ಸುಮಾರು ದಶಕಗಳಿಗೂ ಅಧಿಕ ಕಾಲ ಅದೇ ಸ್ಥಿತಿಯಲ್ಲಿ  ಇದ್ದು , ಇಂದು ಹಾಸಿಗೆಯಿಂದಲೇ ನಮ್ಮೆಲ್ಲರನ್ನೂ ಅಗಲಿದ್ದಾರೆ.

ಮಾತೃಭಾಷೆ ಕೊಂಕಣಿಯಾದರೂ ಆಡು ಭಾಷೆಯ ಮೂಲಕ  ಕನ್ನಡಿಗರೇ ಆಗಿದ್ದ ಜಾರ್ಜ್ ಫರ್ನಾಂಡಿಸರ ಕುಟುಂಬಸ್ತರಿಗೂ ಮತ್ತು   ಬೆಂಗಳೂರಿಗೂ ಒಂದು  ಅವಿನಾವಭಾವ ಸಂಬಂಧ. ಆವರ  ಸಹೋದರರಾದ ಮೈಕಲ್ ಫರ್ನಾಂಡೀಸ್ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆಗಳಲ್ಲಿ ಕಾರ್ಮಿಕ ನಾಯಕನಾಗಿದ್ದರೆ ಅವರ ಮತ್ತೊಬ್ಬ ತಮ್ಮ ಲಾರೆನ್ಸ್  ಫರ್ನಾಂಡೀಸ್ ಬೆಂಗಳೂರಿನ ಮಾಜೀ ಮೇಯರ್ ಆಗಿದ್ದವರು. ಜಾರ್ಜ್ ಫರ್ನಾಂಡಿಸರೂ ಕೂಡಾ ಒಮ್ಮೆ ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದಿಂದ ಸ್ಪರ್ಧಿಸಿ ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಮಾಜಿ ರೈಲ್ವೇ ಮಂತ್ರಿ ಜಾಫರ್ ಷರೀಫರ ವಿರುದ್ಧ ಸೋಲನ್ನು ಕಂಡ್ದಿದ್ದರು.  ಇಂದಿನ ರಾಜಕಾರಣದಲ್ಲಿ ಒಮ್ಮೆ ನಗರಸಭಾ ಸದಸ್ಯರಾದರೆ ಸಾಕೂ ಇನ್ನು ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಸಂಪಾದನೆ ಮಾಡುವಂತಹವರೇ ಹೆಚ್ಚಾಗಿರುವಾಗ ಐವತ್ತು ವರ್ಷಕ್ಕೂ ಹೆಚ್ಚಿನ ಅವಧಿಗಳ ವರೆಗೆ ದೇಶಾದ್ಯಂತ ನಾನಾ ರೀತಿಯ ರಾಜಕೀಯ ಪದವಿಗಳನ್ನು ಅಲಂಕರಿಸಿದ ಈ ವ್ಯಕ್ತಿ, ಎಂತಹ ವಿಷಮ ಸ್ಥಿತಿಯಲ್ಲಿಯೂ ಜುಬ್ಬ ಪೈಜಮ ಹೆಚ್ಚೆಂದರೆ ಅದರ ಮೇಲೊಂದು ಅರ್ಧ ತೋಳೀನ ಕೋಟು ಇಲ್ಲವೇ ಒಂದು ಶಾಲು ಹೊದ್ದು ಸರಳ ಸಜ್ಜನಿಕೆಯಿಂದ ಜನಮನವನ್ನು ಗೆದ್ದವರು.  ಈ ಲೋಕಕ್ಕೆ ಬರೀ ಕೈಯಲ್ಲೇ ಬಂದು, ಹಾಗೆಯೇ ಹೋಗುವಾಗಲೂ ಬರೀ ಕೈಯಲ್ಲಿಯೇ ಸಂತನಂತೆಯೇ  ಮರೆಯಾಗಿ ಹೋದ ಜಾರ್ಜ್ ಫರ್ನಾಂಡೀಸ್ ಅವರಿಂದ   ಇಂದಿನ ರಾಜಕಾರಣಿಗಳು ಬಹಳಷ್ಟು ಕಲಿಯಬೇಕಾಗಿರುವುದಂತೂ ಸತ್ಯ, ಸತ್ಯ, ಸತ್ಯ.

ಹುಟ್ಟಿದ್ದು  ಕ್ರೈಸ್ತ ಧರ್ಮದಲ್ಲಿ , ಓದಿ ಬೆಳೆದದ್ದೆಲ್ಲಾ ಹಿಂದೂ ಸ್ನೇಹಿತರುಗಳೊಂದಿಗೆ, ವಿವಾಹವಾದದ್ದು  ಮಾಜಿ ಕೇಂದ್ರ ಸಚಿವ ಮುಸ್ಲಿಂ ಧರ್ಮದ ಹುಮಾಯುನ್ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು.  ಹುಟ್ಟಿ ಬೆಳೆದದ್ದು ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ, ರಾಜಕೀಯ ಆರಂಭಿಸಿದ್ದು ಮಹಾರಾಷ್ಟ್ರದ ಬಾಂಬೆ ನಗರದಲ್ಲಿ, ನಂತರ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಂಡು, ರಾಜಕೀಯದ ಉಚ್ರಾಯ ಸ್ಥಿತಿಯನ್ನು ತಲುಪಿದ್ದು ದೇಶದ ರಾಜಧಾನಿ ನವದೆಹಲಿಯಲ್ಲಿ. ಈ ರೀತಿಯಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಎಲ್ಲರ ಮನೆಸೂರೆಗೊಂಡು ನಿಜವಾದ ಭಾರತೀಯರಾಗಿದ್ದಂತಹ ಒಬ್ಬ ಸರಳ ಸಜ್ಜನ ಅಪರೂಪದ ನಾಯಕನನ್ನು  ನಾವಿಂದು ಕಳೆದುಕೊಂಡಿದ್ದೇವೆ.   ಪ್ರಸ್ತುತ ರಾಜಕಾರಣಿಗಳ ಪೈಕಿ ಅಂತಹ  ಮತ್ತೊಬ್ಬ  ರಾಜಕಾರಣಿಗಳನ್ನು ಪಡೆಯುವ ಸಂಭವೇ ಇಲ್ಲ ಎಂದರೂ ತಪ್ಪಾಗಲಾರದು.  ನಾವೆಲ್ಲಾ ಇಲ್ಲಿಂದಲೇ ನಮ್ಮನ್ನೆಲ್ಲ ಅಗಲಿದ ಅಂತಹ ಸರಳ  ಸಜ್ಜನರ ಆತ್ಮಕ್ಕೆ  ಆ ಭಗವಂತ ಶಾಂತಿ ಕೊಡಲಿ ಮತ್ತು  ಸಾಧ್ಯವಾದರೆ ಅವರು ಮತ್ತೊಮ್ಮೆ ನಮ್ಮ ರಾಜ್ಯದಲ್ಲಿಯೇ ಹುಟ್ಟಿ ಬರಲಿ ಎಂದಷ್ಟೇ ಕೋರಬಹುದು.

ಏನಂತೀರೀ?

ಹಸಿವು

ಅದೊಂದು ಶನಿವಾರದ ದಿನ.  ಬೆಳಿಗ್ಗೆ ಶಂಕರ ಕಛೇರಿಗೆ ಹೊರಡಲು ಅನುವಾಗಿ ತಿಂಡಿ ತಿನ್ನುತ್ತಿದ್ದ. ಅಡುಗೆ ಮನೆಯೊಳಗೆ ಅವನ ಮಡದಿ ಮಯೂರಿ ಮಗ ಸಮೀರನೊಂದಿಗೆ ಏನೋ ಸಮಾಧಾನ ಮಾಡುತ್ತಿದ್ದಳು ಆದರೆ ಅದನ್ನು ಕೇಳಲು ತಯಾರಿಲ್ಲದ ಮಗ, ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಮಾಡುತ್ತಿದ್ದ. ಮೊದ ಮೊದಲು  ಅಮ್ಮಾ ಮಗನ ನಡುವಿನ ವಿಷಯಕ್ಕೆ ತಾನೇಕೇ ಹೋಗುವುದು ಎಂದು ಸುಮ್ಮನಿದ್ದರೂ, ಮಡದಿಯು ಪರಿಪರಿಯಾಗಿ ಸಂತೈಸಲು ಪ್ರಯತ್ನಿಸಿದ್ದರೂ ಒಪ್ಪಿಕೊಳ್ಳದೆ ಪಿರಿಪಿರಿ ಮಾಡುತ್ತಿದ್ದ ಮಗನನ್ನು ಕಂಡ ಶಂಕರ, ಏನದು? ಏನಾಗ್ತಾ ಇದೇ? ಎಂದು ತುಸು ಎತ್ತರದ ಧನಿಯಲ್ಲಿ ವಿ‍ಚಾರಿಸಿದಾಗ, ಸಹಜವಾಗಿಯೇ ತಾಯಿಯ ಕರುಳು ಏನು ಇಲ್ಲಾರೀ , ಏನೋ ಅಮ್ಮಾ ಮಗನ ನಡುವಿನ ವಿಷಯ ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದಳು.  ಏನೂ? ತಿಂಡಿ ತಟ್ಟೆ  ಹಿಡಿದು ಐದು ಹತ್ತು ನಿಮಿಷಗಳಾಯ್ತು. ಇನ್ನೂ  ಅಮ್ಮಾ ಮಗನ ವಿಷಯ ಬಗೆ ಹರಿಯಲಿಲ್ಲ ಅಂದ್ರೇ ಅದೇನು ಅಂಥಾ ಗಹನವಾದ ವಿಷಯ ಎಂದಾಗ, ಅದೇನೂ ಇಲ್ಲಾರೀ, ಇವತ್ತು ತಿಂಡಿಗೆ ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಮಾಡಿದ್ದಿನಲ್ಲಾ, ಅದು ನಿಮ್ಮ ಮಗನಿಗೆ ಇಷ್ಟವಿಲ್ಲವಂತೆ ಅದಕ್ಕೆ ಮ್ಯಾಗಿ ಮಾಡಿಕೊಳ್ತೀನಿ ಇಲ್ಲವೇ ಹಾಗೇ ಹಸಿದುಕೊಂಡು ಹೋಗ್ತೀನಿ ಅಂತಾ ಹಠ ಹಿಡಿದಿದ್ದಾನೆ. ಮಧ್ಯಾಹ್ನ ಊಟದ ಡಬ್ಬಿಗೂ ತೆಗೆದುಕೊಂಡು ಹೋಗೋದಿಲ್ವಂತೆ ಎಂದಳು.

ಏನೋ ಮಗೂ ಅದ್ಯಾಕೋ ಹಾಗೆ ಹೇಳ್ತೀಯಾ? ಎಷ್ಟು ರುಚಿಯಾಗಿದೆಯಲ್ಲೋ?  ನೋಡು ನಾನೂ ಅದನ್ನೇ ತಿನ್ತಾಇದ್ದೀನಿ ಮತ್ತು ಅದನ್ನೇ ಮಧ್ಯಾಹ್ನದ ಊಟಕ್ಕೂ  ಡಬ್ಬಿಯಲ್ಲಿ  ಕಟ್ಟಿಕೊಂಡು  ಹೋಗ್ತಾ ಇದ್ದೀನಿ. ಆಹಾರ ದೇವರ ಪ್ರಸಾದದ  ಸಮಾನ. ಅದನ್ನು ಹಾಗೆ ಬೇಡಾ ಎನ್ನಬಾರದು. ಸುಮ್ಮನೆ ಕಣ್ಣು ಒತ್ತಿಕೊಂಡು ತಿಂದುಕೊಂಡು ಹೋಗು. ಬೇಕಾದ್ರೆ ಸ್ವಲ್ಪ ಮೊಸರು ಹಾಕಿಸಿಕೊಂಡು ತಿನ್ನು. ತುಂಬಾ ಚೆನ್ನಾಗಿರುತ್ತದೆ. ಮೊಸರು ಆರೋಗ್ಯಕ್ಕೂ ತಂಪು ಎಂದ. ಇಲ್ಲಾಪ್ಪಾ ನನಗೆ ಇಷ್ಟಾ ಇಲ್ಲ. ಅಮ್ಮಾ ಸಿಹಿಯಾಗಿ ಮಾಡಿರ್ತಾರೆ ನನಗೆ ಇಷ್ಟ ಇಲ್ಲ ಎಂದ. ಓ ಅಷ್ಟೇನಾ? ಅದಕ್ಕೇನಂತೆ? ಜೊತೆಗೆ ಒಂದು ಚೂರು ಹೇರಳೇ ಕಾಯಿ ಉಪ್ಪಿನಕಾಯಿಯನ್ನೋ ಇಲ್ಲವೇ ಬಾಳಕದ ಮೆಣಸಿಕಾಯಿ (ಉಪ್ಪು ಮೆಣಸಿನಕಾಯಿ) ನೆಂಚಿಕೊಂಡು ತಿಂದರಾಯ್ತು. ಮಯೂರಿ ನನ್ನ ಡಬ್ಬಿಗೂ ಉಪ್ಪಿನಕಾಯಿ ಜೊತೆಗೆ ಸ್ವಲ್ಪ ಮೊಸರು ಕೊಡು ಮಧ್ಯಾಹ್ನದ ವೇಳೆಗೆ ಅವಲಕ್ಕಿ ಬಿರುಸಾಗಿ ಗಂಟಲೊಳಗೆ ಇಳಿಯುವುದಿಲ್ಲ ಎಂದ ಶಂಕರ, ಮಗೂ ಬೇಗ ಬೇಗ ತಿನ್ನು  ಸ್ಪೆಷಲ್ ಕ್ಲಾಸ್ಗೆ ತಡವಾಗುತ್ತದೆ. ಆಮೇಲೆ ಸುಮ್ಮನೆ ಹೊರಗೆ ನಿಲ್ಲಿಸಿ ನಮಗೆ ಕರೆ ಮಾಡ್ತಾರೆ ಅಂದ.  ಅದಾವುದಕ್ಕೂ ಒಪ್ಪದ ಮಗ ಮೊಂಡು ಹಠ ಹಿಡಿದು, ನನಗೆ ಬೇಡಾ ಅಂದ್ರೆ ಬೇಡಾ. ಮ್ಯಾಗಿ ಮಾಡಿಕೊಡುವುದಾದರೆ ಸರಿ ಇಲ್ಲಾಂದ್ರೆ ನಾನು ಹಾಗೆ ಹಸಿದು ಕೊಂಡೇ ಇರ್ತೀನಿ ಹಾಗೇ ಶಾಲೆಗೂ ಹೋಗ್ತೀನೀ ಎಂದು ತುಸು ಜೋರಾಗಿಯೇ ಹೇಳಿದ್ದು, ಶಂಕರ ಮತ್ತು ಮಯೂರಿಯರ ಪಿತ್ತ ನೆತ್ತಿಗೇರಿಸಿತ್ತು.  ಅದುವರೆವಿಗೂ ಸಮಾಧಾನವಾಗಿ ತಿಂಡಿ ತಿನ್ನುತ್ತಿದ್ದ ಶಂಕರ  ತಿಂಡಿ ತಟ್ಟೆ ಕೆಳಗಿಟ್ಟು ಕೈತೊಳೆದುಕೊಂಡು ಬೆಳೆಯುತ್ತಿರುವ ಹುಡುಗ  ಈ ಹಾಳೂ ಮೂಳೂ ಜೆಂಕ್ ಫುಡ್ ತಿಂದ್ರೆ ಶಕ್ತಿಯಾದ್ರೂ ಎಲ್ಲಿಂದ ಬರಬೇಕು? ನಿಮ್ಮ ತಾತನ ಕಾಲದಲ್ಲಿ ಮನೆಯಲ್ಲಿ ತಿನ್ನುವುದಕ್ಕೇ ಏನು ಇರ್ತಾಯಿರಲಿಲ್ಲ ಅದಕ್ಕೆ ಅವರಿವರ ಮನೆಯಲ್ಲಿ  ವಾರಾನ್ನಾ ಮಾಡಿ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ತಮ್ಮ ಮಕ್ಕಳಿಗೆ ಆ ರೀತಿಯ ತೊಂದರೆ ಆಗಬಾರದೆಂದು ನಮ್ಮಗೆಲ್ಲ  ಅವರಿಗೆ ಕೈಯಲ್ಲಿ ಆದಷ್ಟು ಒಳ್ಳೆಯ ತಿಂಡಿ ಊಟ ಹಾಕಿ ಸಾಕಿದ್ರು. ನಾವು ಏನು ಮಾಡಿ ಹಾಕ್ತಿದ್ರೋ ಅದನ್ನೇ ಪ್ರಸಾದ ಎಂದು ತಿಳಿದು ತಿಂದು ಬೆಳೆದು ದೊಡ್ಡವರಾದ ಮೇಲೆ ನಮ್ಮ ರೀತಿ ನಿಮಗೆ ಇರಬಾರದೂ ಅಂತ ಅತ್ಯಂತ ವೈಭವೋಪೇತವಾಗಿ ರುಚಿರುಚಿಯಾಗಿ ಮಾಡಿ ಹಾಕಿದ್ರೂನೂ ತಿನ್ನೋದಕ್ಕೇ ಇಷ್ಟೋಂದು ಕೊಬ್ಬು ಆಡ್ತೀರಲ್ಲೋ, ಮಯೂರೀ,  ಅವನು ಕೇಳಿ ಕೇಳಿದ್ದೆಲ್ಲಾ ಮಾಡಿ ಹಾಕಿ ಮುದ್ದು ಮಾಡಿ ಆವನನ್ನೀಗ ಮೊದ್ದು ಮಾಡಿಟ್ಟಿದ್ದೀಯಾ, ಅವನಿಗೆ ಅನ್ನದ  ಬೆಲೆ ಗೊತ್ತಿಲ್ಲ ಹಸಿವಿನ ರುಚಿ ಗೊತ್ತಿಲ್ಲಾ. ಇವತ್ತು ಒಂದು ದಿನ ಹಸಿದು ಕೊಂಡೇ ಹೋಗಲಿ ಆಗ ಗೊತ್ತಾಗುತ್ತೆ ಹಸಿವಿನ ಬೆಲೆ ಏನು?  ಎಂದು ಎತ್ತರದ ಧನಿಯಲ್ಲಿ ಹೇಳಿದರೂ, ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ ಎನ್ನುವಂತೆ ಉಬಾ ಶುಬಾ ಎನ್ನದೆ ತನ್ನ ಮೊಂಡು ಹಠದಲ್ಲಿಯೇ ಇದ್ದ ಸಮೀರ.   

ಅದೇ ಸಮಯಕ್ಕೆ  ಯಾರೋ ಮಕ್ಕಳು ಆಂಟೀ ಆಂಟೀ ಏನಾದ್ರೂ ಕೆಲಸ ಇದ್ಯಾ? ನಿಮ್ಮ ಗಾರ್ಡನ್ ಕ್ಲೀನ್ ಮಾಡ್ಬೇಕಾ? ಇಲ್ಲಾ ನಿಮ್ಮ ಮನೆ ಮುಂದಿರುವ ಮೋರಿ ಕ್ಲೀನ್, ಇಲ್ಲಾ ಗಾಡಿ ತೋಳಿಬೇಕಾ ಹೇಳಿ ಆಂಟಿ, ಏನ್ ಕೆಲ್ಸಾ ಹೇಳಿದ್ರೂ ಮಾಡ್ತೀವಿ. ಸ್ವಲ್ಪ ತಿನ್ನೋದಕ್ಕೆ ತಿಂಡಿ ಮತ್ತು ನಿಮಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೊಡಿ, ಅಂತಾ ಮನೆಯ ಮುಂದಿನ ಗೇಟ್ ಬಳಿ ಜೋರಾಗಿ  ಕೂಗುತ್ತಿರುವುದು ಕೇಳಿ ಬಂತು. ಮಗನೊಂದಿಗೆ ಹೊರಗೆ ಬಂದು ಆ ಮೂರ್ನಾಲ್ಕು ಮಕ್ಕಳನ್ನು ನೋಡಿದರೆ ಯಾರಿಗೂ ಆರು, ಎಂಟು ವರ್ಷಗಳು ದಾಟಿರಲಿಲ್ಲ.  ಮೈಮೇಲೆ ಸರಿಯಾದ ಬಟ್ಟೆಯೂ ಇರಲಿಲ್ಲ. ಕಣ್ಣಿನಲ್ಲಿ ಹೊಳಪಿರಲಿಲ್ಲ.  ಗಂಟಲಲ್ಲಿ ಹಸಿವಿನ ಆರ್ದ್ರತೆ ಇತ್ತು.  ಆ ಮಕ್ಕಳ ಬಳಿ ಬಂದು ಯಾಕೋ ಮಕ್ಳಾ!! ಶಾಲೆಗೆ ಹೋಗುವುದಿಲ್ಲವೇನೋ?  ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಕೆಲಸ ಮಾಡೋದಿಕ್ಕೆ ಬಂದಿದ್ದೀರಲ್ಲೋ ಅಂದ್ರೆ, ಏನು ಮಾಡೋದು ಅಂಕಲ್ ಮನೆ ತುಂಬಾ ಮಕ್ಕಳು ಅಪ್ಪಾ, ಅಣ್ಣ, ಗ್ಯಾರೇಜ್ ಹೋಗ್ತಾರೆ ಅಮ್ಮಾ ಮನೆ ಕೆಲ್ಸಾ ಮಾಡ್ತಾರೆ. ತರೋ ದುಡ್ಡು  ಮನೆಗೆ ಸಾಕಾಗೊಲ್ಲ.  ಶಾಲೆ ಇರೋ ದಿವಸ  ಶಾಲೆಯಲ್ಲಿ ಕೊಡೋ  ಬಿಸಿ ಊಟದಲ್ಲೇ ಹೇಗೋ ಹೊಟ್ಟೆ ತುಂಬತ್ತೆ. ಅದಕ್ಕೇ ಶಾಲೆಗೆ ರಜೆ  ಇರುವಾಗ  ಹೀಗೆ ಸಣ್ನ ಪುಟ್ಟ ಕೆಲಸ ಮಾಡ್ತೀವೀ. ನೀವು ಕೊಟ್ಟ ಅಲ್ಪ ಸ್ವಲ್ಪ ದುಡ್ಡಿನಲ್ಲಿ  ಪುಸ್ತಕ, ಪೆನ್ಸಿಲ್ ತಗೋತೀವಿ. ಏನಾದರೂ ಕೊಟ್ರೆ ತಿನ್ನುತ್ತೀವಿ ಎಂದಾಗ ಮನಸ್ಸು ಚುರ್ ಎಂದಿತು.  ಶಂಕರ  ಪಕ್ಕದಲ್ಲೇ ನಿಂತಿದ್ದ  ಮಗನ ಕಡೆ ನೋಡಿದ. ಹೇಳುವುದಕ್ಕೆ ಮತ್ತು ಕೇಳುವುದಕ್ಕೇನು  ಇರಲಿಲ್ಲ.  ಬುದ್ದಿ ತಿಳಿದಿದ್ದ  ಮಗನಿಗೆ ಎಲ್ಲವೂ ಅರ್ಥವಾಗಿತ್ತು. ಸುಮ್ಮನೆ ಮನೆಯೊಳಗೆ ಹೋಗಿ ಅಮ್ಮಾ ತಿಂಡಿ ಕೊಡಿ ಹೊತ್ತಾಯ್ತು ಎಂದ. ಹೊರಗೆ ನಡೆದ ಸಂಗತಿಗಳ ಅರಿವಿಲ್ಲದ ಮಯೂರಿ ಇದೇನಪ್ಪಾ ಮಗ ಇಷ್ಟು ಬೇಗನೆ ಸರಿ ಹೋದ್ನಲ್ಲಾ  ಅವರಪ್ಪ ಅದೇನು ಮೋಡಿ ಮಾಡಿದ್ರೋ ಏನೋ? ಸರಿ ನನಗೆಯಾಕೆ ಬೇಕು ಮಗ ತಿಂಡಿ ತಿಂದ್ರೆ ಸಾಕು ಎಂದು ಮನಸ್ಸಿನಲ್ಲಿಯೇ ಯೋಚಿಸಿ ಮಗನಿಗೆ ತಿಂಡಿ ತಟ್ಟೆ ಕೊಟ್ಟು  ಡಬ್ಬಿ ಕಟ್ಟಲು ಶುರು ಹಚ್ಚಿಕೊಳ್ಳುವಷ್ಟರಲ್ಲಿಯೇ, ಹೊರಗಿನಿಂದಲೇ ಶಂಕರ, ಮಯೂರಿಯನ್ನು ಕರೆದು, ನೋಡು ಈ ಮಕ್ಕಳಿಗೆಲ್ಲಾ  ಹೊಟ್ಟೆ ತುಂಬಾ  ತಿಂಡಿ ತಿನ್ನಲು ಕೊಡು. ಮಾಡಿದ ತಿಂಡಿ ಸಾಲದೇ ಹೋದ್ರೆ ನನ್ನ ಡಬ್ಬಿಯಿಂದ ತೆಗೆದುಕೋ, ನಾನು ಬೇಕಿದ್ರೆ, ಆಫೀಸಿನಲ್ಲಿಯೇ ಊಟ ಮಾಡಿಕೊಳ್ತೀನಿ ಇಲ್ಲಾಂದ್ರೆ ಮೂರ್ನಲ್ಕು ಹಣ್ಣುಗಳು ಇದ್ದರೆ ಕೊಟ್ಟು ಬಿಡು. ಇವತ್ತು ಫಲಾಹಾರ ಮಾಡ್ತೀನಿ ಅಂತ ತನ್ನ  ಮಡದಿಗೆ ಹೇಳಿ, ಮಕ್ಕಳತ್ತ ತಿರುಗಿ, ನೋಡೋ ಮಕ್ಳಾ, ನೀವೆಲ್ಲಾ ಚಿಕ್ಕ ಮಕ್ಕಳು ನಿಮ್ಮ ಹತ್ತಿರ ಕೆಲಸ ಮಾಡಿಸಿ ಕೊಳ್ಳುವುದು ತಪ್ಪು. ಹಾಗೇ ನಿಮಗೆ ದುಡ್ಡು ಕೊಡುವುದೂ ತಪ್ಪು. ನೀವಾದ್ರೂ ಏನು ಮಾಡ್ತೀರಿ, ಹೆತ್ತವರು ಗೊತ್ತು ಗುರಿ ಇಲ್ಲದೆ ಮಾಡಿದ  ತಪ್ಪಿಗೆ ನಿಮ್ಮನ್ನು ದೂರುವುದು ಸರಿಯಲ್ಲ. ಆದರೂ ನಿಮಗೆ ಓದಿನ ಹಸಿವಿದೆ. ನಿಜವಾದ ಹಸಿವಿನ ಅರಿವಿದೆ.  ಹಸಿದು ಬಂದಿರುವ ಶತ್ರುಗಳಿಗೂ ಮೊದಲು ಉಣಬಡಿಸಿ ನಂತರ ಕಾದಾಡು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗಾಗಿ ನೀವೇನೂ ನಮ್ಮ ಮನೆಯಲ್ಲಿ ಯಾವುದೇ ಕೆಲಸ ಮಾಡಬೇಕಿಲ್ಲ. ತಿಂಡಿ ಕೊಡ್ತಾರೆ. ಹೊಟ್ಟೆ ತುಂಬಾ ತಿನ್ನಿ. ಹಾಗೆ ಈ ದುಡ್ಡು ಜೋಪಾನವಾಗಿ  ಅಮ್ಮನ ಕೈಗೆ  ಕೊಟ್ಟು   ನಿಮ್ಮ ಓದಿನ ಅವಶ್ಯಕತೆಗೆ ಬಳೆಸಿಕೊಳ್ಳಿ. ಸುಖಾ ಸುಮ್ಮನೆ  ಖರ್ಚು ಮಾಡಬೇಡಿ ಎಂದು ಹೇಳಿ  ಕಛೇರಿಗೆ ಹೊರಡಲು ಸಿಧ್ಧವಾದನು.  ಮಕ್ಕಳ ಸ್ಥಿತಿಗತಿಗಳನ್ನು  ನೋಡಿದ ತಕ್ಷಣವೇ ಅರಿತ ಮಯೂರಿಯೂ  ಮಕ್ಕಳಿಗೆ  ತಿಂಡಿ ಕೊಡಲು ಹೋದರೆ, ಆ ಮಕ್ಕಳಲ್ಲಿ ಒಬ್ಬ ಆಂಟಿ  ತಿಂಡಿನಾ ಓಂದು ಕವರಿನಲ್ಲಿ ಹಾಕಿ ಕೊಡ್ತೀರಾ?  ಮನೆಗೆ ತೆಗೆದುಕೊಂಡು ಹೋಗಿ ನಮ್ಮ ತಮ್ಮ, ತಂಗಿ ಜೊತೆ ತಿನ್ತೀವಿ ಎಂದು ಹೇಳಿದಾಗ, ಅಲ್ಲಿಯೇ ತಿಂಡಿ ತಿನ್ನುತ್ತಿದ್ದ ಸಮೀರನಿಗೆ   ಹಸಿವು ಎಂದರೆ ಹೇಗಿರುತ್ತದೆ ಎಂಬ  ಅರಿವು ಆಗಿದ್ದಂತೂ ಸುಳ್ಳಲ್ಲ.  ಮಯೂರಿ ಕೂಡ ತಿಂಡಿಯನ್ನು ಪೊಟ್ಟಣದಲ್ಲಿ ಕಟ್ಟಿ ಕೊಡುತ್ತಾ  ಮಗನಿಗೆ ಚಿಕ್ಕದಾಗಿದ್ದ ಕೆಲವು ಬಟ್ಟೆಗಳನ್ನೂ ಜೊತೆಗೆ  ಕೊಟ್ಟು ಅದರ ಜೊತೆಗೆ ಮನೆಯಲ್ಲಿ  ತನ್ನ ಮಕ್ಕಳು   ಉಪಯೋಗಿಸದೇ ಇದ್ದ ಖಾಲೀ ಪುಸ್ತಕಗಳು ಮತ್ತು ಪೆನ್ಸಿಲ್ಗಳನ್ನು ಕೊಟ್ಟು ಕಳುಹಿಸಿದಳು.

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಗನೆಡೆಗೆ ತಿರುಗಿ ನೋಡಿದ ಶಂಕರ, ನೋಡಿದೆಯಾಪ್ಪಾ  ನಿಜವಾದ ಹೊಟ್ಟೆಯ ಹಸಿವು ಮತ್ತು ಓದಿನ ಹಸಿವು ಹೇಗೆ ಇರುತ್ತದೆ ಅಂತಾ. ನಿಮಗೆಲ್ಲಾ  ಈ ರೀತಿಯ ತೊಂದರೆಗಳಾಗದಿರಲಿ ಎಂದು ನಾವು ಚೆನ್ನಾಗಿ ಹೊಟ್ಟೆ, ಬಟ್ಟೆ ಮತ್ತು ಓದಿಗೆ ಯಾವುದೇ ರೀತಿಯ ತೊಂದರೆಯಾಗದಂತೆ  ನೋಡಿಕೊಂಡರೆ, ಅದನ್ನು ಅರಿಯದೆ ಸುಮ್ಮನೆ ಅಪ್ಪಾ ಅಮ್ಮನ ಮೇಲೆ  ದರ್ಪು ತೋರಿಸುತ್ತೀರಿ ಎಂದಾಗ ಮಗನಿಗೆ ತನ್ನ ತಪ್ಪಿನ ಅರಿವಾಗಿ ಇಲ್ಲಪ್ಪಾ ಇನ್ನು ಮುಂದೆ ಹಾಗೆ ಹಠ ಮಾಡುವುದುದಿಲ್ಲ ನನ್ನನ್ನು ಕ್ಷಮಿಸಿ ಎಂದ. ಮಾಡಿದರ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದವರಿಗೆ ಇನ್ನೂ ಹೆಚ್ಚಿಗೆ ತಿಳುವಳಿಗೆ  ಹೇಳುವುದು ಸರಿಯಲ್ಲ ಎಂದು ನಿರ್ಥರಿಸಿದ ಶಂಕರ,  ಸರಿ ಸರಿ, ಮೊದಲು ಅಮ್ಮನ ಬಳಿ ಹೋಗಿ ಕ್ಷಮೆ ಕೇಳು ಅವಳಿಗೇ ತುಂಬಾ ಬೇಜಾರಾಗಿರುವುದು ಎಂದ. ಕಾಲಿಗೆ ಬಿದ್ದ ಮಗನನ್ನು ಕೈ ಎತ್ತುತ್ತಾ ಸರಿ ಬಿಡು ಗೊತ್ತಿಲ್ಲದೆ ಹೀಗೆ ಮಾಡಿದೆ. ಮುಂದೆಂದೂ ಇಂತಹ ಪರಿಸ್ಥಿತಿ ಬರದೇ ಇರಲಿ ಎಂದು ಮಗನನ್ನು ಬರಸೆಳೆದು ಮಗನ ಹಣೆಯ ಮೇಲೆ ಮುತ್ತಿಟ್ಟಳು ಮಯೂರಿ. ಎಷ್ಟಾದರೂ ಅವಳದ್ದು ಹೆತ್ತ ತಾಯಿಯ ಕರುಳಲ್ಲವೇ, ತಾಯಿ ಕ್ಷಮಯಾಧರಿತ್ರಿಯಲ್ಲವೇ

ಏನಂತೀರಿ

ಪುನರ್ಜನ್ಮ

ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ,  ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು  ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು.  ಆಗ  ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ. ಮೊಮ್ಮಗನ ಪರೀಕ್ಷೆ ಮುಗಿಯುವುದಕ್ಕೇ ಕಾಯುತ್ತಿದ್ದು,  ಪರೀಕ್ಷೆ ಮುಗಿಯುತ್ತಿದ್ದಂತೆಯೇ ಅವರೇ  ಬಂದೋ ಇಲ್ಲವೇ ಮಗನ ಮೂಲಕವೋ ಮೊಮ್ಮಗನನ್ನು ಊರಿಗೆ ಕರೆಸಿಕೊಂಡು ಬಿಡುತ್ತಿದ್ದರು.  ಯುಗಾದಿ ನಂತರದ ಒಂದು ತಿಂಗಳ ಪೂರ್ತಿಯೂ ಅವರ ಊರಿನಲ್ಲಿ ಮತ್ತು ಸುತ್ತ ಮುತ್ತಲಿನ ಊರಿನಲ್ಲಿ ಊರ ಹಬ್ಬದ ಸಡಗರ. ಪ್ರತಿ ದಿನ ಮೊಮ್ಮಗನನ್ನು ಕರೆದುಕೊಂಡು  ಅಕ್ಕ ಪಕ್ಕದ ಊರುಗಳ ಜಾತ್ರೆಗೆ ಹೋಗುವುದು, ಬಿಡುವಿದ್ದ ಸಮಯದಲ್ಲಿ ದೇವಸ್ಥಾನದ ಕಲ್ಯಾಣಿಯಲ್ಲಿ ಮೊಮ್ಮಗನಿಗೆ ಈಜು ಕಲಿಸುವುದು, ಶ್ಲೋಕ, ಬಾಯಿ ಪಾಠಗಳನ್ನು ಹೇಳಿಕೊಡುವುದು, ತೋಟಕ್ಕೆ ಕರೆದುಕೊಂಡು ಹೋಗಿ ಎಳನೀರು ಕುಡಿಸುವುದೆಂದರೆ ಅವರಿಗೆ ಅದೇನೋ ಅಮಿತಾನಂದ. ಸಂಜೆಯಾಯಿತೆಂದರೆ ಊರಿನ  ರಂಗಮಂಟಪದ ಎದುರು ತಮಟೆಯ ಗತ್ತಿಗೆ  ಊರಿನ ಆಬಾಲ ವೃಧ್ಧರಾದಿ ಗಂಡಸರು  ರಂಗ ಕುಣಿಯುವುದನ್ನು  ನೋಡುವುದೇ ಶಂಕರನಿಗೆ ಮಹದಾನಂದ. ಕೆಲವೊಂದು ಬಾರಿ ತಾತನ ಶಲ್ಯವನ್ನು ಎಳೆದುಕೊಂಡು ಹೋಗಿ ತಾನೂ ಅವರೊಡನೆ ತನ್ನ ಪುಟ್ಟ ಪುಟ್ಟ  ಹೆಜ್ಜೆಗಳಲ್ಲಿ  ರಂಗ ಕುಣಿಯುತ್ತಿದ್ದರೆ. ಅವರ ತಾತ ಎಲ್ಲರಿಗೂ ಅದನ್ನು ತೋರಿಸುತ್ತಾ ನೋಡ್ರೋ ನಮ್ಮ ಮೊಮ್ಮಗ ಹೇಗೆ ಕುಣಿಯುತ್ತಾನೆ ಎಂದರೆ, ಎಷ್ಟಾದರೂ  ನಮ್ಮ ಊರಿನ ಶಾನುಭೋಗರ ಕುಡಿಯಲ್ಲವೇ? ಇದಲ್ಲಾ ರಕ್ತದಲ್ಲೇ ಬಂದಿದೆ ಬಿಡಿ ಎಂದು ಅಲ್ಲಿದ್ದವರು ಹೇಳುತ್ತಿದ್ದರು.

ಅದೊಂದು ದಿನ ಶಂಕರ  ಮನೆಯಲ್ಲಿ  ಸ್ನಾನ ಮಾಡುವುದು ಬೇಡ.  ಊರ ದೇವತೆಯ ದೇವಾಲಯದ ಮುಂದಿರುವ ಕಲ್ಯಾಣಿಯಲ್ಲೇ ಸ್ನಾನ ಮಾಡೋಣ ಎಂದು ಹಠ ಹಿಡಿದ. ತಾನನಿಗೋ ಮೊಮ್ಮಗನನ್ನು ಕಲ್ಯಾಣಿಗೆ ಕರೆದುಕೊಂಡು ಹೋಗುವ ಆಸೆ. ಆದರೆ ಅಜ್ಜಿ ಆದಾಗಲೇ ಬಚ್ಚಲಿನಲ್ಲಿ ಬಿಸಿ ನೀರು ಕಾಯಿಸಿಯಾಗಿತ್ತು ಹಾಗಾಗಿ ಬೇಡ ಎಂದರು. ಆದರೂ ಮೊಮ್ಮಗನ ಬೆಂಬೆಡದ ಹಠಕ್ಕೆ ಮಣಿದು ತಾತ ಮೊಮ್ಮಗ ಟವೆಲ್ ಮತ್ತು ಬಟ್ಟೆಗಳನ್ನು ಹಿಡಿದುಕೊಂಡು ಕಲ್ಯಾಣಿಗೆ ಹೋಗಿ ನೀರಿಗೆ ಇಳಿದು ಮನಸೋ ಇಚ್ಚೆ ಆಟವಾಡತೊಡಗಿದರು. ತಾತ ಆ ವಯಸ್ಸಿನಲ್ಲಿಯೂ ಲೀಲಾಜಾಲವಾಗಿ ಈಜುತ್ತಿದ್ದಲ್ಲದೆ, ನೀರಿನ ಮೇಲೆ  ಕೆಲ ಯೋಗಾಸನವನ್ನೂ ಮಾಡುತ್ತಿದ್ದರು. ಗಂಟೆ ಗಟ್ಟಲೆ ನೀರಿನ ಮೇಲೆ ಆರಾಮವಾಗಿ ಪದ್ಮಾಸನ ಹಾಕಿಕೊಂಡು ಮಲಗುವುದು  ಅವರಿಗೆ ಕರಗತವಾಗಿತ್ತು.   ಸೂರ್ಯ ಕೂಡಾ ನೆತ್ತಿಯಮೇಲೆ ಬರುತ್ತಿದ್ದ. ಹೊಟ್ಟೆ ಕೂಡಾ ಚುರುಗುಟ್ಟುತ್ತಿದ್ದರಿಂದ ಇಬ್ಬರೂ ನೀರಿನಿಂದ ಹೊರಗೆ ಬಂದು ಟವಲ್ನಿಂದ ಮೈ ಒರೆಸಿಕೊಳ್ಳುತ್ತಿದ್ದಾಗ ಶಂಕರ ತಾತನ ತೊಡೆಯ ಮೇಲೆ ತ್ರಿಶೂಲಾಕಾರದ ಬರೆ ನೋಡಿ, ಎನು ತಾತಾ, ನೀವೂ ಕೂಡಾ ಚಿಕ್ಕ ವಯಸ್ಸಿನಲ್ಲಿ ನನ್ನಂತೆಯೇ ಚೇಷ್ಟೆ ಮಾಡಿ ನಿಮ್ಮ ಅಮ್ಮನ ಕೈಯಲ್ಲಿ ಬರೆ ಎಳೆಸಿಕೊಂಡಿದ್ರಾ ಎಂದು ತಾತನ ಬರೆಯನ್ನು ತೋರಿಸಿದ. ಮೊಮ್ಮಗನ ಈ ಪ್ರಶ್ನೆಗೆ ಮುಗುಳ್ನಗುತ್ತಾ, ಓ ಇದಾ, ಇದು ನಮ್ಮ ಅಮ್ಮ ಎಳೆದ ಬರೆಯಲ್ಲಾ. ಇದು ಆ ಯಮ ಧರ್ಮರಾಯ ಎಳೆದು ಕಳಿಸಿದ ಬರೆ. ಬಾ ಮನೆಗೆ ಹೋಗುತ್ತಾ ದಾರಿಯಲ್ಲಿ ಎಲ್ಲಾ ಹೇಳುತ್ತೇನೆ ಎಂದು ಹೇಳಿ ಒದ್ದೆ ಬಟ್ಟೆ ಬದಲಾಯಿಸಿ, ದೇವಸ್ಥಾನಕ್ಕೆ ಹೋಗಿ, ಇಬ್ಬರೂ ವೀಭೂತಿ ಧರಿಸಿ, ನಮಸ್ಕರಿಸಿ ತಮ್ಮ ಕಥೆಯನ್ನು ತಮ್ಮ ಮೊಮ್ಮಗನಿಗೆ ಹೇಳುತ್ತಾ ಮನೆಯ ಕಡೆಗೆ  ಹೆಜ್ಜೆ ಹಾಕ ತೊಡಗಿದರು.

ನೋಡು ಮಗು, ನಾನಾಗ  ನಿನ್ನಷ್ಟೇ ಸಣ್ಣ ವಯಸ್ಸಿನ ಹುಡುಗ. ನಾನು ನಮ್ಮ ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ನನ್ನ ಅಪ್ಪ ತೀರಿಕೊಂಡಿದ್ದರು. ಅಂದು ನಮ್ಮ ತಂದೆಯವರ ಶ್ರಾಧ್ಧ. ನಾನಿನ್ನೂ ಸಣ್ಣವನಾಗಿದ್ದರಿಂದ ನನ್ನನ್ನು ಹೊರಗಡೆ ಆಟವಾಡಲು ಬಿಟ್ಟು ನಮ್ಮ ಅಣ್ಣಂದಿರೂ ಮತ್ತು ಚಿಕ್ಕಪ್ಪ, ದೊಡ್ಡಪ್ಪಂದಿರು ಮನೆಯ ಒಳಗೆ ತಿಥಿ ಮಾಡುತ್ತಿದ್ದರು. ಆದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಜೋರಾಗಿ ಕೂಗುತ್ತಾ ಬಿದ್ದು ಬಿಟ್ಟನಂತೆ. ಮನೆಯೊಳಗಿನಿಂದ ನಮ್ಮ ಅಮ್ಮ ಮತ್ತು ಅಕ್ಕ ಬಂದು ನೋಡಿದರೆ ನಾನು ನೆಲದ ಮೇಲೆ ಉಸಿರಾಡದೇ  ಬಿದ್ದಿದ್ದೆ.  ಅಕ್ಕ ಮತ್ತು ಅಮ್ಮನಿಗೆ ನಾನು ಸತ್ತು  ಹೋಗಿದ್ದದ್ದು ಗೊತ್ತಾಗಿ ಮನೆಯಲ್ಲಿ ತಿಥಿ ನಡೆಯುತ್ತಿದ್ದರಿಂದ ಮೈಲಿಗೆ ಆಗುವ ಕಾರಣ ಯಾರಿಗೂ ತಿಳಿಯಬಾರದೆಂದು ಗೋಣೀ ಚೀಲದಲ್ಲಿ ನನ್ನನ್ನು ಹಾಕಿ ಅದಕ್ಕೆ ದಾರ ಕಟ್ಟಿ ಹಿತ್ತಲಿನ ಕೊಟ್ಟಿಗೆಯಲ್ಲಿರಿಸಿ, ಅಳುತ್ತಲೇ ನಾಲ್ಕು ಚೊಂಚು ನೀರಿನಿಂದ ಸ್ನಾನ ಮಾಡಿ ತಿಥಿ ಮುಗಿಯುವುದನ್ನೇ ಕಾಯುತ್ತಿದ್ದರಂತೆ.  ಅದಾಗಿ ಒಂದೆರಡು ಗಂಟೆಯೊಳಗೆ ಇದ್ದಕ್ಕಿದಂತೆಯೇ ನಾನು ಮತ್ತೆ ಜೋರಾಗಿ ಕಿರುಚಾಡಿದ್ದನ್ನು ಕೇಳಿ ಹಿತ್ತಲಿಗೆ ಬಂದು ನೋಡಿದರೆ, ಗೋಣಿ ಚೀಲದ ಒಳಗೆ ಹೊರಳಾಡುತ್ತಿದ್ದ ನನ್ನನ್ನು ಹೊರಗೆ ತೆಗೆದಾಗ  ನೋಡಿದಾಗ ತೊಡೆ ಹಿಡಿದುಕೊಂಡು ಅಮ್ಮಾ ಅಯ್ಯೋ ಉರಿ ಉರಿ ಎಂದು ಅಳುತ್ತಿದ್ದೆ. ಆಗ ಹಾಗೇಕೆ ಅಳುತ್ತಿದ್ದೇನೆ ಎಂದು ನೋಡಿದರೆ ತೊಡೆಯ ಮೇಲೆ  ಆಗ ತಾನೇ ಹಾಕಿದ  ತ್ರಿಶೂಲಾಕಾರದ ಈ ರೀತಿಯ ಬರೆ ಇತ್ತು.  ಅಯ್ಯೋ ರಾಮ. ಸತ್ತು ಹೋಗಿದ್ದವನನ್ನು ನಾವೇ ಗೋಣಿ ಚೀಲದಲ್ಲಿ ಕಟ್ಟಿಹಾಕಿದ್ದರೆ, ಈಗ ಬರೆ ಹಾಕಿಸಿಕೊಂಡು ಅದು ಹೇಗೆ ಬದುಕಿದ ಎಂದು ಯೋಚಿಸುತ್ತಿರುವಾಗ, ಅಮ್ಮಾ ಅದೇನೋ ನನಗೆ  ಕನಸು ಬಿತ್ತಮ್ಮ. ಯಾರೋ ಇಬ್ಬರು ದಾಂಡಿಗರು ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗಿ  ನಾಟಕದಲ್ಲಿ ಬರುವ  ಯಮಧರ್ಮನ ಮುಂದೆ ನಿಲ್ಲಿಸಿದರು. ಆದರೆ ಅಲ್ಲಿ ಬಂದವನೊಬ್ಬ, ಅಯ್ಯೋ ತಪ್ಪು ಕೆಲಸ ಮಾಡಿದ್ದೀರಿ. ನಾನು ಹೇಳಿದ ನಂಜುಂಡ ಈ ವ್ಯಕ್ತಿಯಲ್ಲಾ. ಅವನೂ ಕೂಡಾ ಅದೇ ಊರಿನವನೇ, ಆವನಿಗೆ ವಯಸ್ಸಾಗಿದೆ. ಈ ಕೂಡಲೇ ಇವನನ್ನು ಅಲ್ಲಿಯೇ ಬಿಟ್ಟು ನಾನು ಹೇಳಿದ ನಂಜುಂಡನನ್ನು ಕರೆ ತನ್ನಿ ಎಂದು ಆಜ್ನಾಪಿಸಿದ. ಹಾಗೆಯೇ ಇಲ್ಲಿಗೆ ಬಂದು ಹೋಗಿದ್ದ ಕುರುಹಾಗಿ ಈ ಬರೆ ಎಳೆದು ಕಳುಹಿಸಲು ಹೇಳಿದ.  ನನಗೆ ಎಚ್ಚರವಾಗಿ ನೋಡಿದರೆ ನಿಜವಾಗಲೂ ನನಗೆ ಬರೆ ಹಾಕಿದ್ದರು ಮತ್ತು ಗೋಣಿ ಚೀಲದಲ್ಲಿ ಬಂಧಿಸಿದ್ದರು ಎಂದೆ.  ಇದನ್ನು ಕೇಳಿದ  ನಮ್ಮ ಅಮ್ಮ ಮತ್ತು ಅಕ್ಕನಿಗೆ ಸೋಜಿಗವಾಗಿ, ಕೂಡಲೇ ಅಕ್ಕ ಪಕ್ಕದ ಬೀದಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ನಂಜುಂಡನ ಮನೆಗೆ ಓಡಿ ಹೋಗಿ ನೋಡಿದರೆ, ಆಗಷ್ಟೇ ನಂಜುಂಡ ತೀರಿಹೋಗಿದ್ದ ವಿಷಯ ತಿಳಿಯಿತಂತೆ.  ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ  ತಾತಾ ಮೊಮ್ಮಗ ಮನೆಯ ಸಮೀಪ ಬಂದಾಗಿತ್ತು.  ಓಹೋ ಹಾಗಾದ್ರೆ  ನೀವು ಸತ್ತು ಬದುಕಿದ್ರಾ? ಅಂದರೆ ನೀವೇ ಹೇಳಿಕೊಡುವ  ಭಜಗೋವಿಂದಂನಲ್ಲಿ  ಬರುವ ಹಾಗೆ ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ ಅನ್ನೋ ಹಾಗಾಯ್ತು ಅಲ್ಲವೇ ತಾತಾ ಎಂದಾಗ, ಮೊಮ್ಮಗನ ಜಾಣ್ಮೆಗೆ ಮೆಚ್ಚಿ ಹೌದಪ್ಪಾ ಅದು ಹಾಗೇ ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ನಿನಗೆ ಈಗ ಅರ್ಥ ಆಗುವುದಿಲ್ಲ. ಮುಂದೆ ನಿಮ್ಮಪ್ಪನ ರೀತಿ ದೊಡ್ಡವನಾದ ಮೇಲೆ ತಿಳಿಯುತ್ತದೆ ಎಂದಿದ್ದರು.

ಆ ಸುಂದರ ಪ್ರಸಂಗವನ್ನು  ಮೆಲುಕು ಹಾಕುತ್ತಾ ಸರದಿಯ ಸಾಲಿನಲ್ಲಿ ಮುಂದುವರಿಯುತ್ತಿದ್ದಾಗಲೇ, ಅರ್ಚನೆ ಮಾಡಿಸುವವರು ಯಾರಾದರೂ ಇದ್ದಾರಾ ಎಂದು ಅರ್ಚಕರು ಹೇಳಿದಾಗಲೇ ವಾಸ್ತವ ಪ್ರಪಂಚಕ್ಕೆ ಮರಳಿ, ಆಗಲಿದ ತಾತನನ್ನು ನೆನೆಯತ್ತಾ , ದೇವರ ದರ್ಶನ ಕಣ್ತುಂಬ ಮಾಡಿದ ಶಂಕರ.  ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಹೇಳಿದಂತೆ  ಪುನರ್ಜನ್ಮ ಅನ್ನುವುದು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅದರ ಕುರಿತು ನಮ್ಮ ನಂಬಿಕೆಯಂತೂ ಕಡಿಮೆಯಾಗುವುದಿಲ್ಲ. ಏಕೆಂದರೆ ಇಂತಹ ಕಠು ಸತ್ಯ ಪ್ರಸಂಗಗಳು ನಮ್ಮನ್ನು ನಂಬುವಂತೆಯೇ ಮಾಡುತ್ತದೆ.

ಏನಂತೀರೀ?

ಅಹಂ

ಅದೊಂದು ಮಧ್ಯಮ ವರ್ಗದ ಕುಟುಂಬ. ಯಜಮಾನರು ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯೊಡತಿ ಅಪ್ಪಟ ಗೃಹಿಣಿ. ಇರುವ ಒಬ್ಬನೇ ಒಬ್ಬ ಮಗನನ್ನು ಹೊಟ್ಟೆ, ಬಟ್ಟೆ ಕಟ್ಟಿ  ಸಾಕಿ ಸಲಹಿ ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಿದರು. ಆ ಹುಡುಗನೂ ಅಷ್ಟೇ  ತಂಬಾ ಬುದ್ಧಿವಂತ. ಕಠಿಣ ಪರಿಶ್ರಮದಿಂದ ಓದಿ ಐದಂಕಿ ಸಂಬಳ ಪಡೆಯುವಷ್ಟು ಎತ್ತರಕ್ಕೆ ಬೆಳೆದ. ವಯಸ್ಸಿಗೆ ಬಂದ ಮಗನಿಗೆ ವಧು ಅನ್ವೇಷಣೆಗಾಗಿ ವಧುವರ ಕೇಂದ್ರಕ್ಕೆ  ಹೋಗಿದ್ದರು.

ಅದೇ  ಸಮಯಕ್ಕೆ  ಊರಿನ ಮತ್ತೊಂದು ಭಾಗದಲ್ಲಿದ್ದ ಇನ್ನೊಂದು ಮಧ್ಯಮ ವರ್ಗದ ಕುಟುಂಬದ ಒಬ್ಬಳೇ  ಸುರದ್ರೂಪಿಯಾದ  ಡಿಗ್ರಿ ಮುಗಿಸಿ  ಹತ್ತಿರದ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಾ ತಕ್ಕಮಟ್ಟಿಗೆ ಸಂಬಳ ಪಡೆಯುತ್ತಿದ್ದ  (ಅವಳ ದುಡಿಮೆ ಅವಳ ಅಲಂಕಾರಿಕ ವಸ್ತುಗಳಿಗೇ ಖರ್ಚಾಗುತ್ತಿತ್ತು) ಹೆಣ್ಣಿನ ತಂದೆ ತಾಯಿಯರೂ ಅದೇ ಕೇಂದ್ರಕ್ಕೆ ಬಂದಿದ್ದರು .ಅಲ್ಲಿ  ಒಬ್ಬರಿಗೊಬ್ಬರು ಪರಿಚಯವಾಗಿ ಹುಡುಗಿಯ ಸೌಂದರ್ಯಕ್ಕೆ ಹುಡುಗ, ಹುಡುಗನ ಸಂಬಳಕ್ಕೆ ಹುಡುಗಿ, ಪರಸ್ಪರ ಆಕರ್ಷಿತರಾಗಿ ಇಬ್ಬರಿಗೂ ಮದುವೆ ನಿಶ್ಚಯವಾಯಿತು.

ಒಳ್ಳೆಯ ಸಂಬಂಧ. ವರದಕ್ಷಿಣೆ ಏನು ಕೇಳಲಿಲ್ಲ. ಹಾಗಾಗಿ ಮದುವೆಯನ್ನು ಶಕ್ತಿ ಮೀರೀ ಸಾಲಾ ಸೋಲ ಮಾಡಿ, ಬಹಳ ವಿಜೃಂಭಣೆಯಿಂದ ಅದ್ದೂರಿಯಿಂದ ಮಾಡಲಾಯಿತು. ಮದುವೆಯಾದ ಎರಡು ಮೂರು ತಿಂಗಳು ಮಧುಚಂದ್ರ, ನೆಂಟರಿಷ್ಟರ ಮನೆಗೆ ಹೋಗಿ ಬರುವುದರಲ್ಲೇ ಕಾಲ ಕಳೆದು ಹೋದದ್ದು  ನವ ದಂಪತಿಗಳಿಗೆ ಗೊತ್ತೇ  ಆಗಲಿಲ್ಲ. 

ಪ್ರತಿದಿನ ಗಂಡ ಹೆಂಡತಿ ಒಟ್ಟಿಗೆ ಆಫೀಸಿಗೆ ಹೋಗಿ ಸಂಜೆ ಮನೆಗೆ ಬರುವ ದಾರಿಯಲ್ಲೇ ಏನಾದರೂ ತಿಂದು ಬರುತ್ತಿದ್ದರು.  ಇದೇ ರಾಗವನ್ನು ನೋಡಿ ನೋಡಿ ಬೇಸತ್ತ  ತಂದೆ ತಾಯಿಯರು ಒಮ್ಮೆ ಮಗ ಸೊಸೆಯರಿಗೆ, ಇದೇನಪ್ಪಾ ಇದು ಮನೇನೋ ಲಾಡ್ಜೋ? ಬರೀ ರಾತ್ರಿ ಮಲಕ್ಕೋಳದಿಕ್ಕೆ ಮಾತ್ರ ಬರ್ತೀರಿ ಇಂದು ಸುಸಂಸ್ಕೃತ ಸಂಸಾರವಂತರ  ಮನೆ. ನಮಗೂ ಮಗ ಸೊಸೆ ಜೊತೆ ನೆಮ್ಮದಿಯಾಗಿ ಒಟ್ಟಿಗೆ ಕುಳಿತು ಊಟ ಮಾಡೋ ಆಸೆ ಇದೆ. ಯಾವಾಗಲಾದರೂ ಒಮ್ಮೊಮ್ಮೆ ಸೊಸೆ ಕೈ ರುಚಿ ನೋಡೋ ಆಸೆ ಇದೆ. ಮೊಮ್ಮಕ್ಕಳನ್ನು ಎತ್ತಿ ಮುದ್ದು ಮಾಡ್ಬೇಕು ಅಂತ ಇದೆ  ಅಂತ ಕೇಳಿದ್ದೇ ತಡ.  ಸೊಸೆಗೆ ಅದೆಲ್ಲಿತ್ತೋ  ರೋಷಾ, ವೇಷಾ, ನೋಡ್ರಿ, ನೋಡ್ರಿ, ಹೇಗೆ ಮಾತಾಡ್ತಾರೆ   ನಿಮ್ಮ ಅಪ್ಪ  ಅಮ್ಮ.  ನಾನೇನು ನಿಮ್ಮನ್ನು ಮದುವೆ ಆಗಿದ್ದು ಈ ಮನೆಯಲ್ಲಿ ಕೆಲಸ ಮಾಡೋದಿಕ್ಕಾ? ನಾನೇನು ಬೇಯಿಸಿ ಹಾಕೋಕೆ ಅಡುಗೆಯವಳಾ? ಇಲ್ಲಾ ನಿಮಗೆ ಮಕ್ಕಳನ್ನು ಹೆತ್ತು ಕೊಡೋ ಮೆಶಿನ್ನಾ?  ಒಂದು ಮಾತು ಹೇಳ್ತೀನಿ ಚೆನ್ನಾಗಿ ಎಲ್ಲರೂ ಕೇಳಿಸಿ ಕೊಳ್ಳಿ.  ನನಗಂತೂ ಮಕ್ಕಳನ್ನು ಹೆರುವ ಆಸೆ ಇಲ್ಲ.  ಮಕ್ಕಳಾದ್ರೆ, ನನ್ನ  ಸೌಂದರ್ಯವೆಲ್ಲಾ ಮಂಕಾಗುತ್ತದೆ. ಆಮೇಲೆ ಯಾರೂ ನನ್ನ ಕಡೆ ತಿರುಗಿಯೂ ನೋಡೋದಿಲ್ಲ. ಮಕ್ಕಳು ಏನಾದರೂ ಬೇಕಿದ್ದಲ್ಲಿ, ಯಾವುದಾದರೂ ಅನಾಥಾಶ್ರಮದಿಂದ ತಂದು ಸಾಕೋಣ ಎಂದಳು.

ತಮ್ಮ ವಂಶೋಧ್ಧಾರದ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ, ರಾಮಾಕೃಷ್ಣಾ ಗೋವಿಂದಾ ಎಂದು ನಮ್ಮ ಉಳಿದ ಜೀವನವನ್ನು ಕಳೆಯ ಬೇಕು ಅಂತ ಅಂದುಕೊಂಡಿದ್ದ ಅತ್ತೆ ಮಾವನವರಿಗೆ ಸೊಸೆಯ ಮಾತು ಗರ ಬಡಿದಂತಾಗಿತ್ತು. ಗಂಡನಿಗೂ ಹೆಂಡತಿಯ ಮಾತು ಕೇಳಿ ಆಶ್ಚರ್ಯದ ಜೊತೆಗೆ  ಬೇಸರವೂ ಆಯಿತು. ಅಪ್ಪಾ ಅಮ್ಮಂದಿರ ಮುಂದೆ ಮಾತಾನಾಡುವುವುದು ಬೇಡ ಎಂದು ಸುಮ್ಮನೆ ಹೆಂಡತಿಯನ್ನು  ತನ್ನ ಕೋಣೆಗೆ ಕರೆದೊಯ್ದು ಇದೇನು? ಎಂತಾ ಮಾತಾಡ್ತಾ ಇದ್ಯಾ? ಅವರು ಕೇಳಿದ್ದರಲ್ಲಿ ತಪ್ಪೇನಿದೆ?  ಹಾಗೆ ದೊಡ್ಡವರ ಮುಂದೆ ಗೌರವ ಇಲ್ಲದೆ ಮಾತಾನಾಡಿದ್ದು ನನಗೆ ಒಂದು ಚೂರು ಹಿಡಿಸಲಿಲ್ಲ. ಹೋಗಿ ಅಪ್ಪಾ  ಅಮ್ಮಾನ ಬಳಿ ಕ್ಷಮೆ ಕೇಳು ಎಂದ. ಆದರೆ  ಸೊಸೆ ತನ್ನ ಅಹಂನಿಂದಾಗಿ ಯಾರ ಮಾತನ್ನೂ ಕೇಳಲು ಸಿದ್ಧಳಿರಲಿಲ್ಲ.

ನಾನೇನು ತಪ್ಪು ಮಾತಾನಾಡಿದೆ ಅಂತ ಕ್ಷಮೆ ಕೇಳಲಿ? ಅವರಿಗೆ ನಾವು ಅವರ ಮನೆಯಲ್ಲಿ ಬಿಟ್ಟಿ ತಿನ್ನುತ್ತಿದ್ದೇವೆ ಅನ್ನೋ ಭಾವನೆ.  ಮನೆ ಅವರೇ ಕಟ್ಟಿಸಿರಬಹುದು ಆದರೆ ದುಡಿದು ತಂದು ಹಾಕುತ್ತಿರುವವರು ನೀವೇ ತಾನೇ?  ಸುಮ್ಮನೆ ಮನೆಯಲಿ ಕುಳಿತು ನಿಮ್ಮ ಸಂಪಾದನೆಯಲ್ಲಿ ತಿಂದು ಬದುಕುತ್ತಿರುವವರಿಗೇ ಇಷ್ಟು ಅಹಂ ಇರಬೇಕಾದರೆ ನಾನು ಕೆಲಸಕ್ಕೆ ಹೋಗುತ್ತಿರುವವಳು. ಇನ್ನು ನನಗೆಷ್ಟಿರ ಬೇಡ? ನೋಡಿ ನಾನೀಗ ಒಂದು ನಿರ್ಧಾರಕ್ಕೆ ಬಂದಾಗಿದೆ. ನಿಮಗೆ ನಾನು ಬೇಕು ಅಂತಂದ್ರೆ, ಈಗಿಂದ್ದೀಗಲೇ ಬೇರೆ ಮನೆ ಮಾಡೋಣ. ಈ ರೀತಿಯಾಗಿ ಬೈಸಿಕೊಂಡು ನನಗೆ ಒಂದು ಕ್ಷಣವೂ ಈ ಮನೆಯಲ್ಲಿ ಇರುವುದಕ್ಕೆ ಆಗುವುದಿಲ್ಲ.ನಾನು ಬಟ್ಟೆ ಜೋಡಿಸಿ ಕೊಳ್ತೀನಿ. ಮನೆ ಸಿಗುವವರೆಗೆ ಆಫೀಸ್ ಹತ್ತಿರ ಇರುವ ಯಾವುದಾದರೂ ಹೋಟೆಲ್ನಲ್ಲಿ ಇರೋಣ. ಒಂದು ವಾರದೊಳಗೆ ಅಲ್ಲೇ  ಯಾವುದಾದರೂ ಮನೆ ಹುಡ್ಕೋಳ್ಳೋಣ. ಆಫೀಸ್ ಕ್ಯಾಂಟೀನ್ನಲ್ಲೇ ಬೆಳಿಗ್ಗೆ  ತಿಂಡಿ ಮಧ್ಯಾಹ್ನದ ಊಟ ಮಾಡಿ ಕೊಂಡ್ರಾಯ್ತು . ಇನ್ನು ಸಂಜೆ ಬರ್ತಾ ಎಲ್ಲಾದರೂ ಊಟ ಮಾಡೋಣ ಇಲ್ಲಾಂದ್ರೆ ಹೇಗೂ ಸ್ವಿಗ್ಗಿ, ಇಲ್ಲಾ  ಝೊಮಾಟೋ ಇದ್ದೇ ಇದೆ.  ಆರ್ಡರ್ ಮಾಡಿದ್ರೆ ಅರ್ಧ ಗಂಟೆಯೊಳಗೆ ತಂದು ಕೊಡ್ತಾರೆ. ಇನ್ನೂ ವೀಕೆಂಡ್ನಲ್ಲಿ ನಮ್ಮ  ಅಮ್ಮನ ಮನೆಗೆ ಹೋಗ್ಬಿಡೋಣ. ಅಲ್ಲೇ ಎಲ್ಲಾ ಮುಗಿದು ಹೋಗುತ್ತದೆ ಎಂದಾಗ,   ಗಂಡನಿಗೆ ಅದು ಎಲ್ಲಿತ್ತೋ ಕೋಪ. ಏನೂ ಮಾತಾಡ್ತಾ ಇದ್ದೀಯಾ ಅಂತಾ ಗೋತ್ತಾ?  ಇದೇನು ಸಂಸಾರ ಮಾಡೋ ಹುಟ್ಟಾ? ನಾನು ಅಪ್ಪ ಅಮ್ಮನ ಬಿಟ್ಟು ಎಲ್ಲೂ ಬರೋದಿಲ್ಲ . ನೀನು ಬೇಕಿದ್ರೆ ಎಲ್ಲಿಗಾದರೂ ಹೋಗು ಎಂದು ಸಿಟ್ಟಿನಲ್ಲಿ ಹೇಳಿದ್ದೇ ತಡಾ, ಹೆಂಡತಿ ಜೋಡಿಸಿಕೊಂಡು ಇಟ್ಟಿದ್ದ  ಬಟ್ಟೆ ಬರೆಗಳನ್ನು ಎತ್ತಿ ಕೊಂಡು ಓಲಾ ಬುಕ್ ಮಾಡಿಕೊಂಡು ಅಷ್ಟು ರಾತ್ರಿ ಹೊತ್ತಿನಲ್ಲಿ ಅಮ್ಮನ ಮನೆಗೆ ಹೊರಟೇ ಬಿಟ್ಟಳು.

ಇಷ್ಟು ತಡ ಹೊತ್ತಿನಲ್ಲಿ ಹೇಳದೇ ಕೇಳದೆ ದುರು ದುರು ಎಂದು ಬಂದ ಮಗಳನ್ನು ನೋಡಿ ಆಶ್ವರ್ಯಚಕಿತರಾದ ಅಪ್ಪಾ ಅಮ್ಮಾ, ಏನಮ್ಮಾ ಒಬ್ಬಳೇ ಇಷ್ಟು ಹೊತ್ತಿನಲ್ಲಿ ಒಬ್ಬಳೇ ಬಂದಿದ್ದೀಯಾ? ಅಳಿಯಂದಿರು ಎಲ್ಲಿ? ಮನೆಯಲ್ಲಿ ಏನಾದ್ರೂ ಮಾತು ಕತೆ ಆಯ್ತಾ ಅಂತಾ ಕೇಳುವ ಮನಸ್ಸಾದ್ರೂ  ಮಗಳ ಕೋಪ ಕಡಿಮೆ ಆದ ಮೇಲೆ ಕೇಳೋಣ ಅಂತ ಸುಮ್ಮನಾದರು. ಮಗಳೋ ಸುಮ್ಮನೆ ಅವಳ ಕೋಣೆಗೆ ಹೋಗಿ ಬಾಗಿಲು ಹಾಕಿ ಕೊಂಡವಳು  ಮಾರನೇ ದಿನ ಆಫೀಸಿಗೆ ಹೋಗಿ ಸಂಜೆ ಬರುವಾಗ ಪೋಲಿಸ್ ಠಾಣೆಗೆ ಹೋಗಿ ತನ್ನ ಗಂಡನ ಮನೆಯವರ ಮೇಲೆ ವರದಕ್ಷಿಣೆಯ ಕೇಸ್ ಹಾಕಿ,  ಲಾಯರ್ ಆಫೀಸ್ಗೆ ಹೋಗಿ ವಿಚ್ಚೇದನಕ್ಕೆ ಕೋರಿಕೆ ಸಲ್ಲಿಸಿಯೇ ಬಂದಳು.

ತಂದೆ ತಾಯಿ ಎಷ್ಟೇ ಪರಿ ಪರಿಯಾಗಿ ಬೇಡಿ ಕೊಂಡರೂ ಸಂಪಾದನೆ ಮಾಡುತ್ತಿದ್ದ ಮಗಳ ಮನಸ್ಸು ಕರಗಲೇ ಇಲ್ಲ.  ಹೆಣ್ಣು ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕಮ್ಮಾ ಎಂದು ಬುದ್ದಿವಾದ ಹೇಳಿದ್ದಕ್ಕೆ, ಅಪ್ಪಾ ಅಮ್ಮನ  ಮನೆಯನ್ನೂ ಬಿಟ್ಟು ತನ್ನ ಆಫೀಸಿನ ಬಳಿಯೇ ಪೇಯಿಂಗ್ ಗೆಸ್ಟಾಗಿದ್ದಾಳೆ.  ಇನ್ನು  ಯಾವ ತಪ್ಪನ್ನೂ ಮಾಡದ ಗಂಡನ ಮನೆಯವರು ಪೋಲಿಸರ ವಿಚಾರಣೆಯಿಂದ ಹೈರಾಣಾಗಿದ್ದಾರೆ. ಪ್ರತಿ ತಿಂಗಳು ಕೋರ್ಟು ಕಛೇರಿ ಅಂತಾ ಅಲೆಯುತ್ತಿದ್ದಾರೆ. ಹೆಣ್ಣು ಹೆತ್ತ ತಪ್ಪಿಗಾಗಿ ಅವಳ ತಂದೆ ತಾಯಿಯರು ಮಗಳ ಮದುವೆಗಾಗಿ ಮಾಡಿದ್ದ ಸಾಲ  ತೀರಿಸುತ್ತಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಃ ” ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಇರುತ್ತಾರೆ ಎನ್ನುಂತಹ ನಾಡಿದು.   ನಮ್ಮ ದೇಶದ ನಮ್ಮ ಸಂಸ್ಕೃತಿಯಲ್ಲಿ ಎಂದಿಗೂ ಗಂಡು ಹೆಣ್ಣು ಸರಿ ಸಮಾನ ಎಂದು ಭಾವಿಸಲೇ ಇಲ್ಲ. ಬದಲಾಗಿ ಹೆಣ್ಣನ್ನು ಒಬ್ಬ ಮಮತೆಯ ತಾಯಿಯಾಗಿ, ನೆಚ್ಚಿನ ಗೃಹಿಣಿಯಾಗಿ  ಎಲ್ಲದ್ದಕ್ಕೂ ಹೆಚ್ಚಿಗೆ ಶಕ್ತಿ ದೇವತೆಯಾಗಿ ಆರಾಧಿಸುತ್ತೇವೆ. ಗಂಡ ಹೊರಗೆ ಹೋಗಿ  ತನ್ನ ಶಕ್ತಿ ಮೀರಿ ಸಂಪಾದಿಸಿ ತಂದು ತನ್ನ ಕುಟುಂಬವನ್ನು ಸಾಕುವ ಪದ್ದತಿ ಇತ್ತೇ ಹೊರತು ಹೆಂಡತಿಯ ಸಂಬಳದಲ್ಲಿ ಬದುಕುವ ದೈನೇಸಿ ಸ್ಥಿತಿಯಲ್ಲಿ ಎಂದೂ ಇರಲೇ ಇಲ್ಲ.  ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮುಳುಗಿ ಪ್ರತಿಯೊದರಲ್ಲಿಯೂ ಹೆಣ್ಣು ಗಂಡಿಗೆ ಸಮಾನ ಎನ್ನುವ  ಅನಾವಶ್ಯಕ ಪೈಪೋಟಿಗೆ ಇಳಿದು ಮನೆ ಮನಗಳು ಹಾಳಾಗುತ್ತಿರುವುದನ್ನು ನೋಡುವುದಕ್ಕೆ ನಿಜಕ್ಕೂ  ಬಹಳ ಬೇಸರವಾಗುತ್ತಿದೆ.

ಏನಂತೀರೀ?

ಯಾವ ಹೂವು ಯಾರ ಮುಡಿಗೋ

ಶಂಕ್ರ, ಆನಂದ ಮತ್ತು ‌ನಂದ ಬಾಲ್ಯದ ‌ಗೆಳೆಯರು. ನಂದ ಮತ್ತು ಆನಂದ ಒಡಹುಟ್ಟಿದವರಾದರೆ, ಆನಂದ ಮತ್ತು ಶಂಕ್ರ ಸಹಪಾಠಿಗಳು. ಮೂವರೂ ಸದಾ ಆಟೋಟಗಳಲ್ಲಿ  ಜೊತೆಯಾಗಿದ್ದವರು. ಹಿರಿಯವನಾದ ನಂದ ಸ್ವಲ್ಪ ಅಂತರ್ಮುಖಿ. ತಾನಾಯಿತು ತನ್ನ ಪಾಡಾಯಿತು ಅನ್ನುವ ಹಾಗೆ. ಆದರೆ ಆನಂದ ಅಣ್ಣನಿಗೆ ತದ್ವಿರುದ್ಧ. ಸದಾ ಚಟುವಟಿಕೆಯಿಂದ ಇರುವವ. ಎಂತಹ ಕಲ್ಲಿನ ಹೃದಯದವರನ್ನು ಬೇಕಾದರೂ ‌ಮಾತಾನಾಡಿಸಿ ಒಲಿಸಿ‌ ಕೊಳ್ಳುವ ಛಾತಿ‌.  ಎಲ್ಲರೂ ಕಾಲೇಜು ಓದುತ್ತಿರುವ ಸಮಯದಲ್ಲಿ ‌ಆನಂದನ ತಂದೆಯವರು ನಿವೃತ್ತರಾಗಿ ಶಂಕ್ರನ ಮನೆಯ ಪ್ರದೇಶದಿಂದ ಬಹುದೂರಲ್ಲಿ ಸ್ವಂತ ಮನೆಯನ್ನು ಕಟ್ಟಿಸಿಕೊಂಡು  ಅಲ್ಲಿಗೆ ಹೋಗಿ ಬಿಟ್ಟರು. ಗೆಳೆಯರು ಮನೆಯಿಂದ ದೂರವಾಗಿದ್ದರೇನಂತೆ ಮನಸ್ಸಿನಿಂದ ದೂರವಾಗಿರಲಿಲ್ಲ. ಆಗಾಗ ಸಮಯ ಸಿಕ್ಕಾಗಲೆಲ್ಲಾ ಭೇಟಿ ಮಾಡುತ್ತಾ ‌ಒಡನಾಟವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ನಂದ ಬಿಕಾಂ ಪದವಿ ‌ಮುಗಿಸಿ‌, ಖಾಸಗೀ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರೆ,‌ ಆನಂದ ತನ್ನ ಹೊಸಾ ಸ್ನೇಹಿತರ ಸಹವಾಸ ದೋಷದಿಂದ ಓದಿನ ಕಡೆ ಅಷ್ಟೊಂದು ಗಮನ ಹರಿಸದೆ, ಕಡೆಗೆ ಓದನ್ನು ಮುಂದುವರಿಸದೆ ಅಪ್ಪನ ಸಹಾಯ ಮತ್ತು ‌ಸ್ನೇಹಿತರ ಸಹಾಯದಿಂದ ತನ್ನದೇ ಆದ ಸ್ವಂತ ‌ಟ್ರಾವೆಲ್ಸ್  ಶುರುಮಾಡಿ ಕೊಂಡು ಜೀವನಕ್ಕೆ ತೊಂದರೆ ‌ಇಲ್ಲದಂತೆ ಸಂಪಾದನೆ ಮಾಡುತ್ತಿದ್ದ.

ಅದೊಂದು ದಿನ ಆನಂದ, ಶಂಕ್ರನಿಗೆ ಕರೆ ಮಾಡಿ ಸಂಜೆ ‌ನಿಮ್ಮ ಮನೆಗೆ ಬರುತ್ತಿದ್ದೀನಿ‌ ಇರುತ್ತೀಯಾ‌ ಎಂದು‌ ಕೇಳಿದ. ಏನಪ್ಪಾ ಸಮಾಚಾರ ಅಂತ ಕೇಳಲು‌ ಫೋನ್ನಲ್ಲಿ‌ ಮಾತನಾಡುವುದು ಬೇಡ. ಮುಖಃತಹ ಬಂದೇ ಹೇಳುತ್ತೀನಿ‌ ಎಂದು ಶಂಕ್ರನ ತಲೆಯಲ್ಲಿ ಹುಳ‌ಬಿಟ್ಟ. ಏನಪ್ಪಾ‌ ಅದು ಅಂತಹ ವಿಷ್ಯಾ? ಏನಾದರೂ ಸಮಸ್ಯೆಯಾ? ವ್ಯಾಪಾರದಲ್ಲಿ ಏನಾದರೂ ನಷ್ಟವಾ? ಆರ್ಥಿಕ ಸಹಾಯ ಏನಾದರೂ ‌ಬೇಕೇನೋ‌ ಎಂದು‌ ನಾನಾ‌ ರೀತಿಯಾಗಿ ‌ಯೋಚಿಸಿ ನೋಡಿ ತಲೆ‌ಕೆಟ್ಟು ಗೊಬ್ಬರವಾಗಿ, ಸರಿ ‌ಹೇಗೂ ಸಂಜೆ ಬರ್ತಾನಲ್ಲಾ. ಅವಾಗಲೇ ಗೊತ್ತಾಗುತ್ತದೆ ಎಂದು ಸುಮ್ಮನಾದ ಶಂಕ್ರ.

ಸಂಜೆ ಮನೆಗೆ ಬಂದ ಶಂಕರ, ಅಮ್ಮಾ ಬಹಳ ದಿನಗಳ ನಂತರ ಇವತ್ತು ಆನಂದ ಮನೆಗೆ ಬರ್ತಾ ಇದ್ದಾನೆ ಅವನಿಗೂ ಸೇರಿ ಅಡುಗೆ ಮಾಡಮ್ಮಾ ಎಂದು‌ ಹೇಳಿ ಪ್ರಾಣ ಸ್ನೇಹಿತ ‌ಆನಂದನ‌ ಬರುವಿಗಾಗಿ ಜಾತಕ‌ಪಕ್ಷಿಯಂತೆ ಕಾದು ಕುಳಿತ. ಗಂಟೆ, ಏಳಾಗಿ, ಎಂಟಾಗಿ ಕೊನೆಗೆ ಒಂಭತ್ತೂ‌ಕಾಲಿಗೆ ಆನಂದ ಲಗ್ನ‌ಪತ್ರಿಕೆಯೊಡನೆ ಶಂಕ್ರನ ಮನೆಗೆ ಬಂದ. ಓಹೋ!! ಇದಾ ವಿಷ್ಯಾ? ಅದಕ್ಕೆ ಇಷ್ಟೊಂದು ಬಿಲ್ಡಪ್ಪಾ? ನಾನು ಸುಮ್ಮನೆ ಏನೇನೋ ಯೋಚನೆ ಮಾಡ್ಕೊಂಡಿದ್ದೆ ಅಂತ ಹೇಳಿದ‌‌ ಶಂಕ್ರ, ಅದು ಸರಿ ಇನ್ನೂ ನಂದನಿಗೇ ಮದುವೆ ಆಗಿಲ್ಲ ಅಷ್ಟು ಬೇಗ ನಿನಗೇನಪ್ಪಾ ಆತುರ ಎಂದು ಒಂದೇ‌ ಸಮನೆ ಪ್ರಶ್ನೆಗಳ ಮಳೆ‌ ಸುರಿಸಿದ. ಅದಕ್ಕೆಲ್ಲಾ ಉತ್ತರಿಸುವಂತೆ ನಿಧಾನವಾಗಿ ತುಸು ನಕ್ಕ‌ಆನಂದ, ನಮ್ಗೆಲ್ಲಾ ಯಾರಪ್ಪಾ ಕೊಡ್ತಾರೆ ಹೆಣ್ಣು. ಮುಂದಿನ ವಾರ ನಮ್ಮ  ಮಾವನ ಮಗಳು ದೀಪಾಳ ಜೊತೆ‌ ನಮ್ಮ ಊರಿನಲ್ಲಿ ನಮ್ಮ ಅಣ್ಣ ನಂದನ ಮದುವೆ ಅದಕ್ಕೆ ತಾವೆಲ್ಲರೂ ಕುಟುಂಬ‌ ಸಮೇತವಾಗಿ ಬರ್ಬೇಕು ಆಂದ. ಓಹೋ ದೀಪಾ. ನಮ್ಮ ತಂಗಿ‌ ಜೊತೆಯವಳು. ರಜೆಯದಿನಗಳಲ್ಲಿ ಊರಿನಿಂದ ನಿಮ್ಮ ಮನೆಗೆ‌ ಬರ್ತಿದ್ಲು. ನೀವಿಬ್ಬರೂ ಸದಾ ಹಾವು ಮುಂಗುಸಿ ತರಹ ಜಗಳ ಆಡ್ತಾ‌ ಇದ್ದಿದ್ದು ನನ್ಗೆ ಚೆನ್ನಾಗಿ ನೆನಪಿದೆ ಎಂದ ಶಂಕ್ರ.  ಹಾಂ ಅವಳೇ. ಈಗ ಮುಂಚಿನಂತೆ‌ ಇಲ್ಲಾ ಬಿಡು. ಅವಳೂ ಡಿಗ್ರಿ ಮುಗಿಸಿದ್ದಾಳೆ. ನಮ್ಮ ಅಮ್ಮನಿಗೂ ತವರಿನ‌ ಸಂಬಂಧ ಉಳಿಸ್ಕೊಬೇಕು ಅಂತ‌ ಆಸೆ.‌ ನಂದ ಮೊದಲು ‌ಒಪ್ಕೊಳ್ಳಲಿಲ್ಲ. ಆಮೇಲೆ ಮನೆಯವರೆಲ್ಲರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡ. ಸರಿ‌ ತಪ್ಪದೆ ಹಿಂದಿನ ದಿನಾನೇ‌ ಬಂದು‌ ಬಿಡು.‌‌ನಾನು‌ ಎಲ್ಲಾ ರೀತಿಯ ವ್ಯವಸ್ಥೆ ಮಾಡಿರ್ತೀನಿ‌ ಅಂದ ಆನಂದ. ಎಲ್ಲರೂ ಬಹು ದಿನಗಳ ನಂತರ ‌ಒಟ್ಟಿಗೆ ಕುಳಿತು ಊಟ ಮಾಡಿದರು.

ಕಾರಾಣಂತರದಿಂದ ಮದುವೆಯ ಹಿಂದಿನ ದಿನ ಹೋಗಲಾಗದೆ, ಮದುವೆಯ ದಿನವೇ ಮುಂಜಾನೆಯೇ ಸಿಧ್ದವಾಗಿ ಹೊತ್ತಿಗೆ ಮುಂಚಯೇ ಮದುವೆ ಮಂಟಪ ತಲುಪಿದ ಶಂಕ್ರ.  ಮದುವೆ ಮಂಟಪದ ಮುಂದಿನ ಕಮಾನಿನ ಎರಡೂ ಕಡೆ ನಂದಾದೀಪವನ್ನು ಹಿಡಿದ  ಇಬ್ಬರು ತರುಣಿಯರು ಅದರ ಮಧ್ಯೆಯಲ್ಲಿ  *ದೀಪ ಮತ್ತು ನಂದಾ ಶುಭವಿವಾಹ* ಎಂದು  ಬರೆಯಲಾಗಿತ್ತು.  ವಾಹ್! *ಇಬ್ಬರ ಹೆಸರಿನಲ್ಲಿಯೇ ನಂದಾದೀಪವಿದೆ.* ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಾ ಮದುವೆ ಮನೆಗೆ ಕಾಲಿಟ್ಟ ಶಂಕ್ರ. ಆವೇಳೆಗೆ ಬಂಧು ಮಿತ್ರರೆಲ್ಲರ ಆಗಮನವಾಗಿತ್ತು. ನಾದಸ್ವರದ ಸದ್ದು ಜೋರಾಗಿತ್ತು. ಶಂಕರನ ಕಣ್ಣುಗಳು ಆನಂದನನ್ನೇ ಹುಡುಕುತ್ತಿತ್ತು. ಅದೇ ವೇಳೆ ಪುರೋಹಿತರು ಮುಹೂರ್ತ ಮೀರುತ್ತಿದೆ. ಹುಡುಗ  ಮತ್ತು ಹುಡುಗಿ ಕರೆದುಕೊಂಡು ಬನ್ನಿ ಎಂದು ಹೇಳುವುದು ಕೇಳಿಸಿತು. ಸರಿ ಮಧುಮಗ ನಂದನ ಜೊತೆ ಇರಬಹುದು ಆನಂದ ಎಂದೆಣಿಸಿ ಮದುವೆ ಮಂಟಪದ ಸಮೀಪಕ್ಕೆ ಹೋಗಿ ನೋಡುಲು, ಒಂದು ಕ್ಷಣ ಆಶ್ಚರ್ಯಚಕಿತನಾಗುತ್ತಾನೆ ಶಂಕರ. ಇದೇನಿದು? ನಾನು ನೋಡುತ್ತಿರುವುದು ಕನಸಾ ನನಸಾ ಎಂದು ತನ್ನ ಕಣ್ಣನ್ನು ಉಜ್ಜಿ ಉಜ್ಜಿ ಸರಿಯಾಗಿ ನೋಡಿದರೆ *ಮಧು ಮಗನ ಸ್ಥಾನದಲ್ಲಿ ನಾಪತ್ತೆಯಾಗಿದ್ದಾನೆ ನಂದ, ಆ ಜಾಗದಲ್ಲಿ ಇದ್ದಾನೆ ಆನಂದ*. ಪುರೋಹಿತರು ಗಟ್ಟಿ ಮೇಳಾ ಗಟ್ಟಿ ಮೇಳಾ ಎಂದೊಡನೆಯೇ  ಆನಂದ ದೀಪಾಳಿಗೆ ತಾಳಿಕಟ್ಟಿದ್ದ.  ನಂತರ ತಿಳಿದ್ದೇನೆಂದರೆ, ವರಪೂಜೆವರೆಗೂ ಹಾಜರಿದ್ದ ನಂದ, ಮದುವೆಯ ದಿನ  ಬೆಳ್ಳಂಬೆಳಿಗ್ಗೆ , ತಾನು ಬೇರೊಂದು ಹುಡುಗಿಯನ್ನು ಪ್ರೀತಿಸಿರುವ ಕಾರಣ  ದೀಪಾಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಕ್ಷಮೆಯಾಯಿಸಿ  ಪತ್ರ ಬರೆದು ಯಾರಿಗೂ ಹೇಳದೆ ಕೇಳದೆ ನಾಪತ್ತೆಯಾಗಿದ್ದ. ಪತ್ರ ನೋಡಿದ ಆನಂದನ ತಾಯಿ ಅಲ್ಲಿಯೇ ಮೂರ್ಚೆ ತಪ್ಪಿದ್ದರು.  ಮದುವೆಗೆ ಎಲ್ಲರೂ ಬಂದಿದ್ದಾಗಿದೆ ಇಡೀ ಕುಟುಂಬದ ಮಾನ ಹಾನಿಯಾಗುವುದನ್ನು ತಪ್ಪಿಸಲು ಹಿರಿಯರೊಬ್ಬರ ಸಲಹೆ ಮೇರೆಗೆ ಮತ್ತು ತನ್ನ ತಾಯಿಯ ಮಾತಿಗೆ ಕಟ್ಟು ಬಿದ್ದು *ಆನಂದ ದೀಪಳನ್ನು ವರಿಸಿದ್ದ*. ಮದುವೆಯ ದಿನ ಮಧು ಮಗ ಮತ್ತು ಮಧು ಮಗಳ ಮುಖದಲ್ಲಿ ಸಂತೋಷಕ್ಕಿಂತ ಒಂದು ರೀತಿಯ ದುಗುಡವೇ ತುಂಬಿತ್ತು. ಮದುವೆಗೆ ಬಂದಿದ್ದ ಹೆಚ್ಚಿನವರೆಲ್ಲರೂ ತಲಾ ತಟ್ಟಿಗೆ ಮಾತಾನಾಡಿಕೊಂಡರೂ  ಶಂಕರನಿಗೆ ತನ್ನ ಸ್ನೇಹಿತ ಆನಂದನ ಬಗ್ಗೆ ಹೆಮ್ಮೆಯಿತ್ತು. ಒಂದು ಹೆಣ್ಣಿಗೆ ಬಾಳನ್ನು ಕೊಟ್ಟನಲ್ಲಾ ಎನ್ನುವ ಹೆಮ್ಮೆಯಿತ್ತು.  ಮದುವೆಯ ಊಟದ ಸಮಯದಲ್ಲಿ ಆನಂದನ ಮಾವನವರು ಶಂಕರನನ್ನು ಗುರುತು ಹಿಡಿದು, ಶಂಕ್ರಾ ಚೆನ್ನಾಗಿಇದ್ದೀಯೇನಪ್ಪಾ?  ಸಾವಕಾಶವಾಗಿ ಎಷ್ಟು ಬೇಕೋ ಕೇಳಿ ಬಡಿಸಿಕೊಂಡು ಊಟ ಮಾಡು ಎಂದಾಗ ಶಂಕರನಿಗೆ ಗಂಟಲು ಉಬ್ಬಿಹೋಗಿ  ಅನ್ನವೇ ಇಳಿಯದಂತಾಯಿತು. ಹೆಣ್ಣಿನ ತಂದೆ ಅನೇಕ ವರ್ಷಗಳ ತಮ್ಮ ದುಡಿಮೆಯಲ್ಲಿ ಅಲ್ಪ  ಸ್ವಲ್ಪ ಹಣವನ್ನು ಕೂಡಿಟ್ಟು  ಜೊತೆಗೆ ಸಾಲಾ ಸೋಲಾ ಮಾಡಿ ವಿಜೃಂಭಣೆಯಿಂದ ಮಗಳ ಮದುವೆ ಮಾಡಿ ಮುಗಿಸಿ ಬಂದವರೆಲ್ಲರಿಗೂ ಭಕ್ಷ  ಭೋಜನವನ್ನು ಹಾಕಿಸುತ್ತಾರೆ.  ಅವರ ಬೆವರು ಹನಿಯ ಪರಿಶ್ರಮದ ಫಲದ ಆಹಾರವನ್ನು ತಾನು ಸೇವಿಸಲು ತಾನೆಷ್ಟು ಅರ್ಹ ಎಂಬ ಜಿಜ್ಞಾಸೆ ಶಂಕರಿಗೆ ಕಾಡಿತ್ತು.

ಆನಂದನ ಮದುವೆಯಾದ ನಂತರ  ಕೆಲ ತಿಂಗಳು ಒಬ್ಬೊರನ್ನೊಬ್ಬರು ಭೇಟಿ ಮಾಡಲೇ ಇಲ್ಲ.   ನಂತರ ಯಾರಿಂದಲೂ ಕೇಳಿ ಬಂದ ವಿಷಯವೇನೆಂದರೆ  ಮದುವೆ ಮನೆಯಿಂದ ನಾಪತ್ತೆಯಾಗಿ ಓಡಿ ಹೋಗಿದ್ದ ನಂದಾ, ಯಾರಿಂದಲೋ ಮೋಸ ಹೋಗಿ ಮದುವೆಯೂ ಇಲ್ಲದೆ ಕೈಯಲ್ಲಿದ್ದ ದುಡ್ಡನ್ನೆಲ್ಲವನ್ನೂ ಕಳೆದು ಕೊಂಡು ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದದನ್ನು ನೋಡಿ ಪರಿಚಯಸ್ಥರು ಮನೆಗೆ ಕರೆದು ತಂದು ಬಿಟ್ಟಿದ್ದರಂತೆ. ಅದಾದ ಕೆಲವೇ ತಿಂಗಳುಗಳಲ್ಲಿ ಆನಂದ ತನ್ನ ಮಗಳ ನಾಮಕರಣಕ್ಕೆ ಆಹ್ವಾನಿಸಿದ. ಶಂಕರ  ನಾಮಕರಣಕ್ಕೆ  ಹೋಗುತ್ತಿದ್ದಂತೆಯೇ ಎದುರಿಗೇ ಸಿಕ್ಕ ನಂದಾ, ಶಂಕರನನ್ನು ನೋಡಿ ಒಂದು ರೀತಿಯ ಅಪರಾಧಿ ಭಾವನೆಯಿಂದ ತಲೆ ತಗ್ಗಿಸಿದ. ಅವನನ್ನು ಪಕ್ಕಕ್ಕೆ ಕರೆದು ಕೊಂಡು ಹೋಗಿ ನಂದಾ? ತಪ್ಪು ನಿಂದಾ? ಇಲ್ಲವೇ ಅವಳದ್ದಾ? ಎಂದು ಕೇಳಿದ್ದಕ್ಕೆ,  ಯಾವುದೋ ಹೆಣ್ಣಿನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಆಕೌಂಟ್ನಿಂದ ನಂದನ ಮೃದು ಸ್ವಭಾವವನ್ನು ದುರುಪಯೋಗ ಪಡಿಸಿಕೊಂಡು ಅವರ ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗುವ ನಾಟಕ ಮಾಡಿ ದುಡ್ಡಿನೊಂದಿಗೆ ಬರಲು ಹೇಳಿ ಅವನನ್ನು ದೋಚಿದ್ದು ತಿಳಿಯಿತು. ಹೇ ಬೇಜಾರು ಮಾಡಿಕೊಳ್ಳಬೇಡ ನಿನ್ನ ಬಾಳಿನಲ್ಲಿ ನಂದಾ ದೀಪ ಇಲ್ಲದಿದ್ದರೇನಂತೆ, ನಿನ್ನ ಬಾಳಿಗೆ ಜ್ಯೋತಿಯಾಗಿ ಬರಲು ಯಾವುದಾದರೂ ಹೆಣ್ಣನ್ನು ಆ ಬ್ರಹ್ಮ ಬರೆದಿಟ್ಟಿರುತ್ತಾನೆ ಎಂದು ಸಂತೈಸಿದ ಶಂಕರ.

ಅದೇ ಸಮಯದಲ್ಲಿ ಆನಂದನ ಮಾವನವರು ಸಿಕ್ಕಾಗ, ಎಂದಿನ ರೂಢಿಯಂತೆ, ಎನು ಮಾವಾ ಚೆನ್ನಾಗಿದ್ದೀರಾ? ಹೇಗಿದ್ದಾನೆ ನಿಮ್ಮ ಅಳಿಯಾ?  ಅವನು ಏನಂತಾನೇ? ಎಂದು ಕೇಳಿದ ಶಂಕರ. ಏನು ಹೇಳೋದು ಬಂತು. ನಿಜಕ್ಕೂ ನನ್ನ ಮಗಳು ಅದೃಷ್ಟವಂತಳೇ.  ಅವರಿಬ್ಬರ ಸುಂದರ ದಾಂಪತ್ಯದ ಕುರುಹುವಾಗಿಯೇ ಇಂದು ಮುದ್ದಾದ ಮಹಾಲಕ್ಶ್ಮೀ  ಮನೆಗೆ ಬಂದಿದ್ದಾಳೆ. ಮಗಳ ಕಾಲ್ಗುಣವೋ, ಆನಂದನ ಪರಿಶ್ರಮವೋ, ಮದುವೆಯಾದ ನಂತರ ಇನ್ನೂ ಏಳೆಂಟು ಕಂಪನಿಗಳ ದೀರ್ಘಕಾಲೀನ ಒಪ್ಪಂದವಾಗಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಬಹುಶಃ ನಂದನಿಗೆ ಮದುವೆ ಮಾಡಿ ಕೊಟ್ಟಿದ್ದರೂ ಇಷ್ಟುಚೆನ್ನಾಗಿ ನೋಡಿ ಕೊಳ್ಳುತ್ತಿದ್ದನೋ ಇಲ್ಲವೋ. ಸತ್ಯವಾಗಲೂ ನಾನು ನೆನೆಸಿದ್ದಕ್ಕಿಂತಲೂ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಆನಂದ ಎಂದಾಗ ತನ್ನ ಗೆಳೆಯನ ಬಗ್ಗೆ ಇನ್ನಷ್ಟು ಆಭಿಮಾನ ಮೂಡಿತು. ಆಗ ಶಂಕರನ  ಬಾಯಿಂದ ಅವನಿಗೇ ಅರಿವಿಲ್ಲದಂತೆ ಬೆಸುಗೆ ಚಿತ್ರದ *ಯಾವ ಹೂವು ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ* ಎನ್ನುವ ಹಾಡು ಗುನುಗುಡುತ್ತಿತ್ತು.

ಅದಾದ ಕೆಲವೇ ದಿನಗಳಲ್ಲಿ ನಂದಾ ಮತ್ತು  ಆನಂದ ಇಬ್ಬರೂ ಶಂಕರನ ಮನೆಗೆ ಮತ್ತೆ ನಂದಾನ ಮದುವೆಯ ಲಗ್ನಪತ್ರಿಕೆಯ ಸಮೇತ ಬಂದಿದ್ದರು. ಲಗ್ನಪತ್ರಿಕೆಯನ್ನು ತೆರೆದು ನೋಡಿದರೆ ಕಾಕತಾಳೀಯವೋ ಎನ್ನುವಂತೆ *ಹುಡುಗಿಯ ಹೆಸರು ಜ್ಯೋತಿ* ಎಂದಿತ್ತು.   ಸರಿ ಬಿಡು ನಿಮ್ಮ ಮನೆಯಲ್ಲಿ  *ನಂದಾ-ಜ್ಯೋತಿ, ಸದಾ ಆನಂದ-ದೀಪ* ಆಗಿರಲಿ ಎಂದು ಹರೆಸುತ್ತೇನೆ ಎಂದ ಶಂಕರ.   ಇಂದು  ನಂದಾ-ಜ್ಯೋತಿಯರ ಆರತಕ್ಷತೆ ಮತ್ತು ನಾಳೆ ಮದುವೆ. ಶಂಕರನ ಜೊತೆ ದಯವಿಟ್ಟು ಸ್ವಲ್ಪ ಪ್ರುರುಸೊತ್ತು ಮಾಡಿಕೊಂಡು ತಾವೆಲ್ಲರೂ ಬಂದು ವಧು ವರನನ್ನು ಆಶೀರ್ವಾದ  ಮಾಡ್ತೀರಾತಾನೇ?

ಏನಂತೀರೀ?

ನಿರ್ಮಲ ಸೀತಾರಾಮನ್ ಅವರ ಸಂವಾದ ಕಾರ್ಯಕ್ರಮ

ಭಾರತದ ರಕ್ಷಣಾ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್

ಬೆಂಗಳೂರಿನ ವಿದ್ಯಾರಣ್ಯಪುರದ ಚಿಂತಕರ ಚಾವಡಿಯ ಆಶ್ರಯದಲ್ಲಿ ಇಂದು ದ್ವಾರಕ ಕನ್ವೆಂಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಕಿಕ್ಕಿರಿದು ತುಂಬಿದ್ದ ದೇಶಭಕ್ತ ಆಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸ್ಪೂರ್ತಿದಾಯಕವಾಗಿ ನರೆವೇರಿತು. ನಿರ್ಮಲ ಸೀತಾರಾಮ್ ಅವರು ಕಾರ್ಯಕ್ರಮಕ್ಕೆ ಆಗಮಿಸುವವರೆಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಂದಿನ ಮನ್ ಕೀ ಬಾತ್  ಮುದ್ರಿತ ಕಾರ್ಯಾಕ್ರಮವನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ  ನೆರೆದಿದ್ದ ನೂರಾರು  ಕಾರ್ಯಕರ್ತರು, ನಿರ್ಮಲಾ ಸೀತಾರಾಮನ್ ಅವರು ಆಗಮಿಸುತ್ತಿದ್ದಂತೆಯೇ ಮುಗಿಲು ಮುಟ್ಟುವ ಹಾಗೇ ಬೊಲೋ ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಮ್ ಘೋಷಣೆಗಳೊಂದಿಗೆ ಸ್ವಾಗತ ಕೋರಿದ್ದದ್ದು ವಿಶೇಷವಾಗಿತ್ತು

ದೇಶದ ರಕ್ಷಣಾ ಮಂತ್ರಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆಯ ಮೂಲಕ ಆರಂಭವಾದ ಕಾರ್ಯಕ್ರಮ, ಶ್ರೀಮತಿ ರಂಜನಿ ಕೌಸುಕಿಯವರು ಕಾರ್ಯಕ್ರಮಕ್ಕೆ ಸುಮಾರು ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮವಸ್ತ್ರಧಾರಿಗಳಾಗಿ ಆಗಮಿಸಿದ್ದ ನಿವೃತ್ತ ಯೋಧರನ್ನು ಮತ್ತು ಹುತಾತ್ಮ ಯೋಧ ನಿರಂಜನ್ ಅವರ ತಂದೆ ಶಿವರಾಜ್ ಅವರನ್ನು, ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಮಾಧ್ಯಮ ಮಿತ್ರರನ್ನೂ ಮತ್ತು  ಸಭಿಕರನ್ನೂ ಇಂದಿನ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರೆ, ಕುಮಾರಿ ಸ್ನಿಗ್ಥಳ ತನ್ನ ಸುಶ್ರಾವ್ಯ ಕಂಠ ಸಿರಿಯಿಂದ  ಸ್ವಾಗತ ಗೀತೆಯನ್ನು ಹಾಡಿ ಇಡೀ ಸಭಿಕರಿಗೆ ಅವಳ  ಮಾಧುರ್ಯಕ್ಕೆ ಮರುಳಾಗುವಂತೆ ಮಾಡಿದಳು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಳೆದ ನಾಲ್ಕುವರೆ ವರ್ಷಗಳ ಸಾಧನೆಗಳನ್ನು ಬಿಂಬಿಸುವ *ಮನೆ ಮನೆಗೂ ಮೋದಿ ಎಂಬ* ಕಿರು ಹೊತ್ತಿಗೆಯನ್ನೂ ಇದೇ ಸಮಯದಲ್ಲಿ ವೇದಿಕೆಯ ಮೇಲೆ ಬಿಡುಗಡೆ ಮಾಡಲಾಯಿತು.

ಅತ್ಯಂತ ಸರಳ ಉಡುಪಿನಲ್ಲಿ ಹಣೆಗೆ ಗಂಧದ ತಿಲಕವನ್ನು ಇಟ್ಟು ಕೊಂಡು ಬಂದಿದ್ದ ದೇಶದ ಮಹಿಳಾ ರಕ್ಷಣಾ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಿಜಕ್ಕೂ ವೀರವನಿತೆ ಓಬ್ಬವನ್ನಂತೆ ಕಂಡರು ಎಂದರೆ ಉತ್ಪ್ರೇಕ್ಷೆಯೇನಲ್ಲ.  ನೆರೆದಿದ್ದ ಅಪಾರ ಸಭಿಕರನ್ನು ನೋಡಿ ಹರ್ಷಿತರಾದ ನಿರ್ಮಲಾರವರು 2014ರ ಹಿಂದಿನ ಸರ್ಕಾರದಲ್ಲಿದ್ದ ಹಣದುಬ್ಬರ, ಭಯೋತ್ಪಾದನೆ, ಹಗರಣಗಳ ಸರಮಾಲೆಯನ್ನು ನೆನಪಿಸಿ ನಂತರ ಮೋದಿಯವರು ಅಧಿಕಾರ ಗ್ರಹಣ ಮಾಡಿದ ಕ್ಷಣದಿಂದಲೇ ಹೇಗೆ ಕಾರ್ಯಪ್ರವೃತ್ತರದರು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಂದ ಕೂಡಲೇ ವಿಶ್ವದ ಬಲಾಢ್ಯ ರಾಷ್ಟ್ರಗಳಾದ ಅಮೇರಿಕಾ, ರಷ್ಯಾ ಮತ್ತು ಚೀನಾದೊಡನೆ ಸ್ನೇಹ ಸಂಬಂಧವನ್ನು ಉತ್ತಮ ಪಡಿಸಿಕೊಂಡಿದ್ದಲ್ಲದೆ, ನೆರೆ ಹೊರೆ ರಾಷ್ಟ್ರಗಳಾದ, ಭೂತಾನ್, ಬಾಂಗ್ಲಾ, ಬರ್ಮಾ ಮತ್ತು ಶ್ರೀಲಂಕಾ ದೇಶದೊಂದಿಗೆ ಹಿರಿಯಣ್ಣನ ಜವಾಬ್ಧಾರಿಯನ್ನು ನಿಭಾಯಿಸಿದ್ದನ್ನು ನೆನಪಿಸಿದರು. ನಂತರ ಮಾಹಿತಿ ತಂತ್ರಜ್ಞಾನ, ಬ್ಯಾಂಕಿಗ್ ವ್ಯವಸ್ಥೆಯನ್ನು ಸುಭಧ್ರವಾಗಿರುವಂತೆ ನೋಡಿ ಕೊಂಡರು. ದೇಶದ ಜನರು ನೆಮ್ಮದಿಯಾಗಿ ಜೀವನ ಸಾಗಿಸಬೇಕಾದರೆ ನಮ್ಮ ಗಡಿಯನ್ನು ಕಾಯುವ ಸೈನಿಕರ ಕೊಡುಗೆ ಅಪಾರ. ಆದರೆ ಬಹಳ ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ OROP (One Ranking one Pention) ಪಿಂಚಣಿಯನ್ನು  ಜಾರಿಗೆ ತಂದಿದ್ದಲ್ಲದೇ ಇದುವರೆಗೂ ಸುಮಾರು  52,000  ಕೋಟಿಗೂ ಅಧಿಕ ಹಣವನ್ನು ಸೈನಿಕರಿಗೆ ಪಿಂಚಣಿ ರೂಪದಲ್ಲಿ ಈಗಾಗಲೇ ಕೊಟ್ಟಿದ್ದು ವರ್ಷಕ್ಕೆ ಸುಮಾರು 8000 ಕೋಟಿಯಷ್ಟು ಹಣವನ್ನು ಪ್ರತೀ ವರ್ಷವೂ ಇದಕ್ಕಾಗಿಯೇ ಮೀಸಲಾಗಿಟ್ಟಿರುವುದನ್ನು ತಿಳಿಸಿದರು. ಅಂತೆಯೇ 90ರ ದಶಕದಲ್ಲಿ ವಿವಾದಿತ ಬೋಫೋರ್ಸ್ ಬಂದೂಕುಗಳನ್ನು ಹೊರತು ಪಡಿಸಿ ಇಲ್ಲಿಯವರೆಗೂ ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಸೈನಿಕರಿಗೆ ಒದಗಿಸದೇ ಹವಾನಿಯಂತ್ರಿತ ಕೊಠಡಿಯಲ್ಲಿಯೇ ಕುಳಿತು ಸೈನ್ಯವನ್ನು ನಿಯಂತ್ರಿಸುತ್ತಿದ್ದ ಹಿಂದಿನ ಸರ್ಕಾರದ ಬದಲು ಮೋದಿಯವರ ಸರ್ಕಾರ, ಸೈನಿಕರಿಗೆ ಗುಂಡು ನಿರೋಧಕ ಕವಚಗಳನ್ನು ಒದಗಿಸಿದ್ದಲ್ಲದೆ, ದೇಶದ  ರಕ್ಷ್ಣಣೆಗೆ ಅವಶ್ಯಕವಾಗಿದ್ದ ಶಸ್ತ್ರಾಸ್ತ್ರಗಳನ್ನು ಯಾವುದೇ ರಾಜಕಾರಣಿಯ ಹಂಗಿಲ್ಲದೆ  ಸೇನಾ ದಂಡನಾಯಕರೇ ನಿರ್ಧರಿಸಿ ಖರೀದಿರುವ ಅಧಿಕಾರವನ್ನು ಕೊಟ್ಟ ಹೆಗ್ಗಳಿಗೆ ಮೋದಿ ಸರ್ಕಾರದ್ದು ಎಂದರು. ಅಲ್ಲಿಂದ ಇತ್ತೀಚಿನ ವಿವಾದಿತ ರಫೇಲನತ್ತ ವಿಷಯವನ್ನು ತಿರುಗಿಸಿದ ರಕ್ಷಣಾ ಸಚಿವರು,  ಬರೀ ಬಾಯಿ ಮಾತಿನಲ್ಲೇ ಹತ್ತು ವರ್ಷಗಳ ಕಾಲ ರಫೇಲ್ ಡೀಲ್ ನಡೆಸುತ್ತಾ ಯಾವುದೇ ಯುದ್ಧ ವಿಮಾನವನ್ನು ಖರೀದಿಸದೆ ಸಂಪೂರ್ಣ ಶಸ್ತೃಸ್ತ್ರಭರಿತ 36 ರಫೇಲ್ ವಿಮಾನವನ್ನು ಖರೀದಿಸಿರುವ ಮೋದಿ ಸರ್ಕಾರವನ್ನು 30000 ಕೋಟಿ ಹಗರಣ ಎಂದು ಬಿಂಬಿಸುತ್ತಿರುವ ರಾಹುಲ್ ಗಾಂದಿಯನ್ನು ಹೆಸರಿಸದೆ ಛೇಡಿಸಿದರು. ಈಗಾಗಲೇ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ವಿವರಣೆ ನೀಡಲಾಗಿದೆ. ಸರ್ವೋಚ್ಛನ್ಯಾಯಾಲಯ ಮತ್ತು CAG Report ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದೂ ತೀರ್ಪಿತ್ತಿದ್ದರೂ, ಮೋದಿಯವರನ್ನು ಹಳಿಯಲು ಯಾವುದೇ ಕಾರಣವಿಲ್ಲದೆ ವಿರೋಧ ಪಕ್ಷದವರು ಸುಖಾಃಸುಮ್ಮನೇ ಆರೋಪಮಾಡುವುದು ಸರಿಯಲ್ಲ ಎಂದು ತಿಳಿಸಿದರು. ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಕೆಲವುಬಾರಿ ಒಪ್ಪಂದವನ್ನು ಬಹಿರಂಗ ಪಡಿಸಬಾರದು ಎಂಬ ಕನಿಷ್ಟ ಪರಿಜ್ಞಾನವೂ ವಿರೋಧ ಪಕ್ಷದ ನಾಯಕನಿಗೆ ಇಲ್ಲದಿರುವುದರ ಕುರಿತು ನಿಜಕ್ಕೂ ಅವರಿಗೆ ಆ ವಿಷಯದಲ್ಲಿ ತಿಳುವಳಿಗೆ ಪಡೆಯಲು ಹಿಂದಿನ ರಕ್ಷಣಾ ಸಚಿವರುಗಳಾದ ಏ.ಕೆ. ಆಂಟೋನಿ ಇಲ್ಲವೇ ಶರದ್ ಪವಾರ್ ಬಳಿಯಲ್ಲಿ ಪಾಠಕ್ಕೆ ಹೋಗಲಿ ಎಂದು ಲೇವಡಿ  ಮಾಡಿದರು.

ದೇಶದ ರೈತರಿಗೆ ಅನುಕೂಲವಾಗಲೆಂದು ವರ್ಷಕ್ಕೆ ಕೇಂದ್ರ ಸರ್ಕಾರದಿಂದಲೇ ರೈತರಿಗೆ ನೇರವಾಗಿ  6000 ರೂಪಾಯಿಗಳನ್ನು ನೀಡುವ ಮಹತ್ವ ಪೂರ್ಣ ಯೋಜನೆಯನ್ನು ವಿವರಿಸಿ ಈಗಾಗಲೇ ರೈತರಿಗೆ ತಲುಪಬೇಕಾದ ಮೊದಲ ಕಂತನ್ನು ಸಂದಾಯ ಮಾಡಿರುವ ವಿಷಯವನ್ನು ತಿಳಿಸಿದರು. ಅದೇ ರೀತಿ ಕರ್ನಾಟಕದಲ್ಲಿ ಸುಮಾರು 70,00,000 ರೈತರಿದ್ದು ಅದರಲ್ಲಿ ಸುಮಾರು 62,00,000 ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಈಗಿರುವ ಸಮ್ಮಿಶ್ರ ಸರ್ಕಾರದ ಬೇಜವಾಬ್ದಾರಿ ತನದಿಂದ ಈವರೆಗೂ ಕೇವಲ 2,00,000 ರೈತರಿಗೆ ಮಾತ್ರವೇ ಮೊದಲ ಕಂತನ್ನು ಬಿಡುಗಡೆ ಮಾಡಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದರು.  *ಮೋದಿಯವರು ತಾನು ತಿನ್ನುವುದಿಲ್ಲ, ಇತರರನ್ನು ತಿನ್ನಲು ಬಿಡುವುದಿಲ್*ಲ ಎಂದರೆ, ಕರ್ನಾಟಕದ ಇಂದಿನ ಸರ್ಕಾರ ರಾಜಕೀಯದ ನೆಪದಿಂದ ಕೇಂದ್ರಸರ್ಕಾರದ ಈ ಕಾರ್ಯಕ್ರವನ್ನು ಸರಿಯಾಗಿ ಆಚರಣೆಗೆ ತಾರದೆ, *ತಾನೂ ಬಾಳುವುದಿಲ್ಲ, ಇತರರನ್ನೂ ಬಾಳಗೊಡುವುದಿಲ್ಲ* ಎನ್ನುವ ಗಾದೆಯಂತೆ  ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. ಕರ್ನಾಟಕದ ನಾಯಕರು ಮೋದಿಯವರನ್ನು ತೆಗಳುವಾಗ ತೋರುವ ಉತ್ಸಾಹ, ಮೋದಿಯವರ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಟಾನ ತರಲು ಏಕೆ ಆನಾದರ ತೋರುತ್ತಾರೆ? ಎಂದು ಪ್ರಶ್ನಿಸಿದರು.

ಇತರೇ ರಾಜಕೀಯ ನಾಯಕರಂತೆ ರೈತರಿಗೆ ಸಾಲಮನ್ನಾ ಮಾಡಿ ಅವರನ್ನು ಸೋಮಾರಿಗಳನ್ನಾಗಿ ಮಾಡದ ಮೋದಿಯವರು ಅದರ ಬದಲಾಗಿ ರೈತರ ಪರಿಶ್ರಮಕ್ಕೆ ತಕ್ಕಂತೆ ಅವರ ಅಕೌಂಟಿಗೇ ನೇರವಾಗಿ ಅನುದಾನ ಕೊಡುವ ಮತ್ತು ಅವರ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡುವ  MSP ಯೋಜನೆಯಿಂದಾಗಿ ರೈತರಿಗೂ ಸಂತಸ ಮತ್ತು ಜನರಿಗೆ ಬೇಳೆ ಕಾಳುಗಳ ಬೆಲೆ 200 ರೂಪಾಯಿಗಳಿಂದ  ಇಂದು 60-80 ಕ್ಕೆ ಲಭ್ಯವಾಗುತ್ತಿರುವ ಸಾಧನೆಯನ್ನು ವಿವರಿಸಿದರು. ಅಂದು ದೇಶದೆಲೆಲ್ಲಾ ರಸಗೊಬ್ಬರಕ್ಕೆ ಹಾಹಾಕಾರ ಪಡುತ್ತಿದ್ದರೆ ಇಂದು ಬೇವು ಲೇಪಿತ ರಸಗೊಬ್ಬರ ದೇಶಾದ್ಯಂತ ಅತೀ ಸುಲಭವಾಗಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ದೊರಕುವಂತೆ ಮಾಡಿರುವುದು ಮೋದಿಯವರ ಸರ್ಕಾರ ವಿರೋಧಿಗಳು ಹೇಳುವಂತೆ ಸೂಟ್-ಬೂಟ್ ಸರ್ಕಾರವಲ್ಲಾ ಇದ್ದು ರೈತರ ಪರ ಕಾಳಜಿ ಇರುವ ಸರ್ಕಾರ ಎಂದು ತಿಳಿಸಿದರು.

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಚೋಕ್ಸಿ ಅಂತಹವರಿಗೆ ಅಪಾರವಾದ ಸಾಲ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ರಕ್ಷಣಾ ಮಂತ್ರಿಗಳು, ಇಂದು ಮೋದಿ ಸರ್ಕಾರದ ಬಿಗಿ ನಿಲುವಿನಿಂದಾಗಿ ಹೆದರಿ  ಅಂತಹವರೆಲ್ಲಾ ದೇಶ ಬಿಟ್ಟು ಓಡಿ ಹೋಗಿದ್ದರೂ ಅವರನ್ನು ಹುಡುಕಿ ಹುಡುಕಿ ಅವರಿಂದ ಅಸಲು ಮತ್ತು ಬಡ್ಡಿ ಸಮೇತ ವಸೂಲು ಮಾಡುತ್ತಿರುವ ಕ್ರಮವನ್ನು ಎತ್ತಿ ತೋರಿಸಿದರು.

ಇಂತಹ ಇನ್ನಷ್ಟು ಮಹತ್ತರ ನಿರ್ಧಾರಗಳನ್ನು ಧೈರ್ಯದಿಂದ ಜಾರಿಗೆ ತರಲು ಬಹುಮತದ ಸರ್ಕಾರದ ಅಗತ್ಯತೆಯನ್ನು ಎತ್ತಿ ತಿಳಿಸಿದ ಸಚಿವೆ, ಯಾವುದೇ ರೀತಿಯ ಆಮೀಷಕ್ಕಾಗಲೀ ಇಲ್ಲವೇ ಹೊಸದಾಗಿ ರಾಜಕೀಯಕ್ಕೆ ಬಂದಿರುವ ಚೆಂದುಳ್ಳಿಯ ಮೋಡಿಗೆ ಒಳಗಾಗದೆ ಮೋದಿಯವರನ್ನು ಬೆಂಬಲಿಸವಂತೆ ಕೋರಿದರು. ಎಲ್ಲದಕ್ಕೂ ಹೆಚ್ಚಾಗಿ 2000 ದಲ್ಲಿ ಜನಿಸಿರುವ ಮಿಲೇನಿಯಮ್ ಮಕ್ಕಳು ಪ್ರಪ್ರಥಮವಾಗಿ ತಮ್ಮ ಓಟನ್ನು ಚಲಾಯಿಸುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಮೋದಿಯವರ ಸಾಧನೆಗಳನ್ನು ತಿಳಿಯಪಡಿಸಿ ಅವರ ಬೆಂಬಲದೊಂದಿಗೆ ಭಾರೀ ಸಂಖ್ಯೆಯೊಂದಿಗೆ ಯಾವುದೇ ಇತರೇ ಪಕ್ಷಗಳ ಬೆಂಬಲವಿಲ್ಲದೆ ಮತ್ತೊಮ್ಮೆ ಮೋದಿಯವರ ಸರ್ಕಾರವನ್ನು ಬಾರೀ ಬಹುಮತದಿಂದ ಆಳ್ವಿಕೆಗೆ ತರಬೇಕೆಂದು ಕಳಕಳಿಯಿಂದ ಕೋರುವ ಮೂಲಕ ತಮ್ಮ ಮಾತನ್ನು ಮುಗಿಸಿದರು.

ನಂತರ ಪ್ರಸನ್ನ ಕೌಸುಕಿಯವರ ಸಾರಥ್ಯದಲ್ಲಿ  ಚುಟುಕಾಗಿ ನಡೆದ ಪ್ರಶ್ನೋತ್ತರದಲ್ಲಿ ಆಯ್ದ ಓದುಗರ ಪ್ರಶ್ನೆಗಳಿಗೆ ಸರಳವಾಗಿ ಮತ್ತು ಅಷ್ಟೇ ತೀಷ್ಣವಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಉತ್ತರಿಸಿದರು.

1. ದೇಶದಲ್ಲಿ ಇಂದು ನಡೆಯುತ್ತಿರುವ ಅವಘಡಗಳಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಶತೃರಾಷ್ಟ್ರಗಳಿಗಿಂತ ದೇಶದ ಒಳಗಿರುವ ಹಿತಶತೃಗಳೇ ಕಾರಣ ಅಂತಹವರನ್ನು ಹೇಗೆ ಹತ್ತಿಕ್ಕುತ್ತೀರಿ ಎಂದು ಕೇಳಿದ ಪ್ರಶ್ನೆಗೆ

ಪ್ರಧಾನಿಗಳು ಈಗಾಗಲೇ ಈ ಬಗ್ಗೆ ಸಂಸತ್ತಿನಲ್ಲಿ ಹೇಳಿಯಾಗಿದೆ. ನಮ್ಮ ಸೈನಿಕರ ಬಲಿದಾನ ಎಂದೂ ವ್ಯರ್ಥವಾಗದು ಮತ್ತು ವ್ಯರ್ಥವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈಗಾಗಲೇ ಆ ಘಟನೆಗೆ ಕಾರಣಕರ್ತರಾದ ಭಯೋತ್ಪಾದಕರನ್ನು ನಮ್ಮ ಸೈನ್ಯ ಬಲಿ ತೆಗೆದುಕೊಂಡಾಗಿದೆ. ನಮ್ಮ ಸೈನ್ಯಕ್ಕೆ  ಸಂಪೂರ್ಣ ಅಧಿಕಾರ ಕೊಡಲಾಗಿದೆ. ಅದರ ಫಲವನ್ನು ಕೆಲವೇ ದಿನಗಳಲ್ಲಿ ಕಾಣಬಹುದಾಗಿದೆ ಎಂದರು.

2. ದೇಶದ ರಕ್ಷಣೆಗಾಗಿ ಪ್ರತಿಯೊಂದು ಕುಟಂಬದಿಂದ ಖಡ್ಡಾಯವಾಗಿ ಸೇನೆಗೆ ಏಕೆ ಸೇರಿಸಿಕೊಳ್ಳಬಾರದು ಮತ್ತು  ಹಾಗೆಯೇ ಎನ್.ಸಿ.ಸಿ. ಯನ್ನು ಸರ್ಕಾರಿ ಶಾಲಾ ಕಾಲೇಜುಗಳಲ್ಲದೇ, ಖಾಸಗೀ ಶಾಲಾ ಕಾಲೇಜುಗಳಿಗೆ ಏಕೆ ವಿಸ್ತರಿಸಬಾರದು?

ನಮ್ಮ ಸರ್ಕಾರಕ್ಕೆ ಪ್ರತಿಯೊಂದು ಕುಟಂಬದಿಂದ ಖಡ್ಡಾಯವಾಗಿ ಸೇನೆಗೆ ಸೇರಿಸಿಕೊಳ್ಳುವ ಯಾವುದೇ ಪ್ರಸಾಪವಿಲ್ಲದಿದ್ದರೂ, ಇಂದಿನ ಜನ ನಿಜಕ್ಕೂ ಬದಲಾಗುತ್ತಿದ್ದಾರೆ. ಅವರುಗಳೇ ಸ್ವಇಚ್ಚೆಯಿಂದ ದೇಶದ ರಕ್ಷಣೆಗಾಗಿ ಸೇನೆಯನ್ನು ಸೇರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು ಹಾಗೆಯೇ, ಖಾಸಗೀ ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿ.ತರಬೇತಿಗೆ ಕೋರಿದರೆ ಸರ್ಕಾರ ಅದಕ್ಕೆ ಅಗತ್ಯ ನೆರವು ನೀಡಲು ಸಿಧ್ಧವಿರುವುದಾಗಿ ತಿಳಿಸಿದರು.

3.ನಿವೃತ್ತ ಸೈನಿಕರ ಅನುಭವವನ್ನು ಏಕೆ ಬಳೆಸಿ ಕೊಳ್ಳಬಾರದು?

ನಿವೃತ್ತ ಯೋಧರ ಸಲಹೆಗಳನ್ನು ಮತ್ತು ಅನುಭವವನ್ನು ಖಂಡಿತವಾಗಿಯೂ ಅಗತ್ಯವಿದ್ದಲ್ಲಿ ಬಳೆಸಿಕೊಳ್ಳುವುದಾಗಿ ತಿಳಿಸಿದರು. ಅದಕ್ಕಾಗಿ ಹಲವಾರು ಸೇವಾ ಸಂಸ್ಥೆಗಳ ಮೂಲಕ ನೆರವು ನೀಡಬಹುದು.  kendriya sainik board web siteನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

4. ಪದೇ ಪದೇ ರಾಹುಲ್ ರಫೇಲ್ ವ್ಯವಹಾರವನ್ನು 520,540, 526, 1600 ಕೋಟಿಗಳ ಹಗರಣ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದರೂ ಸರ್ಕಾರವೇಕೆ ಕ್ರಮ ತೆಗೆದುಕೊಳ್ಳುತ್ತಿಲ್ಲಾ?

ಸರ್ಕಾದರ ಭಧ್ರತೆಯ ದೃಷ್ಟಿಯಿಂದ ರಕ್ಷಣಾ ವ್ಯವಹಾರಗಳನ್ನು ಬಹಿರಂಗ ಪಡಿಬಾರದೆಂಬ ವಿಷಯ ಕೆಲವು ಬೇಲ್ ಮೇಲಿರುವ ಕುಟುಂಬದ ಸದ್ಯಸ್ಯರಿಗೆ ತಿಳಿದಿಲ್ಲವಿರುವುದು ವಿಷಾಧನೀಯ.  ಮತ್ತು ಸರ್ವೋಚ್ಛನ್ಯಾಯಾಲಯ ಮತ್ತು CAG Report ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದೂ ತೀರ್ಪಿತ್ತಿದ್ದರೂ, ಮಧ್ಯವರ್ತಿಗಳಿಂದ ಸಿಗಬಹುದಾಗಿದ್ದ ಕಾಣಿಕೆ ತಪ್ಪಿದ್ದಕ್ಕಾಗಿ ಕೆಲವರು ಹಳಿಯುತ್ತಿರುವುದರಲ್ಲಿ ಹುರುಳಿಲ್ಲ ಎಂದು ತಿಳಿಸಿದರು

5. ನಮ್ಮ ಮಾಧ್ಯಮದಲ್ಲಿ ಶತೃರಾಷ್ಟ್ರಗಳ ಏಜೆಂಟ್ಗಳು ಇದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ? ಅಂತಹ ಮಾಧ್ಯಮದವರಿಗೆ ನಿಮ್ಮ ಸಲಹೆ ಏನು?

ನಿಮ್ಮ ಮಾತು ಕೆಲವೊಮ್ಮೆ ಸತ್ಯ ಎನಿಸಿದರೂ ನಾನು ಮಾಧ್ಯಮದವರಿಗೆ ಯಾವ ಸಲಹೆಯನ್ನೂ ನೀಡಲು ಇಚ್ಚಿಸುವುದಿಲ್ಲ. ಮಾಧ್ಯಮ ಮಿತ್ರರಲ್ಲಿ ಕೇಳಿಕೊಳ್ಳುವುದೇನೆಂದರೆ ತಾವುಗಳೆಲ್ಲರೂ ದೇಶದ ರಕ್ಷಣೆ ಮತ್ತು ಹಿತ ದೃಷ್ಟಿಯಿಂದ ತಾವೇ ಸ್ವಯಂ ನಿಯಂತ್ರಣ ಹೇರಿಕೊಂಡು ದೇಶದ ಬಗ್ಗೆ ಅಪಪ್ರಚಾರ ನಡೆಸದೆ ಸುಳ್ಳು ಸುದ್ದಿಗಳನ್ನು ಹಬ್ಬಿಸದಿರಿ ಎಂದು ಕೇಳಿಕೊಳ್ಳುತ್ತೇನೆ ಎನ್ನುವ  ಮೂಲಕ ಪ್ರಶ್ನೋತ್ತರ ಕಾರ್ಯಕ್ರಮ ಸುಸೂತ್ರವಾಗಿ ಸಂಪೂರ್ಣವಾಯಿತು..

ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಿದ ಸಭಿಕರಿಗೆ ಶ್ರೀಯುತ ಮೋಹನ್ ಗೌಡರು ಹೃತ್ಪೂರ್ವಕವಾಗಿ ವಂದನಾರ್ಪಣೆ ಸಲ್ಲಿದರೆ, ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯರವರ ಕಂಚಿನ ಕಂಠದ ವಂದೇಮಾತರಂ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

ಕಾರ್ಯಕ್ರಮದ ನೋಂದಣಿಯಿಂದ ಹಿಡಿದು, ಪ್ರಚಾರ, ಪೀಠೋಪಕರಣಗಳ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ರಂಗ ಸಜ್ಜಿಕೆ, ಉತ್ತಮ ದ್ವನಿವರ್ಧಕ ಕಾರ್ಯಕ್ರಮದ ಆಯೋಜಕರು ಮತ್ತು ಸ್ವಯಂಸೇವಕರು ಉತ್ತಮವಾಗಿ ಯೋಜನೆ ಮಾಡಿ ಅದನ್ನು ಅನುಷ್ಟಾನಕ್ಕೆ ತಂದರೆ ಒಂದು ಒಳ್ಳೆಯ ಕಾರ್ಯಕ್ರಮವನ್ನು ಹೇಗೆ  ನಡೆಸಬಹುದೆಂದು ತೋರಿಸಿಕೊಟ್ಟರು ಎಂದರೂ ಅತಿಶಯೋಕ್ತಿಯೇನಲ್ಲ.

ಏನಂತೀರಿ?

ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ  ಹೊಡೆದ್ದದ್ದಲ್ಲದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಶಿಕ್ಷಣ ಪದ್ದತಿ, ಗುಡಿ ಕೈಗಾರಿಕೆ, ಕೃಷಿ ಮತ್ತು ಹೈನುಗಾರಿಕೆಯನ್ನು ಹಾಳು ಗೆಡವುದರ ಜೊತೆ ಜೊತೆಗೆ ನಮ್ಮ ಜನರಿಗೆ ಅತ್ಯಂತ ಸೋಮಾರೀ ಆಟವಾದ ಕ್ರಿಕೆಟ್ಟನ್ನು ಕಲಿಸಿಕೊಟ್ಟು ಹೋದದ್ದು ನಮ್ಮ ದೇಶದ ಪರಮ ದೌರ್ಭಾಗ್ಯವೇ ಸರಿ.   ಆರಂಭದಲ್ಲಿ  ಕ್ರಿಕೆಟ್ಟನ್ನು  ಬಹಳ ಸಂಭಾವಿತರ ಆಟ ಎಂದೇ ಬಣ್ಣಿಸಲಾಗುತ್ತಿದ್ದರೂ ಇಂದು ಬೆಟ್ಟಿಂಗ್ ದಂಧೆ ಮತ್ತು ಆಟಗಾರರ ಕಳ್ಳಾಟಗಳಿಂದ ಕಳಂಕ ಗೊಂಡಿದೆ.  ಭಾರತ 1983ರ ಪೃಡೆಂಷಿಯಲ್ ವರ್ಲ್ಡ್ ಕಪ್ ಗೆಲ್ಲುವ ವರೆಗೂ ನಮ್ಮಲ್ಲಿ ಸಾಮಾನ್ಯ ಆಟವಾಗಿದ್ದ ಕ್ರಿಕೆಟ್ ನಂತರದ ದಿನಗಳಲ್ಲಿ ಟಿವಿಯ ಭರಾಟೆಯಿಂದಾಗಿ ಹಳ್ಳಿ ಹಳ್ಳಿಗಳಿಗೂ ಹಬ್ಬಿ ನಮ್ಮ ಗ್ರಾಮೀಣ ದೇಸೀ ಆಟಗಳೆಲ್ಲವೂ ಮಾಯವಾಗಿ  ಗೂಟ , ದಾಂಡು ಮತ್ತು ಚೆಂಡುಗಳೇ  ಸರ್ವಾಂತರ್ಯಾಮಿಯಾಗಿ, ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೆ  ಧರ್ಮವೆಂದೇ ಭಾವಿಸಲಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಆಬಾಲ ವೃಧ್ಧರಾದಿ, ಹೆಂಗಸರು ಮತ್ತು ಗಂಡಸರು ಎಂಬ ಬೇಧವಿಲ್ಲದೆ ಎಲ್ಲರೂ ಟಿವಿಯ ಮುಂದೆ ಗಂಟೆ ಗಂಟೆಗಟ್ಟಲೇ  ಕ್ರಿಕೆಟ್ ಆಟವನ್ನು ನೋಡುತ್ತಾ ಕಾಲ ಕಳೆಯುವಂತಾಗಿದೆ. ನಮ್ಮ ಜನರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳ ನೆನಪಿಲ್ಲದಿದ್ದರೂ ಕ್ರಿಕೆಟ್ ಆಟಗಾರರು ಎಲ್ಲರ ಮನೆ ಮನದಲ್ಲೂ ನಾಯಕರಾಗಿದ್ದಾರೆ ಮತ್ತು  ಚಿರಪರಿಚಿತರಾಗಿದ್ದಾರೆ. ಕೆಲವು ಕ್ರಿಕೆಟ್ ಅಂಧಾಭಿಮಾನಿಗಂತೂ ಕೆಲವು ಕ್ರಿಕೆಟ್ ಆಟಗಾರರನ್ನೇ ದೇವರು ಎಂದು ಸಂಭೋಧಿಸುವ ಮಟ್ಟಿಗೆ ಹೋಗಿರುವುದಂತೂ ನಿಜಕ್ಕೂ ವಿಷಾಧನೀಯವೇ ಸರಿ.

1947ರಲ್ಲಿ  ಧರ್ಮಾಧಾರಿತವಾಗಿ ಭಾರತ ದೇಶ ವಿಭಜನೆಯಾಗಿ ಭಾರತ ಮತ್ತು  ಪಾಪಿಸ್ಥಾನ ಎಂದು ಇಬ್ಬಾಗವಾದರೆ, ಶ್ರೀಲಂಕವೂ ಸೇರಿ   1971ರಲ್ಲಿ ಬಾಂಗ್ಲಾದೇಶದ ಉದಯವಾದ ನಂತರ ಮತ್ತು  ಇತ್ತೀಚೆಗೆ ಆಘ್ಘಾನಿಸ್ಥಾನ ಮತ್ತು ನೇಪಾಳವೂ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಹಾಲಿಡುವ ಮೂಲಕ  ಏಷ್ಯಾ ಖಂಡವೇ ಜಗತ್ತಿನ  ಅತ್ಯಂತ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ತಾಣವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿಯ ಬಹು ಪಾಲು ಹೆಚ್ಚಿನ ಆದಾಯ ಇಲ್ಲಿಂದಲೇ ಬರುಂತಾಗಿದೆ. ಅದರಲ್ಲೂ ಭಾರತದಿಂದಲೇ ಐಸಿಸಿಗೆ ಶೇ 80 ರಷ್ಟು ಆದಾಯ ಸಂದಾಯವಾಗುತ್ತಿದೆ.  ಜಗತ್ತಿನ ಯಾವುದೇ ಮೂಲೆಯಲ್ಲಿ  ಬದ್ಧ ದ್ವೇಷಿಗಳಾದ ಭಾರತ ಮತ್ತು ಪಾಪೀಸ್ಥಾನದ ಪಂದ್ಯಾವಳಿಯನ್ನು ಆಯೋಜಿಸಿದರೆ ಅದು ಐಸಿಸಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕೊಟ್ಯಾಂತರ ಮೊತ್ತದ ಆದಾಯ ತರುವುದರಿಂದ ಯಾವುದೇ  ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾರತ ಮತ್ತು  ಪಾಪೀಸ್ಥಾನದ ಎದುರು ಬದಿರು ಆಡುವಂತೆಯೇ ಆಯೋಜನೆ ಮಾಡಿ ಅದಕ್ಕೆ ಹೈವೋಲ್ಟೇಜ್  ಪಂದ್ಯ ಎಂಬ ಹಣೆ ಬರಹ ಕಟ್ಟಿ,  ಪಂದ್ಯದ  ಟಿವಿ ಪ್ರಸಾರದ ಹಕ್ಕನ್ನು  ವಿಶ್ವಾದ್ಯಂತ ಮಾರಾಟಮಾಡಿ ಕೊಟ್ಯಾಂತರ ಹಣವನ್ನು ಬಾಚಿಕೊಂಡು ಅದರಲ್ಲಿ  ಮೂಗಿಗೆ ತುಪ್ಪ ಸವರಿದಂತೆ ಉಭಯ ದೇಶಗಳಿಗೆ ಅಲ್ಪ ಸ್ವಲ್ಪ ಆದಾಯ ಹಂಚುವುದು ನಡೆದು ಬಂದಿರುವ ವಾಡಿಕೆಯಾಗಿದೆ.

ಹೇಳೀ ಕೇಳೀ ದೇಶದ ಹೆಸರೇ ಪಾಪೀಸ್ಥಾನ.  ಧರ್ಮದ ಅಫೀಮಿನ ಅಮಲಿನಲ್ಲಿರುವ ಜನ.  ಅಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ತಾಯಿಯ ಗರ್ಭದಿಂದಲೇ ಹೇಳಿಕೊಡುವುದೇನೆಂದರೆ ಜೇಹಾದಿ ಅಂದರೆ ಧರ್ಮ ಯುದ್ದ ಮತ್ತು ಭಾರತ ವಿರುದ್ಧದ ದ್ವೇಷದ ಕಿಚ್ಚು.  ಆವರ ಧರ್ಮದ  ಅಮಲು ಎಷ್ಟು ಇದೆ ಎಂದರೆ  ಅವದ್ದೇ ಧರ್ಮದ ಒಳಪಂಗಡಗಳಾದ ಷಿಯಾ ಮತ್ತು ಸುನ್ನಿಗಳು ಪರಸ್ಪರ ಸದಾ ಹೊಡೆದಾಡಿಕೊಳ್ಳುತ್ತಾ ಒಬ್ಬರ ಮೇಲೆ ಒಬ್ಬರು ಬಾಂಬ್ ಧಾಳಿ ನಡೆಸುತ್ತಾ ಪಾಪೀಸ್ಥಾನವನ್ನು ಭಯೋತ್ಪಾದಕ ರಾಷ್ಟ್ರವನ್ನಾಗಿಸಿದ್ದಾರೆ. ಆರಂಭದಲ್ಲಿ ಅಲ್ಲಿಯ ರಾಜಕೀಯ ನಾಯಕರೇ ಬೆಳೆಸಿದ ಐಸಿಸ್ ಮತ್ತು ಲಶ್ಕರೇ ತೊಯ್ಬಾ, ಜೈಶ್ ಏ ಮೊಹಮ್ಮೊದ್ ಮುಂತಾದ ಉಗ್ರ ಸಂಘಟನೆಗಳು ಇಂದು ಘನ ಘೋರ ವಿಷ ಸರ್ಪವಾಗಿ ಬೆಳೆದು ಇಡೀ ಪಾಪೀಸ್ಥಾನವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಜಗತ್ತಿನ ಎದುರಿನಲ್ಲಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ತೋರಿಸಲ್ಪಟ್ಟರೂ ಆಳ್ವಿಕೆ ಎಲ್ಲಾ ಸೈನ್ಯದ್ದೇ ಆಗಿದೆ.  1947ರ ಕಾಶ್ಮೀರದ ಗಡಿ ಕ್ಯಾತೆ 1965 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ನೇತೃತ್ವದಲ್ಲಿನ ಯುದ್ಧ , 1971ರ ಇಂದಿರಾ ಗಾಂಧಿಯವರ ಸಾರಥ್ಯದಲ್ಲಿ ಬಾಂಗ್ಲಾ ವಿಮೋಚನೆ ಮತ್ತು 1999ರಲ್ಲಿ ಆಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವದಲ್ಲಿ ಕಾರ್ಗಿಲ್ ಹೋರಾಟದಲ್ಲಿ ಪೆಟ್ಟಿನ ಮೇಲೆ ಪೆಟ್ಟು ತಿಂದು ಸೋತು ಸುಣ್ಣವಾಗಿ ಹೋಗಿದ್ದರೂ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ಕೊಡುತ್ತಾ, ಕಾಶ್ಮೀರೀ ಯುವಕರನ್ನು ಧರ್ಮದ ಹೆಸರಿನಲ್ಲಿ ಭಾರತದ ವಿರುದ್ಧ ಎತ್ತಿ ಕಟ್ಟಿ ಪದೇ ಪದೇ ಕೆಣಕುತ್ತಲೇ ಇದೆ ಪಾಪೀಸ್ಥಾನ.

ಇಷ್ಟೆಲ್ಲಾ ದ್ವೇಷ, ಅಸೂಯೆಗಳ ವೈರುಧ್ಯಗಳ ನಡುವೆಯೂ ಶಾಂತಿಯ ಹೆಸರಿನಲ್ಲಿ ಕ್ರಿಕೆಟ್ ಸೋಗಿನಲ್ಲಿ ಪರಸ್ಪರ ಎರಡೂ ದೇಶಗಳು ಆಟವಾಡುತ್ತಾ ಬಂದರೂ,  ಪಾಪಿಗಳ ದುಕ್ಷೃತ್ಯದಿಂದಾಗಿ ಕಳೆದ ಒಂದು ದಶಕಗಳಿಂದ ಹೆಚ್ಚು ಕಡಿಮೆ ಪರಸ್ಪರ ಕ್ರಿಕೆಟ್ ನಿಂತೇ ಹೋಗಿದೆ. ಅಲ್ಲೋ ಇಲ್ಲೋ  ಒಂದೆರಡು ಪಂದ್ಯಗಳು ತಟಸ್ಥ ದೇಶಗಳಲ್ಲಿ ಅಡುವಂತಾಗಿದೆ. ಪಾಪೀಸ್ಥಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರವಾಸದ ಸಮಯದಲ್ಲೇ ಬಾಂಬ್ ಸಿಡಿದು ಶ್ರೀಲಂಕಾದ ಒಬ್ಬ ಆಟಗಾರನಿಗೆ ಗಾಯವಾದ ನಂತರವಂತೂ ವಿಶ್ವದ ಯಾವುದೇ ಕ್ರಿಕೆಟ್ ತಂಡ ಅಲ್ಲಿ ಆಡಲು ಇಚ್ಚಿಸದೇ , ಐಪಿಎಲ್ ತಂಡಗಳಿಂದಲೂ ಪಾಕೀಸ್ಥಾನದ ಆಟಗಾರರನ್ನು ಭಹಿಷ್ಕರಿಸಲಾಗಿ ಹೆಚ್ಚು ಕಡಿಮೆ ಪಾಪೀಸ್ಥಾನದ ಕ್ರಿಕೆಟ್ ಆಟಗಾರರು ನಿರುದ್ಯೋಗಿಗಳಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯೇನಲ್ಲ.   ಬರುವ ಜೂನ್-ಜಲೈ ತಿಂಗಳಿನಲ್ಲಿ  ಇಂಗ್ಲೇಂಡಿನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ  ಜೂನ್  16ರಂದು ಭಾರತ ಮತ್ತು ಪಾಪೀಸ್ಥಾನ ಪರಸ್ಪರ ಆಡುವಂತೆ ಆಯೋಜಿಸಲಾಗಿದೆ. ಇತರೇ ಎಲ್ಲಾ  ಪಂದ್ಯಗಳಿಗಿಂತಲೂ ಈ ಪಂದ್ಯಕ್ಕೆ ಭಾರೀ ಪ್ರಚಾರ ನೀಡಿ ಈಗಾಗಲೇ ಪ್ರಪಂಚಾದ್ಯಂತ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯ ನಿರೀಕ್ಷೆಯಲ್ಲಿದ್ದಾರೆ.  ಪ್ರತೀ  ವಿಶ್ವಕಪ್ ಪಂದ್ಯಾವಳಿಯಲ್ಲಿಯೂ ಭಾರತದ ವಿರುದ್ಧ ಸೋಲನ್ನೇ ಕಂಡಿರುವ ಪಾಪಿಗಳು ಈ ಬಾರೀ ಭಾರತ ತಂಡವನ್ನು ಸೋಲಿಸಿಯೇ ತೀರುತ್ತೇವೆಂದು ತೊಡೆ ತಟ್ಟಿ ಪಂಥಾಹ್ವಾನ ನೀಡಿರುವಾಗಲೇ, ಪಾಪೀಸ್ಥಾನ ಎಡವಟ್ಟೊಂದನ್ನು ಮಾಡಿಕೊಂಡಿದೆ.

ಫೆ.14 ರಂದು ಕಾಶ್ಮೀರದ ಪುಲ್ವಾಮದಲ್ಲಿ ಪಾಪೀಸ್ಥಾನದ ಬೆಂಬಲಿತ  ಜೈಶ್ ಎ ಮೊಹಮ್ಮದ್ ಸಂಘಟನೆಯ ಮತಾಂಧ ಆತ್ಮಾಹುತಿ ಉಗ್ರಗಾಮಿಯೊಬ್ಬನ ಧಾಳಿಯಿಂದಾಗಿ 42  ಸಿ.ಆರ್.ಪಿ.ಎಫ್  ಯೋಧರು ಹುತಾತ್ಮರಾದ ಮೇಲಂತೂ ಇಡೀ ದೇಶವೇ ಒಗ್ಗಾಟ್ಟಾಗಿ ಒಕ್ಕೊರಲಿನಿಂದ ಪಾಪಿಗಳ ಮೇಲೆ ಪ್ರತೀಕಾರವನ್ನು ಬಯಸುತ್ತಿದೆ.  ಅದರಂತೆ ಘಟನೆ ನಡೆದ   48 ಗಂಟೆಯೊಳಗೆ ಪ್ರಮುಖ ರೂವಾರಿಗಳನ್ನು ನರಕಕ್ಕೆ ಅಟ್ಟಿದ ನಮ್ಮ ಸೈನ್ಯ ಕಂಡ ಕಂಡಲ್ಲಿ ಉಗ್ರಗಾಮಿಗಳನ್ನು  ಹುಡುಕಿ ಹುಡುಕಿ ನಿರ್ನಾಮ ಮಾಡುತ್ತಿದೆ.  ಪುಲ್ವಾಮದಲ್ಲಿ ಮಡಿದ ವೀರ ಸೈನಿಕರ 12ನೇ ದಿನದ ಶ್ರಾಧ್ಧ ಕರ್ಮಾದಿಗಳು ನಡೆಯುತ್ತಿರುವ ಸಂಧರ್ಭದಲ್ಲಿಯೇ ನಮ್ಮ ವಾಯುಪಡೆ ಫೆ. 26 ರಂದು ಬೆಳ್ಳಂಬೆಳಿಗ್ಗೆ 3:30ಕ್ಕೆ ವಾಯುಧಾಳಿ ನಡೆಸಿ, 1000ಕ್ಕೂ ಅಧಿಕ ಬಾಂಬ್ಗಳನ್ನು ಸಿಡಿಸಿ 300 ಕ್ಕೂ ಹೆಚ್ಚಿನ ಉಗ್ರಗಾಮಿಗಳನ್ನು ಹೊಡೆದುರುಳಿಸುವ ಮೂಲಕ ವೀರ ಯೋಧರ ಆತ್ಮಗಳಿಗೆ ಶಾಂತಿ ಕೊಡಲು ಪ್ರಯತ್ನಿಸಿರುವುದನ್ನು ಕೇವಲ ಭಾರತ ಪ್ರಜೆಗಳಷ್ಟೇ ಅಲ್ಲದೆ ಇಡಿ ವಿಶ್ವವೇ ನಮ್ಮ ದೇಶದ ಪರವಾಗಿ ನಿಂತಿದೆ.  ಘಟನೆ ನಡೆದ  ಹತ್ತು – ಹನ್ನೆರಡು ದಿನಗಳಿಂದಲೂ ಭಾರತ ಸುಮ್ಮನೇ ಕೂಡದೆ  ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಪಿಗಳ  ಈ ದುಷ್ಕೃತ್ಯವನ್ನು ಖಂಡಿಸುತ್ತಾ, ಆ ದೇಶಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ತುಂಡರಿಸಿ ಅದನ್ನು ದೈನೇಸಿ ಸ್ಥಿತಿಗೆ ತಂದಿಟ್ಟಿದೆ.  ಅಂತೆಯೇ ಪಾಪೀಸ್ಥಾನ ಭಯೋತ್ಪಾದಕ ರಾಷ್ಟ್ರ ಎಂದು ಇಡೀ ಜಗತ್ತಿಗೇ  ಎತ್ತಿ ತೋರಿಸಿದೆ. ಈಗಾಗಲೇ ಒಸಾಮ ಬಿನ್ ಲಾಡೆನ್,  ಟೈಗರ್ ಮೆಮೂನ್, ಯಾಕೂಬ್ ಮೆಮನ್, ಅಜರ್ ಮಸೂದ್, ದಾವೂದ್ ಇಬ್ರಾಹಿಂ ಮುಂತಾದ ವಿದ್ರೋಹಿಗಳಿಗೆ  ಆಶ್ರಯದ ತಾಣವಾಗಿದೆ ಎಂಬುದನ್ನು ಪುರಾವೆ ಸಮೇತ ತೋರಿಸಿಕೊಟ್ಟು  ಜಗತ್ತಿನಲ್ಲಿ ಆ ದೇಶವನ್ನು ಭಾಗಷಃ ಒಬ್ಬಂಟಿಯನ್ನಾಗಿ ಮಾಡಲು ಯಶಸ್ವಿಯಾಗಿದೆ.  ಹೊಟ್ಟೆಗೇ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ  ಆ ದೇಶದಲ್ಲಿ ಸರಿಯಾಗಿ ತಿನ್ನಲು ಆಹಾರವಿಲ್ಲದಿದ್ದರೂ ಧರ್ಮದ ಅಮಮಿನಿಂದ ಜನರನ್ನು ಭಾರತದ ವಿರುದ್ಧ ಎತ್ತಿ ಕಟ್ಟಿ

ಗೆರಿಲ್ಲಾ ರೀತಿಯ ಹೋರಾಟ ಮಾಡಿಸುತ್ತಾ, ಮಗುವಿನ ತೊಡೆಯನ್ನೂ ಅವರೇ ಚಿವುಟಿ ನಂತರ ಅವರೇ ತೊಟ್ಟಿಲು ತೂಗುವ ಕಾರ್ಯವನ್ನು ಮಾಡುತ್ತಿರುವುದನ್ನು ಇಡಿ ಜಗತ್ತೇ ಗಮನಿಸುತ್ತಿದೆ.

ಇಷ್ಟೆಲ್ಲಾ ಆದ ಮೇಲೆಯೂ ಭಾರತ, ಪಾಪೀಸ್ಥಾನದ ವಿರುದ್ಧ ವಿಶ್ವಕಪ್ನಲ್ಲಿ ಜೂನ್ 16ರಂದು ಆಡಬೇಕೆ? ಎಂಬ ದೊಡ್ಡ ಪ್ರಶ್ನೆ ಇಡೀ ಭಾರತವನ್ನು ಕಾಡುತ್ತಿದೆ. ಆದರೆ  ದೇಶದ ಶೇ 80-90 ರಷ್ಟು ಜನರು ಈ ಪಂದ್ಯವನ್ನು ಭಾರತ ಆಡಲೇ ಕೂಡದು ಎಂದೇ ಬಯಸಲು ಕಾರಣವಿಷ್ಟೇ.  ಈ ಪಂದ್ಯಾವಳಿ ಆಡುವುದರಿಂದ ಭಾರತ ಗಳಿಸುವುದಕ್ಕಿಂತ ಕಳೆದು ಕೊಳ್ಳುವುದೇ ಹೆಚ್ಚು. ಈ ಹೈವೋಲ್ಟೇಜ್ ಪಂದ್ಯಾವಳಿಯಿಂದಾಗಿ ಈಗಾಗಲೇ ಬಡವಾಗಿರುವ  ಪಾಪೀಸ್ಥಾನದ ಕ್ರಿಕೆಟ್ ಮಂಡಳಿಗೆ  ಪರೋಕ್ಷವಾಗಿ ಅಪಾರ ಪ್ರಮಾಣದ ಹಣವನ್ನು ನಾವೇ ಕೊಟ್ಟಂತಾಗುತ್ತದೆ. ಪಾಪಿಗಳನ್ನು ಎಲ್ಲೆಂದರಲ್ಲಿ ಹೇಗೆಂದರಲ್ಲಿ  ಬಡಿದು ಬಡಿದು ಸತಾಯಿಸಿ ಸೋಲಿಸುವ ಸುವರ್ಣಾವಕಾಶವನ್ನು ನಾವೇ ಕೈಯಾರೆ ಹಾಳು ಮಾಡಿಕೊಳ್ಳುಂತಾಗುತ್ತದೆ.  ಈ ಪಂದ್ಯವಾಡುವುದರಿಂದ ಹಾವಿಗೆ ಹಾಲೆರೆದ ಹಾಗೆ ಇಲ್ಲವೇ ಚೇಳಿಗೆ ಪಾರುಪತ್ಯ ಕೊಟ್ಟಹಾಗೆ ಆಗಿ ನಮ್ಮಿಂದಲೇ ಸಂಪಾದಿಸಿದ ಹಣದಿಂದ ಭಯಂಕರ ಭಸ್ಮಾಸುರರಂತೆ ನಮ್ಮ ಮೇಲೆಯೇ ಧಾಳಿ ನಡೆಸುವ ಎಲ್ಲಾ ಸಾಧ್ಯತೆಗಳೂ ಇವೆ.

ವಿಶ್ವಕಪ್  ಪಂದ್ಯಾವಳಿಯಲ್ಲಿ  ಪಾಪೀಸ್ಥಾನ ಎಂದೂ ಭಾರತದ ವಿರುದ್ಧ ಗೆದ್ದಿಲ್ಲವಾದ್ದರಿಂದ  ಈ ಬಾರಿಯೂ ಅವರನ್ನು ಕ್ರಿಕೆಟ್ ಮೈದಾನದಲ್ಲಿಯೇ ಸೋಲಿಸಿಯೇ ಎರಡು ಅಂಕಗಳನ್ನು ಗಳಿಸೋಣ ಎಂಬುದು ಕೆಲ ಕ್ರಿಕೆಟ್ ಪಂಡಿತರ ಅಂಬೋಣ.  ಇತರೇ ಎಲ್ಲಾ ದೇಶಗಳ ಎದುರು ಸಾಧಾರಣ ಇಲ್ಲವೇ ಕಳಪೆ ಪ್ರದರ್ಶನ ತೋರಿದರೂ ಭಾರತ ವಿರುದ್ಧ ಆಡುವಾಗ ಪ್ರತಿಯೊಬ್ಬ ಪಾಪೀಸ್ಥಾನದ ಆಟಗಾರನ ಕೆಚ್ಚು ಹೆಚ್ಚಾಗಿಯೇ ಇರುತ್ತದೆ.  ಈ ಪಂದ್ಯದಲ್ಲಿ ತನ್ನ ಶಕ್ತಿಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿಯೇ ಆಕ್ರಮಣಕಾರಿಯಾಗಿ ಅಟವಾಡುವುದನ್ನು ನಾವು ಈಗಾಗಲೇ ಕಂಡಿದ್ದೇವೆ. ನಮ್ಮ ತಂಡವೂ ಇದಕ್ಕೆ ಹೊರತಾಗಿಲ್ಲ.  ಅಕಸ್ಮಾತ್  ದುರದೃಷ್ಟವಶಾತ್ ನಮ್ಮ ತಂಡದ ವಿರುದ್ಧ ಪಾಪೀಸ್ಥಾನವೇನಾದರೂ ಗೆದ್ದು ಬಿಟ್ಟಲ್ಲಿ  ನಮ್ಮ ದೇಶದ ಮತ್ತು ನಮ್ಮ ಸೈನಿಕರ ನೈತಿಕತೆಯ ಮಟ್ಟ ನಿಸ್ಸಂದೇಹವಾಗಿಯೂ ಕಡಿಮೆ ಆಗುವುದರಲ್ಲಿ ಅನುಮಾನವೇ ಇಲ್ಲ.  ಇಂತಹ ಗೆಲುವು ಆ ದೇಶದ ಮತಾಂಧರಿಗೂ, ಉಗ್ರಗಾಮಿಗಳಿಗೂ ಮತ್ತು ಅಲ್ಲಿಯ ಸೈನಿಕರ ನೈತಿಕತೆ ಹೆಚ್ಚುಮಾಡಿ ನಮ್ಮ ಮೇಲೆ ಇನ್ನೂ ಹೆಚ್ಚಿನ ಧಾಳಿ ಮಾಡುವುದರಲ್ಲಿ ಯಾವ ಸಂದೇಹವೂ ಇಲ್ಲ. ರಣರಂಗದಲ್ಲಿ ಕೆಚ್ಚದೆಯಿಂದ ನಮ್ಮ ಸೈನಿಕರು  ಪಾಪೀಸ್ಥಾನವನ್ನು ಶತೃ ದೇಶ ಎಂದು ಭಾವಿಸಿ ಪರಸ್ಪರ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದರೆ ನಮ್ಮ  ಕ್ರಿಕೆಟ್ ಆಟಗಾರರು ಅದೇ ದೇಶವ ವಿರುದ್ಧ   ಕೇವಲ ಎರಡು ಅಂಕಗಳಿಗಾಗಿ  ಆಟ ಆಡುವುದು ಎಷ್ಟು ಸರಿ? ಜನ ಸಾಮಾನ್ಯರನ್ನು ಬಿಡಿ,  ಖಂಡಿತವಾಗಿಯೂ ಭಗವಂತನೂ ಇದನ್ನು ಒಪ್ಪಲಾರ.  ಸರಿ  ನಾವು ಅವರ ವಿರುದ್ಧ ಪಂದ್ಯವನ್ನು ಭಹಿಸ್ಕರಿಸಿದರೆ ಐಸಿಸಿ ನಮ್ಮ ದೇಶದ ಕ್ರಿಕೆಟ್ ತಂಡವನ್ನು ಅಮಾನತ್ತುಗೊಳಿಸಬಹುದು ಎಂದು ಕ್ರಿಕೆಟ್ ಪಂಡಿತರು ಹೇಳುತ್ತಾರೆ. *ನಮ್ಮ ದೇಶದ ಭಧ್ರತೆಯನ್ನು ಫಣಕ್ಕಿಟ್ಟು ಅವರ ವಿರುದ್ಧ ಕ್ರಿಕೆಟ್ ಆಡುವ ಜರೂರೇನಿದೆ?*  *ದೇಶವಿದ್ದಲ್ಲಿ ಮಾತ್ರವೇ ಕ್ರಿಕೆಟ್. ದೇಶವೇ ಇಲ್ಲದಿದ್ದಲ್ಲಿ ಕ್ರಿಕೆಟ್ ಎಲ್ಲಿಂದ ಆಡುತ್ತಾರೆ?* ಎಂದು ಸಣ್ಣ ವಯಸ್ಸಿನ ಮಕ್ಕಳೂ ಪ್ರಶ್ನಿಸುತ್ತಿರುವಾಗ ಇನ್ನು ಅತೀ ಬುದ್ದಿವಂತರಂತೆ ವರ್ತಿಸುವ ಕ್ರಿಕೆಟ್ ಪಂಡಿತರಿಗೆ ಇದು ಏಕೆ ಅರ್ಥವಾಗುವುದಿಲ್ಲ?

ಭಾರತ ದೇಶವನ್ನು ಭಹಿಷ್ಕರಿಸಿ ಜಗತ್ತಿನ ಯಾವುದೇ ದೇಶವೂ ಹೆಚ್ಚಿನ ದಿನ ಇರಲಾಗದು ಎಂಬುದನ್ನು ಈಗಾಗಲೇ ಪೊಖ್ರಾನ್ ಅಣು ಪರೀಕ್ಷೆಯ ಸಮಯದಲ್ಲಿ ಧೃಢ ಪಟ್ಟಿದೆ. ಅಂದು ಭಾರತದ ಮೇಲೆ ಹೇರಿದ್ದ ಆರ್ಥಿಕ ಧಿಗ್ಬಂಧನ ಕೆಲವೇ ಕೆಲವು ದಿನಗಳಲ್ಲಿ ಹೇರಿದವರಿಂದಲೇ ತೆಗಯಲ್ಪಟ್ಟಿದ್ದು ಈಗ ಇತಿಹಾಸವಲ್ಲವೇ?   ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ತನ್ನ ಚಿನ್ನದ ಮೊಟ್ಟೆ ಇಡುವ ಕೋಳಿಯಂತಹ ಭಾರತ ದೇಶವನ್ನು ಅಮಾನತ್ತಿನಲ್ಲಿ ಇಡಲು ಸಾಧ್ಯವೇ?  ಒಂದು ಪಕ್ಷ ಅಮಾನತ್ತು ಮಾಡಿ ತನ್ನ ಆದಾಯಕ್ಕೇ ತಾನೇ ಕೊಡಲಿ ಹಾಕಿಕೊಳ್ಳಬಲ್ಲದೇ? ಇಂದಿನ ವಾಯುಧಾಳಿ ನಡೆದ ಮೇಲಂತೂ ಇಡೀ ಭಾರತೀಯರ ಬಾಯಿಯಲ್ಲಿ  ಉಲಿಯುತ್ತಿರುವುದು ಒಂದೇ ವಾಕ್ಯ *How is the JOSH* ಅದಕ್ಕೆ ಪ್ರತ್ಯುತ್ತರ   *High Sir* ಇಂತಹ *ಜೋಶ್ ಹೀಗೆಯೇ ಮುಂದುವರಿಯಲು  ಶಾಂತಿಯ ಮಾತು ಕಥೆಯಿಂದಾಗಲೀ,  ಕ್ರಿಕೆಟ್ ಅಥವಾ ಇನ್ಯಾವುದೇ ಕ್ರೀಡೆಯಿಂದಾಗಲೀ ಅಸಾಧ್ಯ ಎಂಬುದು ಈಗಾಗಲೇ ಸಾಭೀತಾಗಿದೆ*  ವಾಜಪೇಯಿಯವರ ಸಂಝೋತಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದನ್ನು ನೋಡಿದ್ದೇವೆ. ಲಾಹೋರ್ ಬಸ್ಸಿನ  ಚಕ್ರವೆಂದೋ ತುಕ್ಕು ಹಿಡಿದಾಗಿದೆ.    ತಾಳ್ಮೆಗೂ ಒಂದು ಮಿತಿ ಇರುತ್ತದಲ್ಲವೇ?  ಮಿತಿ ಮೀರಿದರೆ  ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಹಾಗೆ, ಗುಂಡಿಗೆ  ಗಂಡೆದೆಯ ಗುಂಡಿನ ಪ್ರತಿ ಧಾಳಿಯೇ ಅತ್ಯುತ್ತಮ ಮಾರ್ಗ.  ಆವರು ನಮ್ಮ ಒಬ್ಬ ಸೈನಿಕನ್ನು ಕೊಂದರೆ ನಾವು ಅವರ ಹತ್ತು ಸೈನಿಕರ ಹೆಣ ಉರುಳಿಸಿದಾಗಲೇ ಅವರಿಗೆ ಬುದ್ದಿ ಬರುವುದು. ಎಂದಿಗೆ  ಪಾಪೀಸ್ಥಾನ ತನ್ನೆಲ್ಲಾ ಕುಚೇಷ್ಟೆಗಳನ್ನು ಸಂಪೂರ್ಣವಾಗಿ ಬಿಟ್ಟು ನಿಜವಾಗಿಯೂ ಶಾಂತಿಯಿಂದ ತಾನೂ ಬಾಳಿ ನೆರೆಹೊರೆ ರಾಷ್ಟ್ರಗಳನ್ನೂ ಶಾಂತಿಯಿಂದ ಬಾಳಲು ಬಿಡುತ್ತದೆಯೋ ಅಂದೇ ಕ್ರಿಕೆಟ್ಟು ಆಲ್ಲಿಯವರೆಗೂ ಇಂತಹ ಕಿರಿಕ್ಕೇ ಕಿರಿಕ್ಕು

ಏನಂತೀರೀ?