ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗ ಬೇಕಾದ ಅನಿವಾರ್ಯ ಸಂದರ್ಭಗಳು ಬಂದಾಗ ಎಲ್ಲೋ ಉಳ್ಳವರು ತಮ್ಮದೇ ವಾಹನಗಳಲ್ಲಿಯೋ ಇಲ್ಲವೇ, ಬಾಡಿಗೆ ವಾಹನ ಮಾಡಿಕೊಂಡು ಹೋದರೆ ಬಹುತೇಕರು ವಿಧಿ ಸರ್ಕಾರಿ/ಖಾಸಗೀ ಬಸ್ ಇಲ್ಲವೇ ರೈಲುಗಳನ್ನು ಅವಲಂಭನೆ ಮಾಡಲೇ ಬೇಕಾಗುತ್ತದೆ. ಹಾಗೆ ಪರ ಊರಿಗೆ ಹೋಗುವಾಗ ಸಮಯ ಉಳಿಸುವ ಸಲುವಾಗಿ ಬಹುತೇಕರು ರಾತ್ರಿಯ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟ್ ಬುಕ್ ಮಾಡಿ, ರಾತ್ರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಊಟ… Read More ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಗಾಡಿ ಕಾಣ್ತಾ ಇಲ್ಲಾ

ಅದೊಂದು ಶನಿವಾರ ಬೆಳಿಗ್ಗೆ ಎಂದಿನಂತೆ ಐದಕ್ಕೆಲ್ಲಾ ಎದ್ದು ಪ್ರಾರ್ಥರ್ವಿಧಿಗಳನ್ನು ಮುಗಿಸಿ ಗೆಳೆಯರೊಡನೆ ಸುಮಾರು ಹತ್ತು ಹನ್ನೆರಡು ಕಿಮೀ ದೂರಗಳಷ್ಟು ಸುದೀರ್ಘವಾದ ನಡಿಗೆಯನ್ನು ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದು ಸ್ನಾನ ಸಂಧ್ಯಾವಂದನೆಯನ್ನು ಮುಗಿಸಿ ಅಡುಗೆ ಮನೆಗೆ ಹೋಗಿ ನೋಡಿದರೆ ತಿಂಡಿ ಇನ್ನೂ ಮಾಡಿರಲಿಲ್ಲ. ಇದೇನಮ್ಮಾ ಇಷ್ಟು ಹೊತ್ತಾದಾರೂ ತಿಂಡಿಯೇ ಮಾಡಿಲ್ಲ್ಲ ಎಂದು ಮನೆಯಾಕಿಯನ್ನು ಕೇಳಿದರೆ, ಈ ಇವತ್ತು ಮಕ್ಕಳಿಗೂ ರಜೆ ಹಾಗಾಗಿ ಸ್ವಲ್ಪ ಹೆಚ್ಚಿನ ಹೊತ್ತು ನಿದ್ದೇ ಮಾಡಿಬಿಟ್ಟೆ. ಒಂದು ಹದಿನೈದು ಇಪ್ಪತ್ತು ನಿಮಿಷ ಇರಿ ಬಂದು ಏನಾದ್ರೂ… Read More ಗಾಡಿ ಕಾಣ್ತಾ ಇಲ್ಲಾ

ಶ್ರೀಕಂಠ, ವಿಷಕಂಠ, ನೀಲಕಂಠ

ಸಮುದ್ರ ಮಂಥನದ ಸಮಯ, ಕೈಲಾಸ ಪರ್ವತವನ್ನೇ ಕಡಗೋಲಾಗಿಸಿಕೊಂಡು ಆದಿಶೇಷನ ಒಂದು ತುದಿ ದೇವತೆಗಳು ಮತ್ತು ಮತ್ತೊಂದು ತುದಿಯನ್ನು ಅಸುರರು ಹಿಡಿದುಕೊಂಡು ಮಜ್ಜಿಗೆ ಕಡೆದಂತೆ ಸಮುದ್ರವನ್ನು ಕಡೆಯುತ್ತಿದ್ದಾಗ ಉಕ್ಕಿಬಂದ ಕಾರ್ಕೋಟಕ ವಿಷವನ್ನು ತಾಳಲಾರದೇ, ಎಲ್ಲರೂ ಆ ಪರಶಿವನ ಮೊರೆ ಹೊಕ್ಕಾಗಾ ಹಿಂದೂ ಮುಂದೇ ನೋಡದ ಶಿವಾ ಆ ಕಾರ್ಕೋಟಕ ವಿಷವನ್ನು ತನ್ನ ಎರಡೂ ಕೈಗಳಿಗೆ ಬರುವಂತೆ ಮಾಡಿಕೊಂಡು ಗಟ ಗಟನೆ ಆಪೋಷನೆ ಮಾಡುತ್ತಿರುವ ವಿಷಯ ತಿಳಿದು, ಪಾರ್ವತಿದೇವಿ ಓಡೋಡಿ ಬರುವಷ್ಟರಲ್ಲಿ ಶಿವ ವಿಷವನ್ನು ಸೇವಿಸಿಯಾಗಿರುತ್ತದೆ. ಇದನ್ನು ಕಂಡ ಪಾರ್ವತೀ… Read More ಶ್ರೀಕಂಠ, ವಿಷಕಂಠ, ನೀಲಕಂಠ

online shopping

ಎಲ್ಲರಿಗೂ ತಿಳಿದಿರುವಂತೆ ದಸರಾ ಮತ್ತು ದೀಪಾವಳಿ ಹಬ್ಬ ಬಂದಿತೆಂದರೆ ಇಡೀ ದೇಶಾದ್ಯಂತ ಸಂಭ್ರಮದ ಹಬ್ಬದ ವಾತಾವರಣ. ಈ ಸಂಭ್ರಮದ ಸಮಯದಲ್ಲಿ ಎಲ್ಲರ ಮನೆ ಮತ್ತು ಮನಗಳು ಏನಾದರೊಂದು ಹೊಸತೊಂದನ್ನು ಕೊಂಡು ತರಲು ಬಯಸಿ ವರ್ಷವಿಡೀ ಅದಕ್ಕಾಗಿ ಹಣವನ್ನು ಉಳಿಸಿ ಅದನ್ನು ಖರೀದಿಸಿ ತಂದರಂತೂ ಆಂದಕ್ಕೆ ಎಣೆಯೇ ಇಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ದಕ್ಷಿಣ ಭಾರತದ ಕೈಗಾರಿಕೆಗಳು ಆಯುಧಪೂಜೆಯ ಸಂದರ್ಭಕ್ಕೆ ತಮ್ಮ ನೌಕರಿಗೆ ಬೋನಸ್ ನೀಡಿದರೆ, ಇನ್ನು ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ತಮ್ಮ ನೌಕರಿಗೆ ಯಥೇಚ್ಚವಾದ ಬೋನಸ್ ನೀಡುವ… Read More online shopping

ಕೆರೆ ತೊಣ್ಣೂರು/ತೊಂಡನೂರು ಕೆರೆ

ಮಂಡ್ಯಾ ಜಿಲ್ಲೆಯ ಸಕ್ಕರೆನಾಡು ಪಾಂಡವಪುರದಿಂದ ನಾಗಮಂಗಲದ ಕಡೆಗೆ ಸುಮಾರು 10 ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಎಡಭಾಗದಲ್ಲಿ ತೊಂಡನೂರು ಎಂಬು ನಾಮಫಲಕ ಕಾಣಿಸುತ್ತದೆ. ನೋಡಲು ಅಷ್ಟೇನೂ ದೊಡ್ಡ ಊರಲ್ಲದಿದ್ದರೂ ಐತಿಹ್ಯವಾಗಿ ಬಹಳ ಪ್ರಮಾಖ್ಯತೆ ಪಡೆದಂತಹ ಊರಾಗಿದೆ. ಕೃಷಿ ಮತ್ತು ಹೈನು ಉದ್ಯಮ ಪ್ರಮುಖ ಉದ್ಯೋಗವಾಗಿದ್ದು ಊರಿಗೆ ಹೋಗುತ್ತಿದಂತೆಯೇ ಹಸುಗಳು ದಾರಿಗೆ ಅಡ್ಡಸಿಗುವುದಲ್ಲದೇ, ಹಾಲಿನ ಸಂಗ್ರಹದ ಕೇಂದ್ರವೂ ಧುತ್ತೆಂದು ಕಣ್ಣಿಗೆ ಬೀಳುತ್ತದೆ. ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರು, 11ನೇ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ… Read More ಕೆರೆ ತೊಣ್ಣೂರು/ತೊಂಡನೂರು ಕೆರೆ

ತೊಗರೀಬೇಳೆ ಚಟ್ನೀಪುಡಿ (ಆಂಧ್ರ ಶೈಲಿಯ ಕಂಡಿ ಪುಡಿ)

ಮಕ್ಕಳು ಅನ್ನದ ಜೊತೆ ಸಾರು ಮತ್ತು ಹುಳಿಯೊಂದಿಗೆ ತಿನ್ನಲು ಬೇಸರಿಕೊಳ್ಳುತ್ತಿದ್ದರೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾಗಿರುವ ಮತ್ತು ತಂಬಾ ದಿನಗಳವರೆಗೂ ಇಟ್ಟು ಕೊಂಡು ತಿನ್ನಬಹುದಾದ ತೊಗರೀಬೇಳೆ ಚಟ್ನೀಪುಡಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ತೊಗರೀಬೇಳೆ ಚಟ್ನೀಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ತೊಗರೀಬೇಳೆ – 1 ಬಟ್ಟಲು ಹುರಿಗಡಲೆ – 1/2 ಬಟ್ಟಲು ಧನಿಯ – 2 ಚಮಚ ಜೀರಿಗೆ – 1 ಚಮಚ ಅರಿಶಿನ – 1/2… Read More ತೊಗರೀಬೇಳೆ ಚಟ್ನೀಪುಡಿ (ಆಂಧ್ರ ಶೈಲಿಯ ಕಂಡಿ ಪುಡಿ)

ಶೆಟ್ಟೀಕೆರೆ

ಭೌಗೋಳಿಕವಾಗಿ ಕಲ್ಪತರುನಾಡು ತುಮಕೂರಿನ ಭಾಗವಾಗಿ, ಆ ಜಿಲ್ಲೆಯ ತುತ್ತ ತುದಿಯಲ್ಲಿ , ತುಮಕೂರಿನಿಂದ ಸುಮಾರು 70 ಕಿಮೀ ದೂರದಲ್ಲಿರುವ, ಚಿಕ್ಕನಾಯಕನ ಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಹೋಬಳಿಯೇ ಶೆಟ್ಟೀಕೆರೆ. ಹತ್ತಿರ ಹತ್ತಿರ ಸಾವಿರ ಮನೆಗಳು ಇರಬಹುದಾದ ಒಂದು ರೀತಿಯ ಸ್ಥಳೀಯ ವಾಣಿಜ್ಯ ನಗರಿ. ಸಾಂಪ್ರದಾಯಿಕವಾಗಿ ಹಾಸನ ಜಿಲ್ಲೆಯ ಸೊಗಡನ್ನು ಮೈದಳೆದಿರುವ ವಾಣಿಜ್ಯವಾಗಿ ಚಿತ್ರದುರ್ಗ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪಟ್ಟಣವೆಂದರೂ ತಪ್ಪಾಗಲಾರದು. ಬೆಂಗಳೂರಿನ ಕೃಷ್ಣರಾಜ ಪುರದಲ್ಲಿ ಎಲೆ ಮರಿಮಲ್ಲಪ್ಪ ಶೆಟ್ಟರು ಲೋಕ ಕಲ್ಯಾಣಕ್ಕಾಗಿ ವಿಶಾಲವಾದ ಕೆರೆಯನ್ನು… Read More ಶೆಟ್ಟೀಕೆರೆ

ಬ್ರಾಹ್ಮಣ ಭೋಜನ ಪ್ರಿಯಃ

ಸಾಧಾರಣವಾಗಿ ಗೆಳೆಯರ ಗಂಪಿನಲ್ಲಿ ಮಾತನಾಡುತ್ತಿರುವಾಗಲೋ ಅಥವಾ ಕಛೇರಿಗಳಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿರುವಾಗ ಅಪ್ಪಿ ತಪ್ಪಿ ಅಲ್ಲೊಬ್ಬ ಜನ್ಮತ: ಬ್ರಾಹ್ಮಣ ಒಬ್ಬ ಇದ್ದರೂ ಸಾಕು ನೀವು ಬಿಡ್ರಪ್ಪಾ ಪುಳಿಚಾರುಗಳು. ಬ್ರಾಹ್ಮಣ ಭೋಜನ ಪ್ರಿಯಃ ಎಂದು ಬ್ರಾಹ್ಮಣರು ಮಾತ್ರವೇ ಊಟ ಮಾಡುವುದು. ಮಿಕ್ಕವರೆಲ್ಲಾ ತುತ್ತಿಗೆ ಮುತ್ತಿಡುತ್ತಾರೆ ಎನ್ನುವಂತೆ ಎಲ್ಲರ ಮುಂದೆ ಕೊಂಕಾಗಿ ಆಡಿಕೊಳ್ಳುತ್ತಾ, ಆ ಜನ್ಮತಃ ಬ್ರಾಹ್ಮಣನನ್ನು ಮುಜುಗರಕ್ಕೀಡು ಮಾಡುತ್ತಾ ಅಪಹಾಸ್ಯ ಮಾಡಿ ಗೊಳ್ ಎಂದು ನಗುವುದನ್ನು ಎಲ್ಲಡೆಯಲ್ಲೂ ಕಾಣಬಹುದಾಗಿದೆ. ಅದೇಕೋ ಏನೋ ನಮ್ಮ ಜನರಿಗೆ ಅರ್ಧಂಬರ್ಧ ತಿಳಿದುಕೊಂಡು,… Read More ಬ್ರಾಹ್ಮಣ ಭೋಜನ ಪ್ರಿಯಃ

ಅವರೆಕಾಳು ಉಂಡೆ ಕಡುಬು

ಮಳೆಗಾಲ ಮುಗಿಯುತ್ತಿದ್ದಂತೆಯೇ ಅವರೇಕಾಳಿನ ಕಾಲ ಶುರುವಾಗುತ್ತದೆ. ಆವರೇ ಕಾಳಿನ ಉಪ್ಪಿಟ್ಟು, ಹುಳಿ, ನುಚ್ಚಿನುಂಡೆ, ಆಂಬೊಡೆ, ಹುಸ್ಲಿ ಹೀಗೆ ಹಲವಾರು ರುಚಿ ರುಚಿಯಾದ ಪದಾರ್ಥಗಳನ್ನು ಮಾಡಬಹುದಾಗಿದೆ.  ನಾವು ಇಂದು ಅತ್ಯಂತ ಸುಲಭ ಮತ್ತು ಸರಳವಾಗಿ ತಯಾರಿಸಬಹುದಾದ ರುಚಿ ರುಚಿಯಾದ ಅವರೆಕಾಳು  ಉಂಡೆ ಕಡುಬು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು  ಅವರೆಕಾಳು ಉಂಡೆ ಕಡುಬು ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಬೇಯಿಸಿಟ್ಟುಕೊಂಡ ಅವರೇಕಾಳು – 1 ಬಟ್ಟಲು ಅಕ್ಕಿತರಿ – 1 ಬಟ್ಟಲು ಸಾಸಿವೆ – 1/2 ಚಮಚ… Read More ಅವರೆಕಾಳು ಉಂಡೆ ಕಡುಬು