ಏನಂತೀರೀ? ಪುಸ್ತಕ ಲೋಕಾರ್ಪಣೆ

ನನ್ನೆಲ್ಲಾ ಆತ್ಮೀಯರಿಗೂ ಈಗಾಗಲೇ ತಿಳಿದಿರುವಂತೆ, ಒಬ್ಬ ಹವ್ಯಾಸೀ ಬರಹಗಾರನಾಗಿ ರಾಜಕಾರಣದ ಆಗು ಹೋಗುಗಳನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಕಾರಣ ಬೇಕೋ ಬೇಡವೋ ಗೆಳೆಯರ ಒತ್ತಾಯದ ಮೇರೆಗೆ ಸಾಮಾಜಿಕ ಜಾಲತಾಣಗಳ ನಾನಾ ಗುಂಪುಗಳ ಭಾಗವಾಗಿ ಸುಖಾ ಸುಮ್ಮನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದಕ್ಕೇ ನನ್ನ ಬರವಣಿಗೆ ಸೀಮಿತವಾಗಿತ್ತು. ಆ ಎಲ್ಲಾ ಲೇಖನಗಳಿಂದ ಮಿತ್ರತ್ವಕ್ಕಿಂತ ಶತೃತ್ವ ಗಳಿಸಿದ್ದೇ ಹೆಚ್ಚು. ಈ ಜಿದ್ದಾ ಜಿದ್ದಿ, ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಮೀಸಲಾಗಿರದೇ, ಮನೆಯವರೆಗೂ ಬಂದು, ನನ್ನ ಕುಟುಂಬದವರು ನನ್ನ ಪರವಾಗಿ ಅದೆಷ್ಟೋ… Read More ಏನಂತೀರೀ? ಪುಸ್ತಕ ಲೋಕಾರ್ಪಣೆ

ನೆಮ್ಮದಿ

ಶಂಕರಪ್ಪ ನಗರದ ಮಾರುಕಟ್ಟೆಯ ಬಳಿ ಸಣ್ಣದಾದ ಕಾಫಿ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಪ್ರತೀ ದಿನ ನೂರಾರು ಜನರು ಅವರ ಅಂಗಡಿಗೆ ಬಂದು ಕಾಫೀ, ಟೀ ಕುಡಿದು ತಮ್ಮ ಮನಸ್ಸಿನ ದುಗುಡವನ್ನು ಕಳೆದುಕೊಂಡು ಉಲ್ಲಾಸಿತರಾಗಿ ಹೋಗುತ್ತಿರುತ್ತಾರೆ. ಅದೋಂದು ಸಂಜೆ‌ ಶಂಕರಪ್ಪನವರಿಗೆ ವಿಪರೀತ ತಲೆ ನೋವು ಕಾಡತೊಡಗಿ, ತಲೆ ಸಿಡಿದು ಹೋಗುವಷ್ಟು ನೋವು ಬಾಧಿಸ ತೊಡಗುತ್ತದೆ. ಅದಾಗಲೇ ಮಬ್ಬುಗತ್ತಲು ಸಮೀಪಿಸುತ್ತಿದ್ದ ಕಾರಣ, ಅಂಗಡಿಯಲ್ಲಿಯೂ ಗ್ರಾಹಕರು ಕಡಿಮೆ ಇದ್ದದನ್ಬು ಕಂಡು, ತಮ್ಮ ಹುಡುಗನಿಗೆ ಅಂಗಡಿಯ ಉಸ್ತುವಾರಿ ವಹಿಸಿ ಹತ್ತಿರದ ಮೆಡಿಕಲ್ ಸ್ಟೋರಿಗೆ… Read More ನೆಮ್ಮದಿ

ತುಪ್ಪಾನ್ನ

ಸಭೆ ಸಮಾರಂಭಗಳಲ್ಲಿ ಎಲೆಯ ಕೊನೆಗೆ ಅದರಲ್ಲೂ ವಿಶೇಷವಾಗಿ ಮದುವೆಯ ಹಿಂದಿನ ದಿನ ವರಪೂಜೆಯಲ್ಲಿ ಸಾಂಪ್ರದಾಯಕವಾಗಿ ತಯಾರಿಸುವ ತುಪ್ಪಾನ್ನವನ್ನು ಕು. ಅನನ್ಯ ಆನಂದ್ ನಮ್ಮ ಇಂದಿನ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದಾರೆ. ಸುಮಾರು 4-5 ಜನರು ಸವಿಯಬಹುದಾದಷ್ಟು ತುಪ್ಪಾನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ತೆಂಗಿನಕಾಯಿ ತುರಿ- 1 ಬಟ್ಟಲು ಕರಿಬೇವಿನ ಸೊಪ್ಪು – 4-5 ಎಲೆಗಳು ಕರಿದ ಹಪ್ಪಳ – 4-5 ರುಚಿಗೆ ತಕ್ಕಷ್ಟು ಉಪ್ಪು ಒಗ್ಗರಣೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು ತುಪ್ಪಾ – 1/2… Read More ತುಪ್ಪಾನ್ನ

ಮದರಸ ಮತಾಂಧರನ್ನು ತಯಾರಿಸುವ ಕಾರ್ಖಾನೆಯೇ?

ಕೆಲವು ತಿಂಗಳುಗಳ ಹಿಂದೆ ಉತ್ತರಾಖಂಡದಿಂದ ರಾತ್ರೋರಾತ್ರಿ ಸರಿ ಸುಮಾರು 2,00,000 ಮುಸ್ಲಿಂ ಮಕ್ಕಳು ಕಣ್ಮರೆಯಾದ ಭೀಕರ ಸತ್ಯ ಹೊರ ಬಂದು ಪ್ರಧಾನಿಗಳನ್ನೂ ಒಳಗೊಂಡು ಎಲ್ಲರೂ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಇದನ್ನೇ ನೆಪವಾಗಿಸಿಕೊಂಡು ದೇಶದ ಮುಸ್ಲಿಮರಲ್ಲಿ ಒಂದು ರೀತಿಯ ಚಡಪಡಿಕೆ ಮತ್ತು ಅಭದ್ರತೆಯ ಭಾವನೆ ಇದೆ ಎಂದು ಮಾಜಿ ಉಪಾಧ್ಯಕ್ಷ ಹಮೀದ್ ಅನ್ಸಾರಿ ಹೇಳಿಕೆ ಕೊಟ್ಟೇ ಬಿಟ್ಟರು. ದೇಶದ ಉಪರಾಷ್ಟ್ರಪತಿಗಳಾಗಿದ್ದ ಹಮೀದ್ ಅನ್ಸಾರಿ ಅವರಂತಹ ಜನರು ಈ ರೀತಿಯಲ್ಲಿ ಏಕೆ ಅಭದ್ರತೆ ಮತ್ತು ಅಸಹಿಷ್ಣುತೆ ಬೆಳೆಯುತ್ತಿದೆ ಎಂಬುದನ್ನು… Read More ಮದರಸ ಮತಾಂಧರನ್ನು ತಯಾರಿಸುವ ಕಾರ್ಖಾನೆಯೇ?

ಅಪೂಪ ದಾನ

ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸದಲ್ಲಿ ಮಾತ್ರವೇ ಕೊಡುವಂತಹ ಅನುರೂಪದ ಮತ್ತು ಅಪರೂಪದ ದಾನವೇ ಅಪೂಪ ದಾನ. ಹಾಗಾದ್ರೇ ಅಪೂಪ ದಾನ ಅಂದ್ರೆ ಏನು? ಅಧಿಕ ಮಾಸ ಅಂದ್ರೇ ಏನು? ಅದು ಹೇಗೆ ಬರುತ್ತದೆ? ಮತ್ತು ಅದರ ಮಹತ್ವ ಮತ್ತು ಆ ಮಾಸಾಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ
Read More ಅಪೂಪ ದಾನ

ರಾಹುಲ್ ತೆವಾಟಿಯ

2014ರ ಐಪಿಲ್ ಹರಾಜು ಪ್ರಕ್ರಿಯೆಯಲ್ಲಿ ಹರಿಯಾಣದ ಫರೀದಾಬಾದಿನ 21 ವಯಸ್ಸಿನ ಅಷ್ಟೇನು ಖ್ಯಾತನಾಗಿರದಿದ್ದ ಆಲ್ರೌಂಡರ್ ರಾಹುಲ್ ತೆವಾಟಿಯಾ ಎಂಬ ಯುವಕನನ್ನು ಮೂಲ ಬೆಲೆಯಾದ 10 ಲಕ್ಷಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನು ಆಡಿಸಿ ಡಗ್ ಔಟಿನಲ್ಲಿ ನೀರನ್ನು ಹೊತ್ತು ತರಲು ಬಳಸಿಕೊಳ್ಳುತ್ತದೆ. 2017ರಲ್ಲಿ ರಾಜಸ್ಥಾನ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರೂ ಹೆಚ್ಚಿನ ಬದಲಾವಣೆ ಇಲ್ಲದೇ ಒಂದೇ ವರ್ಷಕ್ಕೆ ಅವರನ್ನು ಕೈಬಿಟ್ಟಿತ್ತು.… Read More ರಾಹುಲ್ ತೆವಾಟಿಯ

ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಆರೋಗ್ಯಕರವಾಗಿರುವ ಮತ್ತು ತುಂಬಾ ದಿನಗಳವರೆಗೂ ಇಟ್ಟು ಕೊಂಡು ತಿನ್ನಬಹುದಾದ ಶುಂಠಿ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಶುಂಠಿ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಕೊಂಡ ಶುಂಠಿ… Read More ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)

ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಎಪ್ಪತರ ದಶಕದಲ್ಲಿ ನನಗೆ ಆಗಿನ್ನೂ ಬುದ್ಧಿ ಬಂದ ಸಮಯದಲ್ಲಿ ನಾನು ಬಹಳ ಕಾಲ ಗುನುಗುತ್ತಿದ್ದ ಮತ್ತು ಈಗಲೂ ನನಗೆ ನೆನಪಿನಲ್ಲಿ ಇರುವ ದೇವರಗುಡಿ ಚಿತ್ರದ ಚಿ.ಉದಯಶಂಕರ್ ಸಾಹಿತ್ಯ ರಚನೆಯ, ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿ ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮಾಮರವೆಲ್ಲೋ ಕೋಗಿಲೆ ಎಲ್ಲೋ, ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನುಬಂಧ ಹಾಡು ಇಂದಿನ ದಿನಕ್ಕೆ ನಿಜಕ್ಕೂ ಅನ್ವರ್ಥವಾಗಿದೆ. ಜೂನ್ 4, 1946 ರಲ್ಲಿ ಆಂಧ್ರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿ ತಮಿಳುನಾಡಿನ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿ… Read More ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಒರಳು ಕಲ್ಲು ಚಿತ್ರಾನ್ನ

ಸಭೆ ಸಮಾರಂಭಗಳಲ್ಲಿ ಎಲೆಯ ಕೊನೆಗೆ ಅಥವಾ ಮನೆಗಳಲ್ಲಿ ಬೆಳಗಿನ ತಿಂಡಿಗೆ ನಿಂಬೇಹಣ್ಣಿನ ಚಿತ್ರಾನ್ನ ಮಾಡುವುದು ವಾಡಿಕೆ ಅದರೇ ಅದೇ ರೀತಿಯ ಚಿತ್ರಾನ್ನ ತಿಂದು ಬೇಸರವಾಗಿದ್ದಲ್ಲಿ, ಸಾಂಪ್ರದಾಯಕವಾಗಿ ಅಡುಗೆಯಾದ ಒರಳು ಕಲ್ಲು ಚಿತ್ರಾನ್ನ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಓರಳು ಕಲ್ಲು ಚಿತ್ರಾನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ತೆಂಗಿನಕಾಯಿ ತುರಿ- 1 ಬಟ್ಟಲು ಜೀರಿಗೆ – 1 ಚಮಚ ಬೆಲ್ಲ- ಸಣ್ಣ ಗಾತ್ರ ಹುಣಸೇ ಹಣ್ಣು –… Read More ಒರಳು ಕಲ್ಲು ಚಿತ್ರಾನ್ನ