ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಅದು ಎಂಭತ್ತರ ದಶಕದ ಸಮಯ. ನನ್ನ ವಿದ್ಯಾಭ್ಯಾಸದ ಸಲುವಾಗಿ ನಾವು ನೆಲಮಂಗಲದಿಂದ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಹಿಂದಿನ ಲೊಟ್ಟೇಗೊಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೋಗುತ್ತಿದ್ದ ನನಗೆ ನಮ್ಮ ಮನೆಯ ಬಳಿ ಯಾವುದೇ ಶಾಖೆ ಇರದಿದ್ದದ್ದು ತುಸು ಬೇಸರವೆನಿಸಿತ್ತು, ನಮ್ಮ ಶಾಲೆ ಮಧ್ಯಾಹ್ನನದ ಪಾಳಿಯಲ್ಲಿದ್ದು 1 – ಸಂಜೆ 5:30ಕ್ಕೆ ಮುಗಿಯುತ್ತಿತ್ತು. ಅದೊಂದು ದಿನ ನಮ್ಮ ಶಾಲೆಯ ಹಿಂಬಾಗದಲ್ಲಿದ್ದ ಬಿಇಎಲ್ ಸೊಸೈಟಿಯ ಪಕ್ಕದಲ್ಲಿ ಶಾಖೆ ನಡೆಯುವುದನ್ನು ನೋಡಿ ಆನಂದವಾಗಿ… Read More ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಮಾರ್ವಾಡಿಗಳು ನಮ್ಮವರು

ಅದು ತೊಂಬತ್ತರ ದಶಕ ಅಂತ್ಯದ ಸಮಯ. ಆಗ ತಾನೇ ಮದುವೆಯಾಗಿದ್ದ ನಮಗೆ ಮಧುಚಂದ್ರಕ್ಕೆ ಹೋಗಬೇಕೆನ್ನುವ ತವಕ. ಈಗಿನಂತೆ ವಿದೇಶಕ್ಕೆ ಹೋಗುವ ಅರ್ಥಿಕ ಸಧೃಡತೆಯಾಗಲೀ, ಅನುಕೂಲತೆಗಳು ಇಲ್ಲದಿದ್ದಾಗ, ಜೈಪುರ್, ಉದಯಪುರ್, ಬಾಂಬೆಯ ಕಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿಯಾಗಿತ್ತು. ಇದೇ ಸ್ಥಳಗಳಿಗೆ ಹೋಗಲು ತೀರ್ಮಾನಿಸಿದ್ದರ ಹಿಂದೆಯೂ ಒಂದು ಬಲವಾದ ಕಾರಣವಿದ್ದು, ನಮ್ಮಾಕಿಯ ಜೊತೆ ಬಾಲ್ಯದಿಂದಲೂ ನೆರೆಹೊರೆಯವರಾಗಿದ್ದು, ಸಹಪಾಠಿಯೂ ಆಗಿದ್ದು ಆಕೆಯ ಮದುವೆಯೂ ಸಹಾ ನಮ್ಮ ಮದುವೆಯಾಗಿ 15-20 ದಿನಗಳ ನಂತರ ದೂರದ ರಾಜಾಸ್ಥಾನದ ಮಾರ್ವಾಡ್ ಗಂಜಿನ ದೇವಗಡ್ ಮಜಾರಿಯಾ ಎಂಬ ಊರಿನ… Read More ಮಾರ್ವಾಡಿಗಳು ನಮ್ಮವರು

ಪುಳಿಯೋಗರೆ

ಇದು ದಕ್ಷಿಣ ಭಾರತದ ಜನಪ್ರಿಯ ಆಹಾರವೂ ಹೌದು ಮತ್ತು ದೇವಸ್ಥಾನಗಳಲ್ಲಿನ ಸುಪ್ರಸಿದ್ಧ ಪ್ರಸಾದವೂ ಹೌದು. ಪುಳಿಯೋಗರೇ ಎಂಬ ಹೆಸರು ಕೇಳಿದೊಡನೆ ನಮ್ಮ ಬಾಯಲ್ಲಿ ನೀರೂರುವ ಹಾಗೆಯೇ ಥಟ್ ಅಂತಾ ನೆನಪಾಗೋದೇ ಐಯ್ಯಂಗಾರ್ ಪುಳಿಯೋಗರೇ. ಬ್ರಾಹ್ಮಣರ ಒಂದು ಪಂಗಡವಾದ ಐಯ್ಯಾಂಗಾರರು ಈ ಪಾಕವಿಧಾನವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡು ಅದನ್ನು ತಮ್ಮ ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತಹ ರುಚಿಕರವಾದ ಪುಳಿಯೋಗರೇ ಗೊಜ್ಜನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಒಮ್ಮೆ ಶುಚಿಯಾಗಿ ನೀರು ಬೆರಸದೇ… Read More ಪುಳಿಯೋಗರೆ

ತೂಕ ಮತ್ತು ಅಳತೆ

ಅದೊಂದು ಕೋಳಿ ಅಂಗಡಿ ಇನ್ನೇನು ಅಂಗಡಿಯನ್ನು ಮುಚ್ಚಬೇಕು ಎನ್ನುವ ಸಮಯದಲ್ಲಿ ಅಂಗಡಿಗೆ ಬಂದ ಮಹಿಳೆಯೊಬ್ಬಳು ಇನ್ನೂ ಕೋಳಿ ಸಿಗುತ್ತದೆಯೇ? ಎಂದು ವಿಚಾರಿಸುತ್ತಾಳೆ. ಕಟುಕ ತನ್ನ ಆಳವಾದ ಫ್ರೀಜರ್ ಅನ್ನು ತೆರೆದುನೋಡಿ ಅಲ್ಲಿ ಉಳಿದಿದ್ದ ಏಕೈಕ ಕೋಳಿಯನ್ನು ಹೊರತೆಗೆದು ತಕ್ಕಡಿಯಮೇಲಿಟ್ಟು 1.5 ಕೆ.ಜಿ. 🐓 ಇದೆ ಕೊಡ್ಲಾ ಎಂದು ಕೇಳುತ್ತಾನೆ. ತಕ್ಷಣವೇ ಮಹಿಳೆಯು ಕೋಳಿಯ ಗಾತ್ರ ಮತ್ತು ಪ್ರಮಾಣವನ್ನು ನೋಡಿ, ಇದಕ್ಕಿಂತ ಸ್ವಲ್ಪ ದೊಡ್ಡದಿದ್ದರೆ ಕೋಡ್ತೀರಾ ಎಂದು ವಿನಮ್ರವಾಗಿ ಕೇಳುತ್ತಾಳೆ. ಕೂಡಲೇ ಕಟುಕನು ಆ ಕೋಳಿಯನ್ನು ಮತ್ತೆ ತನ್ನ… Read More ತೂಕ ಮತ್ತು ಅಳತೆ

ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗ ಬೇಕಾದ ಅನಿವಾರ್ಯ ಸಂದರ್ಭಗಳು ಬಂದಾಗ ಎಲ್ಲೋ ಉಳ್ಳವರು ತಮ್ಮದೇ ವಾಹನಗಳಲ್ಲಿಯೋ ಇಲ್ಲವೇ, ಬಾಡಿಗೆ ವಾಹನ ಮಾಡಿಕೊಂಡು ಹೋದರೆ ಬಹುತೇಕರು ವಿಧಿ ಸರ್ಕಾರಿ/ಖಾಸಗೀ ಬಸ್ ಇಲ್ಲವೇ ರೈಲುಗಳನ್ನು ಅವಲಂಭನೆ ಮಾಡಲೇ ಬೇಕಾಗುತ್ತದೆ. ಹಾಗೆ ಪರ ಊರಿಗೆ ಹೋಗುವಾಗ ಸಮಯ ಉಳಿಸುವ ಸಲುವಾಗಿ ಬಹುತೇಕರು ರಾತ್ರಿಯ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟ್ ಬುಕ್ ಮಾಡಿ, ರಾತ್ರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಊಟ… Read More ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಗಾಡಿ ಕಾಣ್ತಾ ಇಲ್ಲಾ

ಅದೊಂದು ಶನಿವಾರ ಬೆಳಿಗ್ಗೆ ಎಂದಿನಂತೆ ಐದಕ್ಕೆಲ್ಲಾ ಎದ್ದು ಪ್ರಾರ್ಥರ್ವಿಧಿಗಳನ್ನು ಮುಗಿಸಿ ಗೆಳೆಯರೊಡನೆ ಸುಮಾರು ಹತ್ತು ಹನ್ನೆರಡು ಕಿಮೀ ದೂರಗಳಷ್ಟು ಸುದೀರ್ಘವಾದ ನಡಿಗೆಯನ್ನು ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದು ಸ್ನಾನ ಸಂಧ್ಯಾವಂದನೆಯನ್ನು ಮುಗಿಸಿ ಅಡುಗೆ ಮನೆಗೆ ಹೋಗಿ ನೋಡಿದರೆ ತಿಂಡಿ ಇನ್ನೂ ಮಾಡಿರಲಿಲ್ಲ. ಇದೇನಮ್ಮಾ ಇಷ್ಟು ಹೊತ್ತಾದಾರೂ ತಿಂಡಿಯೇ ಮಾಡಿಲ್ಲ್ಲ ಎಂದು ಮನೆಯಾಕಿಯನ್ನು ಕೇಳಿದರೆ, ಈ ಇವತ್ತು ಮಕ್ಕಳಿಗೂ ರಜೆ ಹಾಗಾಗಿ ಸ್ವಲ್ಪ ಹೆಚ್ಚಿನ ಹೊತ್ತು ನಿದ್ದೇ ಮಾಡಿಬಿಟ್ಟೆ. ಒಂದು ಹದಿನೈದು ಇಪ್ಪತ್ತು ನಿಮಿಷ ಇರಿ ಬಂದು ಏನಾದ್ರೂ… Read More ಗಾಡಿ ಕಾಣ್ತಾ ಇಲ್ಲಾ

ಶ್ರೀಕಂಠ, ವಿಷಕಂಠ, ನೀಲಕಂಠ

ಸಮುದ್ರ ಮಂಥನದ ಸಮಯ, ಕೈಲಾಸ ಪರ್ವತವನ್ನೇ ಕಡಗೋಲಾಗಿಸಿಕೊಂಡು ಆದಿಶೇಷನ ಒಂದು ತುದಿ ದೇವತೆಗಳು ಮತ್ತು ಮತ್ತೊಂದು ತುದಿಯನ್ನು ಅಸುರರು ಹಿಡಿದುಕೊಂಡು ಮಜ್ಜಿಗೆ ಕಡೆದಂತೆ ಸಮುದ್ರವನ್ನು ಕಡೆಯುತ್ತಿದ್ದಾಗ ಉಕ್ಕಿಬಂದ ಕಾರ್ಕೋಟಕ ವಿಷವನ್ನು ತಾಳಲಾರದೇ, ಎಲ್ಲರೂ ಆ ಪರಶಿವನ ಮೊರೆ ಹೊಕ್ಕಾಗಾ ಹಿಂದೂ ಮುಂದೇ ನೋಡದ ಶಿವಾ ಆ ಕಾರ್ಕೋಟಕ ವಿಷವನ್ನು ತನ್ನ ಎರಡೂ ಕೈಗಳಿಗೆ ಬರುವಂತೆ ಮಾಡಿಕೊಂಡು ಗಟ ಗಟನೆ ಆಪೋಷನೆ ಮಾಡುತ್ತಿರುವ ವಿಷಯ ತಿಳಿದು, ಪಾರ್ವತಿದೇವಿ ಓಡೋಡಿ ಬರುವಷ್ಟರಲ್ಲಿ ಶಿವ ವಿಷವನ್ನು ಸೇವಿಸಿಯಾಗಿರುತ್ತದೆ. ಇದನ್ನು ಕಂಡ ಪಾರ್ವತೀ… Read More ಶ್ರೀಕಂಠ, ವಿಷಕಂಠ, ನೀಲಕಂಠ

online shopping

ಎಲ್ಲರಿಗೂ ತಿಳಿದಿರುವಂತೆ ದಸರಾ ಮತ್ತು ದೀಪಾವಳಿ ಹಬ್ಬ ಬಂದಿತೆಂದರೆ ಇಡೀ ದೇಶಾದ್ಯಂತ ಸಂಭ್ರಮದ ಹಬ್ಬದ ವಾತಾವರಣ. ಈ ಸಂಭ್ರಮದ ಸಮಯದಲ್ಲಿ ಎಲ್ಲರ ಮನೆ ಮತ್ತು ಮನಗಳು ಏನಾದರೊಂದು ಹೊಸತೊಂದನ್ನು ಕೊಂಡು ತರಲು ಬಯಸಿ ವರ್ಷವಿಡೀ ಅದಕ್ಕಾಗಿ ಹಣವನ್ನು ಉಳಿಸಿ ಅದನ್ನು ಖರೀದಿಸಿ ತಂದರಂತೂ ಆಂದಕ್ಕೆ ಎಣೆಯೇ ಇಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ದಕ್ಷಿಣ ಭಾರತದ ಕೈಗಾರಿಕೆಗಳು ಆಯುಧಪೂಜೆಯ ಸಂದರ್ಭಕ್ಕೆ ತಮ್ಮ ನೌಕರಿಗೆ ಬೋನಸ್ ನೀಡಿದರೆ, ಇನ್ನು ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ತಮ್ಮ ನೌಕರಿಗೆ ಯಥೇಚ್ಚವಾದ ಬೋನಸ್ ನೀಡುವ… Read More online shopping

ಕೆರೆ ತೊಣ್ಣೂರು/ತೊಂಡನೂರು ಕೆರೆ

ಮಂಡ್ಯಾ ಜಿಲ್ಲೆಯ ಸಕ್ಕರೆನಾಡು ಪಾಂಡವಪುರದಿಂದ ನಾಗಮಂಗಲದ ಕಡೆಗೆ ಸುಮಾರು 10 ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಎಡಭಾಗದಲ್ಲಿ ತೊಂಡನೂರು ಎಂಬು ನಾಮಫಲಕ ಕಾಣಿಸುತ್ತದೆ. ನೋಡಲು ಅಷ್ಟೇನೂ ದೊಡ್ಡ ಊರಲ್ಲದಿದ್ದರೂ ಐತಿಹ್ಯವಾಗಿ ಬಹಳ ಪ್ರಮಾಖ್ಯತೆ ಪಡೆದಂತಹ ಊರಾಗಿದೆ. ಕೃಷಿ ಮತ್ತು ಹೈನು ಉದ್ಯಮ ಪ್ರಮುಖ ಉದ್ಯೋಗವಾಗಿದ್ದು ಊರಿಗೆ ಹೋಗುತ್ತಿದಂತೆಯೇ ಹಸುಗಳು ದಾರಿಗೆ ಅಡ್ಡಸಿಗುವುದಲ್ಲದೇ, ಹಾಲಿನ ಸಂಗ್ರಹದ ಕೇಂದ್ರವೂ ಧುತ್ತೆಂದು ಕಣ್ಣಿಗೆ ಬೀಳುತ್ತದೆ. ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರು, 11ನೇ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ… Read More ಕೆರೆ ತೊಣ್ಣೂರು/ತೊಂಡನೂರು ಕೆರೆ