ಡೊಡ್ಡಪತ್ರೇ ಸೊಪ್ಪಿನ ತೊಕ್ಕು

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಡೊಡ್ಡಪತ್ರೇ ಸೊಪ್ಪಿನ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಡೊಡ್ಡಪತ್ರೇ ಸೊಪ್ಪಿನ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು ದೊಡ್ಡಪತ್ರೆ – 20 ರಿಂದ 25 ಎಲೆ ಹುಣಸೇಹಣ್ಣು – ನಿಂಬೆ… Read More ಡೊಡ್ಡಪತ್ರೇ ಸೊಪ್ಪಿನ ತೊಕ್ಕು

ಕಾಗೆ, ಅರಳೀ, ಆಲದ ಮರಗಳು ಮತ್ತು ನಮ್ಮ ಪೂರ್ವಜರು

ತಮ್ಮ ಗುರುಗಳನ್ನು ಭೇಟಿ ಮಾಡಲು ಹೋಗಿದ್ದ ಭಕ್ತರೊಬ್ಬರು ಕುತೂಹಲದಿಂದ, ಸ್ವಾಮಿಗಳೇ, ಪಿತೃಪಕ್ಷ ಮತ್ತು ಶ್ರಾದ್ಧದ ಸಮಯದಲ್ಲಿ ನಾವು ಕೇವಲ ಕಾಗೆಗಳಿಗೆ ಮಾತ್ರ ಆಹಾರವನ್ನು ಏಕೆ ಇಡುತ್ತೇವೆ? ಇತರೇ ಹಕ್ಕಿಗಳಿಗೇಕೆ ಇಡುವುದಿಲ್ಲ? ನಮ್ಮ ಪೂರ್ವಜರು ಕಾಗೆಗಳ ರೂಪದಲ್ಲಿ ಬಂದು ಪಿಂಡವನ್ನು ತಿನ್ನುತ್ತಾರೆ ಎಂದರೆ ನಮ್ಮ ಪೂರ್ವಜರು ಅಷ್ಟು ನಿಕೃಷ್ಟರೇ ? ಎಂದು ಪ್ರಶ್ನಿಸುತ್ತಾರೆ. ಶಿಷ್ಯನ ಈ ಮುಗ್ಧ ಪ್ರಶ್ನೆಗೆ ಅಷ್ಟೇ ಸೌಮ್ಯ ನಗುವಿನೊಂದಿಗೆ ಉತ್ತರಿಸಿದ ಗುರುಗಳು ನಾವು ಕಾಗೆಯನ್ನು ಕಾಕ ಎಂದೂ ಕರೆಯುತ್ತೇವೆಯೇ ಹೊರತು ಇದರ ಹೊರತಾಗಿ ಬೇರೆ… Read More ಕಾಗೆ, ಅರಳೀ, ಆಲದ ಮರಗಳು ಮತ್ತು ನಮ್ಮ ಪೂರ್ವಜರು

ಕೀಟ ನಾಶ ಮತ್ತು ಪರಿಸರದ ಹಾನಿ

ಬಹುಶಃ ಒಂದು ಹತ್ತು ವರ್ಷಗಳ ಹಿಂದೆ ಕಾರಿನಲ್ಲಿ ದೂರಪ್ರಯಾಣಿಸುವವರಿಗೆ ತಮ್ಮ ಕಾರಿನ ವಿಂಡ್ ಷೀಲ್ಡ್ ಮೇಲೆ ಧಾಳಿ ಮಾಡುತ್ತಿದ್ದ ಕೀಟಗಳ ದಾಳಿಯನ್ನು ತಡೆಯುವುದೇ ಕಷ್ಟವಾಗುತ್ತಿತ್ತು. ವೇಗವಾಗಿ ಚಾಲನೆಯಾಗುತ್ತಿರುವ ವಾಹನಗಳಿಗೆ ಸಣ್ಣ ಸಣ್ಣ ಕ್ರಿಮಿ ಕೀಟಗಳು ಅಪ್ಪಳಿಸಿ ನಾಶವಾಗುತ್ತಿದ್ದದ್ದಲ್ಲದೇ ವಾಹನದ ಗಾಜಿಗೆ ಗಟ್ಟಿಯಾಗಿ ಕಚ್ಚಿ ಕೊಂಡು ಅವುಗಳನ್ನು ತಡೆಯುವುದಾಗಲೀ, ತೊಳೆಯುವುದಾಗಲೀ ಕಷ್ಟವಾಗುತ್ತಿತ್ತು. ಆದರೆ ಇಂದಿನ ಬಹುತೇಕ ಯುವಕರಿಗೆ ಅಂತಹ ಸಮಸ್ಯೆಯ ಅರಿವೇ ಇಲ್ಲವಾಗಿದ್ದು ಆಹ್ಲಾದಕರವಾಗಿ ದೂರಪ್ರಯಾಣ ಮಾಡುತ್ತಿದ್ದಾರೆ.. ಹಾಗಾದರೇ ಆ ಸಮಸ್ಯೆಗಳು ಹೇಗೆ ಶಾಶ್ವತವಾಗಿ ಪರಿಹಾರವಾದವೇ? ಎಂಬುದರ ಬೆನ್ನತ್ತಿ… Read More ಕೀಟ ನಾಶ ಮತ್ತು ಪರಿಸರದ ಹಾನಿ

ವಿಶ್ವ ತೆಂಗಿನ ದಿನ

ಇವತ್ತು ಬೆಳಿಗ್ಗೆ ವಾಟ್ಸಾಪ್ಪಿನಲ್ಲಿ ಸ್ನೇಹಿತರ ಸಂದೇಶಗಳನ್ನು ಓದುತ್ತಿದ್ದಾಗ ಅತ್ಯುತ್ತಮ ಕಲೆಗಾರ ಮತ್ತು ಕ್ರಿಯಾತ್ಮಕ ಗುಣವುಳ್ಳ ಗೆಳೆಯ ಅಶೋಕ್ ವಿಶ್ವ ತೆಂಗಿನ ದಿನದ ಶುಭಾಶಯಗಳು ಎಂದು ಕಳುಹಿಸಿದಾಗ, ತಕ್ಷಣವೇ, ಅರೇ ಹೀಗೂ ಉಂಟೇ? ಎಂದು ಪ್ರತ್ಯುತ್ತರ ನೀಡಿ ಅದರ ಕುರಿತಂತೆ ಹೆಚ್ಚಿನ ವಿವರಗಳನ್ನು ಗೂಗಲ್ ಮಾಡಿ ನೋಡಿದಾಗ ತಿಳಿದು ಬಂದ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪ್ರತೀ ವರ್ಷದ ಸೆಪ್ಟೆಂಬರ್ 2ನೇ ದಿನವನ್ನು ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಸುಮಾರು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಜಕಾರ್ತಾದಲ್ಲಿದಲ್ಲಿ ಮುಖ್ಯ… Read More ವಿಶ್ವ ತೆಂಗಿನ ದಿನ

ಓಣಂ ‌

ದೇವರ ಸ್ವಂತ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ರಾಜ್ಯದಲ್ಲಿ, ಹಿಂದೂ ಕ್ರೈಸ್ತ ಮುಸಲ್ಮಾನ ಎಂಬ ಬೇಧ ಭಾವವಿಲ್ಲದೇ ಕೋಮು ಸೌಹಾರ್ಧತೆಯಿಂದ ಮತ್ತು ಭಾವೈಕ್ಯತೆಯಿಂದ ಸಡಗರ ಸಂಭ್ರಮದಿಂದ ಆಚರಿಸಲ್ಪಡುವ ಓಣಂ ಹಬ್ಬದ ವೈಶಿಷ್ಟ್ಯಗಳು ಇದೋ ನಿಮಗಾಗಿ… Read More ಓಣಂ ‌

ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬೆಂಗಳೂರಿನ ಕಲ್ಯಾಣ್ ನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್ನಿಂದ ಆಗಸ್ಟ್ 21 ರಂದು ಮಾಜಿ ಕಿರುತೆರೆ ನಟಿ ಅನಿಕಾ ಡಿ ಮತ್ತು ಅವರ ಇಬ್ಬರು ಸಹಚರರಾದ ಎಂ ಅನೂಪ್ ಮತ್ತು ಆರ್ ರವೀಂದ್ರನ್ ಅವರನ್ನು ಬಂಧಿಸಿ ಅವರಿಂದ 145 ಎಂಡಿಎಂಎ ಮಾತ್ರೆಗಳು ಮತ್ತು 2.2 ಲಕ್ಷ ರೂ.ಗಳ ಹಣವನ್ನು ವಶಪಡಿಸಿಕೊಂಡಿದ್ದಲ್ಲದೇ ಅವರ ಮಾಹಿತಿಯ ಮೇಲೆ ಇತರೇ ಹಲವಾರು ಕಡೆ ಧಾಳಿ ನಡೆಸಿ. 96 ಎಂಡಿಎಂಎ ಮತ್ತು 180 ಎಲ್ಎಸ್ಡಿ ಬ್ಲಾಟ್ಗಳನ್ನು ಮುಟ್ಟುಗೋಲು… Read More ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?

ಭಯಂಕರ ಭಸ್ಮಾಸುರರು

ನಮ್ಮ ಪುರಾಣದಲ್ಲಿ ಪರಶಿವನ ಕುರಿತಂತೆ ಘನ ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡು ತಾನು ಯಾರ ತಲೆಯ ಮೇಲೆ ಕೈ ಇಡುತ್ತೇನೆಯೋ ಅವರು ಸುಟ್ಟು ಭಸ್ಮವಾಗುವಂತಹ ವರವನ್ನು ಪಡೆದು. ಆ ವರವನ್ನು ಪರಶಿವನ ಮೇಲೆಯೇ ಪರೀಕ್ಷಿಸಲು ಮುಂದಾದಾಗ ಮಹಾವಿಷ್ಣು ಮಾರು ರೂಪದಲ್ಲಿ ಹೆಣ್ಣಿನ ವೇಶದಲ್ಲಿ ಬಂದು ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಂಡು ಸುಟ್ಟು ಹೋಗುವ ಭಸ್ಮಾಸುರನ ಕಥೆಯನ್ನು ಕೇಳಿಯೇ ಇರುತ್ತೇವೆ. ಈ ಕಲಿಯುಗದಲ್ಲಿಯೂ ಅಂತಹದ್ದೇ ಭಸ್ಮಾಸುರನ ಪರಿಸ್ಥಿತಿ ದೂರದ ಸ್ವೀಡನ್ ದೇಶದ್ದಾಗಿದೆ. ಜಗತ್ತಿಗೆ ತಾನು… Read More ಭಯಂಕರ ಭಸ್ಮಾಸುರರು

ವಾಡಪ್ಪಿ

ಬಯಲುಸೀಮೆಯ ಜನ ಥಟ್ ಅಂತಾ ಅಲ್ಲಿ ಹಿಟ್ಟನ್ನು ಬಳಸಿಕೊಂಡು, ಸಾಂಪ್ರದಾಯಕವಾಗಿ ವಾಡಪ್ಪಿ ಎಂಬ ಖಾದ್ಯವನ್ನುವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 2-3 ಜನರಿಗೆ ಸಾಕಾಗುವಷ್ಟು ವಾಡಪ್ಪಿಯನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು ಅಕ್ಕಿ ಹಿಟ್ಟು – 1 ಬಟ್ಟಲು ಸಣ್ಣಗೆ ಹೆಚ್ಚಿದ – ಈರುಳ್ಳಿ 1 ಸಣ್ಣಗೆ ಹೆಚ್ಚಿದ – ಹಸೀ ಮೆಣಸಿನಕಾಯಿ 2-3 ಸಣ್ಣಗೆ ಹೆಚ್ಚಿದ – ಕರಿಬೇವಿನ ಸೊಪ್ಪು 2 ಎಸಳು ಸಣ್ಣಗೆ ತುರಿದ – ಶುಂಠಿ 1/2 ಚಮಚ ಬಿಳಿ… Read More ವಾಡಪ್ಪಿ

ಹರಳೋ ಮರಳೋ?

ಅರೇ ಇದೇನಿದೂ ಅರವತ್ತಕ್ಕೆ ಅರಳೋ ಮರಳೋ ಎನ್ನುವುದನ್ನು ಕೇಳೀದ್ದೇವೆ. ಆದನ್ನು ತಪ್ಪಾಗಿ ಹರಳೋ ಮರಳೋ ಎನ್ನುವ ಶೀರ್ಷಿಕೆ ಕೊಟ್ಟಿದ್ದೀನಿ ಅಂತ ಯೋಚನೆ ಮಾಡ್ತಾ ಇದ್ದೀರಾ? ನಾನು ಆ ರೀತಿಯ ಶೀರ್ಷಿಕೆ ಕೊಡಲು ಇರುವ ಕಾರಣ ಏನು ಅಂತ ತಿಳಿದ್ರೇ, ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಿ. ಕಳೆದ ಎರಡು ಮೂರು ದಿನಗಳಿಂದ ವಾಟ್ಸಾಪ್ ವಿವಿದ ಗುಂಪಪುಗಳಲ್ಲಿ ಗಾಜಿನ ಸೋಡಾ ಬಾಟಲಿನಿಂದ ಪಚ್ಚೆ ಹರಳನ್ನು ಮಾಡುವ ವಿಡೀಯೋ ಹರಿದಾಡುತ್ತಿದೆ. ಯಾವುದೋ ಹಸಿರು ಬಣ್ಣದ ಬಾಟಲ್ಲನ್ನು ಸುತ್ತಿಗೆಯಿಂದ ಹೊಡೆದು, ಒಡೆದು ಅದರ ತಳ… Read More ಹರಳೋ ಮರಳೋ?