ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ

ಇಟಲಿಯ ಟಸ್ಕನಿ ಪ್ರದೇಶದ ಒಂದು ನಗರವಾದ ಪಿಸಾ ಇಂದು ಜಗತ್ಪ್ರಸಿದ್ದವಾಗಿದೆ. ಆ ನಗರ ಹಾಗೆ ಪ್ರಸಿದ್ಧವಾಗಲು ಅಲ್ಲಿರುವ ಓರೆಯಾಗಿರುವ ಗೋಪುರವೊಂದು ಕಾರಣವಾಗಿದ್ದು ಅದು ಪ್ರಪಂಚದ ಏಳು ಅದ್ಭುತಗಳಲ್ಲಿ  ಒಂದಾಗಿದೆ.  ಆಗಸ್ಟ್‌ 9, 1173 ರಲ್ಲಿ ಆ ಪ್ರದೇಶದಲ್ಲಿ  ಎತ್ತರವಾದ ಒಂದು ಗೋಪುರವನ್ನು ನಿರ್ಮಿಸಿ  ಅದರ ಮೇಲೊಂದು ದೊಡ್ಡ ಘಂಟೆಯನ್ನು ಇಡಬೇಕೆಂದು ನಿರ್ಧರಿಸಲಾಗಿತ್ತು. ಅದರೆ 1778ರಲ್ಲಿ ಮೂರು ಅಂತಸ್ತಿನ ಕೆಲಸ ಮುಗಿಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಈ ಕಟ್ಟಡ ಒಂದು ಕಡೆಗೆ ಸ್ವಲ್ಪ ವಾಲಿದ್ದನ್ನು ಕಂಡ ಅಲ್ಲಿನ ಜನ ಈ ಕಟ್ಟಡ… Read More ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ

ಕೌದಿ (ದಟ್ಟ)

ನಮ್ಮ ಸುತ್ತಮುತ್ತಲಿನ ಸರ್ವೇಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಹೇಗೆ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಕೌದಿಯೇ ಸಾಕ್ಷಿ. ಈ ಕೌದಿ ಅಥವಾ ದಟ್ಟ ಎಂದರೆ ಏನು? ಅದು ಯಾರ ಬದುಕಿನಲ್ಲಿ ಹೇಗೆ? ಯಾವ ರೀತಿಯ ಬದಲಾವಣೇಯನ್ನು ತಂದಿತು ಎನ್ನುವ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಕೌದಿ (ದಟ್ಟ)

ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಪ್ರಜೆ ಮತ್ತು ಪಕ್ಷಗಳಿಂದ ತಾವು ಎನ್ನುವುದನ್ನು ಮರೆತು ತಮ್ಮಿಂದಲೇ ಪಕ್ಷ ಮತ್ತು ಪ್ರಜೆ ಎಂದು ಭಾವಿಸುವವರು ಖಂಡಿತವಾಗಿಯೂ ನಂಬಿಕೆಗೆ ಅರ್ಹರಲ್ಲ. ವ್ಯಕ್ತಿ ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲಾ. ಹಾಗಾಗಿ ಅಧಿಕಾರದಲ್ಲಿ ಕಡೆಯವರೆಗೂ ಇದ್ದು ಎಲ್ಲಾ ರೀತಿಯ ಅಧಿಕಾರವನ್ನೂ ಸವಿದು ನಂತರ ಮತ್ತೆ ಅಧಿಕಾರಕ್ಕೆ ಆರು ಕೊಟ್ಟರೆ ಅತ್ತೇ ಕಡೇ, ಮೂರು ಕೊಟ್ಟರೆ ಸೊಸೇ ಕಡೇ ಎಂಡು ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರಿಗಳನ್ನು ನಿಸ್ಸಂಕೋಚವಾಗಿ ಸೋಲಿಸುವ ಮೂಲಕ ಅವರ ತಪ್ಪನ್ನು ಅವರಿಗೆ ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಿಲ್ಲರ ಮೇಲೆಯೇ ಇದೆ ಅಲ್ವೇ?… Read More ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಭಾರತೀಯ ವಿಜ್ಞಾನ ಸಂಸ್ಥೆ (IISc.)

ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc.)ಯನ್ನು ದೇಶದ ಖ್ಯಾತ ಕೈಗಾರಿಗೋದ್ಯಮಿಗಳಾದ ಜೆಮ್ ಷಡ್ ಜೀ ಟಾಟಾರವರು ಆರಂಭಿಸಲು ಸ್ವಾಮಿ ವಿವೇಕಾನಂದರು ಹೇಗೆ ಕಾರಣರಾದರು? ಮತ್ತು ಇಂತಹ ಮಹಾನ್ ಸಂಸ್ಥೆಗೆ ನಮ್ಮ ಮೈಸೂರು ಸಂಸ್ಥಾನದ ಕೊಡುಗೆಗಳೇನು? IISc. ಬೆಳೆದು ಬಂದ ಹಾದಿಯ ಕುರಿತಾದ ಅದ್ಭುತವಾದ ಮಾಹಿತಿಗಳು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಭಾರತೀಯ ವಿಜ್ಞಾನ ಸಂಸ್ಥೆ (IISc.)

ನೂಲಿನಂತೆ ಸೀರೆ ತಾಯಿಯಂತೆ ಮಗಳು

ತಾಯಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿ, ಮಗಳು ಇಂಗ್ಲೇಂಡಿನ ಪ್ರಧಾನ ಮಂತ್ರಿಯ ಪತ್ನಿಯಾಗಿ ಇಂಗ್ಲೇಂಡಿನ ದೇಶದ ಪ್ರಥಮ ಮಹಿಳೆ. ಅವರಿಬ್ಬರು ಅಷ್ಟು ದೊಡ್ಡ ಗಣ್ಯ ಮಹಿಳೆಯರಾಗಿದ್ದರೂ ಮೊನ್ನೆ ರಾಷ್ಟ್ರಪತಿಗಳ ಭವನದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅನನ್ಯ, ಅದ್ಭುತ ಮತ್ತು ಅನುಕರಣಿಯ. ಅಮ್ಮಾ ಮಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನೂಲಿನಂತೆ ಸೀರೆ ತಾಯಿಯಂತೆ ಮಗಳು

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು

ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

ಕಳೆದ ಡಿಸೆಂಬರ್ ನಲ್ಲಿ ಮನ್ ಮೂಲ್ ಕಾರ್ಯಕ್ರಮಕ್ಕಾಗಿ ಮಂಡ್ಯಾಕ್ಕೆ ಆಗಮಿಸಿದ್ದ ದೇಶದ ಗೃಹಮಂತ್ರಿಗಳಾದ ಅಮಿತ್ ಶಾ, 1970ರಲ್ಲಿ ಕೇರಳ ಮೂಲದ ವರ್ಗೀಸ್_ಕುರಿಯನ್ ಗುಜರಾತಿನಲ್ಲಿ ಯಾವುದೇ ಜಾತಿ ಮತ ಪಂಥಗಳ ಯಾವದೇ ರಾಗ ದ್ವೇಷವಿರದೇ ಅಮೂಲ್ ಎಂಬ ಸಹಕಾರಿ ಸಂಘದ ಮೂಲಕ ಗುಜರಾತ್ ನಲ್ಲಿ ಕಳೆದ ಐದು ದಶಕಗಳಿಂದಲೂ ಈ ದೇಶದಲ್ಲಿ ಕ್ಷೀತ್ರಕ್ರಾಂತಿಯನ್ನುಂಟು ಮಾಡಿದ್ದನ್ನು ಹೊಗಳುತ್ತಾ, ಅದೇ ರೀತಿ ದೇಶದಲ್ಲಿ ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ KMF ನಂದಿನಿ ಎರಡೂ ಸಹಾ ಪರಸ್ಪರ ಸಹಯೋಗದೊಂದಿಗೆ ಹೋದಲ್ಲಿ ಈ ದೇಶದಲ್ಲಿ… Read More ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

ಗುಡ್ ಫ್ರೈಡೆ

ದೇವನೊಬ್ಬ ನಾಮ ಹಲವು ಎನ್ನುವಂತೆ, ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಮಹತ್ವಗಳು ಮತ್ತು ಕಾರಣಗಳು ಒಂದೇ ಆದರೂ ಅದರ ಆಚರಣೆಗಳು ಮಾತ್ರಾ ವಿಭಿನ್ನ. ಬಗೆ ಬಗೆಯಾದರೂ ದೇಹದ ಬಣ್ಣ ಎಲ್ಲರ ನಗೆಯೂ ಒಂದೇ ಅಣ್ಣ ಎನ್ನುವಂತೆ ನಾವೆಲ್ಲರೂ ನಗು ನಗುತ ಭಾವೈಕತ್ಯೆಯಿಂದ ಬಾಳಬೇಕು. ಬದುಕು ಜೀವನೋತ್ಸಾಹದ ಹೂರಣವಾಗಬೇಕೇ ಹೊರತು ನಿರಾಶೆಯ ಕಾರ್ಮೋಡವಾಗಬಾರದು ಅಲ್ವೇ?… Read More ಗುಡ್ ಫ್ರೈಡೆ

ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ