ಹಿಂದೂಸೇವಾ ಪ್ರತಿಷ್ಠಾನದ ಅಜಿತ್ ಕುಮಾರ್

ಸಂಘ ಎಂದರೆ ಕೇವಲ ಒಂದು ಘಂಟೆಯ ಶಾಖೆಯನ್ನು ನಡೆಸುವುದಷ್ಟೇ ಅಲ್ಲ. ಸಂಘ ಪರಿವಾರದ ಅಡಿಯಲ್ಲಿ ಹಿಂದೂಸೇವಾ ಪ್ರತಿಷ್ಠಾನ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ಆರಂಭಿಸಿ, ಅದರ ಮೂಲಕ ನೂರಾರು ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾವಿರಾರು ಸೇವಾವೃತ್ತಿಗಳ ಮೂಲಕ, ಲಕ್ಷಾಂತರ ಜನರಿಗೆ ತಲುಪುವಂತಹ ಸಮಾಜ ಸೇವೆಯನ್ನು ಮಾಡಲು ಪ್ರೇರೇಪಿಸಿದಂತಹ ಶ್ರೀ ಅಜಿತ್ ಕುಮಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ದೂರದರ್ಶಿತ್ವದ ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಹಿಂದೂಸೇವಾ ಪ್ರತಿಷ್ಠಾನದ ಅಜಿತ್ ಕುಮಾರ್

ರಾಮ ಭಕ್ತ ಶ್ರೀ ಪಾಚಾಸಾಬ್

ಇತ್ತೀಚಿನ ದಿನಗಳಲ್ಲಿ ಪ್ರತೀ ದಿನವೂ ಯಾವುದೇ ನ್ಯೂಸ್ ಛಾನೆಲ್ಲುಗಳನ್ನು ನೋಡಿದರೂ, ಇಲ್ಲವೇ ವೃತ್ತಪತ್ರಿಕೆಯ ಮುಖಪುಟದಲ್ಲೇ ಕಣ್ಣಿಗೆ ಕಾಣುವುದೇ ದೇಶದಲ್ಲಿ ಒಂದಲ್ಲಾ ಒಂದು ಕಡೆ ನಡೆದಿರಬಹುದಾದ ಕೋಮು ಸಂಘರ್ಷ. ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಧಾಳಿ. ರಸ್ತೆಯಲ್ಲೇ ಮುಸಲ್ಮಾನರಿಂದ ನಮಾಜ್, ಹಿಂದೂ ಯುವತಿಯನ್ನು ಪ್ರೀತಿಸಿದಂತೆ ನಾಟಕವಾಡಿ ಮೋಸ ಮಾಡಿದ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಬರ್ಬರವಾಗಿ ಕೊಂದು ೩೨ ತುಂಡುಗಳನ್ನಾಗಿಸಿದ ಮುಸ್ಲಿಂ ಯುವಕ, ಮಂಗಳೂರಿನಲ್ಲಿ ಕುಕ್ಕರ್ ಬಾಂಪ್ ಸ್ಪೋಟ, ಸ್ವಾತ್ರಂತ್ರ ದಿನಾಚರಣೆ, ಮತ್ತು ಗಣರಾಜ್ಯೋತ್ಸವದಂದು ದೇಶಾದ್ಯಂತ ಕೋವು… Read More ರಾಮ ಭಕ್ತ ಶ್ರೀ ಪಾಚಾಸಾಬ್

ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿ ಮತ್ತು ವಿವಿಧ ಪೋಷಕ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ್ದ ಪಂಡರಾಪುರದ ಪಾಂಡುರಂಗನ ಪರಮಭಕ್ತೆ, ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ

ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ತಮ್ಮ ಜೀವನದಲ್ಲಿ ಆದ ಒಂದು ಕಹಿ ಘಟನೆಯಿಂದ ಅರಿತು, ಒಬ್ಬ ಉತ್ತಮ ಶಿಕ್ಷಕ ತನ್ನ ಧನಾತ್ಮಕ ಚಿಂತನೆಗಳ ಪಾಠ ಪ್ರವಚನಗಳಿಂದ ಸಾವಿರಾರು ಉತ್ತಮ ಪ್ರಜೆಗಳನ್ನು ರೂಪಿಸಬಲ್ಲ ಎಂದು ಬಯಸೀ ಬಯಸೀ ಶಿಕ್ಷಕ ವೃತ್ತಿಯನ್ನೇ ಆಯ್ದುಕೊಂಡು, ಈಗ ದೇಶವೇ ಹೆಮ್ಮೆ ಪಡುವಂತಹ ಶಿಕ್ಷಣ ತಜ್ಞರಾಗಿರುವ ಡಾ. ಗುರುರಾಜ ಕರ್ಜಗಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ

ಜಾಕ್ ಅನಿಲ್

ಮೂಲತಃ ಕೇರಳಿಗರಾದರೂ, ಕಳೆದ 20-30 ವರ್ಷಗಳಿಂದ ಕರ್ನಾಟಕವನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಅಪ್ಪಟ ಕನ್ನಡಿಗರಾಗಿ ಕೇವಲ 10-12 ಎತ್ತರದ ವರ್ಷವಿಡೀ ಫಲ ಕೊಡುವಂತಹ ನಿನ್ನಿಥಾಯ್ ಎಂಬ ಹಲಸಿನ ಗಿಡವನ್ನು ಆವಿಷ್ಕರಿಸಿ, ಕೋಟಿ ಕೋಟಿ ಸಂಪಾದನೆ ಮಾಡುತ್ತಾ. ಹಲಸಿನ ಕೃಷಿಯಲ್ಲಿ ಅಪಾರವಾದ ಸಾಧನೆಗೈದು ಹಲಸಿನ ಹಣ್ಣಿನ ರಾಯಭಾರಿ ಎಂದೇ ಪ್ರಖ್ಯಾತವಾಗಿರುವ ಜಾಕ್ ಅನಿಲ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಜಾಕ್ ಅನಿಲ್

ಕೆಚ್ಚೆದೆಯ ಕನ್ನಡತಿ ಅಕ್ಕ ಅನು

ಹೆಣ್ಣು ಮಕ್ಕಳೆಂದರೆ ತಲೆ ತಗ್ಗಿಸಿಕೊಂಡು ಹೇಳಿದ ಕೆಲಸ ಮಾಡಿಕೊಂಡು ಹೋಗಬೇಕು ಎನ್ನುವ ಈ ಪುರುಷ ಪ್ರಧಾನದ ಸಮಾಜದಲ್ಲಿ. ಮದುವೆ ಆಗುವ ವಯಸ್ಸಿನ ಹುಡುಗಿ ಪ್ಯಾಂಟ್ ಶರ್ಟ್ ಹಾಕಿಕೊಂಡು ಬೈಕ್ ಓಡಿಸ್ಕೊಂಡು ಹುಡುಗರ ತಂಡವನ್ನು ಕಟ್ಟಿಕೊಂಡದ್ದನ್ನು ಕಂಡು, ಅರೇ ಇದೇನು, ಗಂಡುಬೀರಿಯಂತೆ ಊರೂರು ಅಲೀತಾಳೆ ಎಂಬ ಅವಮಾನವನ್ನೂ ಮೆಟ್ಟಿ ನಿಂತು, ಯಾವುದೇ ಸಿದ್ಧಾಂತಗಳಿಗೆ, ರಾಜಕೀಯ ಪಕ್ಷಗಳಿಗೆ ಕಟ್ಟು ಬೀಳದೇ, ನಿಸ್ವಾರ್ಥವಾಗಿ ಸಮಾಜ ಸೇವೆ ಮತ್ತು ಕನ್ನಡದ ಸೇವೆ ಮಾಡುತ್ತಿರುವ ಕೆಚ್ಚೆದೆಯ ಕನ್ನಡತಿ ಅಕ್ಕ ಅನು, ನಮ್ಮ ಇಂದಿನ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕಿ… Read More ಕೆಚ್ಚೆದೆಯ ಕನ್ನಡತಿ ಅಕ್ಕ ಅನು

ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಪ್ರಾಧ್ಯಪಕರಾಗಿದ್ದೂ, ಕಲೆ, ಶಿಕ್ಷಣ, ಸಾಹಿತ್ಯ, ಭಾಷೆ, ಕ್ರೀಡೆ, ಇತಿಹಾಸ, ಹಬ್ಬಗಳು, ಜನಪದ, ನೀತಿ ಕಥೆಗಳು, ಜನಪದ, ಸುಭಾಷಿತಗಳು, ಗಾದೆಗಳು, ಆರೋಗ್ಯ, ವ್ಯಕ್ತಿ ವಿಕಸನ, ಜೀವನದಲ್ಲಿನ ಸಫಲತೆ, ಪ್ರವಾಸ, ಹೀಗೆ ನೂರಾರು ವಿಷಯಗಳ ಕುರಿತಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರತಿದಿನವೂ ನಾಡಿನ ಒಂದಲ್ಲಾ ಒಂದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಲೇ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೆಲುಕು, ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಪತ್ರಿಕೆಗೂ ಸೈ, ಕೃಷಿಗೂ ಜೈ, ಶ್ರೀ ವೆಂಕಟೇಶ್ ಸಂಪ

ವಿಶ್ವವಿಖ್ಯಾತ ಜೋಗದ ಬಳಿಯ ಸಂಪ ಎಂಬ ಪುಟ್ಟ ಗ್ರಾಮದ ಕೃಷಿಕ ಹಿನ್ನಲೆಯ ಬಡತನದ ಹುಡುಗ ಹಸಿವು ಮತ್ತು ಬಡತನದಿಂದ, ಅನುಮಾನ ಮತ್ತು ಅವಮಾನಗಳನ್ನೆಲ್ಲಾ ಮಟ್ಟಿನಿಂತು ಇಂದು ಸನ್ಮಾನ ಪಡೆಯುವ ರೀತಿಯಲ್ಲಿ ಪತ್ರಿಕೆಗೂ ಸೈ, ಕೃಷಿಗೂ ಜೈ ಎಂದು ಎರಡರಲ್ಲೂ ವಿಶಿಷ್ಟವಾದ ಸಾಧನೆಗಳನ್ನು ಮಾಡಿರುವ ಎಂ.ಬಿ.ಎ ಪದವೀಧರ ಕೃಷಿಕ ಮತ್ತು ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ಶ್ರೀ ವೆಂಕಟೇಶ ಸಂಪ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪತ್ರಿಕೆಗೂ ಸೈ, ಕೃಷಿಗೂ ಜೈ, ಶ್ರೀ ವೆಂಕಟೇಶ್ ಸಂಪ

ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ

https://enantheeri.com/2022/11/16/vidyananda_shenoy/

ದೇಶದ ಇತಿಹಾಸದ ಅರಿವಿಲ್ಲದವರು, ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಕಾರಣದಿಂದ ದೇಶದ ಯುವಜನತೆಗೆ ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯವಲ್ಲದೇ, ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು, ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆಯ ಜೊತೆಗೆ ಬ್ರಿಟೀಷರು ಹೇಗೆ ರಾಜ್ಯಗಳನ್ನು ಮೋಸದಿಂದ ತಮ್ಮ ಕೈವಶಕ್ಕೆ ತೆಗೆದುಕೊಂಡರು ಎಂಬುದನ್ನು ತಮ್ಮ ಭಾರತ ದರ್ಶನ ಕಾರ್ಯಕ್ರಮದಲ್ಲಿ ರೋಚಕವಾಗಿ ವಿವರಿಸುತ್ತಾ, ವರನಟ ರಾಜಕುಮಾರ್, ವಿಷ್ಣುವರ್ಧನ್, ಭದ್ರಗಿರಿ ಅಚ್ಯುತದಾಸ ಅದಿಯಾಗಿ ಲಕ್ಷಾಂತರ ಯುವಕರನ್ನು ಜಾಗೃತಗೊಳಿಸಿದ ಧೀಮಂತ ವ್ಯಕ್ತಿ ಶ್ರೀ ವಿದ್ಯಾನಂದ ಶಣೈ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಯಶೋಗಾಥೆ ಇದೋ ನಿಮಗಾಗಿ… Read More ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ