ಯೋಗಾಚಾರ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್

ಅತ್ಯಂತ ಕಡು ಬಡತನದ ಅನಾರೋಗ್ಯ ಪೀಡಿತ ಹುಡುಗನಾಗಿ ಹುಟ್ಟಿ ಧೃಢಮನಸ್ಸಿನಿಂದ ಯೋಗಾಭ್ಯಾಸವನ್ನು ಕಲಿತು ಸಾಧನೆ ಗೈದು ಅದೇ ಪತಂಜಲಿ ಯೋಗವನ್ನು ಮತ್ತಷ್ಟು ಸರಳೀಕರಿಸಿ, ಅಯ್ಯಂಗಾರ್ ಯೋಗ ಪದ್ದತಿ ಹೆಸರಿನಲ್ಲಿ ಇಡೀ ವಿಶ್ವಾದ್ಯಂತ ಯೋಗವನ್ನು ಪಸರಿಸಿದ ನಮ್ಮ ಹೆಮ್ಮೆಯ ಬಿ.ಕೆ.ಎಸ್ ಅಯ್ಯಂಗಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಯೋಗಾಚಾರ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್

ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಕನ್ನಡ ಚಿತ್ರರಂಗ ಎಲ್ಲಾ ಪ್ರಾಕಾರಗಳಲ್ಲಿಯೂ ತಮ್ಮದೇ ಆದ ವಿಶಿಷ್ಟವಾದ ಮತ್ತು ಅಷ್ಟೇ ವಿಭಿನ್ನವಾದ ಛಾಪನ್ನು ಮೂಡಿಸಿರುವ ಕನ್ನಡ ಚಿತ್ರರಂಗಕ್ಲೆ ಒಬ್ಭನೇ ವಿ. ರವಿಚಂದ್ರನ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆ ಕುತೂಹಲಕಾರಿಯಾದ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು‌ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಅನಂತನಾಗ್

ಕೇವಲ ಕನ್ನಡ ಚಿತ್ರವಲ್ಲದೇ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಪ್ತ ಭಾಷಾ ನಟರಾಗಿರುವ, ಈ ನಾಡಿನ ಅತ್ಯಂತ ಸುರದ್ರೂಪಿ, ಪ್ರತಿಭಾನ್ವಿತ ಮತ್ತು ಪ್ರಬುದ್ಧ ನಟನಾಗಿರುವ ಅನಂತ್ ನಾಗ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಅಪರೂಪದ ಸಾಧನೆಗಳನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಅನಂತನಾಗ್

ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಪ್ರಪಂಚದಾದ್ಯಂತ ಇರುವ 196 ದೇಶಗಳಲ್ಲಿ ಸುಮಾರು 7,117 ಭಾಷೆಗಳಲ್ಲಿ ಮಾತನಾಡುತ್ತಾರೆ. ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾಷೆಗಳಿದ್ದು 22 ಅಧಿಕೃತ ಭಾಷೆಗಳಿದ್ದು, 2000ಕ್ಕೂ ಹೆಚ್ಚಿನ ಉಪಭಾಷೆಗಳಿದ್ದು, ವಿಶಾಲವಾದ ಭಾಷಾ ಸಂಪತ್ತನ್ನು ಹೊಂದಿದ್ದರೂ, ಬ್ರಿಟೀಷರ ದಾಸ್ಯದ ಸಂಕೇತವಾಗಿರುವ ಇಂಗ್ಲೀಷ್ ಭಾಷೆಯನ್ನೇ ಇಂದಿಗೂ ಭಾರತೀಯರು ಒಪ್ಪಿಕೊಂಡು ಅಪ್ಪಿಕೊಂಡಿರುವುದು ನಿಜಕ್ಕೂ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕಾರಕ್ಕೆ ಮಾಡುವ ಅಪಮಾನವೇ ಸರಿ.… Read More ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ನಾಟಕ ರತ್ನ ಗುಬ್ಬಿ ವೀರಣ್ಣ

ಕನ್ನಡ ರಂಗಭೂಮಿ ಮತ್ತು ಕನ್ನಡದ ಚಲನಚಿತ್ರಗಳಿಗೆ ಕಾಯಕಲ್ಪ ನೀಡಿ ಅವುಗಳಿಗೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟ, ಕನ್ನಡ ನಾಡು ಕಂಡ ಅತಿ ಶ್ರೇಷ್ಠ ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ಮಾಲಿಕ ಒಟ್ಟಿನಲ್ಲಿ ಬಹುಮುಖ ಪ್ರತಿಭೆಯ ರಂಗಕರ್ಮಿಯಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮಾಲಿಕರಾದ ಶ್ರೀ ಗುಬ್ಬಿ ವೀರಣ್ಣನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನಾಟಕ ರತ್ನ ಗುಬ್ಬಿ ವೀರಣ್ಣ

ಬಿಗ್ ಬಾಸ್ ಮತ್ತು ಹೋರಾಟಗಾರರು

ತಮ್ಮ ಛಾನೆಲ್ಲಿನ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಪರಸ್ಪರ ವಿರೋಧಾಭಾಸವಿರುವ ಮತ್ತು ಈ ಮೊದಲೇ ವಯಕ್ತಿಕವಾಗಿ ಶೀತಲ ಸಮರ ಹೊಂದಿರುವ ವ್ಯಕ್ತಿಗಳನ್ನು ಬಿಗ್ ಬಾಸ್ ನ ಒಂದೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ, ಅವರಿಬ್ಬರ ಜಗಳವನ್ನು ಮನೋರಂಜನೆ ಎಂದು ತೋರಿಸುವುದು ನಂತರ ಕ್ಷಮೆ ಕೇಳಿಸುವುದು ಒಂದು ರೀತಿಯಾಗಿ ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವಂತಿದೆ ಎಂದರೂ ತಪ್ಪಾಗದು ಅಲ್ವೇ?… Read More ಬಿಗ್ ಬಾಸ್ ಮತ್ತು ಹೋರಾಟಗಾರರು

ರಾವ್‌ ಬಹಾದ್ದೂರ್‌ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ

ಕಾಸಿದ್ದರೆ ಕೈಲಾಸ, ದುಡ್ಡೇ ದೊಡ್ಡಪ್ಪ ಎನ್ನುವ ಇಂತಹ ಕಾಲದಲ್ಲೂ ಬಡ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗದಿರಲಿಂದು ದೂರದೃಷ್ಟಿಯಿಂದ ಸುಮಾರು 120 ವರ್ಷಗಳ ಹಿಂದೆಯೇ ಸಮಾಜಕ್ಕಾಗಿ ತಮ್ಮ ಇಡೀ ಸಂಪತ್ತನ್ನು ಧಾರೆ ಎರೆದಿದ್ದಂತಹ ರಾವ್‌ ಬಹಾದ್ದೂರ್‌ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಮಾಜ ಸೇವೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ… Read More ರಾವ್‌ ಬಹಾದ್ದೂರ್‌ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ

ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡ ಚಲನಚಿತ್ರಗಳ ಅರ್ಥವೇ ಇಲ್ಲದ ಅಸಂಬದ್ಧ ಹಾಡುಗಳಿಗೆ ಅಷ್ಟೇ ಅಸಹ್ಯಕರವಾಗಿ ಮೈ ಕೈ ಕುಲುಕಿಸುತ್ತಾ ನರ್ತಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಭಾವಿಸಿರುವವರಿಗೆ ಬೆಂಗಳೂರಿನ ಥಣಿಸಂದ್ರ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ಎಂಬ ವಿಷಯಾಧಾರಿತವಾದ ಅದ್ಭುತ ಕಾರ್ಯಕ್ರಮದ ಮೂಲಕ 67ನೇ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಡಗರ ಸಂಭ್ರಮ ಇದೋ ನಿಮಗಾಗಿ… Read More ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್

ಸ್ಥಿತಿವಂತರು ಬಡವರಿಗೆ ಹಣವನ್ನು ಹಂಚುವ ಮೂಲಕ ಸಮಾಜ ಸೇವಕರಾಗುವುದಿಲ್ಲ. ತಾವು ಕೊಡುವ ಹಣ ಸತ್ಪಾತ್ರರಿಗೆ ಸೇರುತ್ತಿದೆಯೇ ಎಬುದರ ಅರಿವಿರಬೇಕು. ಕೇರಳ ಮತ್ತು ಕರ್ನಾಟಕದ ಕರಾವಳಿಯ ಭಾಗದಲ್ಲಿ ೩೦೦ಕ್ಕೂ ಹೆಚ್ಚಿನ ಮನೆಗಳ ನಿರ್ಮಾಣ, ೯೫೦ಕ್ಕೂ ಹೆಚ್ಚಿನ ಆರೋಗ್ಯ ಶಿಬಿರಗಳ ಹೊತೆಗೆ ಲೆಕ್ಕವಿಲ್ಲದಷ್ಟು ಜನರಿಗೆ ಆರ್ಥಿಕ ನೆರವನ್ನು ನೀಡಿ ಎಲ್ಲರಿಗೂ ಹತ್ತಿರವಾಗಿದ್ದ ಕಾಸರಗೋಡು ಮೂಲದ ಮಾನವೀಯ ಹೋರಾಟಗಾರ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಸುವ ಸಣ್ಣ ಪ್ರಯತ್ನ. … Read More ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್