ಕೊಳ್ಳುಬಾಕ ಸಂಸ್ಕೃತಿ

ದಸರಾ, ದೀಪಾವಳಿ, ಕ್ರಿಸ್ಮಸ್, ಹೊಸವರ್ಷ, ಸಂಕ್ರಂತಿ, ಪ್ರೇಮಿಗಳ ದಿನಾಚರಣೆಗಳಂದು, ವಿವಿಧ mall ಮತ್ತು Online shopping Site ಗಳಲ್ಲಿ ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳ ಭಾರೀ ರಿಯಾಯಿತಿ ಮಾರಾಟ ಎಂಬ ಜಾಹೀರಾತುಗಳ ಆಮಿಷಗಳಿಗೆ ಮಾರು ಹೋಗಿ ಜನಮರುಳೋ ಜಾತ್ರೆ ಮರುಳೋ ಎನ್ನುವ ಕುರಿ ಮಂದೆಗಳಂತೆ ಭಾರತೀಯರು ಕೊಳ್ಳುಬಾಕರಾಗುತ್ತಿರುವ ಕಳವಳಕಾರಿಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕೊಳ್ಳುಬಾಕ ಸಂಸ್ಕೃತಿ

ಕಾಕತಾಳೀಯ

ಪುನೀತ್​ ರಾಜ್​ಕುಮಾರ್ ಅವರೊಂದಿಗೆ ಒಂದಾದರೂ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನು ಹೊಂದಿದ್ದ. ಕನ್ನಡದ ಕಿರುತೆರೆಯ ಪ್ರತಿಭಾವಂತ ನಟ ಮಂಡ್ಯಾ ರವಿ, ಪುನೀತ್ ಅವರ ಕಡೆಯ ಸಿನಿಮಾ ಲಕ್ಕಿಮ್ಯಾನ್ ಬಿಡುಗಡೆಯಾಗಿರುವ ಸಂದರ್ಭದಲ್ಲೇ ಪುನೀತ್ ಅವರನ್ನು ಸೇರಿಕೊಂಡಿರುವುದು ಕಾಕತಾಳಿಯವೇ ಸರಿ.

ಮಂಡ್ಯಾ ರವಿ ಪ್ರಸಾದ್ ಅವರ ವ್ಯಕ್ತಿತ್ವ ಮತ್ತು ಅವರ ಬಣ್ಣದ ಲೋಕದ ಸಾಧನೆಗಳ ಕುರಿತಾದ ವಿವರಗಳು ಇದೋ ನಿಮಗಾಗಿ… Read More ಕಾಕತಾಳೀಯ

ಸತ್ತವರ ಮನೆ ಮುಂದೆ ಬೆಂಕಿ ಏಕೆ ಹಾಕುತ್ತಾರೆ?

ಹಿಂದೂಗಳ ಮನೆಯಲ್ಲಿ ಯಾರಾದರೂ ಸತ್ತರೇ, ಅವರ ಮನೆಯ ಮುಂದೆ ಬೆಂಕಿ ಯಾಕೆ ಹಾಕ್ತಾರೇ? ಹೆಣದ ಹಿಂದೆ ಕಡಲೇ ಪುರಿ, ಕಾಸು ಏಕೆ ಎಸೆಯುತ್ತಾರೆ? ಅಂತಿಮ ಸಂಸ್ಕಾರಕ್ಕೆ ಹೋದ ನಂತರ ಸ್ನಾನ ಏಕೆ ಮಾಡಬೇಕು? ಸೂತಕ ಮತ್ತು ಪುರುಡು ಇವೆರಡರ ನಡುವಿನ ವೆತ್ಯಾಸವೇನು? ಈ ಎಲ್ಲಾ ಆಚರಣೆಗಳ ಹಿಂದಿರುವ ವೈಜ್ಞಾನಿಕ ವಿವರಗಳೊಂದಿಗೆ ಸವಿವರವಾದ ಮಾಹಿತಿ ಇದೋ ನಿಮಗಾಗಿ… Read More ಸತ್ತವರ ಮನೆ ಮುಂದೆ ಬೆಂಕಿ ಏಕೆ ಹಾಕುತ್ತಾರೆ?

ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಸರ್ವ ಸಂಗ ಪರಿತ್ಯಾಗಿಗಳಾಗಿ ಖಾವಿ ತೊಟ್ಟರೂ ಅನೇಕ ವಿವಾದಗಳಿಗೆ ಸಿಲುಕುತ್ತಿರುವ ಈ ಸಂಧರ್ಭದಲ್ಲಿ ಒಬ್ಬ ಧಾರ್ಮಿಕ ಗುರುಗಳಾಗಿದ್ದರೂ ದೇಶದ ಏಕತೆಗೆ ಧಕ್ಕೆ ಬಂದಾಗಲೆಲ್ಲಾ ದೇಶ ಮೊದಲು ಧರ್ಮ ಆನಂತರ ಎಂದು ದೇಶದ ಅಖಂಡತೆ ಮತ್ತು ಸಮಾನತೆಗೆ ಸದಾಕಾಲವು ತುಡಿಯುತ್ತಿದ್ದಂತಹ ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಮುಳುಗಿತೇ ಬೆಂಗಳೂರು?

ನೆನ್ನೆ ಸಂಜೆ ಮುಂಬೈಯಿಂದ ಕರೆ ಮಾಡಿದ್ದ ನನ್ನ ಸಹೋದ್ಯೋಗಿಯೊಬ್ಬರು ಎಂದಿನಂತೆ ಉಭಯ ಕುಶಲೋಪರಿ ವಿಚಾರಿಸಿದ ನಂತರ ಕೇಳಿದ ಮೂತ್ತ ಮೊದಲನೇ ಪ್ರಶ್ನೆಯೇ, ಕಳೆದ ಒಂದು ವಾರದಿಂದ ಬೆಂಗಳೂರು ಮುಳುಗಿ ಹೋಗಿದೆಯಂತೆ? ಈಗ ಪರಿಸ್ಥಿತಿ ಹೇಗಿದೆ? ಎಂಚು. ನಿಮಗೆ ಹೇಗೆ ಈ ವಿಷಯ ಗೊತ್ತಾಯಿತು? ಎಂದು ವಿಚಾರಿಸಿದಾಗ, ವಾಟ್ಸಾಪ್ ನಲ್ಲಿ ಬೆಂಗಳೂರಿನ ಹತ್ತು ಹಲವಾರು ವೀಡಿಯೋಗಳು ಹರಿದಾಡುತ್ತಿವೆ. ಅದನ್ನು ನೋಡಿ ಗೊತ್ತಾಯಿತು ಎಂದಾಗ, ಜನರು ಇಲಿ ಹೋಯ್ತು ಎಂದರೆ ಹುಲಿ ಹೋಯ್ತು ಎಂದು ಹೇಳ್ತಾರಲ್ಲಾ ಎಂದು ಮನಸ್ಸಿನಲ್ಲಿ ಅಂದು… Read More ಮುಳುಗಿತೇ ಬೆಂಗಳೂರು?

ಬೆಂದಕಾಳೂರಿನಿಂದ ಸಿಲಿಕಾನ್ ಸಿಟಿ ವರೆಗೆ

ಹತ್ತಾರು ವರ್ಷಗಳ ಹಿಂದೆ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದು ಕನ್ನಡವನ್ನೂ ಕಲಿಯದೇ ಇರುವವರೆಲ್ಲಾ, ಶತಮಾನದಲ್ಲಿ ಕಂಡೂ ಕೇಳರಿಯದ ಒಂದು ಕುಂಭ ಮಳೆಗೆ ಹೆದರಿ ಬೆಂಗಳೂರನ್ನು ಬಿಟ್ಟು ಹೋಗುತ್ತೇವೆ ಎನ್ನುತ್ತಿರುವವರಿಗೆ, ಬೆಂಗಳೂರಿನ ಇತಿಹಾಸ ಮತ್ತು ಇಂದಿನ ಸಮಸ್ಯೆಗೆ ನಿಜವಾದ ಕಾರಣವನ್ನು ತಿಳಿಸಲೇ ಬೇಕು ಅಲ್ವೇ?… Read More ಬೆಂದಕಾಳೂರಿನಿಂದ ಸಿಲಿಕಾನ್ ಸಿಟಿ ವರೆಗೆ

ಆಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರೋದಿಲ್ಲ

ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧವಾದರೂ ಶಾಸಕ ಝಮೀರ್ ನೆನ್ನೆ ಅವರ ಕಛೇರಿಯಲ್ಲಿ ಗಣೇಶೋತ್ಸವ ಮಾಡಿ ಅನ್ಯಧರ್ಮದ ಮೂರ್ತಿ ಪೂಜೆ ಮಾಡುವ ಮೂಲಕ ಧರ್ಮ ಭ್ರಷ್ಟರಾಗಲಿಲ್ಲವೇ? ಇಷ್ಟು ವರ್ಷಗಳ ಕಾಲ ಗಣೇಶನ ಮೇಲಿಲ್ಲದ ಪ್ರೀತಿ ಈಗ ಇದ್ದಕ್ಕಿದ್ದಂತೆ ಹೇಗೆ ಬಂತು? ಅಧಿಕಾರಕ್ಕಾಗಿ ತನ್ನ ಧರ್ಮದ ನಿಯಮಗಳನ್ನೇ ಗಾಳಿಗೆ ತೂರುವವನು, ಈಗ ಇದ್ದಕ್ಕಿದ್ದಂತೆಯೇ ಪರಧರ್ಮ ಸಹಿಷ್ಣು ಹೇಗೆ ಆಗುತ್ತಾನೆ? ಇದು ಖಂಡಿತವಾಗಿಯೂ ಹಿಂದೂಗಳ ಕಿವಿಗೆ ಹೂವಿಡುವ ತಂತ್ರ ಎಂದು ಸುಸ್ಪಷ್ಟವಾಗುತ್ತಿದೆ ಅಲ್ವೇ?… Read More ಆಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರೋದಿಲ್ಲ

ಬಿಇಎಲ್ ವಿದ್ಯಾಸಂಸ್ಥೆಯ ಶ್ರೀ ಬಿ.ಕೆ. ಗೋಪಣ್ಣನವರು

ಈ ಶಿಕ್ಷಕರ ದಿನಾಚರಣೆಯಂದು, ಬಿಇಎಲ್ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಕನ್ನಡ ಮೇಷ್ಟ್ರು, ಕನ್ನಡದ ಪ್ರಾಧ್ಯಾಪಕರು, ನಂತರ ಪ್ರಾಂಶುಪಾಲರಾಗಿ ಸಾವಿರಾರು ವಿದ್ಯಾರ್ಧಿಗಳಿಗೆ ಅಚ್ಚ ಕನ್ನಡವನ್ನು ಸ್ವಚ್ಚವಾಗಿ ಹೇಳಿಕೊಟ್ಟಂತಹ ನಮ್ಮನಿಮ್ಮೆಲ್ಲರ ನೆಚ್ಚಿನ ಗುರುಗಳಾದ ಶ್ರೀ ಗೋಪಣ್ಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರ ಸಾಧನೆಗಲ ಪರಿಚಯ ಇದೋ ನಿಮಗಾಗಿ… Read More ಬಿಇಎಲ್ ವಿದ್ಯಾಸಂಸ್ಥೆಯ ಶ್ರೀ ಬಿ.ಕೆ. ಗೋಪಣ್ಣನವರು

ಕೊಡವರ ಕೈಲ್ ಪೋಳ್ದ್ ಹಬ್ಬ

ಕರ್ನಾಟಕದ ಕೆಚ್ಚೆದೆಯ ವೀರ ಕೊಡವರಿಗೆ ಕೈಲ್ ಪೋಳ್ದ್ ಹಬ್ಬದ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಕೊಡಗು, ಕೊಡವರ ಇತಿಹಾಸ, ಭಾರತೀಯ ಸೇನೆ ಮತ್ತು ಕ್ರೀಡಾರಂಗಕ್ಕೆ ಕೊಡವರ ಕಾಣಿಕೆಗಳ ಜೊತೆಯಲ್ಲಿ, ಅತ್ಯಂತ ವೈಶಿಷ್ಟ್ಯವಾಗಿ ಅಚರಿಸಲ್ಪಡುವ ಅವರ ಹಬ್ಬಗಳು ಅದರಲ್ಲೂ ವಿಶೇಶವಾಗಿ ಕೈಲ್ ಪೋಳ್ದ್ ಹಬ್ಬದ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕೊಡವರ ಕೈಲ್ ಪೋಳ್ದ್ ಹಬ್ಬ