ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಕಾಯುವವರು ಯಾರು?

ದೇಶದ ಗಡಿಯಲ್ಲಿ ಶತ್ರುಗಳ ನುಸುಳುವಿಕೆಯನ್ನು ತಡೆಯುವ ಸಲುವಾಗಿ ಹೇಗೆ ಸೈನ್ಯವಿರುತ್ತದೆಯೋ ಹಾಗೆಯೇ ದೇಶದ ಆಂತರಿಕ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆರಕ್ಷಕರು ಇರುತ್ತಾರೆ. ಸ್ಥಳೀಯವಾಗಿ ನಡೆಯುವ ಸಾವಿರಾರು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ನಡೆಯುವಾಗ ಅ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಾಕ್ಷಿಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಪೋಲಿಸರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಪ್ರಕರಣಗಳನ್ನು ನ್ಯಾಯಾಲಯದವರೆಗೂ ಬಾರದಂತೆ ಸ್ಥಳೀಯವಾಗಿಯೇ ಪೋಲಿಸರು ಬಗೆಹರಿಸುವ ಕಾರಣ ನಮ್ಮ ಸಮಾಜದಲ್ಲಿ ಪೋಲಿಸರಿಗೆ… Read More ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಕಾಯುವವರು ಯಾರು?

ಪರಿಸರ ಪ್ರೇಮಿ ಗಣೇಶ ಮೂರ್ತಿಯ ತಯಾರಿಕಾ ಕಾರ್ಯಾಗಾರ

ವಿವಿಧತೆಯಲ್ಲೂ ಏಕತೆಯನ್ನು ಹೊಂದಿರುವ ಈ ಭಾರತ ದೇಶದಲ್ಲಿ ಆಯಾಯಾ ಪ್ರದೇಶಗಳಿಗೆ ಅನುಗುಣವಾಗಿ ಗ್ರಾಮದೇವತೆ ಇಲ್ಲವೇ ದೇವರುಗಳು ಇದ್ದು ಅಲ್ಲಿಯ ರೀತಿ ರಿವಾಜುಗಳಿಗೆ ಅನುಗುಣವಾಗಿ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಕೇವಲ ಭಾರತವಷ್ಟೇ ಅಲ್ಲದೇ ಪ್ರಪಂಚದ ನೂರಾರು ರಾಷ್ಟ್ರಗಳಲ್ಲಿ ಸರ್ವೇಸಾಮಾನ್ಯವಾಗಿ ಪೂಜಿಸಲ್ಪಡುವ ಹಿಂದೂ ದೇವರು ಎಂದರೆ ಅದು ವಿಘ್ನವಿಶಾಶಕ ವಿಘ್ನೇಶ ಎಂದರೆ ಅತಿಶಯವಲ್ಲ. ಎಲ್ಲಾ ಸಭೆ ಸಮಾರಂಭಗಳಲ್ಲಿ ಮತ್ತು ಶುಭ ಕಾರ್ಯಕ್ರಮಗಳಲ್ಲಿ ಗಣೇಶನಿಗೆ ಮೊದಲ ಪೂಜೆ. ಹಾಗಾಗಿಯೇ ಪ್ರಪಂಚಾದ್ಯಂತ ಇರುವ ಸಮಸ್ತ ಹಿಂದೂಗಳ ವಾಹನಗಳಲ್ಲಿ ವಿನಾಯಕನ ವಿಗ್ರಹಗಳು… Read More ಪರಿಸರ ಪ್ರೇಮಿ ಗಣೇಶ ಮೂರ್ತಿಯ ತಯಾರಿಕಾ ಕಾರ್ಯಾಗಾರ

ಬಲರಾಮ ಜಯಂತಿ

ದ್ವಾಪರ ಯುಗದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಕಥೆಯಾದರೂ ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನು ಅತ್ಯಂತ್ಯ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಒಂದು ರೀತಿ ಅತನೇ ಸೂತ್ರಧಾರಿಯಾಗಿ ಉಳಿದವರೆಲ್ಲರೂ ಆತ ಆಡಿಸಿಸಂತೆ ಆಡುವ ಪಾತ್ರಧಾರಿಗಳಂತೆ ಕಾಣುತ್ತಾರೆ ಎಂದರೂ ತಪ್ಪಾಗದು. ಮಹಾವಿಷ್ಣುವಿನ ದಶಾವತಾರದಲ್ಲಿ ಕೃಷ್ಣನದ್ದು 8ನೇ ಅವತಾರವಾದರೆ, ಅವರನ ಅಣ್ಣನಾಗಿ ಸದಾಕಾಲವೂ ಬೆಂಗಾವಲಾಗಿ ಬಲರಾಮನು ಇದ್ದೇ ಇರುತ್ತಾನೆ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನಿಗೆ ಆತನ ತಂಗಿ ದೇವಕಿಯ ಎಂಟನೇ ಸಂತಾನನಿಂದಲೇ ಅಂತ್ಯವಾಗುವನೆಂಬ ಅಶರೀರವಾಣಿಯ ಮಾತನ್ನು ಕೇಳಿದ ನಂತರ ಆತ… Read More ಬಲರಾಮ ಜಯಂತಿ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾತ್ರಂತ್ರ್ಯ ಸಂಗ್ರಾಮದ ಸಮಯದಲ್ಲಿ ಎಲೆಮರೆಕಾಯಿಯಂತೆ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ತ್ಯಾಗ ಮತ್ತು ಬಲಿದಾನ ಗೈದ ಲಕ್ಷಾಂತರ ನಿಸ್ವಾರ್ಥ ಹೋರಾಟಗಾರನ್ನು ಪರಿಚಯಿಸುವ ನಮ್ಮ ಅವಿಖ್ಯಾತ ಸ್ವರಾಜ್ಯ ಕಲಿಗಳು ಮಾಲಿಕೆಯಲ್ಲಿ ಇಂದಿನ ಕಲಿಗಳು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ… Read More ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗೆ, ವಂದೇ ಮಾತರಂ ಗೌರವ ಗಾಯನ ಆಭಿಯಾನ

ನಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಮತ್ತು ಕವಿಗಳಾಗಿದ್ದ ಬಂಕಿಮ ಚಂದ್ರ ಚಟರ್ಜಿಯವರು ಸ್ವಾತಂತ್ರ್ಯದ ಹೋರಾಟದ ಸಂಧರ್ಭದಲ್ಲಿ ಭಾರತೀಯರಲ್ಲಿ ತಾಯ್ನಾಡಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಚಿಸಿದ ಗೀತೆಯೇ ವಂದೇ ಮಾತರಂ. ತಾಯಿ ನಿನಗೆ ವಂದಿಸುವೆ ಎಂಬರ್ಥ ಬರುವ ಈ ಗೀತೆಯ ಶೀರ್ಷಿಕೆಯಾದ ವಂದೇ ಮಾತಂ ಘೋಷಣೆ ದೇಶಾದ್ಯಂತ ಕೋಟ್ಯಾಂತರ ಸ್ವಾತ್ರಂತ್ರ್ಯ ಹೋರಾಟಗಾರ ರಣ ಘೋಷಣೆಯಾಗಿ ಅವರನ್ನೆಲ್ಲಾ ಸ್ವಾತ್ರಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರೇಪಣಾ ಮಂತ್ರವಾಗಿ ಲಕ್ಷಾಂತರ ಜನರ ವಂದೇ ಮಾತರಂ.. ವಂದೇ ಮಾತರಂ. ಉಧ್ಘೋಷ… Read More ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗೆ, ವಂದೇ ಮಾತರಂ ಗೌರವ ಗಾಯನ ಆಭಿಯಾನ

ಶ್ರೀ ಶಿವಮೊಗ್ಗ ಸುಬ್ಬಣ್ಣ

ಭಾರತದ ಉಳಿದೆಲ್ಲಾ ಭಾಷೆಗಳ ಸಾರಸ್ವತ ಲೋಕಕ್ಕಿಂತಲೂ ವಿಭಿನ್ನವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಭಾಗಗೀತೆಗಳ ಮೂಲಕ ತಮ್ಮ ಭಾವನೆಗಳನ್ನು ಕನ್ನಡ ಕವಿಗಳು ವ್ಯಕ್ತಪಡಿಸಿದ್ದರೆ, ಅಂತಹ ಕವಿಗಳ ಭಾವನೆಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ರಾಗ ಸಂಯೋಜನೆ ಮಾಡಿ ತಮ್ಮ ಅದ್ಭುತ ಕಂಠಸಿರಿಯಿಂದ ಆ ಹಾಡುಗಳನ್ನು ಎಲ್ಲರ ಭಾವ ಮಿಡಿಯುವ ಹಾಗೆ ಹಾಡುವ ಅದ್ಬುತ ಸುಗಮ ಸಂಗೀತಗಾರರೂ ಸಹಾ ಕನ್ನಡ ಸಾರಸ್ವತ ಲೋಕದಲ್ಲಿದ್ದಾರೆ. ತಮ್ಮ ಅದ್ಭುತವಾದ ಕಂಚಿನ ಕಂಠದಿಂದ ನೂರಾರು ಕವಿಗಳ ಸಾವಿರಾರು ಭಾವಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಮನ ಮತ್ತು… Read More ಶ್ರೀ ಶಿವಮೊಗ್ಗ ಸುಬ್ಬಣ್ಣ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರೀಲೀ ಕೊಡ ಹಿಡಿದ, ಕೈಯ್ಯಲ್ಲಿ ಕಾಸು ಇದ್ದಾಗ ಊರೇಲ್ಲಾ ನೆಂಟರು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು. ಇವೆಲ್ಲವೂ ಕನ್ನಡದ ಪ್ರಸಿದ್ಧ ಗಾದೆ ಮಾತುಗಳು. ವೇದ ಸುಳ್ಳಾದರೂ ಗಾದೆ ಮಾತು ಸುಳ್ಳಾಗದು ಎನ್ನುವುದು ಆಡು ಭಾಷೆಯಲ್ಲಿ ಬಹಳವಾಗಿ ಪ್ರಚಚಲಿತದಲ್ಲಿದೆ. ಈ ಎಲ್ಲಾ ಗಾದೆಗಳು ವಿವಿಧ ಸಂದರ್ಭದಲ್ಲಿ ಅನ್ವಯವಾದರೆ, ಈಗ ನಾನು ಹೇಳಲು ಹೊರಟಿರುವ ಪ್ರಸಂಗದಲ್ಲಿ ಈ ಎಲ್ಲಾ ಗಾದೆ ಮಾತುಗಳು ಒಟ್ಟಾಗಿಯೇ ಮುಗಿಬಿದ್ದಂತಹ ಕರುಣಾಜನಕ ಕಥೆ… Read More ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಸಾಹಿತ್ಯದ ಮೂಲಕ ಪರಿಸರದ ಜಾಗೃತಿ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು, ಹೊಸಕೆರೆಹಳ್ಳಿ ಕೆರೆ ಸಂರಕ್ಷಣಾ ಸಮಿತಿ ಮತ್ತು ಶಾರದಾ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ನಾಡಿನ ಖ್ಯಾತ ಸಾಹಿತಿಗಳಾದ ಶ್ರೀ ಹೆಚ್. ಎಸ್. ವೆಂಕಟೇಶ ಮೂರ್ತಿಗಳ ಸಾರಥ್ಯದಲ್ಲಿ ಸಾಹಿತ್ಯದ ಮೂಲಕ ಪರಿಸರದ ಜಾಗೃತಿ ಎಂಬ ಅರ್ಥಪೂರ್ಣ ಕಾರ್ಯಕ್ರಮದ ಒಂದು ಝಲಕ್ ಇದೋ ನಿಮಗಾಗಿ… Read More ಸಾಹಿತ್ಯದ ಮೂಲಕ ಪರಿಸರದ ಜಾಗೃತಿ

ಹರ್ ಘರ್ ತಿರಂಗ

ಪ್ರಧಾನಿಗಳು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಧರ್ಭದಲ್ಲಿ ಸಕಲ ಭಾರತೀಯರ ‌ಮನ ಮತ್ತು ಮನೆಗಳಲ್ಲಿ ದೇಶಾಭಿಮಾನವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಿ, ನಮ್ಮ ತ್ರಿವರ್ಣ ದ್ವಜವನ್ನು‌ ಆಗಸ್ಟ್13-15ರ ವರಗೆ ಎಲ್ಲರ ಮನೆಯ ಮೇಲೆ ಹಾರಿಸಬೇಕೆಂದು ಕೋರಿದ್ದಾರೆ.

ಹಿಂದೂಗಳ ಶ್ರಧ್ಧೇಯ ಭಗವಾ ಧ್ವಜದ ಬದಲು ಈ ತ್ರಿವರ್ಣ ಧ್ವಜ ಏಕೆ? ಮತ್ತು ಹೇಗೆ ಬಂದಿತು? ಈ ಧ್ವಜದ ರೂವಾರಿಗಳು ಯಾರು? ಎಂಬ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಹರ್ ಘರ್ ತಿರಂಗ