ಧನ್ಯೋಸ್ಮಿ

ಜೀವನ ಎಂದರೆ ಕೇವಲ ಆಟ, ಪಾಠ, ಕೆಲಸ, ಊಟ, ನಿದ್ದೆಯಷ್ಟೇ ಅಲ್ಲದೇ ಅಭ್ಯಾಸ ಮತ್ತು ಹವ್ಯಾಸಗಳೂ ಸಹಾ ನಮ್ಮ ಜೀವನ ಅವಿಭಾಜ್ಯ ಅಂಗವಾಗಿರುತ್ತದೆ ಎಂದರೆ ತಪ್ಪಾಗದು. ಜೀವನದಲ್ಲಿ ಸುಖಃ ಮತ್ತು ದುಃಖಗಳು ಸಂಭವಿಸಿದಾಗ ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಹೋಗಲು ಹವ್ಯಾಸಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಹಾಗಾಗಿಯೇ ಖುಷಿ ಮತ್ತು ದುಃಖಗಳ ಸಮಯದಲೂ ಹಾಡುಗಳನ್ನು ಗುಣುಗುವ ಮೂಲಕವೋ ಇಲ್ಲವೇ ನೃತ್ಯ ಮಾಡುವ ಮೂಲಕವೋ ಇಲ್ಲವೇ ಒಳ್ಳೆಯ ವಿಷಯಗಳನ್ನು ಓದುವ ಇಲ್ಲವೇ ಬರೆಯುವ ಇಲ್ಲವೇ, ಯಾವುದಾದರೂ ಪುಣ್ಯಕ್ಷೇತ್ರಗಳೋ ಇಲ್ಲವೇ ಪ್ರಕೃತಿ ತಾಣಕ್ಕೆ… Read More ಧನ್ಯೋಸ್ಮಿ

ಕಾಶೀ ಶ್ರೀ ವಿಶ್ವನಾಥ

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಶ್ರೀಕ್ಷೇತ್ರ ಹಿಂದೂಗಳ ಆಧ್ಯಾತ್ಮ ಕೇಂದ್ರವಲ್ಲದೇ ಮೋಕ್ಷದ ಹಾದಿಯೂ ಆಗಿದೆ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದಲ್ಲದೇ ಕಾಶೀಯಲ್ಲಿ ದೇಹತ್ಯಾಗ ಮಾಡುವರಿಗೆ ಶಾಶ್ವತವಾದ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಂಗಾನದಿಯ ತಟದಲ್ಲಿ ೬೪ ಘಾಟ್ ಗಳಿರುವ ಈ ಶ್ರೀಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದ್ದು ಶಿವರಾತ್ರಿಯ ಈ ಪವಿತ್ರದಿನದಂದು ಶ್ರೀಕ್ಷೇತ್ರದ ದರ್ಶನವನ್ನು ಪಡೆಯೋಣ ಬನ್ನಿ. ಕಾಶಿಯ… Read More ಕಾಶೀ ಶ್ರೀ ವಿಶ್ವನಾಥ

ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ದ್ವಾಪರಯುಗಾಂತ್ಯದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದು ಕೌರವರನ್ನು ಸೆದೆಬಡೆದ ಪಾಂಡವರು ತಮ್ಮ ರಾಜ್ಯವನ್ನು ಮರಳಿ ಪಡೆಯುತ್ತಾರೆ ಎಂಬುದನ್ನು ನಮ್ಮ ಪುರಾಣ ಗ್ರಂಥವಾದ ಮಹಾಭಾರತದಲ್ಲಿ ಓದಿರುತ್ತೇವೆ. ಆದರೆ ಮಹಾಭಾರತ ಎಂಬುದು ನಡದೇ ಇಲ್ಲ. ಅದೊಂದು ಕಟ್ಟು ಕಥೆ ಎನ್ನುವವರಿಗೆ ಉತ್ತರ ನೀಡುವಂತೆಯೇ ವರಸೆಯಲ್ಲಿ ಧೃತರಾಷ್ಟ್ರನ ತಮ್ಮ ಮತ್ತು ಆತನಿಗೆ ಆಪ್ತಸಲಹೆಗಾರ ಮತ್ತು ಮಂತ್ರಿಯಾಗಿದ್ದ ವಿದುರನು ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಉತ್ತರ ಭಾರತದಿಂದ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಉತ್ತರ… Read More ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ಶ್ರೀ ಗುರೂಜಿಯವರ ಸಂಸ್ಮರಣೆ

ಸಂಘವನ್ನು ಆರಂಭಿಸಿದ್ದು ಡಾಕ್ಟರ್ ಜೀ ಅವರಾದರೂ, ಸಂಘ ಮತ್ತು ಸಂಘ ಪರಿವಾರವನ್ನು ಪಾಲಿಸಿ ಪೋಷಿಸಿ ಈ ಮಟ್ಟಕ್ಕೆ ಪ್ರವರ್ಧಮಾನಕ್ಕೆ ತಂದ ಕೀರ್ತೀ ಗುರುಜಿ ಖಂಡಿತವಾಗಿಯೂ ಅವರಿಗೇ ಸಲ್ಲುತ್ತದೆ. ಈ ನಾಡು ಕಂಡ ಶ್ರೇಷ್ಠ ದಾರ್ಶನಿಕ ಶ್ರೀ ಮಾಧವ ಸದಾಶಿವ ಗೋಳ್ವಾಲ್ಕರ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಗುರೂಜಿಯವರ ಸಂಸ್ಮರಣೆ

ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದ್ದು ಅಲ್ಲಿ ನಮ್ಮ ಸನಾತನ ಧರ್ಮದ  ಆಧಾರದಲ್ಲಿ ಪೂಜೆ ಪುನಸ್ಕಾರಗಳು ನಡೆಯುವ ಮೂಲಕ ಶ್ರದ್ಧಾ ಕೇಂದ್ರಗಳಾಗಿವೆ. ಭಕ್ತಾದಿಗಳು ದೇವಾಲಯಕ್ಕೆ ಹೋಗಿ ತಮ್ಮ ಶಕ್ತ್ಯಾನುಸಾರ ದೇವರನ್ನು ಪೂಜಿಸಿ ನೈವೇದ್ಯವನ್ನು ಅರ್ಪಿಸಿ ಯಥಾ ಶಕ್ತಿ ಕಾಣಿಕೆಯನ್ನು ಅರ್ಪಿಸಿ ಬರುತ್ತಾರೆ. ಇನ್ನು ದೇವಾಲಯಗಳೂ ಸಹಾ ಭಕ್ತರಿಂದ ಆ ರೀತಿಯಾಗಿ ಪಡೆದ ದೇಣಿಗೆಯಿಂದ ಭಕ್ತಾದಿಗಳಿಗೆ ದಿನ ನಿತ್ಯವೂ ದಾಸೋಹ ನಡೆಸುವುದಲ್ಲದೇ, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಹೋಮ ಹವನಗಳನ್ನು ನಡೆಸುತ್ತಾ,… Read More ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ಆರ್. ಜೆ. ರಚನಾ (ರಚ್ಚು)

ಪ್ರತೀ ದಿನ ಬೆಳಿಗ್ಗೆೆ ತನ್ನ ಸುಮಧುರ ಕಂಠದಿಂದ ಎಫ್. ಎಂ ರೇಡಿಯೂ ಮೂಲಕ ಇಡೀ ಕನ್ನಡಿಗರನ್ನು ರಂಜಿಸುತ್ತಿದ್ದ ಆರ್. ಜೆ. ರಚನಾ (ರಚ್ಚು) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಆರ್. ಜೆ. ರಚನಾ (ರಚ್ಚು)

ಕಲಾತಪಸ್ವಿ ಡಾ. ರಾಜೇಶ್

https://enantheeri.com/2022/02/19/rajesh/

ಎತ್ತರದ ನಿಲುವಿನ ಸುರದ್ರೂಪಿಮತ್ತು ಸ್ಪಷ್ಟ ಉಚ್ಚಾರದ ಶಾರೀರದ ಮೂಲಕ,ಮೂರ್ನಾಲ್ಕು ದಶಕಗಳ ಕಾಲ ತಮ್ಮ ನಟನಾ ಸಾಮರ್ಥ್ಯದಿಂದ ಕನ್ನಡಿಗರ ಹೃದಯವನ್ನು ಗೆದ್ದಿದ್ದಂತಹ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ರಾಜೇಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಕಲಾತಪಸ್ವಿ ಡಾ. ರಾಜೇಶ್

ಕೈದಾಳ ಶ್ರೀ ಚನ್ನಕೇಶವ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳ ತವರೂರಾಗಿದೆ. ಬೇಲೂರು ಹಳೇಬೀಡು ಶ್ರವಣ ಬೆಳಗೋಳ ಹಂಪೆಯಂತ ಪುಣ್ಯಕ್ಷೇತ್ರಗಳಲ್ಲಿ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿರುವ ಕೆತ್ತನೆಗಳು ಜಗತ್ರ್ಪಸಿದ್ಧವಾದರೆ, ಕರ್ನಾಟಕದ ಸಾವಿರಾರು ಊರುಗಳಲ್ಲಿ ಬೆಳಕಿಗೇ ಬಾರದಂತಹ ವೈಶಿಷ್ಟ್ಯತೆಯುಳ್ಳ ದೇವಾಲಯಗಳ ಸಂಖ್ಯೆ ಅಗಣಿತವಾಗಿದೆ. ನಾವಿದು ತುಮಕೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಅತ್ಯಂತ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವನ ದೇವಾಲಯವಿರುವ ಕೈದಾಳದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಕಲ್ಪತರು ನಾಡು ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಪ್ರಯಾಣಿಸಿದಲ್ಲಿ ಎಡಗಡೆಗೆ ಇತಿಹಾಸ… Read More ಕೈದಾಳ ಶ್ರೀ ಚನ್ನಕೇಶವ

ಶ್ರೀ ಚನ್ನವೀರ ಕಣವಿ

ಸರಳ ಸಜ್ಜನಿಕೆಯ ಜೊತೆಗೆ ಶ್ರೇಷ್ಠ ಮಾನವೀಯ ಗುಣವನ್ನು ಹೊಂದಿದ್ದು ತಮ್ಮ ಸಮಕಾಲೀನ ಕವಿಗಳ ಸಾಹಿತ್ಯವನ್ನು ನಿರ್ಮತ್ಸರದಿಂದ ವಿಮರ್ಶಿಸುತ್ತಿದ್ದರೂ ವಯಕ್ತಿಕವಾಗಿ ಅವರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಂತಹ ಕನ್ನಡದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಹರಿಕಾರರಾಗಿದ್ದಂತಹ ಶ್ರೀ ಚೆನ್ನವೀರ ಕಣವಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ *ಕನ್ನಡದ ಕಲಿಗಳು* ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಚನ್ನವೀರ ಕಣವಿ