ಕನ್ಯಾದಾನ ಮತ್ತು ಅಸಹಿಷ್ಣುತೆ

ಕಳೆದ ವಾರಾಂತ್ಯದಲ್ಲಿ #Nobindi_Nobusiness ಎಂಬ ಲೇಖನವೊಂದನ್ನು ಬರೆದು ಅದರಲ್ಲಿ ಮಾಧ್ಯಮ ಮತ್ತು ಜಾಹೀರಾತುಗಳ ಮೂಲಕ ಹೇಗೆ ನಮ್ಮ ಹಿಂದೂ ಹಬ್ಬಗಳನ್ನು ಅವಹೇಳನ ಮಾಡಲಗುತ್ತಿದೆ ಹಾಗೂ ತಿರುಚಲಾಗುತ್ತಿದೆ ಎಂಬುದನ್ನು ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದೆ. ಈ ಲೇಖನವನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಲವರೊಡನೆ ಹಂಚಿಕೊಂಡಿದ್ದೆ. ಇಡೀ ಲೇಖನ ಯಾರದ್ದೇ ವಯಕ್ತಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಹಿಂದೂ ಧರ್ಮದ ಬಗ್ಗೆ corporate company ಗಳಿಗೆ ಇರುವ ತಾತ್ಸಾರ, ನಮ್ಮ ಆಚರಣೆಗಳ ಬಗ್ಗೆ ತೋರುವ ಅಸಡ್ಡೆ ಮತ್ತು ತಾರತಮ್ಯವನ್ನು… Read More ಕನ್ಯಾದಾನ ಮತ್ತು ಅಸಹಿಷ್ಣುತೆ

ಊನಕೋಟಿ

ನಮ್ಮ ಸನಾತನ ಧರ್ಮದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಿದ್ದು ಅವೆಲ್ಲವೂ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದದ್ದು ಎಂದು ನಂಬಿದರೆ, ಇನ್ನೂ ಅನೇಕರು ಅದು ಕೇವಲ ಕಾಲ್ಪನಿಕ ಕಟ್ಟು ಕಥೆ ಎಂದು ವಾದ ಮಾಡುವವರೂ ಇದ್ದಾರೆ. ಹಾಗೆ ವಾದ ಮಾಡುವವರಿಗೆ ಉತ್ತರಿಸುವಂತೆ ಆ ಪುರಾಣ ಕಥೆಗಳಲ್ಲಿ ಉಲ್ಲೇಖವಿರುವ ಬಹುತೇಕ ನದಿಗಳು, ನಗರಗಳು ಭಾರತಾದ್ಯಂತ ಹರಡಿಕೊಂಡಿದ್ದು ಈ ಪುರಾಣ ಕಥೆಗಳಿಗೆ ಪೂರಕವಾಗಿದೆ. ಪುರಾಣ ಕಥೆಯಲ್ಲಿ ಬರುವ ಇಂತಹದ್ದೇ ಒಂದು ದಂತಕತೆಗೆ ಜ್ವಲಂತ ಉದಾಹರಣೆಯಾಗಿ ತ್ರಿಪುರದ ಕಾಡುಗಳಲ್ಲಿ ಗೋಚರವಾಗಿರುವ, ಕಾಲ ಭೈರವನ… Read More ಊನಕೋಟಿ

ಕಿತ್ತೂರು ರಾಣಿ ಚೆನ್ನಮ್ಮ

ಪ್ರಪಂಚದ ಬಹುತೇಕ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡು ಸೂರ್ಯ ಮುಳುಗದ ನಾಡು ಎಂದು ಬೀಗುತ್ತಿದ್ದ ಬ್ರಿಟೀಷರಿಗೆ ಆರಂಭಿಕ ಸೋಲಿನ ರುಚಿಯನ್ನುಣಿಸಿದ *ಕನ್ನಡದ ದಿಟ್ಟ ವೀರಾಗ್ರಣಿ ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ* ಯಂದು ಆಕೆಯ ಯಶೋಗಾಥೆ ಇದೋ ನಿಮಗಾಗಿ… Read More ಕಿತ್ತೂರು ರಾಣಿ ಚೆನ್ನಮ್ಮ

#NoBindi_NoBusiness

ಅರೇ ಇದೇನಿದು ಇಂತಹ ಶೀರ್ಷಿಕೆ? ಜನರನ್ನು ಹೀಗೆ ಧರ್ಮಾಧಾರಿತವಾಗಿ ಕೆರಳುಸಿತ್ತಿದ್ದೀರಿ ಎಂದು ಭಾವಿಸುತ್ತಿದ್ದೀರಾ? ಅರೇ ಇದೇನಿದು ಹೀಗೆ ಕೋಮುವಾದವನ್ನು ಹರಡುತ್ತಿದ್ದೇನೆ ಎಂದು ಭಾವಿಸಿದ್ದೀರಾ? ಖಂಡಿತವಾಗಿಯೂ ಅಂತಹ ಪ್ರಯತ್ನವಾಗಿರದೇ ನಮ್ಮ ಸುತ್ತಮುತ್ತಲಿನವರು ನಮ್ಮ ಹಿಂದುಗಳ ಹೃದಯ ವೈಶಾಲ್ಯತೆಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ ಎಂಬುದನ್ನು ಕೆಲವು ಉದಾಹರಣೆಯ ಮುಖಾಂತರ ವಿವರಿಸುತ್ತಿದ್ದೇನೆ ಅಷ್ಟೇ. ದಸರ ಮತ್ತು ದೀಪಾವಳಿ ಹಿಂದೂಗಳ ಪವಿತ್ರ ಹಬ್ಬ. ಈ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮಗಳಿಂದ ಹಿಂದೂಗಳು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಎಷ್ಟು ಚೆನ್ನಾಗಿ ಅಗುತ್ತದೆಯೋ? ಅದೇ… Read More #NoBindi_NoBusiness

ಹಲಸಿನ ಹಣ್ಣು

ವಸಂತ ಕಾಲದಲ್ಲಿ ಲಭ್ಯವಾಗುವಂತಹ ಹಲಸಿನ ಹಣ್ಣು ಎಲ್ಲರಿಗೂ ಅತ್ಯಂತ ಪ್ರಿಯವಾದ ಹಣ್ಣು ಎಂದರು ತಪ್ಪಾಗದು. ಹಲಸಿನ ಹಣ್ಣು ತನ್ನ ರುಚಿ, ಬಣ್ಣ ಮತ್ತು ಸುವಾಸನೆಗೆ ಹೆಸರುವಾಸಿಯಗಿದೆ. ಮಾಗಿದ ಹಲಸಿನ ಹಣ್ಣು ಹಾಗೇ ತಿನ್ನಲು ಯೋಗ್ಯವಾದರಲ್ಲಿ, ಹಲಸಿನ ಕಾಯಿ ಗ್ರಾಮೀಣ ಭಾಗದ ಅತ್ಯಂತ ಪ್ರಮುಖವಾದ ತರಕಾರಿಗಳಲ್ಲಿ ಒಂದಾಗಿದ್ದು ಇದನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಹಲಸಿನ ಹಣ್ಣು ಆರೋಗ್ಯಕ್ಕೂ ಬಹಳ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಹಲಸಿನ ಕಾಯಿ ಬಳಸಿಕೊಂಡು ಪಲ್ಯ, ಹುಳಿ, ಗೊಜ್ಜನ್ನು ತಯಾರಿಸಿದರೆ, ಹಲಸಿನ ಹಣ್ಣಿನಿಂದ… Read More ಹಲಸಿನ ಹಣ್ಣು

ವಾಲ್ಮೀಕಿ ಮಹರ್ಷಿಗಳು

ರಾಮಾಯಣ ಎಂಬುದು ನಮ್ಮ ಸನಾತನ ಧರ್ಮದ ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದಾಗಿದ್ದು ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಮುಖ ಪಠ್ಯವಾಗಿದೆ ಎಂದರೂ ತಪ್ಪಾಗದು. ಆಶ್ವಯುಜ ಮಾಸದ ಹುಣ್ಣಿಮೆಯಂದು ಜನಿಸಿದ ಇಂತಹ ಮಹಾ ಗ್ರಂಥವನ್ನು ರಚಿಸಿದ ಮಹಾಕವಿ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳು ಎಂದರೆ ಯಾರು? ಅವರ ಹಿನ್ನಲೆ ಏನು? ಅವರ ಸಾಧನೆಗಳೇನು? ಎಂಬುದರ ಮೆಲಕನ್ನು ಹಾಕೋಣ. ಮಹರ್ಷಿ ವಾಲ್ಮಿಕಿಗಳ ಮೂಲ ಹೆಸರು ರತ್ನಾಕರ ಎಂಬುದಾಗಿದ್ದು ಅವರು ಭಗವಾನ್‌ ಬ್ರಹ್ಮನ ಮಾನಸ ಪುತ್ರರಾಗಿದ್ದ ಪ್ರಚೇತ ಎಂಬುವರ ಮಗನಾಗಿದ್ದರು. ಆದರೆ… Read More ವಾಲ್ಮೀಕಿ ಮಹರ್ಷಿಗಳು

ಆವತಿ ತಿಮ್ಮರಾಯಸ್ವಾಮಿ ಬೆಟ್ಟ

ನಮ್ಮ ಸನಾತ ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ ಮತ್ತು ಆಚರಣೆಗಳು ನಮಗೆ ದೈವತ್ವದತ್ತ ಕೊಂಡೊಯ್ಯುತ್ತದೆ, ಅಂಥಾ ಪವಿತ್ರ ಆಚರಣೆಗಳಲ್ಲಿ ಧನುರ್ಮಾಸವೂ ಒಂದಾಗಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯನ್ನು ಧನುರ್ ಮಾಸ ಎಂದು ಕರೆಯಲಾಗುತ್ತದೆ. ಈ ಮಾಸವನ್ನು ಶೂನ್ಯ ಮಾಸ ಎಂದೂ ಸಹ ಕರೆಯಲಾಗುತ್ತದೆ. ಈ ಮಾಸದಲ್ಲಿ ಒಂದೇ ಒಂದು ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೂ ಅದು ಸಾವಿರಾರು ವರ್ಷಗಳ ಕಾಲ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಇನ್ನು ನಮ್ಮ ತಿರುಪತಿ ತಿಮ್ಮಪ್ಪ ಬಹುಶಃ… Read More ಆವತಿ ತಿಮ್ಮರಾಯಸ್ವಾಮಿ ಬೆಟ್ಟ

ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ನಾವು ಪ್ರತಿನಿತ್ಯವೂ ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಕೊಂಡೇ ಸ್ನಾನ ಮಾಡುತ್ತೇವೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ಅದರಲ್ಲೂ ದಕ್ಷಿಣ ಭಾರತ ಮತ್ತು ಕರ್ನಾಟಕಕ್ಕೆ ಈ ಕಾವೇರಿ ನದಿಯು ಜೀವ ನದಿಯಾಗಿರುವುದರಿಂದಲೇ ಅದನ್ನು ಕೇವಲ ನದಿ ಎಂದು ಭಾವಿಸದೇ, ಕಾವೇರಿ ತಾಯಿ… Read More ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ಇಂದಿನ ಯುವ ಜನತೆಯ ಆದ್ಯತೆ ಮತ್ತು ಆದರ್ಶಗಳು

ಕಳೆದ ಒಂದೂವರೆ ವರ್ಷದಿಂದ  ಇಡೀ ಪ್ರಪಂಚದ ಆರ್ಥಿಕ ಪರಿಸ್ಥಿತಿ ಕರೋನಾದಿಂದಾಗಿ ಕೆಟ್ಟುಕೆರ ಹಿಡಿದು ಹೋಗಿರುವ ಸಂಗತಿ  ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ.  ಇದರ ಪರಿಣಾಮದಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿ ಅಧೋಗತಿ ತಲುಪಿರುವುದನ್ನೇ ಎತ್ತಿ ತೋರಿಸುತ್ತಾ, ಜನರಿಗೆ ಎರಡು ಹೊತ್ತು ಊಟ ಸಿಗುತ್ತಿಲ್ಲ ಈ ಸರ್ಕಾರ ಏನು ಮಾಡ್ತಾ ಇದೇ? ಎಂದು  ಜನರನ್ನು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿ ಅವರ ದಿಕ್ಕು ತಪ್ಪಿಸುವ ಕಾರ್ಯದಲ್ಲಿರುವಾಗಲೇ  ಈ ವಾರ ಬಹುನಿರೀಕ್ಷಿತವಾಗಿದ್ದ ಎರಡು ಸುಪ್ರಸಿದ್ಧ ನಾಯಕರುಗಳ ಸಿನಿಮಾ ಬಿಡುಗಡೆಯಾಗಿದೆ.  ಬಿಡುಗಡೆಯಾದ ಎರಡೇ ದಿನಗಳಲ್ಲಿಯೇ… Read More ಇಂದಿನ ಯುವ ಜನತೆಯ ಆದ್ಯತೆ ಮತ್ತು ಆದರ್ಶಗಳು