ವಿಜಯ ಸಂಕೇಶ್ವರ

ಮಾಡುವ ಕೆಲಸ ಯಾವುದಾದರೂ ಏನಂತೆ, ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೇ ಎನ್ನುವ ಅಣ್ಣವರ ಹಾಡಿನಂತೆ  ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ ಅಂತ 19 ವರ್ಷದ ಯುವಕನೊಬ್ಬ ತನ್ನ ಕುಟುಂಬದ ವ್ಯಾಪಾರದಿಂದ ಹೊರ ಬಂದು ಕೈ ಕೆಸರಾದರೆ ಬಾಯ್ ಮೊಸರು ಎನ್ನುವಂತೆ 1975ರಲ್ಲಿ ಒಂದು ಟ್ರಕ್ ಖರೀದಿಸಿ  ಸಾರಿಗೆ ಉದ್ಯಮವನ್ನು ಆರಂಭಿಸಿ ಇಂದು  4,300 ವಾಹನಗಳನ್ನು ಹೊಂದಿರುವ ಭಾರತದಲ್ಲಿ ಅತ್ಯಂದ  ದೊಡ್ಡದಾದ … Read More ವಿಜಯ ಸಂಕೇಶ್ವರ

ಹನಿಗವನ ಚಕ್ರವರ್ತಿ ಎಚ್. ಡುಂಡಿರಾಜ್

ತಮ್ಮ ಹನಿಗವನಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತವಾಗಿರುವ ಶ್ರೀಯುತ ಎಚ್. ಡುಂಡಿರಾಜ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಯ ಪರಿಚಯ ಇದೋ ನಿಮಗಾಗಿ… Read More ಹನಿಗವನ ಚಕ್ರವರ್ತಿ ಎಚ್. ಡುಂಡಿರಾಜ್

ಮಂಜಮ್ಮ ಜೋಗತಿ

ಸಾಮಾನ್ಯವಾಗಿ ನಗರ ಪ್ರದೇಶಗಳ ಸಿಗ್ನಲ್ ಗಳ ಬಳಿ , ಬಸ್ ಇಲ್ಲವೇ ರೈಲ್ವೇ ನಿಲ್ಡಾಣಗಳ ಬಳಿ ಹಿಂಡು ಹಿಂಡಾಗಿ ಚಪ್ಪಾಳೆ ಹೊಡೆದುಕೊಂಡು ಭಿಕ್ಷೆ ಬೇಡುವ ತೃತೀಯ ಲಿಂಗಿಗಳನ್ನು ನೋಡಿದ ಕೂಡಲೇ ಬಹುತೇಕರಿಗೆ ತಾತ್ಸಾರದ ಭಾವನೆ ಮೂಡುತ್ತದೆ. ಕಲವರೂ ಅಲ್ನೋಡೋ ಚಕ್ಕಾ ಬಂದ್ರೂ, ಅಲ್ನೋಡೋ ಕೋಜಾ ಬಂದ್ರೂ ಎಂದು ಛೇಡಿಸಿದರೆ, ಇನ್ನೂ ಕೆಲವರೂ ಇನ್ನೂ ಕೆಟ್ಟದಾಗಿ ಅಲ್ನೋಡೋ 9 ಎಂದು ಅಸಹ್ಯ  ಬರುವ  ರೀತಿಯಲ್ಲಿ ಆಡಿಕೊಳ್ಳುವುದನ್ನು ನೋಡಿದ್ದೇವೆ. ತಮಗೇ ಅರಿವಿಲ್ಲದಂತೆ ತಮ್ಮ ದೇಹದಲ್ಲಿ ಆಗುವ ಬದಲಾವಣೆಯಿಂದಾಗಿ, ತಮ್ಮದಲ್ಲದ ತಪ್ಪಿಗಾಗಿ … Read More ಮಂಜಮ್ಮ ಜೋಗತಿ

ವೃಕ್ಷ ದೇವಿ ತುಳಸಿ ಗೌಡ

ಪರಿಸರ ಕಾಳಜಿಗೂ ಮತ್ತು ನಮ್ಮ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಒಂದು ಕಡೆ ನಿಂತರವಾಗಿ ಕಾಡನ್ನು ನಾಶ ಮಾಡಿ ನಾಡುಗಳನ್ನು ಮಾಡುತ್ತಿದರೆ ಮತ್ತೊಂಡೆ ಅದೇ ನಾಡಿನಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಅದನ್ನೇ ಕಾಡಾಗಿ ಪರಿವರ್ತಿಸುತ್ತಿರುವವರ ಸಂಖ್ಯೆಯೂ ನಮ್ಮ ರಾಜ್ಯದಲ್ಲಿ ಹೆಚ್ಚಾಗಿಯೇ ಇದೆ. ಅದಕ್ಕೆ ಸಾಲು ಮರದ ತಿಮ್ಮಕ್ಕನವರು ಉದಾಹರಣೆಯಾದರೆ ಅವರ ಜೊತೆಗೆ ಸೇರಿಸಬಹುದಾದ ಮತ್ತೊಂದು ಹೆಸರೇ ತುಳಸೀ ಗೌಡ. ಇಂತಹ ನಿಸ್ವಾರ್ಥ ಮಹಾನ್ ಸಾಧಕಿಯನ್ನು ಗುರುತಿಸಿ ಕೇಂದ್ರ ಸರ್ಕಾರವು 2020ರ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಮಾಡಿರುವುದು ನಿಜಕ್ಕೂ ಅಭಿನಂದನಾರ್ಯವಾಗಿದೆ.… Read More ವೃಕ್ಷ ದೇವಿ ತುಳಸಿ ಗೌಡ

ಅಕ್ಷರ ಸಂತ ಹರೇಕಳ ಹಾಜಬ್ಬ

ಅದೊಮ್ಮೆ ಮಂಗಳೂರಿನಲ್ಲಿ ರಸ್ತೆಯಲ್ಲಿ ಕಿತ್ತಲೆ ಹಣ್ಣುಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬರ ಬಳಿ ಬಂದ ದಂಪತಿಗಳು ಕಾರಿನಲ್ಲಿಯೇ ಕುಳಿತುಕೊಂಡು ಹೌ ಮಚ್ ಈಸ್ ದಿಸ್? ಎಂದು ಆಂಗ್ಲ ಭಾಷೆಯಲ್ಲಿ ಕೇಳಿದಾಗ, ಕನ್ನಡ, ತುಳು ಮತ್ತು ಬ್ಯಾರಿ ಬಿಟ್ಟರೇ ಮತ್ತಾವುದೇ ಭಾಷೆಯ ಪರಿಚಯವಿರದಿದ್ದ ಆ ಕಿತ್ತಳೇ ವ್ಯಾಪಾರಿಗೆ ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಹೀಗೆ ಪರಸ್ಪರ ಭಾಷೆಯ ಸಂವಹನೆಯ ಕೊರತೆಯಿಂದಾಗಿ ಅವರಿಬ್ಬರ ನಡುವೆ ವ್ಯಾಪಾರ ವಹಿವಾಟು ನಡೆಯದೇ ಅವರು ಬೇರೆಯವರ ಬಳಿ ಹಣ್ಣುಗಳನ್ನು ಖರೀದಿಸಿದಾಗ, ಆ ಕಿತ್ತಳೇ ವ್ಯಾಪಾರಿಗೆ ಬಹಳ… Read More ಅಕ್ಷರ ಸಂತ ಹರೇಕಳ ಹಾಜಬ್ಬ

ದಕ್ಷಿಣ ಕಾಶೀ ಅಂತರ ಗಂಗೆ

ಇಂದು ಈ ವರ್ಷದ  ಮೊದಲ ಕಾರ್ತೀಕ ಸೋಮವಾರ.  ಕಾರ್ತೀಕ ಸೋಮವಾರದಂದು ಶಿವನ ದರ್ಶನ ಮಾಡಿದರೆ ಅದರಲ್ಲೂ ಕಾಶೀ ವಿಶ್ವೇಶ್ವರನ ದರ್ಶನ ಮಾಡಿದಲ್ಲಿ ಹೆಚ್ಚಿನ ಪುಣ್ಯ ಲಭಿಸುತ್ತದೆ  ಎನ್ನುವುದು ಶ್ರದ್ಧಾವಂತ ಹಿಂದೂಗಳ ನಂಬಿಕೆಯಾಗಿದೆ.  ದೂರದ ಕಾಶೀಗೆ ಹೋಗಿ ಗಂಗೆಯಲ್ಲಿ ಮಿಂದು ಕಾಶೀ ವಿಶ್ವೇಶ್ವರನ ದರ್ಶನದ ಭಾಗ್ಯ ಪಡೆಯಲು ಸಾಧ್ಯವಿಲ್ಲದವರು, ಇಲ್ಲೇ ಬೆಂಗಳೂರಿಗೆ ಹತ್ತಿರವಿರುವ ದಕ್ಷಿಣ ಕಾಶಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಅಂತರಗಂಗೆಯಲ್ಲಿ  ಮಿಂದು ಕುಳಿತಲ್ಲಿಂದಲೇ ಕಾಶೀ ವಿಶ್ವೇಶ್ವರನ ದರ್ಶನ ಪಡೆಯೋಣ ಬನ್ನಿ ನಮಗೆಲ್ಲರಿಗೂ ತಿಳಿದಿರುವಂತೆ ಕೋಲಾರ  ಚಿನ್ನದ ಬೀಡು.… Read More ದಕ್ಷಿಣ ಕಾಶೀ ಅಂತರ ಗಂಗೆ

ಪಂಡಿತ ಸುಧಾಕರ ಚತುರ್ವೇದಿ

ಸಾಧಾರಣವಾಗಿ ನಾವೆಲ್ಲರೂ ಪಂಡಿತ್, ದ್ವಿವೇದಿ, ತ್ರಿವೇದಿ ಮತ್ತು ಚತುರ್ವೇದಿ ಎನ್ನುವ ಉಪನಾಮಗಳನ್ನು ಕೇಳಿರುತ್ತೇವೆ.  ಅದೆಲ್ಲವೂ ಅವರ ಕುಟುಂಬದ  ಎಷ್ಟೋ ತಲೆಮಾರಿನವರೊಬ್ಬರು ಪಂಡಿತರಾಗಿದ್ದರಂತೆ  ಅಥವಾ ಅವರು ಎರಡು, ಮೂರು ಅಥವಾ ನಾಲ್ಕುವೇದಗಳನ್ನೂ ಕರಗತ ಮಾಡಿಕೊಂಡಿದ್ದರಿಂದ ಅವರಿಗೆ ಆ ರೀತಿಯ ಹೆಸರು ಬಂದಿರುತ್ತದೆ. ಸದ್ಯಕ್ಕೆ  ಆ ವೇದದ ಗಂಧಗಾಳಿಯೂ ಗೊತ್ತಿಲ್ಲದೇ ಇದ್ದರೂ ಅವರ ಹೆಸರಿನೊಂದಿಗೆ ಸೇರಿಕೊಂಡಿರುತ್ತರೆ. ಆದರೆ ಇಲ್ಲೊಬ್ಬರು ಈ ಎಲ್ಲವನ್ನೂ ಅಧಿಕಾರಯುತವಾಗಿ ಕರಗತ ಮಾಡಿಕೊಂಡು ಚತುರ್ವೇದಿ ಎಂಬ ಬಿರುದನ್ನು ಗಳಿಸಿದ್ದ ಶತಾಯುಷಿಗಳಾಗಿದ್ದರೂ ಕನ್ನಡಿಗರಿಗೆ ಎಲೆಮರೆಕಾಯಿಯಾಗಿಯೇ ಉಳಿದು ಹೋದ ಪಂಡಿತ… Read More ಪಂಡಿತ ಸುಧಾಕರ ಚತುರ್ವೇದಿ

ಅಮ್ಮನ ಮಡಿಲು

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದಕ್ಕೇ ಆಗಲಿ ಪರ್ಯಾಯ ಸಿಗಬಹುದೇನೋ ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತೀಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಜನ್ಮ‌ ಕೊಟ್ಟ ತಾಯಿ ಮತ್ತು ಆಶ್ರಯ ನೀಡುತ್ತಿರುವ ಭೂಮಿ ತಾಯಿಗೆ ಪರ್ಯಾಯವೇ ಇಲ್ಲ‌. ಹಾಗಾಗಿ ಅವರಿಬ್ಬರೂ ಸದಾಕಾಲವೂ ಪೂಜ್ಯರು‌ ವಂದಿತರು ಮತ್ತು ಆದರಣೀಯರೇ ಸರಿ. ಒಂಭತ್ತು ತಿಂಗಳು ತನ್ನ… Read More ಅಮ್ಮನ ಮಡಿಲು

ಸ್ಯಾಕ್ಸೊಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಶುಭಕಾರ್ಯಗಳಲ್ಲಿ ಮಂಗಳವಾದ್ಯದ್ದೇ ಮುಂದಾಳತ್ವ. ಮಂಗಳ ವಾದ್ಯಗಳಿಲ್ಲದೇ ದೇವರ ಉತ್ಸವಗಳೇ ಹೊರೊಡೋದಿಲ್ಲ. ಹಾಗಾಗಿ ನಾದಸ್ವರ ಮತ್ತು ಭಾಜಾಭಜಂತ್ರಿಗಳನ್ನು ಕರ್ನಾಟಕದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಕಾಣಬಹುದಾಗಿದೆ. ಇತ್ತೀಚೆಗೆ ದೇಸೀ ನಾದಸ್ವರಗಳ ಜಾಗದಲ್ಲಿ ನಿಧಾನವಾಗಿ ಪಾಶ್ಚಾತ್ಯ ವಾದನವಾದ ಸ್ಯಾಕ್ಸಾಫೋನ್ ಆವರಿಸಿಕೊಳ್ಳುತ್ತಿದೆ. ಹಾಗೆ ದೇಸೀ ಕರ್ನಾಟಕ ಸಂಗೀತ ಪದ್ಧತಿಗೆ ಪಾಶ್ಚ್ಯತ್ಯ ವಾದನವನ್ನು ಸುಲಲಿತವಾಗಿ ಅಳವಡಿಸಿಕೊಂಡು ಅತ್ಯಂತ ಸುಶ್ರಾವ್ಯವಾಗಿ ಸ್ಯಾಕ್ಸೋಫೋನ್ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಕರಾವಳಿ ಮೂಲದ ಕದ್ರಿ ಗೋಪಾಲನಾಥ್ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು… Read More ಸ್ಯಾಕ್ಸೊಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್