ನಾವೆಲ್ಲರೂ ಒಂದೇ..

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ… Read More ನಾವೆಲ್ಲರೂ ಒಂದೇ..

ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ನಾವೆಲ್ಲಾ ಚಿಕ್ಕವರಿದ್ದಾಗ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಸಂಭ್ರಮ. ಪ್ರಯಾಣಕ್ಕೆ ಒಂದೆರಡು ದಿನಗಳ ಮಂಚೆಯೇ, ನಮ್ಮೆಲ್ಲಾ ಸ್ನೇಹಿತರಿಗೂ ರೈಲಿನಲ್ಲಿ ಹೋಗುತ್ತಿರುವುದನ್ನು ಹೇಳೀ ಅವರ ಹೊಟ್ಟೆಯನ್ನು ಉರಿಸುತ್ತಿದ್ದಲ್ಲದೇ, ರೈಲಿನಿಂದ ಪುನಃ ಹಿಂದಿರುಗಿದ ನಂತರ ಗೆಳೆಯರ ಬಳೀ ಅದೇ ಕುರಿತಾಗಿಯೇ ಮಾತು ಕತೆ. ಇನ್ನು ಎರಡು ಮೂರು ದಿನಗಳ ಮಟ್ಟಿಗೆ ಪ್ರಯಾಣಿಸಿದರಂತೂ ರೈಲಿನ ಕುಲುಕಾಟದ ಭಾಸವೇ ನಮಗಾಗುತ್ತಿತ್ತು. ಇನ್ನು ರೈಲಿನಲ್ಲಿ ಕುಳಿತುಕೊಳ್ಳಬೇಕಾದರೇ ನಾನು ಕಿಟಕಿ ಪಕ್ಕ ನಾನು ಕಿಟಕಿ ಪಕ್ಕ ಎಂದು, ಅಣ್ಣಾ ತಮ್ಮಾ, ಅಕ್ಕತಂಗಿಯರೊಂದಿಗೆ ಶರಂಪರ ಕಿತ್ತಾಡಿದ್ದೂ ಉಂಟು. ರೈಲಿನಲ್ಲಿ… Read More ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ಪುರಿ ಜಗನ್ನಾಥ ರಥಯಾತ್ರೆ

ಒರಿಸ್ಸಾದ ಪುರಿಯಲ್ಲಿ ಪ್ರತೀ ವರ್ಷವೂ ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವವಾಗಿ ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರಯ ರಥಯಾತ್ರೆಯ ಸಡಗರ ಸಂಭ್ರಮಗಳನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.… Read More ಪುರಿ ಜಗನ್ನಾಥ ರಥಯಾತ್ರೆ

ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಕನ್ನಡ ಚಲನಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಪ್ರವೇಶಿಸಿ ಈಗ ಬಹುಭಾಷಾ ನಾಯಕ ನಟನಾಗಿರುವ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಮಗ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದೆ ಈ ಕುಟುಂಬ. ಈಗಾಗಲೇ ತುಮಕೂರಿನ ಬಳಿಯಿರುವ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದ ಅರ್ಜುನ್ ಸರ್ಜಾ ಸದ್ಯದಲ್ಲಿ ಚೆನ್ನೈನಲ್ಲಿ ವಾಸವಾಗಿದ್ದಾರೆ. ಚೆನ್ನೈನ ವಿಮಾನ… Read More ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಸಾಧಾರಣವಾಗಿ ನಮಗೆ ಬಿಸಿ ನೀರಿನ ಬುಗ್ಗೆ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಇರುವ ಕುಲುವಿನ ವಶಿಷ್ಠ ಬಿಸಿನೀರಿನ ಬುಗ್ಗೆ, ಮಣಿಕರಣ್ ನ ಬಿಸಿ ನೀರಿನ ಬುಗ್ಗೆ, ಮಂಡಿ ಜಿಲ್ಲೆಯ ತಟ್ಟಪಾಣಿ, ಖಿರ್ಗಂಗಾ ಮತ್ತು ಕಸೋಲ್ ಬಿಸಿನೀರಿನ ಬುಗ್ಗೆಗಳು ಆದರೆ ಕರ್ನಾಟಕದ ದಕ್ಷಿಣ ಕನ್ನಡದ ಪುತ್ತೂರಿನ ಬಳಿಯೂ ಅದೇ ರೀತಿಯ ಬಿಸಿ ನೀರಿನ ಬುಗ್ಗೆಯಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 60 ಕಿ.ಮೀ, ಪುತ್ತೂರಿಗೆ 15 ಕಿ. ಮಿ… Read More ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ

ಇಪ್ಪತ್ತೊಂದು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ನಿವೃತ್ತ ಶಿಕ್ಷಕರೊಬ್ಬರು 07/07/2000 ದಂದು ರಕ್ಷಣಾ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ, ರಾಷ್ಟ್ರೀಯ ಭದ್ರತೆಗೆ ಯಾವುದೇ ತೊಂದರೆ ಇಲ್ಲದಿದ್ದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಪಡೆದ ಸ್ಥಳವನ್ನು ನಾನು ಮತ್ತು ನನ್ನ ಧರ್ಮಪತ್ನಿ ಭೇಟಿ ನೀಡಿ ನಮ್ಮ ಮಗನ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಅನುಮತಿ ನೀಡಬಹುದೇ? ನಿಮಗೆ ತೊಂದರೆ ಎನಿಸಿದಲ್ಲಿ ನಮ್ಮ ಕೋರಿಕೆಯನ್ನು ಹಿಂಪಡೆಯುತ್ತೇವೆ ಎಂಬುದಾಗಿ ಬರೆದಿದ್ದರು. ಇಂತಹ ಭಾವಾನಾತ್ಮಕ ಪತ್ರವನ್ನು ಓದಿದ… Read More ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ

ಜಟೋಲಿ ಶಿವ ಮಂದಿರ

ನಮ್ಮ ಭಾರತ ದೇಶ ದೇವಾಲಯಗಳ ಬೀಡು. ಪೂರ್ವದ ಅಟಕ್ ನಿಂದ ಪಶ್ಚಿಮದ ಕಟಕ್ ವರೆಗೂ ಮತ್ತು ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೂ ಎಲ್ಲೇ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲೊಂದು ದೇವಾಲಯಗಳನ್ನು ಕಾಣಬಹುದಾಗಿದೆ. ಬಹುತೇಕ ದೇಲಯಗಳು ಸಹಸ್ರಾರು ವರ್ಷಗಳಿಂದಲೂ ಅಲ್ಲಿದ್ದು ಅನೇಕ ವೈಶಿಷ್ಟ್ಯತೆ ಮತ್ತು ನಿಗೂಢತೆಗಳಿಂದ ಕೂಡಿರುತ್ತದೆ ಇಂದೂ ಸಹಾ ಅಂತಹದೇ ಐತಿಹ್ಯವಿರುವ ನಿಗೂಢವೆಂದೇ ಪರಿಗಣಿಸಲಾದ ಶಿವನ ದೇವಾಲಯದ ದರ್ಶನ ಮಾಡುವುದರ ಜೊತೆಗೆ ಆ ದೇವಾಲಯದ ಐತಿಹ್ಯ, ಅಲ್ಲಿನ ಸ್ಥಳ ಪುರಾಣ ಮತ್ತು ವಿಶೇಷತೆಗಳನ್ನು… Read More ಜಟೋಲಿ ಶಿವ ಮಂದಿರ

ಶಹೀದ್ ಉಧಮ್ ಸಿಂಗ್

ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ಕೇಂದ್ರದ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ಅಮೂಲಾಗ್ರವಾದ ಬದಲಾವಣೆ ತರಲು ಮುಂದಾಗಿದ್ದು ಅದಕ್ಕೆ ಪೂರಕವಾಗಿ ದೇಶವಾಸಿಗಳಿಂದ ಸೂಚನೆ ಮತ್ತು ಸಲಹೆಗಳನ್ನು ಕೇಳಿರುವ ಸುದ್ದಿ ಓದಿ ಮೈ ರೋಮಾಂಚನವಾಯಿತು. ಸ್ವಾತ್ರಂತ್ಯ ಬಂದು ೭೦+ ವರ್ಷಗಳ ನಂತರವೂ ಅದೇ ಅಕ್ಬರ್ ದಿ ಗ್ರೇಟ್, ಅಲೆಕ್ಶಾಂಡರ್ ದಿ ಗ್ರೇಟ್, ಆರ್ಯರು ಭಾರತಕ್ಕೆ ಬಂದರು ಎನ್ನುವ ಆಂಗ್ಲರ ಸುಳ್ಳು ಸುಳ್ಳು ಇತಿಹಾಸವನ್ನೇ ಓದಿ ಬೆಳೆದಿದ್ದ ನಾವು ಇನ್ನು ಮುಂದೆಯಾದರೂ ನಮ್ಮ ನಿಜವಾದ ರಾಜ ಮಹಾರಾಜರು ಮತ್ತು ಸ್ವಾತ್ರಂತ್ರ್ಯ ಹೋರಾಟಗಾರರ ಚರಿತ್ರೆಯನ್ನು… Read More ಶಹೀದ್ ಉಧಮ್ ಸಿಂಗ್

ದೇವಸ್ಥಾನಗಳಿಗೆ ಏಕೆ ಹೋಗಬೇಕು?

ದೇವಾಲಯಗಳು ನಮ್ಮ ಸನಾತನ ಧರ್ಮದ ಶ್ರಧ್ಧಾ ಕೇಂದ್ರಗಳು. ನಮ್ಮ ಧರ್ಮದ ಬಹುತೇಕ ಧಾರ್ಮಿಕ ಚಟುವಟಿಕೆಗಳ ಮುಖ್ಯಕೇಂದ್ರವೇ ದೇವಸ್ಥಾನಗಳಾಗಿರುತ್ತವೆ. ಹಾಗಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ದೇವಾಲಯಗಳು ಇದ್ದೇ ಇರುತ್ತವೆ. ಅದು ಬ್ರಹ್ಮ, ವಿಷ್ಣು ಇಲ್ಲವೇ ಮಹೇಶ್ವರನ ದೇವಾಯಲಗಳು ಆಗಿರಬಹುದು ಇಲ್ಲವೇ ಎಲ್ಲರೂ ಇಷ್ಟ ಪಡುವ ಕಾಳೀ, ದುರ್ಗೇ,ಗಣೇಶ ಇಲ್ಲವೇ ಆಂಜನೇಯನ ದೇವಸ್ಥಾನವೇ ಆಗಿರಬಹುದು ಇಲ್ಲವೇ ಸ್ಥಳೀಯ ಗ್ರಾಮದೇವತೆಯೇ ಆಗಿರಬಹುದು. ಒಟ್ಟಿನಲ್ಲಿ ಹಿಂದೆಲ್ಲಾ ಊರಿಗೊಂದು ದೇವಸ್ಥಾನ, ಕೆರೆ, ಅರಳೀ ಕಟ್ಟೆಗಳು ಕಡ್ಡಾಯವಾಗಿದ್ದು, ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎನ್ನುವ… Read More ದೇವಸ್ಥಾನಗಳಿಗೆ ಏಕೆ ಹೋಗಬೇಕು?