ಸಬ್ಬಸಿಗೆ ಸೊಪ್ಪಿನ ಬಾತ್

ಪ್ರತೀ ದಿನ ಬೆಳಿಗ್ಗೆ ಏನಪ್ಪಾ ತಿಂಡಿ ಮಾಡೋದೂ ಎಂಬ ಜಿಜ್ಞಾಸೆ ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವುದು ಸಹಜವಾಗಿದೆ. ಅಂತಹವರೆಲ್ಲರಿಗೂ ಥಟ್ ಅಂತಾ ಸುಲಭವಾಗಿ ಆದರೆ ಅಷ್ಟೇ ಪರಿಮಳಯುಕ್ತ, ಪೌಷ್ಥಿಕವಾದ, ರುಚಿಯಾದ ಮನೆಯವರೆಲ್ಲರೂ ಇನ್ನೂ ಬೇಕು ಮತ್ತಷ್ಟು ಬೇಕು ಎಂದು ಕೇಳಿ ಕೇಳಿ ತಿನ್ನುವಂತಹ ಸಬ್ಬಸಿಗೆ ಸೊಪ್ಪಿನ ಬಾತ್ (ಸಬ್ಬಸಿಗೆ ಚಿತ್ರಾನ್ನ) ಮಾಡುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದುಕೊಳ್ಳೋಣ. ಸಬ್ಬಸಿಗೆ ಸೊಪ್ಪಿನ ಬಾತ್ ತಯಾರಿಸಲು ಬೇಕಾಗುವ ಪದಾರ್ಥಗಳು ಅಕ್ಕಿ – 1 ಬಟ್ಟಲು ಅಡುಗೆ ಎಣ್ಣೆ – – 2… Read More ಸಬ್ಬಸಿಗೆ ಸೊಪ್ಪಿನ ಬಾತ್

ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

ಈ ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಶ್ರೀ ಅಬ್ದುಲ್ ಕಲಾಂ ಅವರ ಹೃದಯ ಶ್ರೀಮಂತಿಕೆ ಮತ್ತು ಈ ದೇಶದ ಧರ್ಮಾಚಾರಣೆಗಳಲ್ಲಿ ಅವರಿಗಿದ್ದ ಅಪರಿಮಿತ ನಂಬಿಕೆಯನ್ನು ಅವರ ಕಾಲದಲ್ಲಿ ರಾಷ್ಟ್ರಪತಿ ಭವನದ ಕಂಟ್ರೋಲರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್ ಆವರ ಅಂಗ್ಲ ಭಾಷೆಯ ಲೇಖನ ನಿಜಕ್ಕೂ ಹೃದಯವನ್ನು ತಟ್ಟಿದ ಕಾರಣ ಅದರ ಭಾವಾನುವಾವನ್ನು‌ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆಗ ತಾನೇ ಶ್ರೀ ಕಲಾಂ ಅವರು ರಾಷ್ಟ್ರಪತಿಗಳಾಗಿ ಪದವಿಯನ್ನು ಸ್ವೀಕರಿಸಿದ್ದರು. ಅವರಿಗೆ ರಾಷ್ಟ್ರಪತಿ ಭವನಕ್ಕೆ ಮೊದಲ ಬಾರಿಗೆ… Read More ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

ಉಪಕಾರ ಸ್ಮರಣೆ

ಆಂಗ್ಲ ಭಾಷೆಯಲ್ಲಿ ಒಂದು ನಾಣ್ಣುಡಿ ಇದೆ. success has many fathers, failure is an orphan. ಅಂದರೆ, ಯಾರಾದರೂ ಯಶಸ್ಸನ್ನು ಗಳಿಸಿದಲ್ಲಿ ಅದಕ್ಕೆ ಪ್ರತಿಫಲವನ್ನು ಬಯಸುವವರೇ ಹೆಚ್ಚಿನವರಿರುತ್ತಾರೆ. ಅದೇ ತಪ್ಪಾದಲ್ಲಿ ಅದಕ್ಕೆ ಹೊಣೆಗಾರರಾಗಲು ಯಾರೂ ಬಯಸುವುದಿಲ್ಲ. ಈಗಾಗಲೇ ನಮಗೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ಓಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗಳಿಸುವ ಮೂಲಕ ಹೆಮ್ಮೆ ತಂದಿದ್ದು ವೇಯ್ಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು. ಈ ಪದಕದ ಹಿಂದೆ ಇರುವ ಪರಿಶ್ರಮ ನಿಜಕ್ಕೂ ಅಧ್ಭುತ ಮತ್ತು ಅನನ್ಯವೇ… Read More ಉಪಕಾರ ಸ್ಮರಣೆ

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದ ಮೂರ್ನಾಲ್ಕು ತಿಂಗಳುಗಳಲ್ಲೇ ಗಂಡ ಹೆಂಡತಿಯರು ಬೇರಾಗುತ್ತಿರುವ ಸಂಗತಿಯ ಹಿಂದೆ ಕೇವಲ ಗಂಡ ಹೆಂಡತಿಯರಲ್ಲದೇ, ಹೇಗೆ ಮೂರನೆಯವರ ಅತಿಯಾದ ಪ್ರೀತಿ ಕಾರಣವಾಗಬಲ್ಲದು ಎಂಬ ಕುತೂಹಲಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಹೆಣ್ಣು ರೂಪದ ಆಂಜನೇಯಸ್ವಾಮಿ

ನಮಗೆಲ್ಲಾ ಗೊತ್ತಿರುವಂತೆ ಪ್ರಭು ಶ್ರೀರಾಮನ ಭಂಟ ಹನುಮಂತ ಮಹಾನ್ ಪರಾಕ್ರಮಿ. ಆತನ ಪೌರುಷವನ್ನು ಮೆಚ್ಚಿ ಕೊಂಡಾಡವರೇ ಇಲ್ಲಾ. ಶಕ್ತಿ ಮತ್ತು ಸಾಹಸಗಳಿಗೆ ಹನುಮಂತನೇ ಸಾಟಿ.. ಹಾಗಾಗಿಯೇ ಅನಾದಿಕಾಲದಿಂದಲೂ ಪ್ರತೀ ಊರುಗಳ ಹೆಬ್ಬಾಗಿಲಿನಲ್ಲಿಯೇ ಆಂಜನೇಯಸ್ವಾಮಿಯ ಗುಡಿಗಳನ್ನು ಕಟ್ಟಿಸಿ ಅದರ ಅಕ್ಕ ಪಕ್ಕಗಳಲ್ಲಿಯೇ ಗರಡೀ ಮನೆಗಳು ಇರುವುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ಪೈಲ್ವಾನರೂ ಜೈ ಭಜರಂಗಬಲಿ ಎಂದು ಹನುಮಂತನನ್ನೇ ಪ್ರಾರ್ಥಿಸಿಯೇ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಂಶಾಸ್ಪದವಿಲ್ಲದೇ ಹನುಮಂತ‌ ನಿಜವಾದ ಗಂಡಸು ಎನ್ನುವುದು ನಿರ್ವಿವಾದ. ಆದರೆ ಸ್ತ್ರೀ ರೂಪದಲ್ಲಿರುವ ಅಪರೂಪದ ಹನುಮಂತನ ದೇವಸ್ಥಾನವೊಂದು… Read More ಹೆಣ್ಣು ರೂಪದ ಆಂಜನೇಯಸ್ವಾಮಿ

ಅತ್ತೆ-ಸೊಸೆ, ಸಂಬಂಧ-ಅನುಬಂಧ

ಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು. ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ, ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ, ಮನೆಯಲ್ಲಿ ಮೂರನೆಯವರು ನಿಮ್ಮ ತಾಯಿಯೇ. ಹಾಗಾಗಿ ಅವರೇ ಅದನ್ನು ತೆಗೆದುಕೊಂಡಿದ್ದಾರೆ. ಅಲ್ಲಿಯವರೆಗೂ ಸುಮ್ಮನಿದ್ದ ಪತಿ, ತನ್ನ ತಾಯಿಯ ಮೇಲೆ ಕಳ್ಳತನದ… Read More ಅತ್ತೆ-ಸೊಸೆ, ಸಂಬಂಧ-ಅನುಬಂಧ

ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?

ಸನಾತನ ಧರ್ಮದಲ್ಲಿ ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳಿಗೆ ಹೋಗುವ ಮುಖಾಂತರ ಹಿಂದೂಗಳ ಭಾವೈಕ್ಯತೆ ಸೌಹಾರ್ದತೆಯೊಂದಿಗೆ, ನಾವೆಲ್ಲರೂ ಒಂದು ಎಂದು ಸಾರುವ ಸತ್ ಸಂಪ್ರದಾಯವನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರತಿಯೊಬ್ಬ ಹಿಂದೂವೂ ಸಹಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿಯೇ ತೀರುತ್ತಾರೆ. ಅಂತಹ ತೀರ್ಥಕ್ಷೇತ್ರಗಳಲ್ಲಿ ವಾರಣಾಸಿ ಅಥವಾ ಕಾಶಿ ಪ್ರಮುಖವಾಗಿದೆ. ಕಾಶೀಯಲ್ಲಿ ಹರಿಯುವ ಗಂಗಾ ನದಿಯ 64 ಘಾಟ್ ಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ಕಾಶೀ ವಿಶ್ವನಾಥ ಮತ್ತು ಶ್ರೀ… Read More ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?

ಕಾರ್ಗಿಲ್ ವಿಜಯ್ ದಿವಸ್‌

1999ರ ಮೇ 19 ರಿಂದ 1999 ಜುಲೈ 26ರವರೆಗೆ ಕಾರ್ಗಿಲ್ ನಲ್ಲಿ ನಡೆದ ಕದನದಲ್ಲಿ ಪಾಪೀಸ್ಥಾನವನ್ನು ನಮ್ಮ ವೀರ ಯೋಧರು ಬಗ್ಗು ಬಡಿದ ಯಶೋಗಾಥೆಯ ವೀರಗಾಥೆ ಇದೋ ನಿಮಗಾಗಿ… Read More ಕಾರ್ಗಿಲ್ ವಿಜಯ್ ದಿವಸ್‌

ಕಣ್ಣೀರು ಸುರಿಸುವ ಅಂಜನೇಯ

ಸಾಮಾನ್ಯವಾಗಿ ಮನುಷ್ಯರು ಸಂತೋಷ ಮತ್ತು ದುಃಖವನ್ನು ವ್ಯಕ್ತ ಪಡಿಸುವ ಸಲುವಾಗಿ ಕಣ್ಣೀರು ಸುರಿಸುವುದು ಸಹಜ.ಪ್ರಕ್ರಿಯೆಯಾಗಿದೆ. ಬೆಂಗಳೂರಿನ ದೇವಸ್ಥಾನವೊಂದರ ಆಂಜನೇಯಸ್ವಾಮಿ ವರ್ಷಕ್ಕೊಮ್ಮೆ ಕಣ್ಣೀರು ಸುರಿಸುವ ಆಶ್ಚರ್ಯಕರವಾದ ಸಂಗತಿಯ ಬಗ್ಗೆ ತಿಳಿದು ಕೊಳ್ಳೋಣ. ಬಾಣಸವಾಡಿ ಬೆಂಗಳೂರಿನ ಈಶಾನ್ಯಕ್ಕೆ ನಗರದ ಕೇಂದ್ರದಿಂದ ಸುಮಾರು 6-8 ಕಿ.ಮೀ ದೂರದಲ್ಲಿದ್ದು ಈ ಹಿಂದೆ ಚಿಕ್ಕ ಬಾಣಸವಾಡಿ ಮತ್ತು ದೊಡ್ಡ ಬಾಣಸವಾಡಿ ಎಂಬ ಎರಡು ಗ್ರಾಮಗಳು ಇದ್ದವು. ಹೆಚ್ಚಾಗುತ್ತಿರುವ ನಗರೀಕರಣದಿಂದ ಈ ಎರಡೂ ಹಳ್ಳಿಗಳೂ ಕಣ್ಮರೆಯಾಗಿ ಕೇವಲ ದೊಡ್ಡ ಬಾಣಸವಾಡಿ ಎಂಬ ಸುಸಜ್ಜಿತವಾದ ಬಡಾವಣೆಯು ಇಂದು… Read More ಕಣ್ಣೀರು ಸುರಿಸುವ ಅಂಜನೇಯ