ಬ್ರಾಹ್ಮಣರು ಭಾರತೀಯರಲ್ಲವೇ? ಬ್ರಾಹ್ಮಣರಿಗೆ ಭಾರತದಲ್ಲಿ ಜೀವಿಸುವ ಹಕ್ಕಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಮಟ್ಟಿಗೆ ಕೇಳುತ್ತಿರುವುದು ಎರಡು ವಿಷಯ ಒಂದು ಕೊರೋನ ಕುರಿತಾದ ವಿಷಯವಾದರೆ, ಇನ್ನೊಂದು ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ ವಿರುದ್ಧ ಅನಾವಶ್ಯಕವಾಗಿ ತಮ್ಮ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವಷ್ಟು ವಾಚಾಮಗೋಚರವಾಗಿ ಕಂಡ ಕಡೆಗೆಳಲ್ಲಿ ಬೈದಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಮಂದಿಗಳೇ ಹೆಚ್ಚಾಗಿದ್ದಾರೆ. ಮೇಲೆ ತಿಳಿಸಿದ ಎರಡೂ ವಿಷಯಗಳೂ ಒಂದಕ್ಕೊಂದು ಪೂರಕವಾಗಿದೆ ಅಂದ್ರೇ ಆಶ್ಚರ್ಯವಾಗುತ್ತದೆ ಅಲ್ವೇ? ನಿಜ ಹೇಳ್ಬೇಕು ಅಂದ್ರೇ, ಬಹಳ ಹಿಂದಿನಿಂದಲೂ ನಮ್ಮಲ್ಲಿ ತಮ್ಮ ಕರ್ಮಾನುಸಾರವಾಗಿ ವರ್ಣಾಶ್ರಮಗಳು ರೂಢಿಯಲ್ಲಿ ಇತ್ತೇ ಹೊರತು ಅವು ಜನ್ಮತಃ ಆಚರಣೆಯಲ್ಲಿರಲಿಲ್ಲ, ಯಾರು ಬ್ರಹ್ಮತ್ವವನ್ನು… Read More ಬ್ರಾಹ್ಮಣರು ಭಾರತೀಯರಲ್ಲವೇ? ಬ್ರಾಹ್ಮಣರಿಗೆ ಭಾರತದಲ್ಲಿ ಜೀವಿಸುವ ಹಕ್ಕಿಲ್ಲವೇ?

ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಕೊರೋನಾ ಬಂದು ಇಡೀ ಪ್ರಪಂಚವೇ ಕಳೆದು ಒಂದೂವರೆ ವರ್ಷಗಳಿಂದ ಲಾಕ್ಡೌನ್ ಆಗಿರುವಾಗ ಅರೇ ಇದೇನಪ್ಪಾ ಇಂತಹ ಶೀರ್ಷಿಕೆ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮಗೊಂದು ಅಚ್ಚರಿಯ ಸಂಗತಿಗಳೊಂದಿಗೆ ನಿಮಗೆ ಸಾದರ ಪಡಿಸುವ ಸಣ್ಣದಾದ ಪ್ರಯತ್ನ ಕೊರೋನಾ ವಕ್ಕರಿಸುವುದಕ್ಕಿಂತಲೂ ಮುಂಚೆ, ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಸಮಾರಂಭಗಳೂ ಸಹಾ ಬಹಳ ಅದ್ದೂರಿಯಿಂದ ನೂರಾರು ಜನರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇನ್ನೂ ಮದುವೆ ಮುಂಜಿ ಉಪನಯನಗಳಲ್ಲಂತೂ ಸಾವಿರಾರು ಜನರನ್ನು ಸೇರಿಸಿ ನಭೂತೋ ನ ಭವಿಷ್ಯತಿ ಎನ್ನುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜಾಂ… Read More ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಜೂನ್ 25, 1975 ಲೋಕತಂತ್ರ ಕರಾಳ ದಿನ

1975-77ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಅದರ ಪರವಾಗಿ ಇಲ್ಲವೇ ಅದರ ವಿರುದ್ಧ ಯಾವುದೇ ರೀತಿಯಲ್ಲಿ ಭಾಗವಹಿಸಿದ್ದರೂ, ಶಿಕ್ಷೆಗೆ ಒಳಗಾಗಬಹುದು ಎಂಬುದನ್ನು ಅರಿತಿದ್ದರೂ, ಅದೆಲ್ಲವನ್ನೂ ಲೆಖ್ಖಿಸದೇ ದೇಶದ ಏಕತೆಗಾಗಿ ಮತ್ತು ಸರ್ವಾಧಿಕಾರಿ ಧೋರಣೆಯ ವಿರುದ್ಧವಾಗಿ ನಮ್ಮ ಕೈಲಾದ ಮಟ್ಟಿಗೆ ನಮ್ಮ ಕುಟುಂಬ ಪಾಲ್ಕೊಂಡಿದ್ದ ರೋಚಕತೆ ಇದೋ ನಿಮಗಾಗಿ… Read More ಜೂನ್ 25, 1975 ಲೋಕತಂತ್ರ ಕರಾಳ ದಿನ

ಎಲ್ಲಾ ಪೋಲೀಸರೂ ಕೆಟ್ಟವರಲ್ಲಾ

ನಾವೆಲ್ಲಾ ಚಿಕ್ಕವರಿದ್ದಾಗ ನಾವೇನಾದರೂ ತಪ್ಪು ಮಾಡಿದಲ್ಲಿ ಅಥವಾ ಹಠ ಮಾಡಿದಲ್ಲಿ ಪೋಲೀಸರಿಗೆ ಹಿಡಿದು ಕೊಡ್ತೀವಿ ಎಂದು ಭಯ ಪಡಿಸುತ್ತಿದ್ದದ್ದು ಸಹಜವಾಗಿತ್ತು. ಇತ್ತೀಚೆಗೆ ಸಣ್ ವಯಸ್ಸಿನ ಮಗುವೊಂದು ದಾರಿಯಲ್ಲಿ ಹಠ ಮಾಡುತ್ತಿದ್ದಾಗ ಅಲ್ಲೇ ಹೋಗುತ್ತಿದ್ದ ಪೋಲೀಸರನ್ನು ತೋರಿಸಿ ಇದೇ ರೀತಿ ಗಲಾಟೆ ಮಾಡುತ್ತಿದ್ದರೆ, ಆ ಪೋಲೀಸರಿಗೆ ಹಿಡಿದು ಕೊಡುತ್ತೇನೇ ಎಂಬುದನ್ನು ಕೇಳಿಸಿಕೊಂಡ ಆ ಪೋಲಿಸರು ಅಮ್ಮಾ, ಸುಖಾ ಸುಮ್ಮನೇ ಮಕ್ಕಳಿಗೆ ಪೋಲೀಸರನ್ನು ಕಂಡರೆ ಭಯ ಹುಟ್ಟಿಸ ಬೇಡಿ. ನಾವೂ ಸಹಾ ಸಹಜವಾದ ಮನುಷ್ಯರೇ ಎಂದು ಹೇಳಿದ್ದಲ್ಲದೇ ತಮ್ಮ ಜೋಬಿನಲ್ಲಿದ್ದ… Read More ಎಲ್ಲಾ ಪೋಲೀಸರೂ ಕೆಟ್ಟವರಲ್ಲಾ

ಕಾರ ಹುಣ್ಣಿಮೆ

ನವರಾತ್ರಿಯಲ್ಲಿ ಆಯುಧಗಳಿಗೆ ಪೂಜೆ ಮಾಡುವಂತೆ, ಜೇಷ್ಠ ಮಾಸದ ಹುಣ್ಣಿಮೆಯಂದು ಉತ್ತರ ಕರ್ನಾಟಕದ ರೈತಾಪಿ ಜನರು ಮಳೆಗಾಲದ ಮುಂಚೆ ಸಡಗರ ಸಂಭ್ರಮಗಳಿಂದ ತಮ್ಮ ದನ ಕರುಗಳೊಂದಿಗೆ ಆಚರಿಸುವ ಕಾರಹುಣ್ಣಿಮೆಯ ಬಗ್ಗೆ ಸವಿರವಾದ ವಿವರಗಳು ಇದೋ ನಿಮಗಾಗಿ… Read More ಕಾರ ಹುಣ್ಣಿಮೆ

ಬಿ ವಿಜಯಕೃಷ್ಣ

ಅದು ಎಪ್ಪತ್ತು ಮತ್ತು ಎಂಭತ್ತರ ದಶಕ. ಕರ್ನಾಟಕ ರಾಜ್ಯದ ರಣಜಿ ತಂಡದಲ್ಲಿ ಘಟಾನುಘಟಿಗಳು ಇದ್ದಂತಹ ಕಾಲ. ಕಾರ್ಲ್ಟನ್ ಸಲ್ಡಾನ, ಬಿನ್ನಿ, ಅಭಿರಾಂ, ಸುಧಾಕರ್ ರಾವ್, ಎ ವಿ ಜಯಪ್ರಕಾಶ್, ಬ್ರಿಜೇಶ್ ಪಟೇಲ್, ಅವಿನಾಶ್ ವೈದ್ಯ, ರಘುರಾಂ ಭಟ್ ಅವರುಗಳು ಇದ್ದ ಕಾಲ. ಅವರ ಜೊತೆಯಲ್ಲಿಯೇ ಮತ್ತೊಬ್ಬ ಸಧೃಢವಾದ ಚಂಡು ಇರುವುದೇ ಬಾರೀ ಹೊಡೆತಕ್ಕೇ ಎಂದು ಭರ್ಜರಿಯಾಗಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ಇನ್ನು ಚಂಡನ್ನು ಕೈಯಲ್ಲಿ ಹಿಡಿದು ಬೋಲಿಂಗ್ ಮಾಡಿದರೆ ದಾಂಡಿಗರನ್ನು ವಂಚಿಸಿ ಸೀದಾ ವಿಕೆಟ್ ಉರುಳಿಸುತ್ತಿದ್ದಂತಹ ಚಾಣಾಕ್ಷ… Read More ಬಿ ವಿಜಯಕೃಷ್ಣ

ಹಾರುವ ಸಿಖ್, ಮಿಲ್ಕಾ ಸಿಂಗ್

ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಭಾರತದ ಪರ 31ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ 1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಇದೇ ಓಟಗಾರ, ಸಾಕಷ್ಟು ಅನುಭವವಿಲ್ಲದ ಕಾರಣ ಅಷ್ಟೆನೂ ಸಾಧನೆ ಮಾಡಲಾಗದಿದ್ದರೂ, ಆ ಕ್ರೀಡಾಕೂಟದಿಂದ ಕಲಿತು,… Read More ಹಾರುವ ಸಿಖ್, ಮಿಲ್ಕಾ ಸಿಂಗ್

ನೀರು ಓಕೆ. ಕೃತಕ‌ ಪಾನೀಯ ಏಕೆ?

ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಯೂರೋ 2020 ಟೂರ್ನಿಯಲ್ಲಿ ಪೋರ್ಚುಗಲ್ ತನ್ನ ಮೊದಲ ಪಂದ್ಯವನ್ನು ಆಡುತ್ತಲಿತ್ತು. ಸಹಜವಾಗಿ ಪಂದ್ಯ ಆಡುವ ಮುನ್ನ ತಂಡದ ಮ್ಯಾನೇಜರ್ ಮತ್ತು ತಂಡದ ನಾಯಕರ ಪ್ರೆಸ್ ಕಾನ್ಫರೆನ್ಸ್ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ಸಂವಾದ ಪ್ರಪಂಚಾದ್ಯಂತ ಪ್ರಸಾರವಾಗುವ ಕಾರಣ, ಟೂರ್ನಿಯ ಪ್ರಾಯೋಜಕರಾದ ಕೋಕೋಕೋಲ ಇದರ ಪ್ರಯೋಜನವನ್ನು ಪಡೆಯುವ ಸಲುವಾಗಿ ಸಂವಾದ ನಡೆಸುವವರ ಟೇಬಲ್ ಮುಂದೆ ಸಣ್ಣದಾದ ಎರಡು ಕೋಕ್ ಬಾಟಲ್ ಗಳನ್ನು ಇಟ್ಟಿದ್ದರು. ಮೊದಲು ಈ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಪೋರ್ಚುಗಲ್ ತಂಡದ ಮ್ಯಾನೇಜರ್… Read More ನೀರು ಓಕೆ. ಕೃತಕ‌ ಪಾನೀಯ ಏಕೆ?

ಸಮಸ್ಯೆ ಒಂದು ಪರಿಹಾರ ನೂರು

ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ‌ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ… Read More ಸಮಸ್ಯೆ ಒಂದು ಪರಿಹಾರ ನೂರು