ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಗುರು ವಿದ್ಯಾರಣ್ಯರು ತಮ್ಮ ಪಾಂಡಿತ್ಯವನ್ನೆಲ್ಲಾ ಧಾರೆ ಎರೆದು ಮತ್ತು ಅಷ್ಟೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು 3600 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ವೈಭವದಿಂದ ಮೆರೆಯಬೇಕು ಎಂದು ಬಯಸಿದ್ದರೂ, ವಿಧಿಯಾಟದ ಮುಂದೆ ಅವರ ಯೋಜನೆಗಳೆಲ್ಲವೂ ತಲೆಕೆಳಗಾದ ಘನ ಘೋರ ಇತಿಹಾಸ ಇದೋ ನಿಮಗಾಗಿ… Read More ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಸೌರಶಕ್ತಿಯ ಮಿಲಿಟರಿ ಡೇರೆಗಳು

ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ… Read More ಸೌರಶಕ್ತಿಯ ಮಿಲಿಟರಿ ಡೇರೆಗಳು

ರವೇ ಪಾಯಸ

ನಮ್ಮೆಲ್ಲರಿಗೂ ತಿಳಿದಿರುವಂತೆ ತಂದೆ ತಾಯಿಯರನ್ನು ಹೊರತು ಪಡಿಸಿ ಕಣ್ಣಿಗೆ ಕಾಣುವ ದೇವರುಗಳೆಂದರೆ ಸೂರ್ಯ ಮತ್ತು ಚಂದ್ರ. ಇವತ್ತು ರಥಸಪ್ತಮಿ ಅರ್ಥಾತ್ ಸೂರ್ಯನ ಹುಟ್ಟು ಹಬ್ಬ ಎಂದರೂ ತಪ್ಪಾಗಲಾರದು. ಹಾಗಾಗಿ ಸೂರ್ಯನ ಪ್ರಿಯವಾದ ನೈವೇದ್ಯವಾದ ರವೇ ಪಾಯಸ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-5 ಜನರು ಸವಿಯಬಹುದಾದಷ್ಟು ರವೇ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಸಣ್ಣ ರವೆ – 1 ಬಟ್ಟಲು ಗಸಗಸೆ – 1 ಚಮಚ ಬೆಲ್ಲದ ಪುಡಿ – 3… Read More ರವೇ ಪಾಯಸ

ರೋಲ್ಸ್ ರಾಯ್ ಗರ್ವಭಂಗ

ಅದು 1920ರ ಸಮಯ ಅಲ್ವಾರ್ ಮಹಾರಾಜ ಜೈ ಸಿಂಗ್ ಪ್ರಭಾಕರ್ ಅವರು  ಅಸಾಧಾರಣ ಶ್ರೀಮಂತರಾಗಿದ್ದರು, ಸುಮಾರು ಹತ್ತಾರು ತಲೆಮಾರುಗಳ ಕಾಲ ಸುಮ್ಮನೇ ಕುಳಿತು ತಿಂದರೂ ಕರಗದಷ್ಟು ಆಸ್ತಿ ಅವರ ಬಳಿ ಇತ್ತು. ಅದೊಮ್ಮೆ ಅವರು  ಲಂಡನ್ನಿಗೆ ಹೋಗಿದ್ದಾಗ ನಗರ ಪ್ರದಕ್ಷಿಣೆಗಾಗಿ ಸಾಧಾರಣವಾದ ಬಟ್ಟೆಗಳನ್ನು ಧರಿಸಿ, ಯಾವುದೇ ಆಳುಗಳ ಬೆಂಗಾವಲು ಇಲ್ಲದೇ ಹೋಗುತ್ತಿದ್ದಾಗ ಅವರು  ರಸ್ತೆಯಲ್ಲಿದ್ದ ರೋಲ್ಸ್ ರಾಯ್ಸ್ ಕಾರಿನ ಶೋ ರೂಂ ನೋಡಿದರು.  1906 ರಲ್ಲಿ ಆರಂಭವಾದ ರೋಲ್ಸ್ ರಾಯ್ಸ್  ಬ್ರಾಂಡ್ 1920ರ ಹೊತ್ತಿಗೆ ವಿಶ್ವದ ನಂಬರ್… Read More ರೋಲ್ಸ್ ರಾಯ್ ಗರ್ವಭಂಗ

ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ ಕೆ.ಅರ. ಪೇಟೆ ಯಿಂದ 18.ಕಿ.ಮಿ.,ಮೈಸೂರಿನಿಂದ 43 ಕಿ.ಮಿ. ದೂರದಲ್ಲಿದೆ. ಮೈಸೂರಿನಿಂದ ಕೆ.ಆರ್.ಎಸ್ ಮಾರ್ಗವಾಗಿ ಕನ್ನಂಬಾಡಿ ಊರನ್ನು ದಾಟಿ ಕೆ.ಆರ್.ಎಸ್ ಹಿನ್ನಿರನ್ನು ಅನುಸರಿಸಿಕೊಂಡು ಅರ್ಧ ಮುಕ್ಕಾಲು ಗಂಟೆ ಪ್ರಯಣಿಸಿದರೆ,  ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ನಿರ್ಮಾಣದ ಹಂತದಲ್ಲಿರುವ ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ  ದೇವಾಲಯವನ್ನು ಕಾಣಬಹುದಾಗಿದೆ. ಬೆಂಗಳೂರಿನಿಂದ ಬರುವ ಭಕ್ತಾದಿಗಳು ಮಂಡ್ಯ ಮತ್ತು ಶ್ರೀ ರಂಗಪಟ್ಟಣ ಮಾರ್ಗವಾಗಿ ಬಂದು… Read More ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ

ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕ್ಕಿಗೂ ಮತ್ತು ಕನ್ನಡ ಸಾರಸ್ವತ ಲೋಕಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಕವಿ, ಕನ್ನಡಕ್ಕೆ ಮೊತ್ತ ಮೊದಲ ಜ್ಣಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು, ಅವರ ಮಗ ಶ್ರೀ ಪೂರ್ಣಚಂದ್ರ ತೇಜಸ್ವೀ, ಕಾಂಬರಿಗಾರ್ತಿ ಶ್ರೀಮತಿ ಎಂ. ಕೆ. ಇಂದಿರಾ, ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ಕೂಡ್ಲು ರಾಮಕೃಷ್ಣ, ರಾಜಕೀಯ ಧುರೀಣರಾದ ಶ್ರೀ ಶಾಂತವೇರಿ ಗೋಪಾಲ ಗೌಡರ ಜೊತೆ ಕರ್ನಾಟಕದ ಘನತೆ ಮತ್ತು ಗೌರವವನ್ನು ದೇಶಾದ್ಯಂತ… Read More ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ಮೂಲಂಗಿ ಚೆಟ್ನಿ

ಚೆಟ್ನಿ ಅಂದ ತಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ಕಾಯಿ ಚೆಟ್ನಿ, ಹುರಿಗಡಲೆ ಇಲ್ಲವೇ ಕಡಲೇಕಾಯಿ ಬೀಜ ಚಟ್ನಿ. ಅಪರೂಪಕ್ಕೆ ಈರುಳ್ಳಿ ಚೆಟ್ನಿ ಇಲ್ಲವೇ ಟೋಮ್ಯಾಟೋ ಚಟ್ನಿ ಸಹಾ ಮಾಡುತ್ತಾರೆ. ಎಲ್ಲೆಡೆಯಲ್ಲಿಯೂ ಬಹಳ ಸುಲಭವಾಗಿ ಸಿಗುವ ಮತ್ತು ಅರೋಗ್ಯಕರವಾಗಿರುವ ಮೂಲಂಗಿ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೂಲಂಗಿ ಚೆಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ದೊಡ್ಡ ಗಾತ್ರದ ಮೂಲಂಗಿ- 1 ಒಣ ಮೆಣಸಿನಕಾಯಿ- 2-3 ಕೊತ್ತಂಬರಿ… Read More ಮೂಲಂಗಿ ಚೆಟ್ನಿ

ಚಿಂಟು ಕಾಣೆಯಾಗಿದ್ದಾನೆ

ಮನುಷ್ಯ ಸಂಘಜೀವಿ. ಹಾಗಾಗಿ ಒಬ್ಬಂಟಿಯಾಗಿ ಇರಲು ಮನಸ್ಸಾಗದೇ ಕುಟುಂಬವನ್ನು ಬೆಳಸಿಕೊಂಡ. ಹಾಗೆಯೇ ತನ್ನ ಜೊತೆಯಲ್ಲಿ ಹಸುಗಳು, ಎಮ್ಮೆ, ನಾಯಿ, ಬೆಕ್ಕು, ಕೋಳಿ, ಕುರಿ, ಆಡು, ಗಿಳಿ, ಪಾರಿವಾಳಗಳಂತಹ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು ಸಾಕತೊಡಗಿದ. ಈ ಸಾಕು ಪ್ರಾಣಿಗಳು/ಪಕ್ಷಿಗಳು ನ್ನು ತನ್ನ ಹೆತ್ತ ಮಕ್ಕಳಂತೆಯೇ ಜತನದಿಂದ ನೋಡಿಕೊಳ್ಳುತ್ತಿದ್ದ ಕಾರಣ ಅವುಗಳೂ ಸಹಾ ಮನುಷ್ಯನಿಗೆ ಅತ್ಯಂತ ಪ್ರೀತಿಯನ್ನು ತೋರಿಸುತ್ತಿದ್ದವು. ಅದರಲ್ಲಿಯೂ ನಾಯಿಗಳಂತೂ ಅತ್ಯಂತ ನಂಬಿಕಸ್ತ ಪ್ರಾಣಿಗಳೆನಿಸಿ ಮನುಷ್ಯರಿಗೆ ಅತ್ಯಂತ ಪ್ರೀತಿ ಪಾತ್ರರೆನಿಸಿಕೊಂಡವು. ಮಹಾಭಾರತದಲ್ಲಿ ಜೀವಂತವಾಗಿಯೇ ಸ್ವರ್ಗಲೋಕವನ್ನು ತಲುಪಿದ ಧರ್ಮರಾಯನೊಂದಿಗೆ… Read More ಚಿಂಟು ಕಾಣೆಯಾಗಿದ್ದಾನೆ

ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ