ಹೊಟ್ಟೇ ತುಂಬಾ ಊಟ ಮಾಡಿ, ಇಷ್ಟ ಬಂದಷ್ಟು ಹಣ ಕೊಡಿ.

ಸಾಮಾನ್ಯವಾಗಿ ಬಹುತೇಕ ಮಧ್ಯಮವರ್ಗದ ಜನರು ಹೋಟೇಲ್ಲಿಗೆ ಹೋದ ತಕ್ಷಣ ಸರ್ವರ್ ಮೆನು ಕಾರ್ಡ್ ಕೈಗೆ ಕೊಟ್ಟೊಡನೆಯೇ ಅದರಲ್ಲಿ ಯಾವ ಯಾವ ಖಾದ್ಯಗಳಿವೆ ಎಂಬುದನ್ನು ನೋಡುವುದಕ್ಕಿಂತಲೂ ಯಾವುದರ ಬೆಲೆ ಎಷ್ಟಿದೆ? ನಮ್ಮಬಳಿ ಇರುವ ಬೆಲೆಗೆ ಯಾವ ತಿಂಡಿ ಸರಿ ಹೊಂದಬಹುದು ಎಂದೇ ಲೆಖ್ಖಾಚಾರ ಹಾಕುವುದು ಸರ್ವೇ ಸಾಮಾನ್ಯ. ಕೆಲವು ವರ್ಷಗಳ ಹಿಂದೆ ನಮ್ಮ ಮಕ್ಕಳನ್ನು ಒಂದು ದೊಡ್ಡ ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾಗ ನಮ್ಮ ಮಗಳು ಆ ಹೋಟೇಲ್ಲಿನ ಖಾದ್ಯಗಳ ಬೆಲೆಯನ್ನು ನೋಡಿದ ಕೂಡಲೇ ಅಪ್ಪಾ, ಈ ಹೋಟೇಲ್… Read More ಹೊಟ್ಟೇ ತುಂಬಾ ಊಟ ಮಾಡಿ, ಇಷ್ಟ ಬಂದಷ್ಟು ಹಣ ಕೊಡಿ.

ಜಾತ್ಯಾತೀತತೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಎಲ್ಲಾ ಡಾಟ್ ಕಾಂ ಕಂಪನಿಗಳು ಇದ್ದಕ್ಕಿಂದ್ದಂತೆಯೇ ಕುಸಿದು ಹೋಗಿ ಅನೇಕ ಉದ್ಯೋಗಸ್ಥರು ರಾತ್ರೋ ರಾತ್ರಿ ನಿರುದ್ಯೋಗಿಗಳಾಗಿ ಹೋಗಿದ್ದರು. ಸುಮಾರು ಐದಾರು ತಿಂಗಳುಗಳ ಕಾಲ ಚೇತರಿಸಿಕೊಂಡು ಒಂದೊಂದೇ ಸಣ್ಣ Startups ಕಂಪನಿಗಳು ಆರಂಭವಾಗಿದ್ದ ಕಾಲ. ಭಾರತೀಯರೇ ಆದರಲ್ಲೂ ಹಿಂದೂಗಳೇ ಆಗಿದ್ದವರೊಬ್ಬರು ಸುಮಾರು ವರ್ಷಗಳ ಕಾಲ ಅಮೇರೀಕಾದಲ್ಲಿ ಉದ್ಯೋಗ ಮಾಡುತ್ತಲೇ ಅಲ್ಲಿಯೇ ಒಂದು ಕಂಪನಿಯೊಂದನ್ನು ಆರಂಭಿಸಿ, ಬೆಂಗಳೂರಿನಲ್ಲಿ ತಮ್ಮ ಮತ್ತೊಂದು Indian MNC ಶಾಖೆಯೊಂದರನ್ನು ಜೂನ್ ತಿಂಗಳಿನಲ್ಲಿ ಆರಂಭಿಸಿದ ಕಾಲದಲ್ಲಿ ನಾನು ಆ… Read More ಜಾತ್ಯಾತೀತತೆ

ಮಾತೃ ಭಿಕ್ಷೆ, ಸಹಪಂಕ್ತಿ ಭೋಜನ

ಸುಮಾರು 175 ವರ್ಷಗಳ ಹಿಂದಿನ ಘಟನೆ. ಧನ್ಯಾ ಎಂಬ 50ರ ಪ್ರಾಯದ ಕೆಳಜಾತಿಗೆ ಸೇರಿದ ಮಹಿಳೆ ಒಬ್ಬರು ಅವರು ಕೆಲಸ ಮಾಡುತ್ತಿದ್ದ ಮನೆಯ 5 ವರ್ಷದ ಬ್ರಾಹ್ಮಣ ಹುಡುಗನನ್ನು ಬಲು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಅಕೆಗೆ ಆ ಬಾಲಕನ ಮೇಲೆ ಬಲು ಪ್ರೀತಿ. ಆತನೀಗೂ ಅಕೆಯೆಂದರೆ ಬಲು ಅಕ್ಕರೆ ಹಾಗಾಗಿ ಅವರಿಬ್ಬರೂ ಬಹಳ ಅನ್ಯೋನ್ಯತೆಯಿಂದ್ದಿದ್ದರು. ಅದೊಂದು ದಿನ ಆಕೆ ಆ ಬಾಲಕನೊಂದಿಗೆ ಒಂದು ವಿಷಯವನ್ನು ನಿವೇದಿಸಿಕೊಂಡಾಗ ಕೂಡಲೇ ಆ ಬಾಲಕ ಆಕೆಯ ಇಚ್ಛೆಯನ್ನು ಖಂಡಿತವಾಗಿಯೂ ನೆರವೇರಿಸಿಕೊಡುತ್ತೇನೆ ಎಂದು ಭಾಷೆ… Read More ಮಾತೃ ಭಿಕ್ಷೆ, ಸಹಪಂಕ್ತಿ ಭೋಜನ

ನೋಡುವ ದೃಷ್ಟಿಕೋನ

ಈ ಚಿತ್ರವನ್ನು ನೋಡಿದಾಕ್ಷಣವೇ, ಅರೇ ಇದೇನಿದು ಅಶ್ಲೀಲ ಚಿತ್ರವನ್ನು ಹಾಕಿದ್ದಾರಲ್ಲಾ ಎಂದು ಯೋಚಿಸಬಹುದು. ಇಲ್ವೇ, ಇದೇನಿದು? ಸೆರೆಮನೆಯಲ್ಲಿರುವ ಈ ಇಳೀ ವಯಸ್ಸಿನವ ಸಣ್ಣ ವಯಸ್ಸಿನ ಹುಡುಗಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿದ್ದಾರಲ್ಲಾ? ಎಂಬ ಅನುಮಾನವೂ ಮೂಡಿ ಬರಬಹುದು ಆದರೆ ಈ ಪ್ರಸಂಗದ ಹಿಂದಿನ ಐತಿಹಾಸಿಕ ಕರಾಳ ಕಥನವನ್ನು ತಿಳಿದರೇ ಎಲ್ಲರಿಗೂ ಬೇಸರವಾಗುವುದಲ್ಲದೇ ಮಮ್ಮಲ ಮರುಗದೇ ಇರುವುದಿಲ್ಲ. ಫ್ರಾನ್ಸ್‌ನಲ್ಲಿ ಲೂಯಿಸ್‌ XIV ಆಳ್ವಿಕೆಯ ಕಾಲದಲ್ಲಿ ವಯಸ್ಸಾದ ವೃದ್ಧರೊಬ್ಬರು ಹಸಿವಿನಿಂದಾಗಿ ರೊಟ್ಟಿಯನ್ನೂ ಕೊಳ್ಳಲೂ ಹಣವಿಲ್ಲದಿದ್ದ ಕಾರಣ ಅಂಗಡಿಯೊಂದರಲ್ಲಿ ರೊಟ್ಟಿಯೊಂದನ್ನು ಕದ್ದಿದ್ದಕ್ಕಾಗಿ ಆ ಬಡ… Read More ನೋಡುವ ದೃಷ್ಟಿಕೋನ

ಹಂಪೆಯ ಬಡವಿ ಲಿಂಗ ಪೂಜಿಸುವ ಶ್ರೀ ಕೃಷ್ಣ ಭಟ್ಟರು

ಹದಿಮೂರನೇ ಶತಮಾನದಲ್ಲಿ ಗುರು ವಿದ್ಯಾರಣ್ಯರ ಪ್ರೇರಣೆಯಿಂದ ಹಕ್ಕ ಬುಕ್ಕರ ಸಾರಥ್ಯದಲ್ಲಿ ಮುಸಲ್ಮಾನರ ದಬ್ಬಾಳಿಕೆಯನ್ನು ಮೆಟ್ಟಿನಿಂತು ವಿಜಯನಗರ ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ. ನಮಗೆಲ್ಲರಿಗೂ ತಿಳಿದಂತಹ ವಿಷಯ. ಇದೇ ವಿಜಯನರಗರದ ರಾಜಧಾನಿಯಾಗಿದ್ದ ಹಂಪೆ ಮುಂದೆ ಕೃಷ್ಣದೇವರಾಜನ ಆಳ್ವಿಕೆಯ ಸಮಯದಲ್ಲಿ ಮುತ್ತು ರತ್ನಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದಂತಹ ಸಮೃದ್ಧ ಸಾಮ್ರಾಜ್ಯವಾಗಿತ್ತು ಎಂದು ಕೇವಲ ನಮ್ಮ ಇತಿಹಾಸಕಾರರಲ್ಲದೇ, ವಿದೇಶೀ ಇತಿಹಾಸಕಾರರೂ ನಮೂದಿಸಿದ್ದಾರೆ. ಇಂತಹ ಕೇವಲ ಆರ್ಥಿಕವಾಗಲ್ಲದೇ ಶಿಲ್ಪಕಲೆ. ಸಂಗೀತ, ಸಾಹಿತ್ಯಗಳಲ್ಲಿಯೂ ಸಮೃದ್ಧವಾಗಿದ್ದಂತಹ ನಾಡಾಗಿತ್ತು. ವಿಜಯನಗರ ಸಾಮ್ರಾಜ್ಯದ ಉಚ್ಫ್ರಾಯ… Read More ಹಂಪೆಯ ಬಡವಿ ಲಿಂಗ ಪೂಜಿಸುವ ಶ್ರೀ ಕೃಷ್ಣ ಭಟ್ಟರು

ಕಿತ್ತಳೇಹಣ್ಣಿನ ಸಿಪ್ಪೆಯ ಗೊಜ್ಜು

ಈಗೆ ಕಿತ್ತಳೇ ಹಣ್ಣಿನ ಸೀಜನ್. ಎಲ್ಲಾ ಕಡೆಯಲ್ಲಿಯೂ ಸುಲಭವಾಗಿ ಕೆಜಿಗೆ 30-40 ರೂಪಾಯಿಗಳಿಗೆಲ್ಲಾ ಕಿತ್ತಳೆ ಹಣ್ಣು ಸಿಗುತ್ತಿದೆ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೇ ಹಣ್ಣಿನ ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ಮತ್ತು ರಕ್ತ ಪರಿಶುದ್ಧಗೊಳಿಸುತ್ತದೆ ಜಠರದ ಆರೋಗ್ಯವನ್ನೂ ಕಾಪಾಡುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಕಿತ್ತಳೇ ಹಣ್ಣನ್ನು ಮಾತ್ರವೇ ತಿಂದು ಇಲ್ಲವೇ ಅದರ ಜ್ಯೂಸ್ ಮಾಡಿಕೊಂಡು ಸೇವಿಸುತ್ತೇವೆಯೇ ಹೊರತೂ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ನಿಜವಾದ ಸತ್ವ ಇರುವುದೇ ಕಿತ್ತಳೇ ಸಿಪ್ಪೆಯಲ್ಲಿಯೇ ಎಂದರೆ ಆಶ್ಚರ್ಯವಾಗುತ್ತದೆ. ಹಾಗಾಗಿಯೇ ನಾವಿಂದು… Read More ಕಿತ್ತಳೇಹಣ್ಣಿನ ಸಿಪ್ಪೆಯ ಗೊಜ್ಜು

ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು… Read More ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಪಂಚಾಮೃತ ಮತ್ತು ಪಂಚಲೋಹ

ಸಾಧಾರಣವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಿಗೂ ಬೆಳಗ್ಗೆ ಹೋದಾಗ ತೀರ್ಥದ ರೂಪದಲ್ಲಿ ಪಂಚಾಮೃತ ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸಿದ ನಂತರ ತುಳಸೀ ಮತ್ತು ಪಚ್ಚ ಕರ್ಪೂರ ಹಾಕಿದ ತೀರ್ಥವನ್ನು ಕೊಡುವುದನ್ನು ನಾವು ನೋಡಿದ್ದೇವೆ. ಪ್ರತೀ ದಿನ ದೇವರ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ,ಜೊತೆಗೆ ಬಾಳೆಹಣ್ಣು, ಎಳನೀರು, ನೀರಿನ ಮುಖಾಂತರ ಅಭಿಷೇಕವನ್ನು ಮಾಡಿದ ನಂತರ ಅವೆಲ್ಲವನ್ನೂ ಒಂದು ಶುಭ್ರವಾದ ಬೆಳ್ಳಿ ಇಲ್ಲವೇ ಹಿತ್ತಾಳೆ, ಕಂಚು ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಂದ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ… Read More ಪಂಚಾಮೃತ ಮತ್ತು ಪಂಚಲೋಹ

ನೆನೆದವರ ಮನದಲ್ಲಿ ಪೇಜಾವರ ಶ್ರೀ ಗಳು

ನಮಗೆಲ್ಲಾ ತಿಳಿದಿರುವಂತೆ ಈ ದೇಶ ಕಂಡ ಮಾಹಾ ಯತಿಳಾಗಿದ್ದಂತಹ ಪೇಜಾವರ ಶ್ರೀಗಳು ಕಳೆದ ವರ್ಷ ಇದೇ ಸಮಯದಲ್ಲಿಯೇ ನಮ್ಮನಗಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಪೇಜಾವರ ಶ್ರೀಗಳ ಇಚ್ಚೆಯಂತೆಯೇ ಅವರ ವೃಂದಾವನವನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನೆನ್ನೆ ಡಿ.17ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪೂರ್ಣಪ್ರಮಾಣದ ವೃಂದಾವನ ಪ್ರತಿಷ್ಠಾಪನೆಯಾಗಿದೆ. ಶ್ರೀಗಳು ನಿಧನರಾದಾಗ ಅದೇ ಸ್ಥಳದಲ್ಲಿ ಅವರ ಭೌತಿಕ ಶರೀರವನ್ನು ವೃಂದಾವನಸ್ಥಗೊಳಸಿ ತಾತ್ಕಾಲಿಕವಾಗಿ ವೃಂದಾವನವೊಂದನ್ನು ನಿರ್ಮಿಸಿ ನಂತರ ಮಾಧ್ವ ಸಂಪ್ರದಾಯದಂತೆ ಶಿಲಾ ವೃಂದಾವನವನ್ನು ಅವರು ಸ್ವರ್ಗಸ್ಥರಾದ ವರ್ಷದೊಳಗೇ ನಿರ್ಮಿಸಲಾಗಿದ್ದು… Read More ನೆನೆದವರ ಮನದಲ್ಲಿ ಪೇಜಾವರ ಶ್ರೀ ಗಳು