ಕೋತಿ ರಾಜ್ ಉರ್ಫ್ ಜ್ಯೋತಿರಾಜ್

ಜೀವಶಾಸ್ತ್ರದಲ್ಲಿ ನಾವೆಲ್ಲರೂ ಓದಿದಂತೆ ಮಂಗನಿಂದ ಮಾನವನಾಗಿ ಪರಿವರ್ತನೆಯಾದ ಎಂದು ಕೇಳಿದ್ದೇವೆ. ಅದಕ್ಕೆ ಪುರಾವೆ ಎನ್ನುವಂತೆ ಇಲ್ಲೊಬ್ಬ ಮನುಷ್ಯ ಅಕ್ಷರಶಃ ಮಂಗನಂತೆ ಚಂಗನೆ ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹಾರುತ್ತಾ ಎತ್ತೆರತ್ತರದ ಯಾವುದೇ ಅಸರೆ ಇಲ್ಲದ ಬಂಡೆಗಳನ್ನು ಯಾವುದೇ ಅಥವಾ ಯಾರದ್ದೇ ಸಹಾಯವಿಲ್ಲದೇ ಏರುತ್ತಾ ಇಳಿಯುತ್ತಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆಗಳನ್ನು ಮಾಡಿರುವ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಅವರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಸಂದರ್ಶನವೊಂದರಲ್ಲಿ ಜ್ಯೋತಿರಾಜ್ ಅವರೇ ಹೇಳಿದಂತೆ ಅವರು ಮೂಲತಃ ತಮಿಳುನಾಡಿನವರು. 1988 ಆಗಸ್ಟ್ 15… Read More ಕೋತಿ ರಾಜ್ ಉರ್ಫ್ ಜ್ಯೋತಿರಾಜ್

ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ… Read More ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ನಾವು ಪ್ರತಿನಿತ್ಯವೂ ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಕೊಂಡೇ ಸ್ನಾನ ಮಾಡುತ್ತೇವೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ಅದರಲ್ಲೂ ದಕ್ಷಿಣ ಭಾರತ ಮತ್ತು ಕರ್ನಾಟಕಕ್ಕೆ ಈ ಕಾವೇರಿ ನದಿಯು ಜೀವ ನದಿಯಾಗಿರುವುದರಿಂದಲೇ ಅದನ್ನು ಕೇವಲ ನದಿ ಎಂದು ಭಾವಿಸದೇ, ಕಾವೇರಿ ತಾಯಿ… Read More ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ಲಕ್ಷದ್ವೀಪ

ಕಳೆದ ವಾರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಲಕ್ಷದ್ವೀಪ ಪ್ರವಾಸದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಪ್ರಪಂಚಾದ್ಯಂತ ಪ್ರವಾಸೀತಾಣಗಳು ಅಲ್ಲೋಲಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಲಕ್ಷದ್ವೀಪದ ಕುರಿತಾದ ಪ್ರಧಾನಿಗಳ ಪ್ರೇಮ ಕೇವಲ ನೆನ್ನೆಯ ಮೊನ್ನೆಯದ್ದಾಗಿರದೇ, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ಕುರಿತಾಗಿ ತಮ್ಮ ದೂರದೃಷ್ಟಿತನದಿಂದ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ, ಲಕ್ಷದ್ವೀಪದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಲಕ್ಷದ್ವೀಪ

ಭಾಷಾ ಭೂಷಣ

ಇತ್ತೀಚೆಗೆ ಟಿವಿಯಲ್ಲಿ ಪೌರಾಣಿಕ ಚಿತ್ರವೊಂದು ಪ್ರಸಾರವಾಗುತ್ತಿತ್ತು. ಪೌರಾಣಿಕ ಚಿತ್ರ ಎಂಬ ಕುತೂಹಲದಿಂದ ನೋಡಲು ಕುಳಿತುಕೊಂಡು ಕೊಂಡ ಅರ್ಧಗಂಟೆಗಳಲ್ಲಿಯೇ ಮನಸ್ಸಿಗೆ ನೋವಾಗಿ ನೋಡಲು ಅಸಹನೀಯವಾಯಿತು. ಅಕಾರ ಮತ್ತು ಹಕಾರದ ನಡುವಿನ ವ್ಯತ್ಯಾಸ ಅರಿಯದ, ಅವರ ಸಂಭಾಷಣೆಗೂ ಅವರ ಆಂಗಿಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ, ಕನ್ನಡ ಕಸ್ತೂರಿ ಎನ್ನುವಂತಹ ಸೊಗಡಿರುವ ಭಾಷೆಯನ್ನು ಇಷ್ಟು ಕೆಟ್ಟದಾಗಿ ಕೊಲೆ ಮಾಡುತ್ತಿದ್ದಾರಲ್ಲಾ? ಎಂದೆನಿಸಿ ಕೂಡಲೇ ಅಭಿನಯ ಮತ್ತು ಭಾಷ ಶುದ್ಧತೆಯಲ್ಲಿ ಪರಿಪಕ್ವವಾಗಿದ್ದ… Read More ಭಾಷಾ ಭೂಷಣ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಅರೇ ಇದೇನಿದು? ಇಂತಹ ತರೆಬರಹ ಎಂದು ಯೋಚನೆ ಮಾಡುತ್ತಿದ್ದೀರಾ? ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೂ.. ಎನ್ನುವಂತೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರಗಳನ್ನು ಒಮ್ಮೆ ನೋಡಿ, ಮೈ ನಖಶಿಖಾಂತ ಉರಿಯದೇ ಹೋದ್ರೇ, ಆತ ನಿಜವಾದ ಕನ್ನಡಿಗನೇ ಅಲ್ಲ.. ನಮಗೆಲ್ಲಾ ಕನ್ನಡ ಅಂದ ತಕ್ಷಣ ನೆನಪಾಗೋದೇ ನಮ್ಮ ಹಳದಿ ಮತ್ತು ಕೆಂಪು ಬಾವುಟದ ಜೊತೆ ತಾಯಿ ಭುವನೇಶ್ವರಿ. ಅದರೆ ದುರಾದೃಷ್ಟವಷಾತ್ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಆ ಫಲಕದಲ್ಲಿ ಕನ್ನಡಾಂಬೆಯ ಸ್ಥಾನದಲ್ಲಿ… Read More ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಶ್ರೀ ವೀರೇಂದ್ರ ಹೆಗ್ಗಡೆ

ನಾವು ಚಿಕ್ಕವರಿದ್ದಾಗ ಪುರಾಣ ಪುಣ್ಯಕಥೆಗಳಲ್ಲಿ ರಾಜರ್ಷಿ ಎಂದರೆ ಸದಾಕಾಲವು ಧರ್ಮಾತ್ಮನಾಗಿದ್ದು, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಸಮಾಜಮುಖೀ ಸೇವೆಗಳಲ್ಲಿ ನಿರತರಾಗಿರುವುದಲ್ಲದೇ, ಜನರು ತಮ್ಮ ಸಂಕಷ್ಟಗಳನ್ನೋ ಇಲ್ಲವೇ ವ್ಯಾಜ್ಯಗಳೊಂದಿಗೆ ಬಂದಾಗ ಅವರಿಗೆ ಸೂಕ್ತ ಪರಿಹಾರವನ್ನು ನೀಡುವವರಾಗಿರುತ್ತಾರೆ ಎಂದು ಕೇಳಿಯೋ ಇಲ್ಲವೇ ಓದಿ ತಿಳಿದಿದ್ದೇವೆ. ಈ ಕಲಿಯುಗದಲ್ಲಿಯೂ ಅಂತಹ ರಾಜರ್ಷಿಯವರು ಇದ್ದಾರೆಯೇ ಎಂದು ಯೋಚಿಸುತ್ತಿದ್ದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರ ಯಶೋಗಾಥೆಯನ್ನು ನೋಡಿದಲ್ಲಿ ನಮ್ಮ ಆ ಎಲ್ಲಾ ಕುತೂಹಲವನ್ನು ತಣಿಸುತ್ತದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ತಟದಲ್ಲಿರುವ ಪುರಾಣ… Read More ಶ್ರೀ ವೀರೇಂದ್ರ ಹೆಗ್ಗಡೆ

ಹಾಸ್ಯ ಚಕ್ರವರ್ತಿ ನರಸಿಂಹರಾಜು

ಕೆಲ ವರ್ಷಗಳ ಹಿಂದೆ ಸುಧಾ ನರಸಿಂಹರಾಜು ಅವರು ದೂರದರ್ಶನದಲ್ಲಿ ನಡೆಸಿಕೊಡುತ್ತಿದ್ದ ಸಂದರ್ಶನದಲ್ಲಿ ಭಾಗವಹಿಸಿದ್ದ ವರನಟ ರಾಜ್ ಕುಮಾರ್ ಅವರು ಅರವತ್ತು ಮತ್ತು ಎಪ್ಪತ್ತರ ದಿನಗಳಲ್ಲಿ ಬಹಳ ಉತ್ತಂಗದ ಶಿಖರವೇರಿದ್ದರೂ, ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ತಮ್ಮ ಚಲನಚಿತ್ರಗಳಿಗೆ ಮೊದಲು ಆ ಹಾಸ್ಯ ನಟನ ಕಾಲ್ ಶೀಟ್ ಇದೆಯೇ ಎಂದು ನಿಗಧಿಪಡಿಸಿಕೊಂಡು ನಂತರ ನಾಯಕ, ನಾಯಕಿ ಮತ್ತು ಉಳಿದ ಸಹಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು ಹೇಳಿದರು ಎಂದರೆ ಆ ಹಾಸ್ಯ ನಟ ಎಂತಹ ಮಹಾನ್ ನಟನಿರಬೇಕು ಎಂಬುದು ತಿಳಿಯುತ್ತದೆ. ಈ… Read More ಹಾಸ್ಯ ಚಕ್ರವರ್ತಿ ನರಸಿಂಹರಾಜು

ಕೊಹಿನೂರು ವಜ್ರ ನಮ್ಮ ಕರ್ನಾಟಕದ ಸ್ವತ್ತು 

ಅರೇ 105.6 ಕ್ಯಾರೆಟ್ ತೂಕದ  ಪ್ರಸ್ತುತ 350 ಮಿಲಿಯನ್ ಯುಎಸ್ ಡಾಲರ್ ಅಂದರೆ 23,28,95,07,500 ರೂ. ಬೆಲೆ ಬಾಳುವಂತಹ ಲಂಡನ್ ಗೋಪುರದ ಜ್ಯುವೆಲ್ಹೌಸ್‌ನಲ್ಲಿ 1911 ರಲ್ಲಿ ಕ್ವೀನ್ ಮೇರಿಯ ಕಿರೀಟದದ ಮೂಲಕ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿರುವ ಆ ಕೋಹಿನೂರ್ ವಜ್ರವೆಲ್ಲಿ ನಮ್ಮ ಕರ್ನಾಟಕವೆಲ್ಲಿ?  ಅಲ್ಲಿಗೂ ಇಲ್ಲಿಗೂ ಎಲ್ಲಿಯ ಬಾದರಾಯಣ ಸಂಬಂಧ? ಸ್ವಲ್ಪ ಉಸಿರು ಬಿಗಿ ಮಾಡಿಕೊಂಡು ಇದನ್ನು ಕೇಳ್ತಾ/ಈ ಲೇಖನ ಓದುತ್ತಾ ಹೋದಂತೆಲ್ಲಾ ನಿಮಗೇ ಅರ್ಥವಾಗುತ್ತದೆ. ಆರ್ಟಿಐ ಕಾರ್ಯಕರ್ತ ಶ್ರೀ ರೋಹಿತ್ ಸಬರ್ ವಾಲ್ ಅವರು ಮಾಹಿತಿ ಹಕ್ಕು… Read More ಕೊಹಿನೂರು ವಜ್ರ ನಮ್ಮ ಕರ್ನಾಟಕದ ಸ್ವತ್ತು