ಬಹುಶಃ ನಮ್ಮಲ್ಲನೇಕರು ಕೆಲಸವಿಲ್ಲದ ಬಡಗಿ, ಸುಮ್ಮನಿಲಾರದೇ ಮಗಳ ಕುಂ.. ಕೆತ್ತಿದ ಎಂಬ ಗಾದೆ ಮಾತು ಕೇಳಿಯೇ ಇರುತ್ತೇವೆ. ಮಾಡೋದಿಕ್ಕೆ ಯಾವ ಕೆಲಸವೂ ಇಲ್ಲದಿರುವಾಗ, ತಮ್ಮ ಅಸ್ಥಿತ್ವವನ್ನು ಪ್ರಚುರಪಡಿಸಿಕೊಳ್ಳುವ ಸಲುವಾಗಿ ಅಗ್ಗಾಗ್ಗೇ ಒಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ ಸಮಾಜದ ಮುಂದೆ ನಾವಿನ್ನೂ ಬದುಕಿದ್ದೇವೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡ್ತಾಇರ್ತಾರೆ. ಪ್ರಕಾಶ್ ರೈ (ರಾಜ್) ಚೇತನ್ ಅಹಿಂಸಾ ಅಂತಹ ಎಡಬಿಡಂಗಿಗಳಾರಾದರೆ, ಈಗ ಅವರ ಗುಂಪಿಗೆ ಇನ್ನೂ ಕೆಲವು ದಂಡಪಿಂಡಗಳು ಸೇರ್ಪಡೆಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಸಿನಿಮಾಗಳಲ್ಲಿ ಸಣ್ಣ ಪುಟ್ಟ ಫೈಟ್ ಸೀನ್ ಗಳಲ್ಲಿ ನಾಯಕರುಗಳಿಂದ ಒದೆ ತಿನ್ನುವಂತಹ ಪಾತ್ರ ಮಾಡಿಕೊಂಡು ಇರುತ್ತಿದ್ದ ವಿಜಯ್, ಸೂರಿಯವರ ನಿರ್ದೇಶನದಲ್ಲಿ ಮೂಡಿಬಂದ ದುನಿಯಾ ಎಂಬ ಪಾತ್ರದ ಮೂಲಕ ಇದ್ದಕ್ಕಿದ್ದಂತೆಯೇ ಬ್ಲಾಕ್ ಕೋಬ್ರಾ ಎಂಬ ಉಪನಾಮದೊಂದಿಗೆ ಕರ್ನಾಟಕಾದ್ಯಂತ ಹೆಸರುವಾಸಿಯಾದರೆ, ಅದೇ ಸಿನಿಮಾದಲ್ಲಿ ಪೋಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದ ಮಾಜೀ ಕಾಲೇಜು ಪ್ರಾಧ್ಯಾಪಕ ಕಿಶೋರ್ ಸಹಾ ವಿಜಿಯಷ್ಟೇ ಪ್ರತಿಭಾವಂತ ನಟ ಎನ್ನುವುದರಲ್ಲಿ ಸಂಶಯವಿಲ್ಲ. ಕನ್ನಡದಲ್ಲಿ ಸುಮಾರು ಖಳ ನಾಯಕನ ಪಾತ್ರ ನಿರ್ವಹಿಸಿ ನಂತರ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಮಿಂಚಿದ್ದಲ್ಲದೇ, ಇತ್ತೀಚಿಗೆ ಕಾಂತಾರಾ ಚಿತ್ರದ ಅರಣ್ಯಾಧಿಕಾರಿಯ ಪಾತ್ರದ ಮೂಲಕ ಕನ್ನಡದ ಚಿತ್ರರಂಗದಲ್ಲಿ ಮತ್ತೆ ಚಾಲ್ತಿಯಲ್ಲಿದ್ದಾರೆ
ಇನ್ನು ಸುಮಾರು ಮೂರು ದಶಕದ ಹಿಂದೆ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನ ಖ್ಯಾತ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸಮಾಡುತ್ತಿದ್ದ ಕೇರಳ ಮೂಲದ ಸ್ಟಾನ್ಲಿ ಕಿಜಕೆಪರಂಬಿಲ್ ವರ್ಗೀಸ್ ಮತ್ತು ಪರಶುರಾಮ್ ಮೈಂಕನಳ್ಳಿ ಲಿಂಗೇಗೌಡ ಎಂಬ ಕಮ್ಯೂನಿಸ್ಶ್ ಮನಸ್ಥಿತಿಯ ಇಬ್ಬರು ಸಹೋದ್ಯೋಗಿಗಳು ಸಮಾಜದಲ್ಲಿನ ಮೇಲು ಕೀಳು, ದಲಿತ/ಬಲಿತ ಎಂಬ ವ್ಯವಸ್ಥೆಯನ್ನು ಬುಡಮೇಲು ಮಾಡುವ ಉಮ್ಮೇದಿನಿಂದ ಒಡನಾಡಿ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಆರಂಭದಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದ ಕೆಲವು ವೇಶ್ಯೆಯರನ್ನು ಆ ಕರಾಳ ಜಗತ್ತಿನಿಂದ ಹೊರತಂದು ಅವರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿಕೊಡುವ ಮೂಲಕ ಪ್ರಖ್ಯಾತರಾದದ್ದು ಈಗ ಇತಿಹಾಸ.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಗಾದೆ ಮಾತಿನಂತೆ, ಸಮಾಜದಿಂದ ತಾವು ಎಂಬುದನ್ನು ಮರೆತು, ತಮ್ಮಿಂದಲೇ ಸಮಾಜ ಹಾಗಾಗಿಯೇ ಜನರು ತಮ್ಮನ್ನು ಈ ಪರಿಯಾಗಿ ಒಪ್ಪಿಕೊಂಡು ಅಪ್ಪಿಕೊಂಡು ತರೆ ಮೇಲೆ ಮೆರೆಸುತ್ತಿದ್ದಾರೆ ಎಂದು ಪರಿಭಾವಿಸಿದ್ದಲ್ಲದೇ, ತಮ್ಮಳೊಗೆ ಹುದುಗಿದ್ದ ಎಡಪಂಥೀಯ ಧೋರಣೆಯಿಂದಾಗಿ, ಸಾಧ್ಯವಾದ ಕಡೆಯಲೆಲ್ಲಾ ಬಲಪಂಥೀಯರನ್ನೂ, ಅದರಲ್ಲೂ ಹಿಂದೂಗಳ ಧಾರ್ಮಿಕ ಆಚರಣೆ ವಿಚಾರಣೆಗಳ ಬಗ್ಗೆ ವಿವಾದಕರ ಹೇಳಿಕೆಗಳನ್ನು ನೀಡುತ್ತಾ ಕುಖ್ಯಾತರಾಗಿ ಹೋಗಿರುವುದು ಈಗ ವಿಪರ್ಯಾಸ.
ಸಮಾಜದಲ್ಲಿ ಇರುವ ಹೆಣ್ಣುಮಕ್ಕಳಿಗೆ ತಾವೊಬ್ಬರೇ ರಕ್ಷಕರು ಎಂಬು ಮೆರೆಯುವ ಒಡನಾಡಿ ಸಂಸ್ಥೆಯ ಆಶ್ರಯಕ್ಕೆ ಬರುವ ಅಮಾಯಕ ಹೆಣ್ಣುಮಕ್ಕಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಎಂಬುದರ ಬಗ್ಗೆ ನೂರಾರು ವಿವಾದಗಳಿವೆ. ಇನ್ನು ಚಲನಚಿತ್ರರಂಗಕ್ಕೆ ಬರುವ ಮುನ್ನವೇ ತನ್ನೂರಿನಲ್ಲಿ ಒಬ್ಬಾಕೆಯನ್ನು ಮದುವೆಯಾಗಿ ಆಕೆಯನ್ನು ಅಲ್ಲಿಯೇ ಬಿಟ್ಟು ನಂತರ ನಾಗರತ್ನ ಎಂಬಾಕೆಯನ್ನು ಮದುವೆಯಾಗಿ ಮುದ್ದಾದ ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿನ ತಂದೆಯಾದ ವಿಜಿ, ಚಲನಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಬೀದಿಯಲ್ಲಿರುವ ಬೀಡಾಡಿ ಹೋರಿ ಸಿಕ್ಕ ಸಿಕ್ಕ ಹಸುಗಳ ಮೇಲೆ ಏರಿಹೋಗುವಂತೆ ಕನ್ನಡ ಚಲನಚಿತ್ರರಂಗದಲ್ಲಿನ ಅನೇಕ ನಟಿಮಣಿಗಳ ಕನ್ಯಾಸೆರೆ ಬಿಡಿಸಿದ್ದಲ್ಲದೇ, ದಕ್ಷಿಣ ಕನ್ನಡ ಮೂಲದ ಉದಯೋನ್ಮುಖ ನಟಿಯೊಂದಿಗೆ ಮದುವೆ ಆಗಿ ಹೋಗಿದೆಯೇನೋ ಎನ್ನುವಂತೆ ಸಂಸಾರ ಮಾಡಿ, ಕಡೆಗೆ ಅವರ್ ಬಿಟ್ಟು ಇವರ್ ಬಿಟ್ಟು ಇವರ್ಯಾರು ಎಂದು ತನ್ನ ಮುದ್ದಾದ ಹೆಂಡತಿಯೊಂದಿಗೆ ಹಾದಿ ಬೀದಿಯಲ್ಲಿ ರಂಪರಾಮಾಯಣ ಮಾಡಿಕೊಂಡು ನಡು ನೀರಿನಲ್ಲಿ ಕೈಬಿಟ್ಟು ಸದ್ಯಕ್ಕೆ ಕೀರ್ತಿ ಎಂಬ ಮತ್ತೊಬ್ಬಳು ನಟಿಗೆ ಗಂಡು ಮಗುವಿನ ಕರುಣೆ ಇತ್ತು ಸಂಸಾರ ಮಾಡುತ್ತಿದ್ದಾರೆ.
ಕಾಲೇಜು ಪ್ರಾಧ್ಯಾಪಕರಾಗಿ ನಂತರ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ದಕ್ಷಿಣ ಭಾರತದ ಚಲಚಿತ್ರರಂಗದಲ್ಲಿ ಪ್ರಖ್ಯಾತವಾಗಿ, ಕನಕಪುರದ ಬಳಿ ಜಮೀನೊಂದರಲ್ಲಿ ಸುಂದರವಾದ ಮನೆಯನ್ನು ಕಟ್ಟಿಕೊಂಡು ಸಮಯ ಸಿಕ್ಕಾಗ ಕೃಷಿ ಚಟುವಟಿಕೆ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದ ಕಿಶೋರ್, ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು ಎನ್ನುವಂತೆ, ತನಗೆ ಸಂಬಂಧವೇ ಇಲ್ಲದೇ ಹೋದರೂ ಸಮಾಜದ ಆಗು ಹೋಗು ಅದರಲ್ಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಪ್ರಧಾನಿ ಮೋದಿಯವರನ್ನು ಹೋದ ಬಂದ ಕಡೆಯಲ್ಲೆಲ್ಲಾ ಬೈಯ್ಯುತ್ತಾ ಇದ್ದ ಬದ್ದ ಮಾನವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರ ಎನಿಸುತ್ತದೆ.
ಕೆಲ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆ ಮಾಡಿದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ, ಪ್ರಕರಣ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಸಂಬಂಧಿಯೊಬ್ಬರ ಮೇಲೆ ಆರೋಪ ಆರಂಭದ ತನಿಖೆಯಲ್ಲೇ ಅವರಿಗೆ ಕ್ಲೀನ್ ಚಿಟ್ ನೀಡಿದ ನಂತರ ಸಂತೋಷ್ ರಾವ್ ಎಂಬ ಅಮಾಯಕನ ಮೇಲೆ ಆರೋಪಿಸಿ ಆತನನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಿ ಸುಮಾರು ವರ್ಷಳ ವಿಚಾರಣೆ ನಡೆದು ಆತನ ವಿರುದ್ಧ ಯಾವುದೇ ಸಾಕ್ಷಾಧಾರ ಸಿಗದೇ ಹೋದ ಕಾರಣ ಆತನನ್ನು ಇತ್ತೀಚೆಗೆ ಬಿಡುಗಡೆ ಮಾಡುತ್ತಿದ್ದಂತೆಯೇ, ಮೇಲೆ ತಿಳಿಸಿದ ಈ ಎಲ್ಲಾ ತುಕ್ಡೇ ತುಕ್ಡೇ ಗ್ಯಾಂಗ್ ಜಾಗೃತವಾಗಿ ಜಸ್ಟೀಸ್ ಫಾರ್ ಸೌಜನ್ಯ ಎಂಬ ಸೋಗಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಅಲ್ಲಿನ ಹಿಂದೂ ಶ್ರಧ್ಧಾ ಕೇಂದ್ರಕ್ಕೆ ಮಸಿ ಬಳಿಯುವ ಮೂಲಕ ಅದನ್ನು ಮುಚ್ಚಿ ಹಾಕುವ ಕೆಲಸಕ್ಕೆ ಮುಂದಾಗಿರುವುದು ನಿಜಕ್ಕೂ ಅಕ್ಷೇಪಾರ್ಹ ಮತ್ತು ಕಳವಳಕಾರಿಯಾಗಿದೆ.
ಈ ಪ್ರಕರಣದ ಕುರಿತಂತೆ ಒಡನಾಡಿಯ ಸ್ಟಾನ್ಲಿ ಬಹಿರಂಗವಾಗಿಯೇ, ಹಂದಿಯನ್ನು ಹೊಡೆಯುವ ಹಾಗೆ ಧರ್ಮಸ್ಥಳವನ್ನು ಹೊಡೆಯೋಣ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದರೆ, ಹತ್ತಾರು ಹೆಣ್ಣುಮಕ್ಕಳೊಂದಿಗೆ ಚೆಲ್ಲಾಟವಾಡಿದ್ದಲ್ಲದೇ, ತಿಪ್ಪಗೊಂಡನ ಹಳ್ಳಿ ಜಲಾನಯನ ಪ್ರದೇಶದಲ್ಲಿ ತನ್ನದೇ ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭದಲ್ಲಿ ಅನಿಲ್ ಮತ್ತು ಉದಯ್ ಎಂಬ ಉದಯೋನ್ಮುಖ ಖಳನಟರ ಸಾವಿಗೆ ಕಾರಣೀಭೂತರಾಗಿ ಅವರ ಸಾವಿಗೇ ನ್ಯಾಯವನ್ನು ಒದಗಿಸಲಾಗದೇ ತಿಂಗಳಾನುಗಟ್ಟಲೆ ಕದ್ದು ಮುಚ್ಚಿ ಓಡಾಡಿಕೊಂಡಿದ ವಿಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡುತ್ತಾ, ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುವ ವರೆಗೂ ತಾನು ಧರ್ಮಸ್ಥಳಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಲ್ಲದೇ, ಕಡೆಯಲ್ಲಿ ಬುದ್ಧನ ಹೆಸರನ್ನು ಬರೆಯುವ ಮೂಲಕ ಸ್ಪಷ್ಟವಾಗಿ ಹಿಂದೂ ಧರ್ಮದ ವಿರುದ್ಧ ತಿರುಗಿ ಬಿದ್ದಿರುವುದನ್ನು ತಿಳಿಯಬಹುದಾಗಿದೆ
ಸೌಜನ್ಯಳಂತೆಯೇ ಮಣಿಪುರದಲ್ಲಿಯೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದು ಬೆತ್ತಲೆಪ್ರದರ್ಶನ ಆಗುತ್ತಿದ್ದರೆ, ಮಮತಾ ಬ್ಯಾನರ್ಜಿಯ ಪಶ್ಚಿಮ ಬಂಗಾಳದಲ್ಲಿ ಪ್ರತಿದಿನವೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದು ಬೆತ್ತಲೆ ಮೆರವಣಿಗೆ ನಡೆಯುತ್ತಿದೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿಯೂ ಮಹಿಳೆ ಮೇಲೆ ಅತ್ಯಾಚಾರ ನಡೆದ ಸುದ್ದಿ ಬಂದಿದ್ದರೆ, ಕೇರಳಾದಲ್ಲಿಯೂ ಪುಟ್ಟ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಸುದ್ದಿಯೂ ಬರುತ್ತಿದ್ದರೂ, ಈ ವಿಚಾರದ ಕುರಿತಾಗಿ ಕಿಂಚಿತ್ತೂ ಕಮಕ್ ಕಿಮಕ್ ಎನ್ನದ ಈ ಎಡಬಿಡಂಗಿಗಳು ಧರ್ಮಸ್ಥಳದಂತಹ ಹಿಂದೂ ಧಾರ್ಮಿಕ ಕ್ಷೇತ್ರವನ್ನು ಒಡೆಯಲು ಮಾತ್ರಾ ಮುಂದಾಗುತ್ತಾರೆ ಎಂದರೆ ಅವರ ಮನಸ್ಥಿತಿ ಎಂತಹದ್ದು ಎಂಬುದು ಜಗಜ್ಜಾಹೀರಾತಾಗುತ್ತಿದೆ.
ಇಷ್ಟೇಲ್ಲದರ ನಡುವೆ ಬೆಂಗಳೂರಿನ ವರ್ತೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲೆಯೊಂದರ 65 ವಯಸ್ಸಿನ ಸಂಸ್ಥಾಪಕ ಪ್ರಾಂಶುಪಾಲಕ ಪಾದ್ರಿ ಲ್ಯಾಂಬರ್ಟ್ ಪುಷ್ಪರಾಜ್ ಎಂಬಾತ ಕೇವಲ 2ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ನಂತರ ಅದೇ ಶಾಲೆಯಲ್ಲಿ ಕೆಲಮಾಡುತ್ತಿರುವ ತನ್ನ ಪತ್ನಿಯೊಂದಿಗೆ ಆ ಮಗುವನ್ನು ಮನೆಗೆ ಕರೆದು ಕೊಂಡು ಹೋಗಿ, ಆಕೆಯ ಮೇಲೆ ಅತ್ಯಾಚಾರ ಆದ ವಿಷಯ ಯಾರಿಗಾದರೂ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದಾರೆ. ಆಯಾಸದಿಂದ ಮನೆಗೆ ಬಂದ ಆ ಪುಟ್ಟ ಕಂದ, ಎಂದಿನಂತ ಲವಲವಿಕೆ ಇಲ್ಲದೇ ಮಂಕಾಗಿದ್ದಲ್ಲದೇ, ಹೊಟ್ಟೆ ನೋವು ಎಂದು ಅಮ್ಮನ ಬಳಿ ಹೇಳಿದಾಗ, ಆಕೆಯ ನೋವಿನ ಶಮನಕ್ಕೆ ಪ್ರಯತ್ನಿಸುತ್ತಿದ್ದ ತಾಯಿಗೆ ಮಗಳಿಗೆ ರಕ್ತ ಸ್ರಾವ ಆಗಿರುವುದನ್ನು ಕಂಡು, ವಿಚಾರಿಸಿದಾಗ ಮಗು ಭಯ ಪಡುತ್ತಲೇ ನಡೆದ ವಿಷಯವನ್ನು ತಿಳಿಸಿದ್ದಾಳೆ.
ಸಕಲ ನೊಂದ ಮಕ್ಕಳ ಹಿತಕಾಪಾಡುವವರು ನಾವೇ ಎಂದು ಅಬ್ಬಿರಿಸಿ ಬೊಬ್ಬಿರುವ ಒಡನಾಡಿ ಸಂಸ್ಥೆಯ ಒಡನಾಡಿ ಸ್ಟಾನ್ಲಿ, ಸೌಜನ್ಯ ಕುರಿತಾಗಿ ನ್ಯಾಯ ಕೇಳುವ ನೆಪದಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿರುವ ಹೆಣ್ಣುಬಾಕ ವಿಜಿ, ಪ್ರತಿಯೊಂದಕ್ಕೂ ಮೋದಿಯವರ ರಾಜೀನಾಮೆ ಕೇಳುವ Just asking ಪ್ರಕಾಶ್ ರೈ, ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಪ್ರಧಾನಿಗಳನ್ನು ಜರಿಯುವ ಕಿಶೋರ್ ಮತ್ತು ವಿದೇಶಿ ತಳಿ ಚೇತನ್ ಅಹಿಂಸಾ, ವರ್ತೂರಿನ ಹೆಣ್ಣು ಮಗಳ ಕುರಿತಾಗಲೀ, ಪಶ್ವಿಮ ಬಂಗಾಲದ ದೈನಂದಿನ ದೌರ್ಜನ್ಯದ ಬಗ್ಗೆಯಾಗಲೀ ಬೀದಿಗಿಳಿಯದಿರುವುದನ್ನು ಸೂಕ್ಶ್ಮವಾಗಿ ಗಮನಿಸಿದರೆ, ಈ ಪ್ರಕರಣಗಳ ಬಹುತೇಕ ಆರೋಪಿಗಳು ಅಹಿಂದುಗಳು ಆಗಿರುವುದು ಗಮನಾರ್ಹವಾಗಿದೆ. , ಪ್ರೀತಿಯ ಅಂಗಡಿ ಎಂದು ಚಂದನೆಯ ಹೆಸರನ್ನಿಟ್ಟುಕೊಂಡು ರಾಹುಲ್ ಗಾಂಧಿ ಭಾರತ್ ಜೋಡೋ ಎಂಬ ಹೆಸರಿನಲ್ಲಿ ದೇಶ ವಿದೇಶಗಳನ್ನು ಸುತ್ತುತ್ತಾ, ಭಾರತವನ್ನು ಜಾತಿ, ಧರ್ಮ ಮತ್ತು ಭಾಷೆಗಳ ಹೆಸರಿನಲ್ಲಿ ತುಂಡರಿಸುವ ಇಂತಹ ಎಡಬಿಡಂಗಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2024ರಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಈ ಎಲ್ಲಾ ವಿರೋಧಪಕ್ಷಗಳು ಇಂತಹ ಗೋಸುಂಬೆಗಳ ನೆರವಿನಿಂದ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನಾ ದೇಶದಲ್ಲಿ ಕಂಡೂ ಕೇಳರಿಯದ ಕೋಮು ದಳ್ಳುರಿಗಳನ್ನು ಎಬ್ಬಿಸಲು ರಹಸ್ಯ ಕಾರ್ಯಸೂಚಿ(toolkit)ಯನ್ನು ಸಿದ್ದ ಪಡಿಸಿಕೊಂಡಿದ್ದು ಇವೆಲ್ಲವೂ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಡಿಜೆಹಳ್ಳಿ ಪ್ರಕರಣದಲ್ಲಿ ಶಾಸಕರ ಮನೆಯನ್ನು ಸುಟ್ಟುಹಾಕಿದ್ದ, ಮೈಸೂರಿನ ಶಾಸಕ ತನ್ವೀರ್ ಸೇಟ್ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದ, ರಾಜ್ಯದ ವಿವಿದೆಡೆಯಲ್ಲಿ ಕೋಮು ದಳ್ಳುರಿ ಎಬ್ಬಿಸಿದ್ದವರು ಸೆರೆಮನೆಯಲ್ಲಿ ಬಂಧಿಯಾಗಿ ವಿಚಾರಣೆ ನಡೆಯುತ್ತಿರುವಾಗ, ಅವರಿಗೆ ಅಮಾಯಕರು ಎಂಬ ಹಣೆ ಪಟ್ಟಿ ಕಟ್ಟಿ ಬಿಡುಗಡೆಯ ಭಾಗ್ಯ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ಅವರ ನಡೆಯೂ ಇದೇ toolkit ಭಾಗವಾಗಿರಬಹುದೇನೋ ಎಂಬ ಭಾವನೆ ಜನರಲ್ಲಿ ಮೂಡಿ ಆತಂಕ ಹೆಚ್ಚಾಗುತ್ತಿದೆ.
ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ದೇಶವಿರೋಧಿ ಕೃತ್ಯಗಳು, ಅತ್ಯಾಚಾರ, ಕೋಮು ಗಲಭೆ ಎಲ್ಲವನ್ನೂ ಜಾತೀ, ಧರ್ಮ, ಭಾಷೆಗಳ ಬೇಧವಿಲ್ಲದೇ, ಪಕ್ಷಾತೀತವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸಲೇ ಬೇಕಾಗಿದೆ. ಹಾಗೇ ದೇಶದ ಎಲ್ಲೋ ನಡೆಯುವ ವಿಛಿದ್ರಕಾರಿ ಪ್ರಕರಣಗಳನ್ನು ರಾಮಮಂದಿರ ನಿರ್ಮಾಣ ಮತ್ತು ಧರ್ಮಸ್ಥಳದ ಅನ್ನದಾನಕ್ಕೆ ಥಳುಕು ಹಾಕಿ ಅಪರಾಧಿಗಳ ಪರ ವಹಿಸುವುದು ಸಹಾ ಅಪರಾಧ ಮಾಡಿದಷ್ಟೇ ತಪ್ಪು ಎಂಬುದನ್ನು ಈ ಎಡಬಿಡಂಗಿಗಳಿಗೆ ತಿಳಿಸಿ ಹೇಳಬೇಕಿದೆ. ಈ ರೀತಿಯ ಕಾರ್ಯದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವರು ಯಾರು ಮತ್ತು ಹೇಗೆ? ಎಂಬುದೇ ಈಗ ಯಕ್ಷಪ್ರಶ್ನೆಯಾಗಿದೆ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
We should eliminate all these bastards 😡😡
LikeLike