ಪ್ರಜಾಪ್ರಭುತ್ವ ಮತ್ತು ಅದರ ಅಣಕ

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಜುಲೈ 21 2022 ಅತ್ಯಂತ ಮಹತ್ವ ದಿನವಾಗಿದ್ದು ಇಂದು ಈ ದೇಶದ ಎರಡು ಪ್ರಭಲ ಮಹಿಳೆಯರಿಗೆ ಮೀಸಲಾಗಿದೆ. ಒಬ್ಬರು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಪ್ರಜಾತಾಂತ್ರಿಕವಾಗಿ ಹೇಗೆ ದೇಶದ ಉನ್ನತ ಪದವಿಯನ್ನೇರಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾದರೆ, ಮತ್ತೊಬ್ಬರು ಈ ದೇಶವನ್ನು ಆಳಿದ ಅತಿದೊಡ್ಡ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಬಹುದು ಎಂಬ ಕೆಟ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ.… Read More ಪ್ರಜಾಪ್ರಭುತ್ವ ಮತ್ತು ಅದರ ಅಣಕ

ಭಾರತದಲ್ಲಿ ಮುಸಲ್ಮಾನರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ?

ನೆನ್ನೆ ತಾನೇ 15 ನೇ ರಾಷ್ಟ್ರಪತಿಗಳ ಆಯ್ಕೆಗಾಗಿ ಚುನಾವಣೆ ಮುಗಿದಿದ್ದು ಅದರ ಜೊತೆಯಲ್ಲೇ ಉಪರಾಷ್ಟ್ರಪತಿಗಳ ಚುನಾವಣೆಯ ಪ್ರಕ್ರಿಯೆಗಳೂ ಆರಂಭವಾಗಿರುವಾಗ, ಸ್ವಘೋಷಿತ ಬುದ್ಧಿಜೀವಿ ಚಲನಚಿತ್ರ ನಿರ್ಮಾಪಕ, ಮತ್ತು ಮೂಲತಃ ಹಿರಿಯ ಪತ್ರಕರ್ತರಾದ ಶ್ರೀ ಪ್ರೀತೀಶ್ ನಂದಿಯವರು. ಭಾರತದಲ್ಲಿ ಮುಸ್ಲಿಮ್ಮರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವ ಮೂಲಕ ಈ ದೇಶದ ಸಾಂವಿಧಾನಿಕ ಹುದ್ದೆಗೂ ಧರ್ಮವನ್ನು ತಳುಕು ಹಾಕಿ ಒಂದು ರೀತಿಯ ವಿವಾದ ಸೃಷ್ಟಿಸಲು ಮುಂದಾಗಿರುವುದು ನಿಜಕ್ಕೂ ಹೇಯಕರವಾಗಿದೆ. ದೇಶದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ,… Read More ಭಾರತದಲ್ಲಿ ಮುಸಲ್ಮಾನರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ?

ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ಇಂದು ಬೆಳಿಗ್ಗೆ ಎದ್ದು ವಿಜಯ ಕರ್ನಾಟಕ ಪತ್ರಿಕೆಯ ಮುಖ ಪುಟದ ಈ ವಿಷಯ ಓದುತ್ತಿದ್ದಂತೆಯೇ ಬಹಳ ದಿನಗಳಿಂದಲೂ ಬರೆಯಬೇಕೆಂದಿದ್ದ ವಿಚಾರಕ್ಕೆ ಪೂರಕವೆನಿಸಿ ಈ ಲೇಖನವನ್ನು ನಿಮ್ಮೊಂದಿಗೆ ಪ್ರಸ್ತುತ ಪದಿಸುತ್ತಿದ್ದೇನೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 2500 ಎಂಜಿನಿಯರಿಂಗ್ ಕಾಲೇಜುಗಳು, 1400 ಪಾಲಿಟೆಕ್ನಿಕ್‌ಗಳಿವೆ. ಈ ಕಾಲೇಜುಗಳಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸರಿಸುಮಾರು 15 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಇನ್ನು ಕರ್ನಾಟಕದಲ್ಲೇ ಸುಮರು 542 ಎಂಜಿನಿಯರಿಂಗ್ ಕಾಲೇಜುಗಳಿದ್ದು ಅವುಗಳಲ್ಲಿ 134 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳದರೆ, ಖಾಸಗೀ ಕಾಲೇಜುಗಳೇ 407… Read More ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ನಾಯಿಗಳು ಕಂಬ ಇಲ್ಲವೇ ವಾಹನಗಳ ಟೈರಿನ ಮೇಲೇಕೆ ಮೂತ್ರ ವಿಸರ್ಜಿಸುತ್ತವೆ

ಮನುಷ್ಯ ಸಂಘ ಜೀವಿ. ಹಾಗಾಗಿ ಆತ ಒಬ್ಬಂಟಿಯಾಗಿರದೇ ಹೆಚ್ಚು ಜನರು ಇರುವ ಪ್ರದೇಶದಲ್ಲಿ ವಾಸಿಸುತ್ತಾನೆ. ಅದೇ ರೀತಿ ಅನೇಕ ಪ್ರಾಣಿಗಳನ್ನು ಪಳಗಿಸಿಕೊಂಡು ತನ್ನ ಸಾಕುಪ್ರಾಣಿಗಳಾಗಿಸಿಕೊಂಡು ಅವುಗಳನ್ನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಾನೆ. ಹಾಗೆ ಸಾಕು ಪ್ರಾಣಿಗಳೆಂದಾಗ ಥಟ್ ಎಂದು ನೆನಪಾಗೋದೇ ನಾಯಿಗಳು. ಸ್ವಾಮಿ ನಿಷ್ಟೆಗೆ ಮತ್ತೊಂದು ಹೆಸರೇ ನಾಯಿಗಳು ಆಗಿರುವಾಗ, ಬಹುತೇಕರು ತಮ್ಮ ಮನೆಯಲ್ಲಿ ನಾಯಿಗಳನ್ನು ಮುದ್ದಾಗಿ ಸಾಕಿರುತ್ತಾರೆ. ಅದೇಷ್ಟೋ ಮನೆಗಳಲ್ಲಿ ನಾಯಿಗಳನ್ನು ತಮ್ಮ ಮನೆಯ ಒಬ್ಬ ಸದಸ್ಯರಂತೆಯೇ ಪ್ರೀತಿಸುತ್ತಾರೆ ಮತ್ತು ಅವುಗಳ ಅಗಲಿದಾಗ ತಮ್ಮ ಒಡಹುಟ್ಟಿದವರನ್ನು… Read More ನಾಯಿಗಳು ಕಂಬ ಇಲ್ಲವೇ ವಾಹನಗಳ ಟೈರಿನ ಮೇಲೇಕೆ ಮೂತ್ರ ವಿಸರ್ಜಿಸುತ್ತವೆ

ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ

ಇತ್ತೀಚೆಗೆ ನಮ್ಮಲ್ಲಿ ಹುಟ್ಟು ಹಬ್ಬ, ನಾಮಕರಣ, ನಿಶ್ಚಿತಾರ್ಥ, ಮದುವೆ, ಮುಂಜಿ, ಹೊಸಾವರ್ಷದ ಆಚರಣೆ, ಹೀಗೆ ಎಲ್ಲದ್ದಕ್ಕೂ ಕೇಕ್ ಕತ್ತರಿಸುವುದರ ಜೊತೆಗೆ ಮೊಂಬತ್ತಿ ಹತ್ತಿಸಿ ಆರಿಸುವ ಪದ್ದತಿ ರೂಡಿಗೆ ಬಂದಿದೆ. ಈ ಕೇಕ್ ಕತ್ತರಿಸುವ ಪದ್ದತಿ ಅರಂಭವಾಗಿದ್ದು ಎಲ್ಲಿ? ಹೇಗೇ? ಮತ್ತು ಏಕೆ?. ಮೊಂಬತ್ತಿ ಹಚ್ಚಿ ಅದನ್ನು ಆರಿಸುವುದರ ಹಿಂದಿರುವ ಗುಟ್ಟೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ

ಚಿಂತಕರ ಚಾವಡಿಗೆ ಚಲುವಾದ ಆಯ್ಕೆ

ಗಣತಂತ್ರ ದೇಶವಾದ ನಮ್ಮ ಭಾರತದಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಎಂಬುದು ಮೂರು ಆಧಾರ ಸ್ಥಂಭಗಳಾಗಿದ್ದು. ಆ ಶಾಸಕಾಂಗದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾದ ಸಾಂದರು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಲೋಕಸಭೆಯ 543 ಸದಸ್ಯರನ್ನು ಭಾರತದ ಪ್ರಜೆಗಳು ನೇರವಾಗಿ ಆಯ್ಕೆ ಮಾಡಿದರೆ, ರಾಜ್ಯಸಭೆಯ 238 ಸದಸ್ಯರನ್ನು ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಆಯ್ಕೆಯಾದ ಶಾಸಕರುಗಳು ಆಯ್ಕೆ ಮಾಡಿದರೆ, ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ಕೇಂದ್ರಸರ್ಕಾರದ ಶಿಫಾರಸ್ಸಿನ ಮೇರೆಗೆ ನಾಮಕರಣ ಮೂಲಕ ಆಯ್ಕೆ ಮಾಡುತ್ತಾರೆ. ಈ ರೀತಿಯ ನಾಮಕರಣವಾದ… Read More ಚಿಂತಕರ ಚಾವಡಿಗೆ ಚಲುವಾದ ಆಯ್ಕೆ

ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ಅಡುಗೆ ಮನೆ (Kitchen Room) ಕೇವಲ ಮನೆಯ ಒಂದು ಕೋಣೆಯಲ್ಲ. ಅದು ಇಡೀ ಕುಟುಂಬದ (Family) ಸದಸ್ಯರನ್ನು ಬೆಸೆದಿಟ್ಟುಕೊಳ್ಳುವ ಕೊಂಡಿ, ಮನೆಯ ಆರೋಗ್ಯದ ಕೇಂದ್ರ & ಶಕ್ತಿ ಕೇಂದ್ರವೂ ಹೌದು. ಮನೆಯ ಅಡುಗೆ ಮನೆಯಲ್ಲಿ ನಿತ್ಯವೂ ಮೂರು ಬಾರಿ ಒಲೆ ಉರಿಯುತ್ತಿದೆ ಎಂದರೆ ಆದೊಂದು ಆರೋಗ್ಯಕರ ಕುಟುಂಬ ಎಂದರು ತಪ್ಪಾಗದು. ಇತ್ತೀಚಿನವರೆಗೂ ಅಡುಗೆ ಮನೆಯ ಡಬ್ಬಿಗಳೇ ಭಾರತೀಯ ಗೃಹಿಣಿಯರ ಉಳಿತಾಯದ ಕೇಂದ್ರವೂ ಆಗಿದ್ದು, ಕುಟುಂಬಕ್ಕೆ ಅತ್ಯಾವಶ್ಯಕತೆ ಬಿದ್ದಾಗ ಅಲ್ಲಿನ ಸಾಸಿವೆ ಡಬ್ಬಿ, ಗಸಗಸೆ ಡಬ್ಬಿಯಲ್ಲಿ ಉಳಿಸಿ ಭದ್ರವಾಗಿ… Read More ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ನ್ಯಾಯ ದೇವತೆಯೂ ಏಕಪಕ್ಷೀಯಳೇ?

ಕೆಲವು ಕ್ಷಣಗಳ ಹಿಂದೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಓದುತ್ತಿದ್ದಾಗ, ಇಂದು ಬೆಳಿಗ್ಗೆ, ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur Sharma) ಅವರನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೇ, ಪ್ರವಾದಿಗಳ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಅದೇಶಿಸಿರುವ ವಿಷಯ ನಿಜಕ್ಕೂ ಆಘಾತಕರಿ ಎನಿಸಿದೆ. ಭಾರತ ದೇಶದ ಪ್ರಜ್ಞಾವಂತನಾಗಿ ದೇಶದ ಸಂವಿಧಾನ, ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ… Read More ನ್ಯಾಯ ದೇವತೆಯೂ ಏಕಪಕ್ಷೀಯಳೇ?

ಭಾರತದಲ್ಲಿ ಬಾಷ್ ಶತಮಾನೋತ್ಸವ

ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರ, ದೇಶದ ಜನರಿಗೆ ಉದ್ಯೋಗವನ್ನು ನೀಡಲು ಮತ್ತು ದೇಶದಲ್ಲಿ ಉದ್ಯಮಗಳನ್ನು ಹೆಚ್ಚಿಸುವ ಸಲುವಾಗಿ ದೇಶದಲ್ಲಿ ಹತ್ತಾರು ಸಾರ್ವಜನಿಕ ಉದ್ಯಮಗಳನ್ನು ಆರಂಭಿಸಿದವು. ಅದರಲ್ಲೂ ಬೆಂಗಳೂರಿನಲ್ಲಿ ಐ.ಟಿ.ಐ, ಹೆಚ್.ಎಂ.ಟಿ, ಹೆಚ್.ಎ.ಎಲ್, ಬಿಇಎಲ್, ಬಿ.ಹೆಚ್.ಇ.ಎಲ್ ಮುಂತಾದ ಕಾರ್ಖಾನೆಗಳು ಆರಂಭವಾದಾಗ, ಅದಕ್ಕೆ ಸೇರಲು ಜನರು ಮುಗಿ ಬೀಳತೊಡಗಿದರು. ಈ ಮೇಲೆ ತಿಳಿಸಿದ ಕಾರ್ಖಾನೆಗಳಲ್ಲಿ ಕೆಲಸ ಸಿಗದೇ ಹೋದಾಗ, ಬೆಂಗಳೂರಿಗರಿಗೆ ಪರ್ಯಾಯವಾಗಿ ಕಾಣಿಸಿದ್ದೇ, ಮೈಕೋ, ಕಿರ್ಲೋಸ್ಕರ್, ಎಂಇಐ ಮುಂತಾದ ಖಾಸಗಿ ಕಂಪನಿಗಳು ಎಂದರೆ ಅತಿಶಯವೇನಲ್ಲ. 1953 ರಲ್ಲಿ, ಸ್ಪಾರ್ಕ್ ಪ್ಲಗ್‌ಗಳ… Read More ಭಾರತದಲ್ಲಿ ಬಾಷ್ ಶತಮಾನೋತ್ಸವ